POLICE BHAVAN KALABURAGI

POLICE BHAVAN KALABURAGI

27 November 2017

KALABURAGI DISTRICT REPORTED CRIMES

ಆಕ್ರಮವಾಗಿ ಗಾಂಜಾ ಗಿಡ ಬೆಳದವನ ಬಂಧನ :
ಜೇವರಗಿ ಠಾಣೆ : ದಿನಾಂಕ; 25/11/2017 ರಂದು ಸಾಯಂಕಾಲ ಗಂವಾರ ಗ್ರಾಮದ ಸೈಯದ್‌ ತಂದೆ ದಾವಲಸಾಬ್‌ ಮಕ್ತಾಪೂರ ಈತನು ತನ್ನ ಮನೆಯ ಎದುರಿಗೆ ಕಟ್ಟೆಯ ಮೇಲೆ ಅನಧಿಕೃತವಾಗಿ ಗಾಂಜಾ ಗಿಡ ಬೆಳೆಸಿದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಮಂಜುನಾಥ ಜಿ ಹೂಗಾರ ಪಿಎಸ್‌ಐ ಜೇವರ್ಗಿ ಠಾಣೆ ರವರು ಮಾನ್ಯ ಡಿಎಸ್‌ಪಿ ಸಾಹೇಬ ಗ್ರಾಮೀಣ ಉಪ ವಿಭಾಗ ಕಲಬುರಗಿರವರ ಪರವಾನಗೆ ಪಡೆದುಕೊಂಡು ಠಾಣೆಯ ಸಿಬ್ಬಂದಿಯವರಾದ 01) ಶ್ರೀ ಗುರುಬಸಪ್ಪಾ ಸಿಹೆಚ್‌ಸಿ 65 02) ಶ್ರೀ ಭಾಗಣ್ಣ ಸಿಪಿಸಿ 701 03) ಶ್ರೀ ಸಿದ್ದಲಿಂಗ ರೆಡ್ಡಿ ಸಿಪಿಸಿ 158 04) ಶ್ರೀ ರಾಜಶೇಖರ ಸಿಪಿಸಿ 931 05) ಶ್ರೀ ಗುರುಲಿಂಗಪ್ಪ ಸಿಪಿಸಿ 923 ಮತ್ತು ಶರಣರಾಜ ಪಿಸಿ 1043 ರವರೊಂದಿಗೆ ಮತ್ತು ಪಂಚರೊಂದಿಗೆ ಮಾನ್ಯ ಡಿಎಸ್‌ಪಿ ಸಾಹೇಬ ಗ್ರಾಮೀಣ ಉಪ ವಿಭಾಗ ಕಲಬುರಗಿ ಮತ್ತು ಮಾನ್ಯ ಸಿಪಿಐ ಸಾಹೇಬ ಜೇವರ್ಗಿ ರವರ ಮಾರ್ಗದರ್ಶನದಲ್ಲಿ ನಾವೆಲ್ಲರು ನಮ್ಮ ಠಾಣೆಯ ಸರಕಾರಿ ಜೀಪ್‌ ನಂ: ಕೆ.ಎ-32-ಜಿ;-671 ನೇದ್ದರಲ್ಲಿ ಕುಳಿತು ರಾತ್ರಿ 7-30 ಘಂಟೆಗೆ ಠಾಣೆಯಿಂದ ಬಾತ್ಮಿ ಬಂದ ಗಂವಾರ ಗ್ರಾಮದ ಕಡೆಗೆ ಸ್ಥಳಕ್ಕೆ ಹೊರಟೇವು. ಗಂವಾರ ಗ್ರಾಮಕ್ಕೆ ಹೋಗಿ ಜೀಪನ್ನು ದೂರದಲ್ಲಿ ನಿಲ್ಲಿಸಿ ನಡೆದುಕೊಂಡು ಬಾತ್ಮಿ ಸ್ಥಳಕ್ಕೆ ಹೋಗಿ ಸೈಯದ್‌ ಮಕ್ತಾಪೂರ ಈತನ ಮನೆಯ ಮುಂದೆ ಕಟ್ಟೆಯ ಮೇಲೆ ಗಾಂಜಾ ಗಿಡ ಬೆಳೆದಿರುವದನ್ನು ಚಾರ್ಜರ ಲೈಟಿನ ಬೆಳಕಿನಲ್ಲಿ ನೋಡಲು ಗಾಂಜಾ ಗಿಡ ಬೆಳೆಸಿರುವದು ಖಚಿತ ಪಡಿಸಿಕೊಂಡು ನಾನು ಮತ್ತು  ಸಿಬ್ಬಂದಿಯವರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಅಲ್ಲಿಯೇ ಇದ್ದ ಒಬ್ಬ ವ್ಯಕ್ತಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಸೈಯದ್‌ ತಂದೆ ದಾವಲಸಾಬ್‌ ಮಕ್ತಾಪೂರ ಸಾ: ಗಂವಾರ ಗ್ರಾಮ ಎಂದು ತಿಳಿಸಿದನು. ನಂತರ ಗಾಂಜಾ ಗಿಡದ ಬಗ್ಗೆ ಕೇಳಲಾಗಿ ಅವನು ಗಾಂಜಾವನ್ನು ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ಸಲುವಾಗಿ ನಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಯಾರಿಗೂ ಗೊತ್ತಾಗಬಾರದು ಎಂದು ಅವರೆ ಬೆಳ್ಳಿಯ ಪಕ್ಕದಲ್ಲಿ ಗಾಂಜಾ ಗಿಡ ನೆಟ್ಟು ಬೆಳೆಸಿರುತ್ತೇನೆ. ಗಾಂಜಾ ಗಿಡ ಬೆಳೆಸಲು ನಾನು ಯಾವುದೆ ಸರಕಾರದ ಪರವಾನಿಗೆ ಪಡೆದಿರುವದಿಲ್ಲ ಅನಧಿಕೃತವಾಗಿ ಬೆಳೆಯಿಸಿರುತ್ತೇನೆ. ಎಂದು ತಿಳಿಸಿದನು. ನಂತರ ಸದರಿಯವನು ಗಾಂಜಾ ಗಿಡವನ್ನು ಅನಧಿಕೃತವಾಗಿ ಕಾನೂನು ಬಾಹಿರವಾಗಿ ಬೆಳೆಯಿಸಿರುವದು ಖಚಿತ ಪಡಿಸಿಕೊಂಡ ನಂತರ ನಾನು ನಮ್ಮ ಜೊತೆಗೆ ಬಂದ ಬಸವರಾಜ ನೈಕೋಡಿ ಈತನಿಗೆ ಗಾಂಜಾ ಗಿಡವನ್ನು ಕಟ್ ಮಾಡಿ ತೂಕ ಮಾಡಲು ತಿಳಿಸಿದೇನು.  ಅದರಂತೆ ಬಸವರಾಜ ಈತನು ಸದರಿ ಗಾಂಜಾ ಗಿಡವನ್ನು ಒಂದು ಕುಡುಗೋಲಿನಿಂದ ಕಟ್ ಮಾಡಿ ಗಾಂಜಾ ಗಿಡಿದ ಎಲೆಗಳು ಮತ್ತು ಟೊಂಗೆಗಳನ್ನು ತೆಗೆದೆ ಮನೆಯ ಮುಂದಿನ ಕಟ್ಟೆಯ ಮೇಲೆ ಹಾಕಿ ತಕ್ಕಡಿಯಲ್ಲಿ ತೂಕ ಮಾಡಲಾಗಿ ಅದು 1050/- ಗ್ರಾಂ. ಹಸಿಯಾಗಿದ್ದ ಗಾಂಜಾ ಇದ್ದು, ಅದರ ಅಕಿ:6000/- ರೂ ಆಗುತ್ತದೆ. ಅದನ್ನು ಕೇಸಿನ ತನಿಖೆ ಕುರಿತು ಜೆಪ್ತಿಪಡಿಸಿ ಕೊಂಡು ಅದರಲ್ಲಿ 100 ಗ್ರಾಂ ದಷ್ಟು ಹಸಿಯಾಗಿದ್ದ ಗಾಂಜಾವನ್ನು ರಸಾಯನಿಕ ಪರೀಕ್ಷೆ ಕುರಿತು ಸ್ಯಾಂಪಲ್‌ ತೆಗೆದು ಪ್ರತ್ಯೇಕವಾಗಿ ಒಂದು ಬಿಳಿ ಅರಿವೆ ಚೀಲದಲ್ಲಿ ಹಾಕಿ ದಾರದಿಂದ ಹೊಲೆದು ಅದರ ಮೇಲೆ ಅರಗಿನಿಂದ ಸೀಲ್‌ ಮಾಡಿ ಎಂಬ ಕನ್ನಡ ಅಕ್ಷರದ ಮುದ್ರೆ ಒತ್ತಿ ಅದಕ್ಕೆ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ತಾಬಕ್ಕೆ ತೆಗೆದುಕೊಳ್ಳಾಲಾಯಿತು. ಸದರ ಜೆಪ್ತಿ ಪಂಚನಾಮೆಯನ್ನು ನಮ್ಮ ಹತ್ತಿರ ಇದ್ದ ಚಾರ್ಜರ ಬ್ಯಾಟರಿಯ ಬೆಳಕಿನಲ್ಲಿ ರಾತ್ರಿ 08-00 ಪಿಎಮ್‌ ದಿಂದ 09-30 ಪಿಎಮ್‌ ವರೆಗೆ ಸ್ಥಳದಲ್ಲಿ ಕುಳಿತು ಪಂಚರ ಸಮಕ್ಷಮ ಬರೆದು ಮುಗಿಸಿ ನಂತರ ಆರೋಪಿತನನ್ನು ಮತ್ತು ಮುದ್ದೆಮಾಲಿ ನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 25/11/2017  ರಂದು   ಹೊನಗುಂಟಾ ಗ್ರಾಮದ ಹತ್ತಿರ ಇರುವ  ಕಾಗಿಣಾ ನದಿಯಿಂದ  ಮರಳು ಕಳ್ಳತನ ಮಾಡಿ ಟಿಪ್ಪರ್ ನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ   ಹೊನಗುಂಟಾ  ಗ್ರಾಮಕ್ಕೆ ಹೊಗುವಾಗ ವಡ್ಡರವಾಡಿ ಹತ್ತಿರ ಹೋದಾಗ ಹೊನಗುಂಟಾ ಕಡೆಯಿಂದ ಒಂದು ಟಿಪ್ಪರ್ ಬರುತ್ತಿರುವದನ್ನು  ನೋಡಿ ತಡೆದು ನಿಲ್ಲಿಸಿದಾಗ ಅದರ ಚಾಲಕನಿಗೆ ವಿಚಾರಿಸಲು ಆತನ ಹೆಸರು ರಜಾಕ್ ಪಟೇಲ್ ತಂದೆ ಅಜ್ ಮೀರ್ ಪಟೇಲ್ ಸಾ: ಎಮ್ ಎಸ್ ಕೆ ಮಿಲ್ ಕಲಬುರಗಿ ಅಂತಾ ಹೇಳಿ ಮರಳಿನ ಬಗ್ಗೆ ವಿಚಾರಿಸಲು ಯಾವುದೇ ದಾಖಲಾತಿ ಇರುವುದಿಲ್ಲಾ ಅಂತಾ ಹೇಳಿದನು   ಸದರಿ ಟಿಪ್ಪರ್  ಪರಿಶೀಲಿಸಿ ನೋಡಲಾಗಿ ಅದರ ನಂ  ಎ ಪಿ 21 ಡಬ್ಲ್ಯೂ 8573  ಅ.ಕಿ 300000-00 ರೂ ಅದರಲ್ಲಿ ಮರಳು  ಅ.ಕಿ. 5000/- ರೂ  ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಠಾಣೆಗೆ  ಬಂದು  ಸದರಿ ಟಿಪ್ಪರ್  ಚಾಲಕ ಮತ್ತು ಮಾಲಿಕ ಸೇರಿ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೆ ಮರಳು ಕಳ್ಳತನದಿಂದ ಸಾಗಣೆಕೆ ಮಾಡುತ್ತಿದ್ದು ಅವರ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ ನಗರ ಠಾಣೆ : ದಿನಾಂಕ  25/11/2017 ರಂದು ಹೊನಗುಂಟಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟಿಪ್ಪರ ಹಾಗು ಟ್ರ್ಯಾಕ್ಟರನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ ಮೇರೆಗೆ ಪಿ ಐ ಶಹಾಬಾದ ರವರು ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಹೊನಗುಂಟಾ  ಗ್ರಾಮಕ್ಕೆ ಹೋಗುತ್ತಿದ್ದಾಗ  ಹೊನಗುಂಟಾ ಗ್ರಾಮದ ಸರಕಾರಿ ಶಾಲೆಯ ಹತ್ತಿರ ರೋಡಿನಲ್ಲಿ ಹೊನಗುಂಟಾ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ  ಬರುತ್ತಿದ್ದು, ಸದರಿ ಟಿಪ್ಪರ ಚಾಲಕನು ಪೊಲೀಸ ಜೀಪ ನೋಡಿ ತನ್ನ ಟಿಪ್ಪರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು  ಟಿಪ್ಪರನಲ್ಲಿ ಇನ್ನೋಬ್ಬ ವ್ಯಕ್ತಿ ಇದ್ದು ಅವನಿಗೆ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಪ್ರವೀಣ ತಂದೆ ಮಹಾದೇವಪ್ಪ ಪಾಟೀಲ ಸಾ: ಸಂತೋಷ ಕಾಲೋನಿ ಕಲಬುರಗಿ ಅಂತಾ ತಿಳಿಸಿದನು ಸದರಿವನಿಗೆ ಮರಳಿನ ಬಗ್ಗೆ ವಿಚಾರಿಸಲು ಯಾವುದೆ ಉತ್ತರ ನೀಡಲಿಲ್ಲಾ ನಂತರ ಓಡಿ ಹೋದ ಚಾಲಕನ ಬಗ್ಗೆ ವಿಚಾರಿಸಲು ಹಸನ ತಂದೆ ಹನ್ನುಸಾಬ ಸಾ: ಕಲಬುರಗಿ ಅಂತಾ ತಿಳಿಸಿದನು ಸದರಿ ಟಿಪ್ಪರ  ಪರಿಶೀಲಿಸಿ ನೋಡಲಾಗಿ ಟಿಪ್ಪರ  ನಂಬರ ಕೆಎ 32  ಸಿ 8391  ಅಕಿ 500000-00  ರೂ. ಇದ್ದು ಸದರಿ  ಟಿಪ್ಪರನಲ್ಲಿಯ  ಮರಳು  ಅ.ಕಿ 5000-00 ರೂ ಸದರಿ ಮರಳು ತುಂಬಿದ ಟಿಪ್ಪರ  ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆ ಕೈಗೊಂಡ ಮರಳಿ ಬಂದು ಟಿಪ್ಪರ ಮಾಲಿಕ ಮತ್ತು  ಚಾಲಕ ಹಸನ ಮತ್ತು ಪ್ರವೀಣ ಇವರು  ಸೇರಿ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಆಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿಯವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪ್ರಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಪ್ರಕರಣ :
ಆಳಂದ ಠಾಣೆ : ಶ್ರೀ ರವರರ ಮಗಳಾದ ಕುಮಾರಿ ಇವಳು ಪರಿಚಯದ ವಿಶಾಲ ತಂದೆ ಬಲಭೀಮ ಜಮಾದಾರ ಇತನು ಆಗಾಗ ಅವಳೊಂದಿಗೆ ಮಾತನಾಡುತ್ತಿದ್ದನು. ಸದರಿಯವನು ನನ್ನ ಮಗಳೊಂದಿಗೆ ಮಾತನಾಡುವುದು ಮತ್ತು ಪ್ರೀತಿಸಿದಂತೆ ನಟನೆ ಮಾಡುವದು ಮಾಡುತ್ತಿದ್ದರಿಂದ ನಾವು ಸದರಿಯವನಿಗೆ ಸುಮಾರು ಭಾರಿ ಈ ರೀತಿ ಮಾಡಬೇಡೆಂದು ತಿಳಿಸಿರುತ್ತೇವೆ. ದಿನಾಂಕ: 13/06/2017 ರಂದು ಮದ್ಯಾಹ್ನ 03:00 ಗಂಟೆಯ ಸುಮಾರಿಗೆ ನನ್ನ ಮಗಳು ಹೊರಗಡೆ ಹೋಗಿ ಹೋಗುತ್ತೇನೆ ಅಂತಾ ಮನೆಯಿಂದ ಅಂಬಾ ಭವಾನಿ ದೇವಾಲಯದ ಹತ್ತಿರ ಹೋದಾಗ ವಿಶಾಲ ಜಮಾದಾರ ಇತನು ಅಪ್ರಾಪ್ತ ವಯಸ್ಸಿನವಳಾದ ನನ್ನ ಮಗಳಿಗೆ ಕೈ ಸನ್ನೆ ಮಾಡಿ ದೂರು ಕರೆದುಕೊಂಡು ಹೋಗಿ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಅವಳಿಗೆ ಪುಸಲಾಯಿಸಿ ಅವಳ ತಲೆಕೆಡಿಸಿ ಅವಳನ್ನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಪಹರಣವಾದ ನನ್ನ ಮಗಳು ಸಿಗಬಹುದು ಅಂತಾ ಬೆಂಗಳೂರ, ಗುಲಬರ್ಗಾ, ಬೇಟಗೇರಿ, ಬಸವಕಲ್ಯಾಣ  ನಗರಗಳಿಗೆ ಹೋಗಿ ಹುಡುಕಾಡಿದರೂ ಸಿಕ್ಕಿರುವುದಿಲ್ಲ ನಾವು ಎಲ್ಲಾ ಕಡೆಗೆ ಹುಡುಕಾಡಿ ದೂರು ಸಲ್ಲಿಸಿದ್ದು ದಿನಾಂಕ:24/11/2017 ರಂದು ಅಪಹರಣಕ್ಕೋಳಗಾದ ನನ್ನ ಮಗಳು ಪತ್ತೆಯಾಗಿದ್ದು ಸದರಿಯವಳು ಅಪ್ರಾಪ್ತವಯಸ್ಕಳಾಗಿದ್ದರಿಂದ ಮತ್ತು ಅವಳು ತನಗೆ ವಿಶಾಲ ಜಮಾದಾರ ಸಾ: ಬಾಳೇನ ಕೇರಿ ಆಳಂದ ಇತನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೊಗಿ ಜಬರಿ ಸಂಬೋಗ ಮಾಡಿದ ಬಗ್ಗೆ ಹೇಳಿಕೆ ನೀಡಿದರ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ:24.11.2017 ರಂದು ಸಾಯಂಕಾಲ ನನ್ನ ಗಂಡ ಪರಮೇಶ್ವರ ಭಾಲ್ಕಿ ರವರು ಮನೆಯಲ್ಲಿದ್ದಾಗ ನಮ್ಮ ಪರಿಚಯದವರಾದ ಅಮೃತ ತಂದೆ ನಾಗೇಂದ್ರಪ್ಪ ಪಾಟೀಲ ಸಾ:ಬೆನ ಚಿಂಚೋಳಿ ತಾ:ಹುಮನಾಬಾದ ಇವರು ನಮ್ಮ ಮನೆಗೆ ಬಂದಿದ್ದು. ಅವರು ನನ್ನ ಗಂಡನಿಗೆರ ಕಮಲಾಪೂರಕ್ಕೆ ಹೋಗಿ ಬರೋಣಾ ಕೆಲಸ ಇದೆ ಅಂತಾ ಹೇಳಿಲು ನನ್ನ ಗಂಡ ಆಯಿತು ಹೋಗೋಣ ಅಂತಾ ಅನ್ನಲು ನಮ್ಮ ಭಾವನವರಾದ ಮಲ್ಲಣ್ಣ ಭಾಲ್ಕಿ ಮೇಲ್ಕಂಡ ಮೋಟಾರಸೈಕಲ್ ತೆಗೆದುಕೊಂಡಾಗ ಅಮೃತ ತಂದೆ ನಾಗೇಂದ್ರಪ್ಪ ಪಾಟೀಲ ಮೋಟರಸೈಕಲನ್ನು ನಡೆಸಿಕೊಂಡು ಹೋಗುವಾಗ ನನ್ನ ಗಂಡ ಮೋಟರಸೈಕಲ ಹಿಂದೆ ಕುಳಿತು ಹೋದನು. ನಂತರ ಸ್ವಲ್ಪ ಸಮಯದ ನಂತರ ನಮ್ಮೂರ ಆನಂದ ತಂದೆ ಭೀಮಶ್ಯಾ ಅಮ್ಮಣ್ಣ ಇವರು ಫೊನ ಮಾಡಿ ನನಗೆ ತಿಳಿಸಿದ್ದೆನಂದರೆ. ನಾನು ಗೂಡ್ಸ ಗಾಡಿ ತೆಗೆದುಕೊಂಡು ಕಮಲಾಪೂರಕ್ಕೆ ಹೋಗುತ್ತಿದ್ದಾಗ ನಮ್ಮ ಹಿಂದಗಡೆ ಒಬ್ಬ ಮೋಟರಸೈಕಲ ಸವಾರನು ತನ್ನ ಆದಿನದಲ್ಲಿದ್ದ ಮೋಟರ ಸೈಕಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಸಿಕೊಂಡು ನನ್ನ ಗಾಡಿಗೆ ಸೈಡ ಹೋಡೆದುಕೊಂಡು ಹೋದನು. ನಂತರ ನಾನು ಅವರು ಹೋಗುತ್ತಿದ್ದಂತೆ ಜೀವಣಗಿ ಸೀಮಾಂತರದ ಪಟ್ಟದವರ ಹೋಲದ ರೋಡಿನ ಮೇಲೆ ಒಮ್ಮಿಲೆ ಸ್ಕೀಡ್ಡ ಮಾಡಿ ಮೋಟರಸೈಕಲ ಸಮೇತ ಕೆಳಗೆ ಬಿದ್ದರು. ಆಗ ನಾನು ಸ್ಥಳಕ್ಕೆ ಹೋಗಿ ನೋಡಲಾಗಿ ಮೋಟರಸೈಕಲ ನಡೆಸುತ್ತಿದ್ದವರು ಪರಿಚಯದ ಅಮೃತ ಈತನಿಗೆ ಅಂತಹ ಗಾಯಗಳು ಆಗಿರಲಿಲ್ಲ. ಪರಮೇಶ್ವರ ಈತನಿಗೆ ಎಬ್ಬಿಸುತ್ತಿದ್ದಾಗ ಅಮೃತ ಈತನು ಹೆದರಿಕೊಂಡು ಓಡಿ ಹೋಗಿರುತ್ತಾನೆ. ಪರಮೇಶ್ವರ ಈತನಿಗೆ ಎಡಹಣೆಯ ಮೇಲೆಭಾರಿ ರಕ್ತಗಾಯವಾಗಿದ್ದು. ಬಲಹಣೆಗೆ ಎಡ ಎದೆಗೆ ಎಡಭುಜಕ್ಕೆ ಎರಡು ಕೈಗಳಿಗೆ ಎಡಗಾಲಿನ ಪಾದದ ಮೇಲೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು. ಹಾಗೂ ತುಟಿಗೆ ಭಾರಿ ರಕ್ತಗಾಯಗಳಾಗಿರುತ್ತವೆ ಅಂತಾ ಶ್ರೀಮತಿ ಅನಿತಾ ಗಂಡ ಪರಮೇಶ್ವರ ಭಾಲ್ಕಿ ಸಾ : ಗೋಗಿ ಕೆ ತಾ :  ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ ಲಕ್ಷ್ಮಿ ಗಂಡ ಬಸವರಾಜ ಪೂಜಾರಿ ಸಾ: ಮರತೂರ ಸ್ಟೇಷನ ಇವರ ಮಗಳಾದ  ದಾಕ್ಷಾಯಿಣಿ ವಯಾ: 17 ವರ್ಷ ಇವಳು ವಿ.ಜಿ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು ದಿನಾಲು ನಮ್ಮೂರಿನಿಂದ ಕಲಬುರಗಿಗೆ ಹೋಗಿ ಬರುತ್ತಾಳೆ ನನ್ನ ತವರು ಮನೆ ಹೊನ್ನಕಿರಣಗಿ ಇದ್ದು ನಾನು ತವರು ಮನೆಗೆ ಹೋದಾಗ ಬೆಳ್ಳೆಪ್ಪ ತಂದೆ ಹಣಮಂತ ಹಿರೇಕುರಬರು ಇತನು ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದು ನನ್ನ ಮಗಳಾದ ದಾಕ್ಷಾಯಿಣಿ ಇವಳಿಗೆ ನೊಡುವುದು ಕೈ ಮುಟ್ಟಿ ಮಾತನಾಡಿಸುವುದು ಮಾಡುತ್ತಿದ್ದು ಅದಕ್ಕೆ ನಾನು ಮತ್ತು ನನ್ನ ಗಂಡ ಬೆಳ್ಳೆಪ್ಪನಿಗೆ ಹೀಗೆಲ್ಲಾ ಮಾಡುವುದು ಸರಿಯಲ್ಲಾ ಅಂತಾ ಬುದ್ದಿ ಹೇಳಿದೇವು ಹೀಗಿದ್ದು ದಿನಾಂಕ: 16/11/2017 ರಂದು ಬೆಳ್ಳೀಗೆ ನನ್ನ ಮಗಳು ಕಲಬುರಗಿಗೆ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿದ್ದಳು ಸಾಯಂಕಾಲವಾದರು ಮನೆಗೆ ಬರದಿದ್ದರಿಂದ ಗಾಬರಿಯಾಗಿ ಕಲಬುರಗಿ ಹಾಗೂ ಇತರೆ ಕಡೆ ಮತ್ತು ನಮ್ಮ ಸಂಬಂಧಿಕರಲ್ಲಿ ಹುಡುಕಾಡಿದರು ಸಿಕ್ಕಿರುವುದಿಲ್ಲಾ ನಂತರ ನಮಗೆ ಗೊತ್ತಾಗಿದ್ದೇನೆಂದರೆ ಬೆಳೆಪ್ಪ ಹೊನ್ನಕಿರಣಿ ಇತನು ನಮ್ಮ ಮಗಳಿಗೆ ಅಪಹರಿಸಿಕೊಂಡು ಹೋಗಿರುತ್ತಾರೆ ಅಲ್ಲಿಂದ ಇಲ್ಲಿಯವರೆಗೂ ಹುಡುಕಾಡಿದರು ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.