POLICE BHAVAN KALABURAGI

POLICE BHAVAN KALABURAGI

31 January 2017

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ವಿಠಲ ತಂದೆ ಬೀಮಾಶಂಕರ ದನ್ನಿ ಸಾ: ಕಡಗಂಚಿ ಗ್ರಾಮ ಇವರ ಗ್ರಾಮದ ಸೀಮಾಂತರದ ಸರ್ವೇ ನಂ. 44 ರಲ್ಲಿ ನಮ್ಮ ಪಾಲಿಗೆ 2 ಎಕರೆ ಜಮೀನು ನಮ್ಮ ಪೂರ್ವಜರಿಗೆ ಸರಕಾರದಿಂದ ಮಂಜೂರಾಗಿದ್ದು ಸದರಿ ಹೊಲಕ್ಕೆ ಲದ್ದಿ ಹೊಲ ಎಂದು ಕರೆಯುತ್ತೇವೆ ನಮ್ಮಂತೆ ನಮ್ಮೂರಿನ ಸುಮಾರು 70 ಜನ ದಲಿತರಿಗೆ ಸರಕಾರದಿಂದ ಬಹಳ ವರ್ಷಗಳ ಹಿಂದೆ ಜಮೀನು ಮಂಜೂರಾಗಿದ್ದು ಎಲ್ಲರು ನಮ್ಮ ನಮ್ಮ ಪಾಲಿಗೆ ಪಹಣಿ ಪ್ರಕಾರ ಬಂದಿರುವ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದೇವೆ ಸದರಿ ಲದ್ದಿ ಹೊಲಗಳಿಗೆ ಹೋಗಲು ನಮ್ಮುರಿನ ರಾಮಚಂದ್ರಪ್ಪ ತಂದೆ ಬಸವಣಪ್ಪ ವಾಣಿ ಇವರ ಹೊಲದಿಂದ ಹೋಗಲು ನಮ್ಮ ಪೂರ್ವಜರಿಂದಲು 8 ಅಡಿ ಅಗಲದ ಕಾಲು ದಾರಿ ಇದ್ದು ನಾವು ಸದ್ಯ ಅದೇ ದಾರಿಯಿಂದಲೆ ಹೋಗಿ ಬರಬೇಕಾಗುತ್ತದೆ, ಆದರೆ ರಾಮಚಂದ್ರ ವಾಣಿ ಹಾಗೂ ಅವರ ಮಕ್ಕಳು ಸದರಿ ಹೊಲದಿಂದ ನಮ್ಮ ಹೊಲಕ್ಕೆ ಹೋಗಲು ದಾರಿ ಕೊಡುವುದಿಲ್ಲವೆಂದು ನಮ್ಮೊಂದಿಗೆ ಹಾಗೂ ನನ್ನ ತಮ್ಮ ನಿಂಗಪ್ಪ ಹಾಗೂ ನಮ್ಮ ಚಿಕ್ಕಪ್ಪ ಮಲ್ಲಿಕಾರ್ಜುನ ರವರೊಂದಿಗೆ ತಕರಾರು ಮಾಡುತ್ತಾ ಬಂದಿರುತ್ತಾರೆ, ಆದರೇ ನಾವು ಊರಲ್ಲಿ 2-3 ಬಾರಿ ಊರ ಪ್ರಮುಖರನ್ನು ಸೇರಿಸಿ ಪಂಚಾಯಿತಿ ಮಾಡಿದ್ದು ಆದರೂ ಸಹ ಅವರು ದಾರಿ ವಿಷಯವಾಗಿ ಪದೇ ಪದೇ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಿದ್ದು ರಾಮಚಂದ್ರಪ್ಪ ವಾಣಿ ಇವರು ನಮ್ಮೂರಿನ ರೇವಣಸಿದ್ದಪ್ಪ ತಂದೆ ಮೈಲಾರಿ ಪೂಜಾರಿ ಇವರ ಹೊಲ ಖರೀದಿ ಮಾಡಿದ್ದು ಸದರಿ ಹೊಲದ ನೊಂದಣಿ ಮಾಡಿಕೊಳ್ಳಬೇಕಾಗಿದ್ದರಿಂದ ಹೊಲದ ಸರ್ವೆಗಾಗಿ ಅರ್ಜಿ ಹಾಕಿರುತ್ತಾರೆ, ಸರ್ವೇ ಇಲಾಖೆಯವರು ಇಂದು ದಿನಾಂಕ:- 30/01/2017 ರಂದು ಸದರಿ ಹೊಲದ ಸರ್ವೇ ನಿಗದಿಪಡಿಸಿದ್ದು ನಾನು ಪಕ್ಕದ ಹೊಲದವನಾಗಿದ್ದರಿಂದ ಸರ್ವೇ ಕಾಲಕ್ಕೆ ನನಗೆ ಹಾಜರಿರುವಂತೆ ನೊಟೀಸ್ ನೀಡಿದ್ದರಿಂದ ನಾನು ನನ್ನ ತಮ್ಮ ನಿಂಗಪ್ಪ ಹಾಗು ನಮ್ಮ ಚಿಕ್ಕಪ್ಪ ಮಲ್ಲಿಕಾರ್ಜುನ ತಂದೆ ಶಾಂತಪ್ಪ ದನ್ನಿ ರವರೆಲ್ಲರು ಕೂಡಿಕೊಂಡು ಮುಂಜಾನೆ 11:00 ಗಂಟೆ ಸುಮಾರಿಗೆ ನಮ್ಮ ಲದ್ದಿ ಹೊಲಕ್ಕೆ ಹೋಗಿರುತ್ತೇನೆ, ಸರ್ವೇ ಕಾರ್ಯ ನಡೆದಿದ್ದು ಆಗ ಸದರಿ ಕಾಲು ದಾರಿಯನ್ನು ಅಳಿಯುವ ವಿಷಯವಾಗಿ ರೇವಣಸಿದ್ದ ಹಾಗೂ ರಾಮಚಂದ್ರಪ್ಪ ಇವರ ಮದ್ಯ ವಾದವಿವಾಧ ನಡೆದಿದ್ದು ಆಗ ನಾನು ನಮ್ಮ ಹೊಲಕ್ಕೆ ಹೋಗಲು ಪೂರ್ವಜರಿಂದ ದಾರಿ ಇದ್ದು ಸದರಿ ದಾರಿ ಲೆಕ್ಕ ಬಿಟ್ಟು ಜಮೀನು ಖರೀದಿ ಮಾಡಬೇಕೆಂದು ರಾಮಚಂದ್ರ ಇವರಿಗೆ ಹೇಳುತ್ತಿದ್ದೇನು ಅಷ್ಟರಲ್ಲಿಯೇ ರಾಮಚಂದ್ರ ಹಾಗೂ ಅವರ ಮಕ್ಕಳಾದ ಶ್ರೀಶೈಲ ತಂದೆ ರಾಮಚಂದ್ರಪ್ಪ ವಾಣಿ, ಲಿಂಗರಾಜ ತಂದೆ ರಾಮಚಂದ್ರಪ್ಪ ವಾಣಿ, ನಾಗರಾಜ ತಂದೆ ರಾಮಚಂದ್ರಪ್ಪ ವಾಣಿ ಮತ್ತು ಇವರ ಪರವಾಗಿ ಅವರ ಸಂಬಂಧಿಕರಾದ ಅಶೋಕ ತಂದೆ ಲಕ್ಷ್ಮಣ ಬುಗಶೆಟ್ಟಿ, ಹಣಮಂತರಾಯ ತಂದೆ ಶಂಕ್ರೇಪ್ಪ ಬುಗಶೆಟ್ಟಿ, ಲಕ್ಷ್ಮಣ ತಂದೆ ಶಂಕ್ರೇಪ್ಪ ಬುಗಶೆಟ್ಟಿ ಹಾಗೂ ಶಿವಲಿಂಗಪ್ಪ ತಂದೆ ಹಣಮಂತರಾಯ ಬುಗಶೆಟ್ಟಿ ಇವರೆಲ್ಲರು ಕೂಡಿಕೊಂಡು ನನಗೆ ಎಲ್ಲರು ಸೇರಿ ಏ ಮಗನ್ಯಾ ಹೊಲ್ಯಾ ಎಲ್ಲಿಗ್ಯಾಕ ಹತ್ತಲ್ಯಾಕ ನಿನ್ನಸಲುವಾಗಿ ಒಂದು ನಂಬರ ಹೊಲ ಇಟ್ಟಿವಿ ನಿನಗ ಯಾವುದೇ ಕಾರಣಕ್ಕೂ ನಿನಗ ದಾರಿ ಕೊಡುವುದಿಲ್ಲ ನೀವ ಹೊಲೇರು ನಮ್ಮದೇನು ಕಿತ್ಕೋತಿರಿ ಕಿತ್ಕೋರಿ ಎಂದು ಅವಾಚ್ಯ ಶಬ್ದಗಳಿಂದ ಎಲ್ಲರು ಬೈಯುತ್ತಾ ಶ್ರೀಶೈಲನು ಹಾಗೂ ಲಿಂಗರಾಜ ಇವರು ಕೈಯಿಂದ ನನ್ನ ಎದೆಯ ಮೇಲೆ ಹಾಗೂ ಎಡಗಡೆ ಕಪಾಳ ಮೇಲೆ ಹೊಡೆಯುತ್ತಿರುವಾಗ ನನ್ನ ತಮ್ಮನಾದ ನಿಂಗಪ್ಪನು ಬಿಡಿಸಲು ಬಂದಾಗ ನಾಗರಾಜ ಮತ್ತು ಅಶೋಕ ಇವರು ನನ್ನ ತಮ್ಮನಿಗೆ ಕಾಲಿನಿಂದ ಜೋರಾಗಿ ಒದ್ದಿದ್ದರಿಂದ ನನ್ನ ತಮ್ಮನು ನೆಲಕ್ಕೆ ಬಿದ್ದಿದ್ದು ಅದರಿಂದ ಸೊಂಟಕ್ಕೆ ಒಳಪೆಟ್ಟಾಗಿದ್ದು ಅಲ್ಲದೇ ಇಬ್ಬರು ಸೇರಿ ಕೈಯಿಂದ ಹೆಡಕಿನ ಮೇಲೆ ಹೊಡೆಯುತ್ತಿರುವಾಗ ನಮ್ಮ ಚಿಕ್ಕಪ್ಪನಾದ ಮಲ್ಲಿಕಾರ್ಜುನ ಇವರು ಬಿಡಿಸಲು ಬಂದಾಗ ಶಿವಲಿಂಗಪ್ಪ ಮತ್ತು ಲಕ್ಷ್ಮಣ ಹಾಗೂ ಹಣಮಂತರಾಯ ಇವರುಗಳು ನಮ್ಮ ಚಿಕ್ಕಪ್ಪನಿಗೆ ಒತ್ತಿ ಹಿಡಿದು ನೆಲಕ್ಕೆ ಕೇಡವಿ ಕಾಲಿನಿಂದ ಒದ್ದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀಮತಿ ಸುಂದರಬಾಯಿ ಗಂಡ ರಾಮಚಂದ್ರ ವಾಣಿ ಸಾ: ಕಡಗಂಚಿ ಗ್ರಾಮ ಇವರ ಗ್ರಾಮದ ಸೀಮಾಂತರದ ಸರ್ವೇ ನಂ. 7/9 ರಲ್ಲಿ ನನ್ನ ಹೆಸರಿನಲ್ಲಿ 5 ಎಕರೆ ಜಮೀನು ಇದ್ದು ಸದರಿ ಜಮೀನಿನ ಬಂದಾರಿಗೆ ಹೊಂದಿ ಸುಮಾರು 8 ಅಡಿಯಷ್ಟು ಅಗಲದ ಕಾಲು ದಾರಿ ಇರುತ್ತದೆ, ಇದೆ ಕಾಲು ದಾರಿಯಿಂದ ನಮ್ಮ ಹೊಲದ ಮೇಲಿನ ಹೊಲದವರು ಮತ್ತು ನಮ್ಮೂರಿನ ಹರಿಜನ ಸಮಾಜದ ಲದ್ದಿ ಹೊಲದವರು ಹೊಲಕ್ಕೆ ಹೋಗಿ ಬರುವುದು ಮತ್ತು ಎತ್ತುಗಳನ್ನು ಹೊಡೆದುಕೊಂಡು ಹೋಗುವುದು ಮಾಡುತ್ತಾರೆ ಆದರೆ ನಮ್ಮೂರಿನ ವಿಠಲ ತಂದೆ ಬೀಮಾಶಂಕರ ದನ್ನಿ ಹಾಗೂ ಅವರ ತಮ್ಮ ನಿಂಗಪ್ಪ ತಂದೆ ಬೀಮಾಶಂಕರ ದನ್ನಿ ಇವರುಗಳು ಸದರಿ ಕಾಲು ದಾರಿಯಿಂದ ಎತ್ತಿನ ಬಂಡಿ ಹೊಡೆದುಕೊಂಡು ಹೊಗುವುದು ಮತ್ತು ಟ್ರಾಕ್ಟರ ಚಲಾಯಿಸಿಕೊಂಡು ತಮ್ಮ ಹೊಲಕ್ಕೆ ಹೋಗುವುದು ಮಾಡುತ್ತಿದ್ದುದ್ದರಿಂದ ನನ್ನ ಗಂಡ ಹಾಗೂ ನನ್ನ ಮಕ್ಕಳು ನಮ್ಮ ಹೊಲದಾಗಿನಿಂದ ಕಾಲುದಾರಿ ಮಾತ್ರ ಇದ್ದು ಟ್ರಾಕ್ಟರ ಮತ್ತು ಬಂಡಿ ತೆಗೆದುಕೊಂಡು ಹೊಗಬೇಡಿರಿ ಇದರಿಂದ ನಮ್ಮ ಬೆಳೆ ಹಾನಿ ಆಗುತ್ತದೆ ಎಂದು ಹೇಳಿದರು ಸಹ ವಿಠಲ ಹಾಗೂ ನಿಂಗಪ್ಪ ಇವರು ನನ್ನ ಗಂಡ ಹಾಗೂ ನನ್ನ ಮಕ್ಕಳ ಮಾತಿಗೆ ಬೆಲೆ ಕೊಡದೆ ಹಾಗೇ ನಮ್ಮ ಹೊಲದಾಗಿನ ಕಾಲು ದಾರಿ ಮೇಲಿಂದ ಬಂಡಿ ಮತ್ತು ಟ್ರಾಕ್ಟರ ತೆಗೆದುಕೊಂಡು ಹೋಗುತ್ತಿದ್ದು ಈ ವಿಷಯವಾಗಿ ನಾವು ಅವರಿಗೆ ಕೇಳಿದರೆ ಅವರು ನಮ್ಮೊಂದಿಗೆ ತಕರಾರು ಮಾಡುತ್ತ ನಮ್ಮ ಮೇಲೆ ದ್ವೇಷ ಬೆಳೆಸುತ್ತಾ ಬಂದಿರುತ್ತಾರೆ. ಹೀಗಿದ್ದು ಸದರಿ ನನ್ನ ಹೆಸರಿನಲ್ಲಿರುವ ಹೊಲದ ಹದ್ದಬಸ್ತು ಮತ್ತು ಸರ್ವೇಗಾಗಿ ಅರ್ಜಿ ಸಲ್ಲಿಸಿದ್ದು ಅದರಂತೆ ಭೂ ಮಾಪಕ ಅಧಿಕಾರಿಗಳು ಸದರಿ ಹೊಲದ ಹದ್ದ ಬಸ್ತು ಮತ್ತು ಸರ್ವೆ ಕುರಿತು ದಿನಾಂಕ:- 30/01/2017 ರಮದು ನಿಗದಿ ಪಡಿಸಿ ಸುತ್ತಮುತ್ತ ಹೊಲದವರಿಗೆ ನೊಟಿಸ್ ಹೊರಡಿಸಿರುತ್ತಾರೆ, ಇದೆ ರೀತಿಯಾಗಿ ಇಂದು ದಿನಾಂಕ:- 30/01/2017 ರಂದು ಮುಂಜಾನೆ 10:00 ಗಂಟೆ ಸುಮಾರಿಗೆ ಭೂ ಮಾಪಕ ಅಧಿಕಾರಿಗಳು ನಮ್ಮ ಹೊಲಕ್ಕೆ ಬಂದು ಭೂ ಮಾಪನ ಮತ್ತು ಹದ್ದಬಸ್ತು ಕಾರ್ಯದಲ್ಲಿ ಮುಗಿಸಿ ನಮ್ಮ ಹೊಲದ ಪಕ್ಕದಲ್ಲಿ ಇರುವ ಅಂಬಾರಾಯ ತಂದೆ ಶಾಂತಪ್ಪ ಗಡಬಳ್ಳಿ ಇವರ ಹೊಲದಲ್ಲಿ ಕುಳಿತಿದ್ದು ಅವರೊಂದಿಗೆ ನಾನು ಹಾಗೂ ನನ್ನ ಗಂಡ ಮತ್ತು ನನ್ನ ಮಕ್ಕಳಾದ ನಾಗರಾಜ, ಲಿಂಗರಾಜ, ಶ್ರೀಶೈಲ ಹಾಗೂ ಸೊಸೆ ಉಮಾದೇವಿ ಗಂಡ ನಾಗರಾಜ ವಾನಿ ರವರೆಲ್ಲರು ಸಹ ಮಾತನಾಡುತ್ತಾ ಸದರಿ ಅಂಬಾರಾಯ ಗಡಬಳ್ಳಿ ಇವರ ಹೊಲದಲ್ಲಿ ಕುಳಿತಿರುವಾಗ 11:30 ಎ.ಎಮ್ ಕ್ಕೆ ವಿಠಲ ತಂದೆ ಬೀಮಾಶಂಕರ ದನ್ನಿ ನಿಂಗಪ್ಪ ತಂದೆ ಬೀಮಾಶಂಕರ ದನ್ನಿ, ಶ್ರೀಶೈಲ ತಂದೆ ವಿಠಲ ದನ್ನಿ, ಶಶಿಕಾಂತ ತಂದೆ ವಿಠಲ ದನ್ನಿ, ಶಿವಾನಂದ ತಂದೆ ವಿಠಲ ದನ್ನಿ, ಸೂರ್ಯಕಾಂತ ತಂದೆ ನಿಂಗಪ್ಪ ದನ್ನಿ, ಗುರುಶಾಂತಪ್ಪ ತಂದೆ ನಿಂಗಪ್ಪ ದನ್ನಿ ಹಾಗೂ ಮಲ್ಲಿಕಾರ್ಜುನ ತಂದೆ ಶಾಂತಪ್ಪ ದನ್ನಿ ರವರೆಲ್ಲರು ಗುಂಪು ಕಟ್ಟಿಕೊಂಡು ಬಂದವರೆ ನನ್ನ ಗಂಡನಿಗೆ ಏ ಭೋಸಡಿ ಮಗನೇ ನಮಗೆ ನಮ್ಮ ಹೊಲಕ್ಕೆ ಬಂಡಿ ಹಾಗೂ ಟ್ರಾಕ್ಟರ ಹೋಗಿ ಬರಲು ದಾರಿಬಿಟ್ಟು ನಿನ್ನ ಹೊಲ ಹದ್ದಬಸ್ತು ಮಡಿಕೊ ಎಂದು ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಿರುವಾಗ ನನ್ನ ಮಕ್ಕಳಾದ ಶ್ರೀಶೈಲ, ಲಿಂಗರಾಜ, ನಾಗರಾಜ ರವರುಗಳು ಜಗಳ ಬಿಡಿಸಲು ಹೋದಾಗ ವಿಠಲ, ನಿಂಗಪ್ಪ ಮತ್ತು ಶ್ರೀಶೈಲ ರವರು ಕೂಡಿ ನನ್ನ ಮಕ್ಕಳಿಗೆ ಕೈಯಿಂದ ಹೊಡೆ ಬಡೆ ಮಾಡುತ್ತಿರುವಾಗ ನಾನು ಮತ್ತು ನನ್ನ ಸೊಸೆಯಾದ ಉಮಾದೇವಿ ಇಬ್ಬರು ಕೂಡಿ ಜಗಳ ಬಿಡಿಸುತ್ತಿರುವಾಗ ಶಶಿಕಾಂತ ಶಿವಾನಂದ ಮತ್ತು ಸೂರ್ಯಕಾಂತ ರವರುಗಳು ಕೂಡಿ ನನಗೆ ಹಾಗೂ ನನ್ನ ಸೊಸೆಗೆ ಕೈಯಿಂದ ಹೊಡೆಬಡೆ ಮಾಡಿ ಕೂದಲು ಹಿಡಿದು ಎಳೆದಾಡಿ ದಂಗಾ ಮಸ್ತಿ ಮಾಡುತ್ತಿರುವಾಗ ಅಲ್ಲೆ ಇದ್ದ ನಮ್ಮ ಸಂಬಂಧಿಕನಾದ ಅಶೋಕ ತಂದೆ ಲಕ್ಷ್ಮಣ ಬುಗಶೆಟ್ಟಿ ಇವರು ಜಗಳ ಬಿಡಿಸಲು ಬಂದಾಗ ಗುರುಶಾಂತ ಮತ್ತು ಮಲ್ಲಿಕಾರ್ಜುನ ಇವರುಗಳು ಕೂಡಿ ಅವರನ್ನು ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆ ಮೇಲೆ ಮತ್ತು ಬೆನ್ನಿಗೆ ಒದ್ದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಶರಣಬಸಪ್ಪಾ ತಂದೆ ನಾಗೆಂದ್ರಪ್ಪಾ ಪಾಟೀಲ ಸಾ|| ಮನೆ ನಂ:2-907 ಗುಬ್ಬಿ ಕಾಲನಿ ಸೇಡಂ ರೋಡ ಕಲಬುರಗಿ ರವರು, ಅನ್ನಪೂರ್ಣ ಕ್ರಾಸ ಹತ್ತಿರವಿರುವ ಪಶು ವೈದ್ಯಕೀಯ ಆಸ್ಪತ್ರೆ ಎದುರಿಗೆ ಇರುವ ಖಾಲಿ ಜಾಗದಲ್ಲಿ ಹೊಸದಾಗಿ ಗಾಂಧಿ ಭವನ ಅಂತಾ ಕಾಂಗ್ರೆಸ್ ಕಛೇರಿ ಕಟ್ಟಡವನ್ನು ಗುತ್ತಿಗೆಯಿಂದ ಪಡೆದುಕೊಂಡು ಈಗ ಸುಮಾರು 4 ತಿಂಗಳಿಂದ ಕಟ್ಟಡ ಪ್ರಾರಂಭ ಮಾಡಿದ್ದು ಸದರ ಕಟ್ಟಡದ ಮೇಲುಸ್ತುವಾರಿಯನ್ನು ಗೌಸ ತಂದೆ ಮಹ್ಮದ ಗನಿ ಸಾ|| ಅಫಜಲಪೂರ, ವೀರಭದ್ರ ಸ್ವಾಮಿ ಇಂಜಿನೀಯರ ಇವರು ನೋಡಿಕೊಳ್ಳುತ್ತಾರೆ. ಪ್ರತಿ ದಿವಸ ನಾವು ಕೆಲಸ ಮುಗಿಸಿಕೊಂಡು ನಾನು ಮತ್ತು ಕೆಲಸಗಾರರು ಕಟ್ಟಡದ ಕಾಮಗಾರಿಗೆ ಬೇಕಾಗುವ ಸಾಮಾನುಗಳನ್ನು ಅಲ್ಲೆ ಬಿಟ್ಟು ಹೋಗುತ್ತೇವೆ. ದಿನಾಂಕ:27/01/2017 ರಂದು ಕಾಮಗಾರಿ ಕಟ್ಟಡ ಸಲುವಾಗಿ ಇಟ್ಟಿದ್ದ 169 ಶೆಟರಿಂಗ ಪ್ಲೇಟ್ಸ್ ಮತ್ತು ಸ್ಟೀಲ್ ರಿಂಗ್ಸ ಅಂದಾಜು 700 ಕೆ.ಜಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಘಟನೆಯು ದಿನಾಂಕ:27/01/2017 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ:28/01/2017ರ ಬೆಳಗಿನ ಜಾವ 5:00 ಗಂಟೆಯ ಮದ್ಯದ ಅವಧಿಯಲ್ಲಿ ಜರುಗಿರುತ್ತದೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

28 January 2017

Kalaburagi District Press Note


Kalburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ರೋಜಾ ಠಾಣೆ : ದಿನಾಂಕ: 27-01-2017 ಸಂಜೆ ಪೀರಬಂಗಾಲಿ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ ಹೇಳಿ ಬಾಂಬೆ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಮೇರೆಗೆ ಶ್ರೀ ಘಾಳೆಪ್ಪಾ ಪೆನಾಗ. ಪಿ.ಐ ರೋಜಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಪೀರಬಂಗಾಲಿ ದರ್ಗಾ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಕರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಹೇಳಿ ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದು ಖಚಿತ ಪಡೆಸಿಕೊಂಡು ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ ಕುತ್ಬೋದ್ದೀನ ತಂದೆ ಮರಗುಬ ಅಹ್ಮದ ಸಾ: ನೂರಾನಿಮೊಹಲ್ಲಾ ಕಲಬುರಗಿ ಅಂತಾ ಹೇಳಿದ್ದು ಸದರಿ ವ್ಯಕ್ತಿಯ ಅಂಗ ಶೋಧಿಸಲಾಗಿ ಅವನ ಹತ್ತಿರ ನಗದು ಹಣ 1280/-ರೂಪಾಯಿ, ಒಂದು ಮಟಕಾ ಚೀಟಿ, ಒಂದು ಬಾಲ್ ಪೆನನ್ನಗಳನ್ನು ವಶಪಡಿಸಿಕೊಂಡ ಸದರಿಯವನೊಂದಿಗೆ ರೋಜಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಿರುಕಳ ನೀಡಿ ಹಲ್ಲೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಶಮಿಶಾದ್ ಬೇಗಂ ಗಂಡ ಶಾಬುದ್ದೀನ ಜಮಾದಾರ ಸಾ:ಅಲ್ಲಾಪೂರ ತಾ||ಆಳಂದ  ಹಾ|| || ತೆಲ್ಲೂಣಗಿ ತಾ|| ಅಫಜಲಪೂರ  ರವರಿಗೆ  10 ವರ್ಷದ ಹಿಂದೆ ಆಳಂದ ತಾಲೂಕಿನ ಅಲ್ಲಾಪೂರ ಗ್ರಾಮದ ಶಾಬುದ್ದೀನ್ ತಂದೆ ಖಾದರಸಾಬ ಜಮಾದಾರ ಇವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತಾರೆ. ನನಗೆ ಇನ್ನೂ ಮಕ್ಕಳಾಗಿರುವುದಿಲ್ಲ. ಮದುವೆಯಾದ ಎರಡು ವರ್ಷದ ವರೆಗೆ ನನಗೆ ನನ್ನ ಗಂಡ ಮತ್ತು ನಮ್ಮ ಅತ್ತೆಯಾದ ರಸೂಲಬೀ ಗಂಡ ಖಾದರಸಾಬ ಜಮಾದಾರ, ಮಾವನಾದ ಖಾದರಸಾಬ ತಂದೆ ನಬಿಲಾಲ ಜಮಾದಾರ, ಮೈದುನರಾದ ಸೈಫನ, ಲಾಲಸಾಬ ಹಾಗು ನಾದುನಿಯಾದ ಶಕೀನಾ ಗಂಡ ಮಹ್ಮದ ಜಮಾದಾರ ಇವರೆಲ್ಲರು ಚೆನ್ನಾಗಿ ಪ್ರೀತಿ ಪ್ರೇಮದಿಂದ ನೋಡಿಕೊಂಡಿರುತ್ತಾರೆ, ಈಗ 8 ವರ್ಷದಿಂದ ನನ್ನ ಗಂಡ ಮತ್ತು ನಮ್ಮ ಅತ್ತೆ, ಮಾವ, ಮೈದುನರು ಹಾಗು ನಾದುನಿ ಎಲ್ಲರು ನನಗೆ ನೀನು ಸರಿಯಾಗಿಲ್ಲ, ನಮಗ್ಯಾಕ ಮೂಲಾಗಿದಿ, ನೀನು ಸಿಗದಿದ್ದರೆ ನಾನು ಬೇರೆ ಮದುವೆ ಮಾಡಿಕೊಳ್ಳುತ್ತಿದ್ದೆ ಅಂತಾ ನನ್ನ ಗಂಡ ಹಾಗೂ ನಮ್ಮ ಅತ್ತೆ  ನಿನು ನೋಡಲು ಚೆನ್ನಾಗಿಲ್ಲ,ನಿನಗೆ ಇನ್ನೂ ಮಕ್ಕಳಾಗಿಲ್ಲಾ ನಿನು ನಮ್ಮ ಮನೆಗೆ ಹೊಂದುವುದಿಲ್ಲ ಎಂದು ವಿಕಾರಣ ನನಗೆ ಬೈಯುವುದು, ಹೊಡೆಯುವುದು ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿರುತ್ತಾರೆ.ನಾನು ಸದರಿ ವಿಷಯ ನಮ್ಮ ತಾಯಿಗೆ ತಿಳಿಸಿರುತ್ತೆನೆ.ನನ್ನ ಗಂಡ ಹಾಗೂ ಅತ್ತೆ, ಮಾವ, ಮೈದುನರು ಹಾಗು ನಾದುನಿ ಕೊಡುವ ಕಿರುಕುಳ ತಾಳಲಾರದೆ ನಾನು ಈಗ 4 ವರ್ಷದಿಂದ ನನ್ನ ತವರು ಮನೆಯಾದ ತೆಲ್ಲೂಣಗಿ ಗ್ರಾಮಕ್ಕೆ ಬಂದು ನನ್ನ ತವರು ಮನೆಯಲ್ಲಿ ನಮ್ಮ ತಾಯಿಯೊಂದಿಗೆ ಇದ್ದಿರುತ್ತೇನೆ.ನಮ್ಮ ನಾದುನಿಯಾದ ಶಕೀನಾ ಇವಳಿಗೆ ನನ್ನ ತವರುಮನೆಯಾದ ತೆಲ್ಲೂಣಗಿ ಗ್ರಾಮ ಮಹ್ಮದ ಜಮಾದಾರ ರವರಿಗೆ  ಕೊಟ್ಟು ಮದುವೆ ಮಾಡಿರುತ್ತಾರೆ  ದಿನಾಂಕ 29/11/2016 ರಂದು ಸಂಜೆ 6.00 ಗಂಟೆ ಸುಮಾರಿಗೆ ನಾನು ಹಾಗು ನಮ್ಮ ತಾಯಿಯಾದ ಮದಿನಾ  ಮನೆಯಲಿದ್ದಾಗ ನನ್ನ ಗಂಡ ಶಾಬುದ್ದೀನ ನಮ್ಮ ಅತ್ತೆ ರಸೂಲಬೀ ಹಾಗು ಮೈದುನರಾದ ಸೈಫನ, ಲಾಲಸಾಬ ಹಾಗೂ ನಮ್ಮ ಮಾವನಾದ ಖಾದರಸಾಬ ಇವರು ಅಲ್ಲಾಪೂರ ಗ್ರಾಮದಿಂದ ನನ್ನ ತವರು ಮನೆಗೆ ಬಂದಿದ್ದು ಇವರೊಂದಿಗೆ ನಮ್ಮ ನಾದುನಿಯಾದ ಶಕೀರಾ ಬಂದಿದ್ದು ನಾನು ಸದರಿಯವರಿಗೆ ನೋಡಿ ಕುಡಿಯಲು ನೀರು ತಗೆದುಕೊಂಡು ಹೊರಗೆ ಬಂದಾಗ ನನ್ನ ಗಂಡ ನನಗೆ ಏನೇ ರಂಡಿ ನೀನು ಯಾರಿಗಿ ಕೇಳಿ ನಿನ್ನ ತವರಮನಿಗಿ ಬಂದಿದಿ ಬೊಸಡಿ ಅಂತ ಬೈಯುತಿದ್ದಾಗ ನನ್ನ ಗಂಡ ಬಾಯಿ ಮಾಡುವ ಸಪ್ಪಳ ಕೇಳಿ ಅದೆ ಸಮಯಕ್ಕೆ ನಮ್ಮ ಗ್ರಾಮದ ಬಾಬುಸಾಬ ತಂದೆ ಲಾಡ್ಲೇಮಶಾಕ, ದಾವೂದ್ ತಂದೆ ಲಾಡ್ಲೆಸಾಬ, ಶಿವರಾಯಗೌಡ ತಂದೆ ಹಣಮಂತ್ರಾವ ಪಾಟೀಲ, ಶರಣಗೌಡ ತಂದೆ ಶಾಮರಾವಗೌಡ ಪಾಟೀಲ, ಭಗುಗೌಡ ತಂದೆ ರೇವಣಸಿದ್ದಪ್ಪ ಪಾಟೀಲ, ಶ್ರೀಶೈಲ ತಂದೆ ಸೊಮಣ್ಣ ಕೋಳಿ ಇವರು ಬಂದು ನನ್ನ ಗಂಡನಿಗೆ ಯಾಕ್ರಿ ಬಾಯಿ ಮಾಡುಕತ್ತಿರಿ ಅಂತ ಕೇಳುತಿದ್ದಾಗ ನಮ್ಮ ಅತ್ತೆ ರಸೂಲ್ ಬೀ ಇವಳು ನನಗೆ ರಂಡಿ ಯಾರಿಗೂ ಹೇಳದೆ ಕೇಳದೆ ನಮ್ಮ ಮನಿ ಬಿಟ್ಟು ತವರ ಮನಿಗಿ ಬಂದಾಳ ಅಂತ ಅಂದು ತನ್ನ ಕೈಯಿಂದ ನನ್ನ ಕಪಾಳ ಮ್ಯಾಲ ಹೊಡೆಯುತಿದ್ದಾಗ ನಮ್ಮ ಮೈದುನರು, ನಾದುನಿ ಹಾಗು ಮಾವ ಇವರು ಇವತ್ತ ರಂಡಿಗಿ ಖಲಾಸ ಮಾಡೆ ಹೋಗೋಣ ಅಂತ ಅಂದಾಗ ನಮ್ಮ ಅತ್ತೆ ರಂಡಿ ಇಲ್ಲೇ ಇರ್ಲಿ ನಮ್ಮ ಮನಿಗೆ ಬಂದರೆ ಜಿವಾನೆ ಹೊಡಿತಿವಿ ಬೋಸಡಿಗೆ ಅಂತ ಅನ್ನುತಿದ್ದಾಗ ನನ್ನ ಗಂಡನು ರಂಡಿಗಿ ನಾವು ಇನ್ನ ಮುಂದೆ ನಮ್ಮ ಮನ್ಯಾಗ ಇಟ್ಕೊಳಲ್ಲಾ ಅಂತ ಅಂದು ತನ್ನ ಕೈಯಿಂದ ನನ್ನ ಬೆನ್ನ ಮೇಲೆ ಹೊಟ್ಟೆಗೆ ಹೊಡೆಯುತಿದ್ದಾಗ ನಮ್ಮ ಅತ್ತೆ ಕಾಲಿನಿಂದ ನನಗೆ ಒದ್ದು ಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 January 2017

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ  ಮೋನಿಕಾ ಗಂಡ ದತ್ತಾತ್ರೇಯ ಮುನಗಾ ಪಾಟೀಲ ಸಾ:ಶಹಾಬಾದ. ರವರು ತಾನು & ತನ್ನ ಗಂಡ ದತ್ತಾತ್ರೇಯ ಇಬ್ಬರೂ ಒಬ್ಬರಿಗೋಬ್ಬರು ಪ್ರಿತಿಸಿ ದಿನಾಂಕ 14/11/2014 ರಂದು ಮದುವೆಯಾಗಿದ್ದು, ನಂತರ 6-7 ತಿಂಗಳವರೆಗೆ ಪಿರ್ಯಾಧಿ ಗಂಡ, ಅತ್ತೆ, ಬಾವ, ನೆಗಣಿ ಇವರೆಲ್ಲರೂ ಚನ್ನಾಗಿ ನೋಡಿಕೊಂಡು ನಂತರ ಎಲ್ಲರೂ ಕೂಡಿಕೊಂಡು ನನಗೆ ಮದುವೆಯಲ್ಲಿ ಬಂಗಾರ & ವರದಕ್ಷಿಣೆ ನೀಡಿರುವುದಿಲ್ಲಾ ಪುಕ್ಕಟಿಯಾಗಿ ಖರ್ಚು ವೆಚ್ಚ ಎಲ್ಲದೆ ಮದುವೆಯಾಗಿದಿ. ತವರು ಮನೆಯಿಂದ ಹಣ & ಬಂಗಾರ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟಿದ್ದರಿಂದ ನಾನು ನನ್ನ ಗಂಡನಿಗೆ ಒಂದು ಲಕ್ಷ ರೂ ತಂದು ಕೊಟ್ಟಿದ್ದರೂ ಸಹ ಇನ್ನೂ ಹಣ ಬಂಗಾರ ವರದಕ್ಷಿಣೆ ತೆಗೆದುಕೊಂಡು ಬರಬೇಕು ಎಂದು ಮಾನಸಿಕ & ದೈಹಿಕ ಕಿರುಕುಳ ಕೊಡುತ್ತಿದ್ದರು ನಾನು ಸಹಿಸಿಕೊಂಡು ಬಂದಿರುತ್ತೇನೆ.  ಒಂದು ವೇಳೆ ನೀನು ಹಣ ಬಂಗಾರ ತರದಿದ್ದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಜೀವದ ಭಯ ಹಾಕಿ ಅವಾಚ್ಯವಾಗಿ ಬೈದಿರುತ್ತಾರೆ.  ನಾನು ದಿನಾಂಕ 17/1/16 ರಂದು ಕಲಬುರಗಿಯಿಂದ ಶಹಾಬಾದಕ್ಕೆ ಬಂದು ಮನೆಗೆ ಹೋಗುವ ಸಂದರ್ಭದಲ್ಲಿ ನನ್ನ ಗಂಡ ಕೈಯಿಂದ ಹೊಡೆಬಡೆ ಮಾಡಿರುತ್ತಾನೆ.  ಕಾರಣ ನನಗೆ ವರದಕ್ಷಿಣೆ ತರುವಂತೆ ಮಾನಿಕ & ದೈಹಿಕ ಕಿರುಕುಳ ಕೊಟ್ಟು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಹೊಡೆ ಬಡೆ ಮಾಡಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವಪುತ್ರ ತಂದೆ ಸಾಯಿಬಣ್ಣ ಸಾ: ದೇವನ ತೆಗನೂರ ಇವರು ಅದೇ ಗ್ರಾಮದ ಭೀಮರಾಯ ತಂದೆ ನಾಗಪ್ಪ ಇತನ ಮಗನಾದ ರಾಕೇಶ ಇತನಿಗೆ ವೈಯಕ್ತಿಕ ಸಾಲದ ಸಲುವಾಗಿ ಒಂದು ತೊಲೆ ಬಂಗಾರ ಕೊಟ್ಟಿದ್ದು ಅದನ್ನು ವಾಪಸ ಕೊಡಲು ಕೇಳಿದರೆ ಅರೋಪಿತರಾದ ಭೀಮರಾಯ ,ಅವನ ಹೆಂಡತಿ ತಾರಾಬಾಯಿ , ಅವನ ಮಗ ಸತೀಶ ರವರೆಲ್ಲರು ಕೂಡಿ ಪಿರ್ಯಾದಿಗೆ ದಿನಾಂಕ: 02/08/2016 ರಂದು ಮದ್ಯಾಹ್ನ 12-30 ಗಂಟೆಗೆ ದೇವನ ತೆಗನೂರ ಗ್ರಾಮದ ಕರಿಗೂಳಿಶ್ವರ ಗುಡಿಯ ಹತ್ತಿರ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

25 January 2017

Kalaburagi District Reported Crimes

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 24/01/2017 ರಂದು ಮದ್ಯಾಹ್ನ 2:00 ಗಂಟೆ ಸುಮಾರಿಗೆ ನನ್ನ ಗಂಡನಾದ ಸಂತೋಷ ತಂದೆ ಸಿದ್ದಾರಾಮ ಕಿರಣಗಿ ಇವರು ಮಣುರ ಗ್ರಾಮದಲ್ಲಿ ಸ್ವಲ್ಪ ಕೆಲಸ ಇದೆ ಹೋಗಿ ಬರುತ್ತೇನೆ ಮತ್ತು ಬರುವಾಗ ಕರಜಗಿ ಗ್ರಾಮದಲ್ಲಿರುವ ಅಕ್ಕನನ್ನು ಬೆಟ್ಟಿಯಾಗಿ ಬರುತ್ತೇನೆ ಅಂತಾ ಹೇಳಿ ತನ್ನ ಗೆಳೆಯನ ಮೋಟರ ಸೈಕಲ ನಂ ಕೆಎ-28 ಯು-8073 ನೇದ್ದರ ಮೇಲೆ ಮಣೂರ ಗ್ರಾಮಕ್ಕೆ ಹೋಗಿರುತ್ತಾನೆ. ರಾತ್ರಿ 7:45 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನನ್ನ ಮೋಬೈಲಿಗೆ ನನ್ನ ಗಂಡನ ಮೋಬೈಲನಿಂದ ಅಪ್ಪಾರಾಯ ತಂದೆ ಭಿಮಶಾ ಕಲಶೇಟ್ಟಿ ಸಾ|| ಕರಜಗಿ ಎಂಬುವವರು ಪೋನ ಮಾಡಿ ತಮ್ಮ ಹೆಸರನ್ನು ಹೇಳಿ ಮೋಬೈಲ ಹೊಂದಿದವರು ಸಾಯಂಕಾಲ 7:30 ಗಂಟೆ ಸುಮಾರಿಗೆ ಅಫಜಲಪೂರ ಕರಜಗಿ ರೋಡಿಗೆ ಇರುವ ನಮ್ಮ ಹೊಲದ ಹತ್ತಿರ ರೋಡಿನ ಮೇಲೆ ಮೋಟರ ಸೈಕಲ ಸ್ಕೀಡ್ ಆಗಿ ಬಿದ್ದಿರುತ್ತಾನೆ. ಸದರಿಯವನಿಗೆ ಬಹಳ ಪೆಟ್ಟಾಗಿರುತ್ತದೆ ಅಂತಾ ತಿಳಿಸಿದ ಮೇರೆಗೆ ನಾನು ಕರಜಗಿ ಗ್ರಾಮದಲ್ಲಿರುವ ನಮ್ಮ ನಾದನಿಯ ಗಂಡ ಗುರು ಕಲಶೆಟ್ಟಿ ರವರಿಗೆ ಪೋನ ಮಾಡಿ ಸ್ಥಳಕ್ಕೆ ಹೋಗಲು ತಿಳಿಸಿದೆನು. ನಂತರ ನಾನು ಮತ್ತು ನಮ್ಮ ಮಾವ ಸಿದ್ದಾರಾಮ ಹಾಗೂ ಅತ್ತೆ ಶಿವಕಾಂತಾಬಾಯಿ ಮೂರು ಜನರು ಕೂಡಿ ಸ್ಥಳಕ್ಕೆ ಹೋಗಿ ನೋಡಲಾಗಿ, ನನ್ನ ಗಂಡನ ತಲೆಗೆ ಮತ್ತು ಹಣೆಗೆ ಬಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಸುರೇಖಾ ಗಂಡ ಸಂತೋಷ ಕಿರಣಗಿ ಸಾ|| ಅಫಜಲಪೂರ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.