POLICE BHAVAN KALABURAGI

POLICE BHAVAN KALABURAGI

21 November 2012

GULBARGA DISTRICT REPORTED CRIMES


 ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಜೂಜಾಟ ಆಡುತ್ತಿದ್ದ 15 ಜನರ ಬಂದನ:ಮತ್ತು ಜೂಜಾಟಕ್ಕೆ ಉಪಯೋಗಿಸಿದ 1,04,380/ ರೂಪಾಯಿಗಳು ಜಪ್ತಿ.
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 20/11/2012 ರಂದು ಸಾಯಂಕಾಲ ಕೈಗಾರಿಕೆ ಪ್ರದೇಶ 2 ನೇ ಹಂತದ ಮೊದಲನೇ ಕ್ರಾಸ ಹತ್ತಿರ ಇರುವ ವಿಶ್ವನಾಥ ಬಿರಾದಾರ ಆದರ್ಶ ದಾಲಮಿಲ ಎದರುಗಡೆ ಇರುವ ಖುಲ್ಲಾ ಜಾಗೆಯಲ್ಲಿ ಜೂಜಾಟವಾಡುತ್ತಿದ್ದಾರೆ ಅಂತಾ ಬಾತ್ಮಿ ಬಮದ ಮೇರೆಗೆ ಮಾನ್ಯ ಪವಾರ ಪ್ರವೀಣ ಮಧುಕರ ಎಸ್ಪಿ ಸಾಹೇಬರು  ಗುಲಬರ್ಗಾ ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್ಪಿ ಸಾಹೇಬರು  ಗುಲಬರ್ಗಾ  ಹಾಗೂ ಮಾನ್ಯ  ಹೆಚ್, ತಿಮ್ಮಪ್ಪ ಡಿಎಸ್ಪಿ ಗ್ರಾಮೀಣ ಉಪ ವಿಭಾಗ  ಗುಲಬರ್ಗಾ  ರವರುಗಳ ಮಾರ್ಗದರ್ಶನದಲ್ಲಿ, ಮಾನ್ಯ  ಸತೀಶ, ಕೆ, ಎಮ್ ಸಿಪಿಐ ಗ್ರಾಮೀಣ ವೃತ್ತ  ಗುಲಬರ್ಗಾರವರ ನೇತೃತ್ವದಲ್ಲಿ  ಆನಂದರಾವ ಎಸ್ ಎನ್ ಪಿಎಸ್ಐ (ಕಾ&ಸು) ಗ್ರಾಮೀಣ ಠಾಣೆ ಹಾಗೂ ಠಾಣೆ ಸಿಬ್ಬಂದಿಗಳಾದ ಸಂಜೀವರಡ್ಡಿ, ನರಸಿಂಹ ಚಾರಿ, ಹಣಮಂತ,ಶಿವಶಂಕರ,ಜಾಧವ,ದತ್ತಾತ್ರೇಯ,ಮೊಜೋದ್ದಿನ,ಶಿವಶರಣಪ್ಪ,ಶಿವಶರಣಪ್ಪ,,ಈರಣ್ಣ,ಚನ್ನಬಸವಯ್ಯ,ಚಾಲಕರ ಬಂಡೆಪ್ಪ ಎಪಿಸಿ,ರಮೇಶ,ಸಿಪಿಸಿನೇದ್ದವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ 1} ಗೌತಮ ಅರ್ಜುನ ಖಾಜನೋರ ವ:32 ವರ್ಷ ಉ: ಕಾರ ಚಲಕ ಸಾ: ಪ್ರಗತಿ ಕಾಲನಿ ಗುಲಬರ್ಗಾ 2} ವರ್ಧನ ತಂದೆ ಮಾರುತಿರಾವ ಮಿಣಜಗಿ ವ:28 ವರ್ಷ ಉ: ಎಂ.ಬಿ.ಎ. ವಿದ್ಯಾರ್ಥಿ ಸಾ: ಪ್ರಗತಿ ಕಾಲನಿ ಗುಲಬರ್ಗಾ 3} ಆನಂದ ತಂದೆ ಶಿವಶರಣಪ್ಪ ಪಾಟೀಲ ವ;25 ವರ್ಷ ಉ: ಬಿ.ಕಾಂ. ವಿದ್ಯಾರ್ಥಿ  ಸಾ: ಎಂ.ಬಿ. ನಗರ  ಗುಲಬರ್ಗಾ 4} ರಾಜು @ ಮಂಜುನಾಥ ತಂದೆ ಜಯಂತ ವ:30 ವರ್ಷ ಉ:ಗುತ್ತೆದಾರ ಕೆಲಸ ಸಾ: ನಂ. 105 9ನೇ ಕ್ರಾಸ ಕೆ.ಅರ್.ಪುರಣ ಬೆಂಗಳೂರ 5} ಬಾಷಾಸಾಬ ತಂದೆ ಬಾಬಾಸಾಬ ವ;44 ವರ್ಷ ಉ: ತರಕಾರಿ ವ್ಯಾಪರ ಸಾ: ಎಮ್.ಬಿ. ಬ್ಲಾಕ  ಸೆಕೆಂದ ಮೇನ್ ಮಲ್ಲೇಶರಂ ಬೆಂಗಳೂರ 6} ಸಾಗರ ತಂದೆ ಬಲರಾಜ ಲಾಹೋಟಿ ವ:20 ವರ್ಷ ಉ: ಜಾತಿ ಕಸಬು ಸಾ: ಮೇತಾರ ಗಲ್ಲಿ ಗಾಜಿಪೂರ ಗುಲಬರ್ಗಾ 7} ಸಚಿನ ತಂದೆ ಬಸವಂತರಾವ ಯಳವಂತಗಿ  ವ:23 ವರ್ಷ ಉ:ಸರಾಫಿ ವ್ಯಾಪರ  ಸಾ: ಜಗತ ಭೀಮ ನಗರ ಗುಲಬರ್ಗಾ 8} ಶರಣು @ ಶರಣಬಸವ ತಂದೆ ಶಿವಶರಣಪ್ಪ ಪಾಟೀಲವ:28 ವರ್ಷ ಉ: ವಿದ್ಯಾರ್ಥಿ ಸಾ: ಎಂ.ಬಿ. ನಗರ ಗುಲಬರ್ಗಾ 9} ಅನಿಲ ತಂದೆ ಸಿದ್ದಣ್ಣಾ ಬತ್ತಲಿ ವ:28 ವರ್ಷ ಉ: ಫೈನಾನ್ಸ ಕೆಲಸ ಸಾ: ರಾಮ ನಗರ ಗುಲಬರ್ಗಾ 10} ಜಗನಾಥ ತಂದೆ ಶರಣಪ್ಪ ಸುಲ್ತನಪೂರ ವ;25 ವರ್ಷ ಉ: ಒಕ್ಕಲುತನ ಸಾ; ಹಾರುತಿ ಹಡಗಿಲ ತಾ:ಜಿ: ಗುಲಬರ್ಗಾ 11} ಗುರುಶಾಂತ ತಂದೆ ಕಲ್ಯಾಣರಾವ ವಾಡಿ ವ:28 ವರ್ಷ ಉ: ಕಾರ ಚಾಲಕ ಸಾ: ಮಾಹಾದೇವ ನಗರ ಗುಲಬರ್ಗಾ 12} ಪ್ರದೀಪ ತಂದೆ ರತ್ನನಸಿಂಗ ರಿಡ್ಡಲಾನ ವ:20 ವರ್ಷ ಉ: ಖಾಸಗಿ ಕೆಲಸ ಸಾ: ಮೇತಾರ ಗಲ್ಲಿ ಗಾಜಿಪೂರ ಗುಲಬರ್ಗಾ 13} ಕಿಶೋರ ತಂದೆ ಶಿವಶಂಕರ ಪಾಟೀಲ ವ:31 ವರ್ಷ ಉ: ವ್ಯಾಪರ ಸಾ; ಬ್ರಹ್ಮಪೂರ ಗುಲಬರ್ಗಾ 14} ಅಜಯಸಿಂಗ ತಂದೆ ಧರ್ಮಸಿAಗ ವ:22 ವರ್ಷ ಉ: ಬೇಕಾರ  ಸಾ: ಗಾಜಿಪೂರ ಗುಲಬರ್ಗಾ 15} ಶರಣಯ್ಯ ತಂದೆ ಶಂಕ್ರಯ್ಯ ಭಾಸಗಿ ಮಠ ವ:30 ವರ್ಷ ಉ:ಟೆಂಗಿನ ವ್ಯಾಪರ ಸಾ: ಬ್ರಹ್ಮಪೂರ ಗುಲಬರ್ಗಾ ರವರುಗಳ ಮೇಲೆ ದಾಳಿ ಮಾಡಿ ಅಂದರ ಬಾಹರ ಜೂಜಾಟಕ್ಕೆ ಬಳಸಿದ ನಗದು ಹಣ 1,04,380/- ರೂಪಾಯಿಗಳು ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:379/2012 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಲಾಗಿದೆ.
ವರದಕ್ಷಿಣೆ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಮಾನ್ಯ 2 ನೇ ಅಪರ ಜೆ.ಎಂ.ಎಫ.ಸಿ ನ್ಯಾಯಾಲಯ ಪತ್ರ ನಂ 4405/12 ದಿನಾಂಕ 17.11.2012 ನೇದ್ದರ ಪತ್ರದ ತಂದು ಹಾಜರ ಪಡಿಸಿದ್ದರ ಸಾರಾಂಶದವೇನೆಂದರೆ, ಮಾನ್ಯ ನ್ಯಾಯಾಲಯದ ಆದೇಶದಂತೆ ಕಲಂ 156(3) ಸಿ.ಆರ.ಪಿ.ಸಿ ಪ್ರಕಾರ ಪಿ.ಸಿ ನಂ 589/12 ನೇದ್ದರ ತನಿಖೆ ಕೈಗೊಳ್ಳುವಂತೆ ಆದೇಶದ ಪ್ರಕಾರ ಶ್ರೀಮತಿ ಅರ್ಚನಾ ಗಂಡ ಪ್ರವೀಣ ಕುಮಾರ ಪಾಟೀಲ್  : 30, : ಮನೆಗೆಲಸ ಜಾ: ಲಿಂಗಾಯತ ಸಾ: ಪ್ರಬುದೇವ ಎಪಿಸಿ 273 ಮನೆ ನಂ 140 (ಬಿ) ಪೊಲೀಸ  ಕಾಲೋನಿ ಗುಲಬರ್ಗಾರವರು  ನನ್ನ ಮದುವೆಯು ದಿನಾಂಕ:02.12.2010 ರಂದು ಪ್ರವೀಣಕುಮಾರ ಪಾಟೀಲ ಇತನೊಂದಿಗೆ ಮದುವೆಯಾಗಿದ್ದು, ಮದುವೆ ಕಾಲಕ್ಕೆ 50 ತೊಲೆ ಬಂಗಾರ 5 ಕೆಜಿ ಬೆಳ್ಳಿ, 5 ಲಕ್ಷ ನಗದು ಹಣ ಕೊಟ್ಟು ಸಂಪ್ರದಾಯದಂತೆ ಮದುವೆ ಮಾಡಿರುತ್ತಾರೆ. ಮದುವೆಯಾದ ಎರಡು ದಿವಸದ ನಂತರ ಗಂಡ ಮತ್ತು ಗಂಡನ ಮನೆಯವರು ಇನ್ನು ವರದಕ್ಷಿಣೆ ತರಬೇಕೆಂದು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡ ಹತ್ತಿದರು. ಮದುವೆಯಾದ ಒಂದು ತಿಂಗಳ ನಂತರ ನನ್ನ ಗಂಡ ಅಸ್ಟ್ರಲೀಯಾ ಬ್ರಿಸಬಾನಗೆ ಡಿಜಾಯನ ಇಂನಜಿನಿಯರ್ ಅಂತಾ ಕೆಲಸಕ್ಕೆ ಹೋದನು. ನಂತರ ನಾನು ಗಂಡನ ಮನೆಯಲ್ಲಿ ಆರಾಮವಿಲ್ಲಾದಿದ್ದಾಗ ಗಂಡನ ಮನೆಯವರು ಯಾರು ಉಪಚಾರ ಕೊಡಸಲಿಲ್ಲಾ. ಮನೆಯ ಸಾಲ ಕೊಡಬೇಕಾಗಿದೆ ನೀನು ತವರು ಮನೆಯಿಂದ ವರದಕ್ಷಣೆ  ತೆಗೆದುಕೊಂಡು ಬಾ ಅಂತಾ ಮತ್ತು ನೌಕರಿ ಮಾಡು ಅಂತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡಲು ಪ್ರಾರಂಬಿಸಿ ದಿನಾಂಕ:02.10.2010 ರಂದು  ಮುಂಜಾನೆ 10-30 ಗಂಟೆಗೆ ಗಂಡನ ಮನೆಯವರು ಟಾಟಾ ಸುಮೋ ತೆಗೆದುಕೊಂಡು ನನ್ನ ತವರು ಮನೆಯಾದ ಗುಲಬರ್ಗಾಕ್ಕೆ ಬಂದು  ಇನ್ನೂ 20 ಲಕ್ಷ ವರದಕ್ಷಣೆ ಕೊಡಬೇಕು ಇಲ್ಲಾವಾದರೆ ನಾನು ಇನ್ನೊಂದು ಮದುವೆಯಾಗುತ್ತೇನೆ ಅಂತಾ ನನ್ನ ಗಂಡ ಮತ್ತು  ಗಂಗಾಧರ ಎಂಬುವನು ನನ್ನ ತಾಯಿಗೆ ಹೊಡೆದರು ನನ್ನ ಕೂದಲು ಎಳೆದಾಳಿ ಬಿಡಿಸಲು ಬಂದ ನನ್ನ ಅಣ್ಣನಿಗೆ ಕೂಡ ಆ ಸಮಯದಲ್ಲಿ ನಮ್ಮ ಮನೆಯಲ್ಲಿ ನೆಂಟರು ಬಂದಿದರು. ಒಂದು ವಾರದ ನಂತರ ನನ್ನ ಗಂಡ ಹೇಳದೇ ಕೇಳದೇ ಆಸ್ಟ್ರಲೀಯಾಕ್ಕೆ ಹೋಗಿದ್ದು. ನನ್ನ ವಿಸಾ ಮತ್ತು ಬ್ಯಾಂಕ ಅಕೌಂಟ್ ರದ್ದುಪಡಿಸಿರುತ್ತಾರೆ.ನಾನು ನನ್ನ ಗಂಡನಿಗೆ ಫೊನ ಮುಖಾಂತರ ಸಂಪರ್ಕಿಸಿದರು ಅದಕ್ಕೆ ಸ್ಪಂದಿಸಿರುವುದಿಲ್ಲಾ ಅಂತಾ ಇತ್ಯಾದಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:79/2012 ಕಲಂ 498(ಎ),323.504.506.ಐ.ಪಿ.ಸಿ 3&4 ಡಿ.ಪಿ.ಎಕ್ಟ್. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.