POLICE BHAVAN KALABURAGI

POLICE BHAVAN KALABURAGI

20 February 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ದಿನಾಂಕ: 19-02-18 ರಂದು ಸಾಯಂಕಾಲ ನರೇಶ ತಂದೆ ನರಸಿಂಹಲು ಅಕ್ಕಸಾಲಿಗ ಸಾ|| ಅಡಕಿ ಗ್ರಾಮ, ತಾ|| ಸೇಡಂ. ಇತನು  ತನ್ನ ವಶದಲ್ಲಿದ್ದ ಟ್ರಾಕ್ಟರ ನಂ.ಎಪಿ25 ಎಡಿ3702 ನೆದ್ದನ್ನು ಶ್ರೀಮತಿ ಭಾರತಿ ಗಂಡ ರಾಜು ವಡ್ಡರ ಸಾ|| ಆಶ್ರಯ ಕಾಲೋನಿ ಉಡಗಿ ರೋಡ ಸೇಡಂ. ರವರು ಮನೆಯ ಮುಂದೆ ಅತಿ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಮಗಳಾದ ಭಾಗ್ಯಶ್ರೀ ಹಾಗು ಅಲ್ಲೆ ಪಕ್ಕದಲ್ಲಿದ್ದ ಯಲ್ಲಮ್ಮ ಗಂಡ ಸಿದ್ದಣ್ಣ ಮನಗೂಳಿ ಇವರಿಗೆ ಅಪಘಾತ ಪಡಿಸಿ ಸಾದಾ ಹಾಗು ಭಾರಿಗಾಯಗಳನ್ನು ಪಡಿಸಿ ಟ್ರಾಕ್ಟರನ್ನು ಅಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 18/02/2018 ರಂದು ಹಡಗಿಲ ಕ್ರಾಸ ಹತ್ತಿರ ಮೋಟಾರ ಸೈಕಲ ನಂ ಕೆಎ-32 ಇಸಿ-1136 ನೆದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಶ್ರೀ ಶಹಾಬುದ್ದಿನ @ ಶಬ್ಬಿರಮಿಯಾ ತಂದೆ ಹಸನಸಾಬ ಜೊಗೂರ ಸಾಃ ಹೀರಾ ನಗರ ಹೀರಾಪೂರ ಕಲಬರುಗಿ ರವರು  ಚಲಾಯಿಸುತ್ತಿದ್ದ ಮೋಟಾರ ಸೈಕಲ ನಂ ಕೆಎ-03 ಹೆಚ್.ಇ-1645 ನೆದ್ದಕ್ಕೆ ಡಿಕ್ಕಿಪಡಿಸಿ ಗಾಯಗೊಳಿಸಿ ಹಾಗೇಯೇ ಚಲಾಯಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ:- 18/02/2018 ರಂದು ಮಧ್ಯಾಹ್ನ ಶ್ರೀಮತಿ ಬಾಗಮ್ಮ ಗಂಡ ಮೋಹನ ಮನಗಳಿ ಸಾ : ಭೀಮಳ್ಳಿ  ರವರ ಮಗ ಮೃತ ಪರಶುರಾಮ ವ:8 ವರ್ಷ ಇತನು ಭೀಮಳ್ಳಿ ಸೀಮಾಂತರದಲ್ಲಿ ಬರುವ ಪುಂಡಲೀಕ ಪೂಜಾರಿ ಹೊಲದ ಹತ್ತಿರ ಸಂಡಾಸಕ್ಕೆಂದು ಟ್ರಾಕ್ಟರ ಇಂಜಿನ ನಂ-MH-42-Y 82, ಟ್ರಾಕ್ಟರ ಟ್ರ್ಯಾಲಿ ನಂ-MH-12-QA-6239 ಮತ್ತು MH-42-A-7839 ಚಾಲಕ  ಗಣೇಶ ತಂದೆ ಭಜರಂಗ ಸಾಳುಂಕೆ ಸಾ:ಭಾರಾಮತಿ ತಾ:ಇಂದಾಪೂರ ರಾಜ್ಯ:ಮಹಾರಾಷ್ಟ್ರ ಇತನು ಭೀಮಳ್ಳಿ ಗ್ರಾಮದ ಅಗಸಿ ಕಡೆಯಿಂದ ಒಬ್ಬ ಟ್ರಾಕ್ಟರ್ ಚಾಲಕನು ಟ್ರಾಕ್ಟರದ 02 ಟ್ರ್ಯಾಲಿಗಳಲ್ಲಿ ಕಬ್ಬು ತುಂಬಿಕೊಂಡು ಅತಿವೇಗ ಮತತು ನಿಸ್ಕಾಳಜಿತನದಿಂದ ಅಡ್ಡಾತಿಡ್ಡಿಯಾಗಿ ನಡೆಯಿಸಿಕೊಂಡು ಬಂದವನು ಪರಶುರಾಮನಿಗೆ ಅಪಘಾತಪಡಿಸಿ ಆತನ ಮೇಲಿಂದ ಟ್ರಾಕ್ಟರ್ ಹಾಯಿಸಿಕೊಂಡು ಹೋಗಿದ್ದರಿಂದ ಸದರಿ ಪರಶುರಾಮ ತಲೆಯು ಒಡೆದು ತಲೆಯ ಮೆದುಳು ಹೊರಬಿದ್ದು ಮತ್ತು ಎಡ ಭಾಗದ ಹೊಟ್ಟೆಯ ಕೆಳಗೆ ಭಾರಿ ಗಾಯವಾಗಿ ಕರಳುಹೊರಬಂದಿದ್ದು ಮತ್ತು ಎಡಭಾಗದ ತೊಡೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ, ಮೃತಪಟ್ಟಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ-17/02/2018 ರಂದು ಸಾಯಂಕಾಲ ಎಮ್.ಎ.ಟಿ ಕ್ರಾಸ್ ದಿಂದ ಮುಸ್ಲಿಂ ಚೌಕ್ ರಸ್ತೆಯಲ್ಲಿ ಬರುವ ಮಿಜುಗುರಿ ಹತ್ತಿರದ ದಂಡೋತಿ ಮೆಡಿಕಲ್ ಎದುರಿನ ರಸ್ತೆಯಲ್ಲಿ ಶ್ರೀ ಅಹ್ಮದ ಖಾನ ತಂದೆ ಪೀರ ಖಾನ ಸಾ : ನಯಾ ಮೋಹಲ್ಲಾ ಮಿಜಗುರಿ ಕಲಬುರಗಿ ರವರ ಅಣ್ಣನಾದ ಫಿರೋಜಖಾನ್ ತಂದೆ ಪೀರ ಖಾನ್ ಈತನು ರಸ್ತೆ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದಾಗ ಮಿಜುಗುರಿ ರೋಡ ಕಡೆಯಿಂದ ತವೇರಾ ಕಾರ ನಂ ಕೆಎ-01 ಎಮ್.ಎ-9226 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾಧಿ ಅಣ್ಣನಿಗೆ ಡಿಕ್ಕಿ ಪಡಿಸಿ ತೆಲೆಗೆ ಭಾರಿಗಾಯಗೊಳಿಸಿ ಕಾರ ಸಮೇತ ಚಾಲಕ ಓಡಿ ಹೋಗಿದ್ದು ಇರುತ್ತದೆ. ಫಿರೋಜಖಾನ್ ತಂದೆ ಪೀರ ಖಾನ್ ಈತನು ದಿನಾಂಕ 17/01/2018 ರಂದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ಉಪಚಾರ ಹೊಂದುತ್ತಾ ರಸ್ತೆ ಅಪಘಾತದಲ್ಲಿ  ಆದ ಗಾಯ ವಾಸಿಯಾಗದೆ ಇಂದು ದಿನಾಂಕ  18/02/2018 ರಂದು ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಅಫಜಲಪೂರ ಠಾಣೆ :  ಶ್ರೀ ಶಿವಾನಂದ ತಂದೆ ಗೋವಣ್ಣ ದೊಡ್ಮನಿ ಸಾ||ಬಳೂರ್ಗಿ ಹಾ||ವ||ಲಿಂಬಿತೋಟ ಅಫಜಲಪೂರ ರವರು ದಿನಾಂಕ 11/02/2018 ರಂದು ಸಾಯಂಕಾಲ 6.00 ಗಂಟೆ ಸುಮಾರಿಗೆ ನಮ್ಮ ಬಾಡಿಗೆ ಮನೆ ಬೀಗ ಹಾಕಿಕೊಂಡು ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಹುಚ್ಚಪ್ಪ ರವರ ಮನೆಗೆ ಹೋಗಿ ಅವರ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿ ಅಲ್ಲೆ  ಡಿಗ್ರಿ ಕಾಲೇಜ ಹತ್ತಿರ ಇರುವ ನಮ್ಮ ಸಂಬಂದಿಕರಾದ ಗುರುಪಾದ ತಂದೆ ನಿಂಗಪ್ಪ ಬಿಲ್ಲಾಡ ರವರ ಮನೆಗೆ ಹೋಗಿ ರಾತ್ರಿ ಅಲ್ಲೆ ಇದ್ದು ದಿನಾಂಕ 12/02/2018 ರಂದು ಬೆಳಿಗ್ಗೆ 6.00 ಗಂಟೆ ಸುಮಾರಿಗೆ ನಾವು ನಮ್ಮ ಬಾಡಿಗೆ ಮನೆಗೆ ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ನೋಡಿದಾಗ ಬಾಗಿಲಿನ ಬೀಗ ಯಾವುದೇ ಹರಿತವಾದ ಆಯುಧರಿಂದ ಕತ್ತರಿಸಿದ್ದು ಇದ್ದಿತ್ತು ನಾನು ನನ್ನ ಹೆಂಡತಿ ನಮ್ಮ ಮನೆಯ ಒಳಗೆ ಹೋಗಿ ನೋಡಲಾಗಿ ನಮ್ಮ ಮನೆಯಲಿದ್ದ ಲಾಕರ ಕೀಲಿ ಮುರಿದಿದ್ದು ಕಂಡು ನಾವು ಗಾಬರಿಯಾಗಿ ನೋಡಲಾಗಿ ನಾನು ಲಾಕರದಲ್ಲಿಟ್ಟಿದ್ದ 40,000/-ರೂ ಸಾವಿರ ನಗದು ಹಣ,ಅರ್ಧ ತೊಲೆ ಕೈಯಲ್ಲಿನ ಬಂಗಾರದ ಸುತ್ತುಂಗುರ ಹಾಗು ನನ್ನ ಹೆಂಡತಿಯ ಕೊರಳಲ್ಲಿನ ಒಂದು ತೊಲೆ ಬಂಗಾರದ ಚೈನು,  ಅರ್ಧ ತೊಲೆ ಬಂಗಾರದ ಕಿವಿಯಲ್ಲಿನ ಒಲೆ(ಬೆಂಡೊಲೆ) ಒಟ್ಟು ಎರಡು ತೊಲೆ ಬಂಗಾರ ಅ.ಕಿ 58,000/-ರೂ ರಷ್ಟು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನೆಲೋಗಿ ಠಾಣೆ : ಡಾ|| ಬೀಮಾಶಂಕರ ಶಾವಂತಿ ಆಡಳಿತ ವ್ಶೆದ್ಯಾಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ನೆಲೋಗಿ ರವರು  ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು  ಮತ್ತು ಸಿಬ್ಬಂದಿ ಜನರ ಹಾಜರಾತಿಗಾಗಿ ಅಳವಡಿಸಿದ್ದ ಬಯೋಮ್ಯಾಟ್ರಿಕ ಮಶೀನ್ ಅನ್ನು ದಿನಾಂಕ: 18-02-2018 ರಂದು ರಾತ್ರಿ 11-00 ಗಂಟೆಯಿಂದ ದಿನಾಂಕ: 19-02-2018 ರಂದು ಬೆಳಿಗ್ಗೆ 06-00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಆದ್ದರಿಂದ ತಾವುಗಳು ಆರೋಪಿತರಿಗೆ ಪತ್ತೆ ಮಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದ ಬಯೋಮ್ಯಾಟ್ರಿಕ್ ಮಶೀನ ಪತ್ತೆ ಮಾಡಿ ಆರೋಪಿತರ ವಿರುದ್ದ ಕಾನೂನುಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.