POLICE BHAVAN KALABURAGI

POLICE BHAVAN KALABURAGI

03 November 2013

Gulbarga District Reported Crimes

ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ರಾಮಲಿಂಗಯ್ಯ ತಂದೆ ಶರಣಯ್ಯ ಮಂಠಾಳ ಸಾ; ಕಮಲಾಪೂರ ತಾ;ಜಿ ಗುಲಬರ್ಗಾ ಇವರು ದಿನಾಂಕ: 01-11-2013 ರಂದು ಸಾಯಂಕಾಲ 7:00 ಗಂಟೆಯ ಸುಮಾರಿಗೆ ನ್ನ ಅಟೋ ರಿಕ್ಷಾದೊಂದಿಗೆ ಕಮಲಾಪುರ ಬಸ್ ನಿಲ್ದಾಣದ ಹತ್ತಿರ ಇರುವ ಸಲಾವುದ್ದೀನ ಗ್ಯಾರೇಜ್ ಎದುರುಗಡೆ ನಿಂತಾಗ ನಮ್ಮೂರ ಬಸಪ್ಪ ತಂದೆ ಪರುತಪ್ಪ  ನಾಗೂರ ಈತನು ಜಗದೀಶ ದೊಶೆಟ್ಟಿ ಇವರ ಹಳೆಯ ಹೊಟೇಲ್ ಕಡೆಯಿಂದ ಸಲಾವುದ್ದೀನ್ ಗ್ಯಾರೇಜ್ ಕಡೆಗೆ ಬರುವದಕ್ಕಾಗಿ ರೋಡ ಧಾಟುತ್ತಿದ್ದಾಗ ಹುಮನಾಬಾದ ಕಡೆಯಿಂದ ಒಂದು  ಸ್ಕಾರ್ಫಿಯೋ ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರೋಡ ಧಾಟುತ್ತಿದ್ದ ಬಸಪ್ಪ ನಾಗೂರ ಈತನಿಗೆ ಡಿಕ್ಕಿ ಪಡಿಸಿ ಅಪಘಾತ ಪಡಿಸಿದನು. ಸದರಿ ಬಸಪ್ಪನಿಗೆ ತಲೆಗೆ ಭಾರಿ ಗಾಯವಾಗಿ ಕೆಳಗೆ ಬಿದ್ದನು. ಜನರು ಸೇರಿದ್ದರಿಂದ ಸ್ಕಾರ್ಫಿಯೋ ವಾಹನ ಚಾಲಕನು ತನ್ನ ವಾಹನವನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ನಿಲ್ಲಿಸಿದನು.ಸ್ಕಾರ್ಫಿಯೋ ವಾಹನ ನಂಬರ ನೋಡಲಾಗಿ ಎಮ್‌‌.ಹೆಚ್‌.13. ಎಎನ್‌.9191 ಇದ್ದು ಅದರ ಚಾಲಕನ ಹೆಸರು ವಿಚಾರಿಸಲಾಗಿ ನಾಗೇಶ ತಂದೆ ಮನೋಹರ ಹಂಚೆ ಸಾ: ಶಹಾ ಗಂಜ್ ಬೀದರ ಎಂದು ಹೇಳಿದನು. ಬಹಳಷ್ಟು ಜನರು ಸೇರಿರುವದರಿಂದ ಸ್ಕಾರ್ಫಿಯೋ ವಾಹನ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು  ಅಲ್ಲಿಂದ ಓಡಿ ಹೋಗಿದ್ದು ಬಸಪ್ಪ ಈತನಿಗೆ ಉಪಚಾರ ಕುರಿತು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ದಿನಾಂಕ 02-11-2013 ರಂದು ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : 01-11-13 ರಂದು ಕುರಿಕೋಟಾ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಎದುರುಗಡೆ ರಾಷ್ಟ್ರಿಯ ಹೆದ್ದಾರಿ 218 ರ ಮೇಲೆ ರಾತ್ರಿ 7.45 ಗಂಟೆಗೆ ಗುಲಬರ್ಗಾ ಕಡೆಯಿಂದ ಬರುತ್ತಿದ್ದ ಮೋಟಾರ ಸೈಕಲ ನಂ ಕೆ,ಎ 51 ಇಸಿ, 767 ಹಾಗೂ ಮಹಾಗಾಂವ ಕ್ರಾಸ ಕಡೆಯಿಂದ ಹೋಗುತ್ತಿದ್ದ ಬುಲೆರೊ ಜೀಪ ನಂ ಕೆ,ಎ, 40 ಜಿ,0346 ನೇದ್ದರ ಮದ್ಯ ಮುಖಾಮುಖಿ ಅಪಘಾತವಾಗಿದ್ದು ಮೋಟಾರ ಸೈಕಲ ಮೇಲೆ ಸವಾರಿದ್ದ ಸುಭಾಷ ತಂ ಚನ್ನಪ್ಪ ಮಣಕೊಜಿ ಸಾ|| ಕೊಹಿನೂರ ,ಕಲ್ಯಾಣಿ ತಂ ಸಿದ್ರಾಮಪ್ಪ ಪವಾಡಶಟ್ಟಿ ಸಾ|| ಕೊಹಿನೂರ ತಾ|| ಬಸವಕಲ್ಯಾಣ ಜಿ|| ಬೀದರ ಇವರು ಮೃತಪಟ್ಟಿದ್ದು . ಲಕ್ಷ್ಮಿಕಾಂತ ತಂ ವೀರಣ್ಣ ಪರಾಂಡೆ ಸಾ|| ಕೊಹಿನೂರ ಇತನಿಗೆ ಭಾರಿ ಗಾಯಗಳಾಗಿರುತ್ತವೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಅಪಘಾತ ಪಡಿಸಿದ್ದ ಬುಲೇರೊ ಜೀಪ ಕೆ,ಎ, 40 ಜಿ,0346 ನೇದ್ದು ಪೊಲೀಸ ಇಲಾಖೆಯ ಜೀಪ ಆಗಿದ್ದು ಜೀಪ ಚಾಲಕನ ಹೆಸರು ವೀರಾರೆಡ್ಡಿ ಅಂತಾ ಇರುತ್ತದೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 01-11-2013 7.45 ಪಿ,ಎಮ್,ಕ್ಕೆ ಮೊಟರ ಸೈಕಲ್ ನಂ ಕೆ,, 51 ಇ,ಸಿ, 767 ನೇದ್ದರ ಚಾಲಕ ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ವೀರಾರೆಡ್ಡಿ ಎ,ಪಿ,ಸಿ 55 ಡಿ,,ಅರ್, ಕೇಂದ್ರ ಸ್ಥಾನ ಗುಲಬರ್ಗಾ  ಅಂತರಿಕ ಭದ್ರತೆವಿಭಾಗ ದಲ್ಲಿ ಪೊಲೀಸ ಇಲಾಖೆಯ ವಾಹನ ಸಂಖ್ಯೆ ಕೆ,, 40 ಜಿ.0346 ಬುಲೆರೋ ಜೀಪಿನ ಚಾಲಕ ಇವರ ಬುಲೇರೊ ಜೀಪಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಇದರಿಂದ ನನಗೆ ಸಾದಾ  ರಕ್ತಗಾಯವಾಗಿದ್ದು ಜೀಪ ಜಖಂ ಗೊಂಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ಶಂಕರ ತಂದೆ ಪಾಂಡುರಂಗ ರಾಠೋಡ ಸಾ; ಚೌಕಿ ತಾಂಡಾ ಚಿಮ್ಮನಚೋಡ ತಾ;ಚಿಂಚೋಳಿ ರವರು ದಿನಾಂಕ 31.10.2013 ರಂದು ಸಾಯಂಕಾಲ 3.30 ಗಂಟೆ ಸುಮಾರಿಗೆ ಚಿಮ್ಮಾಇದಲಾಯಿ ಕ್ರಾಸ ದಾಟಿದ ಮೇಲೆ  ಯಾವನೋ ಒಬ್ಬ ತನ್ನ ನಾಲ್ಕು ಚಕ್ರದ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಯಿಸಿಕೊಂಡು ಬಂದು ನನ್ನ ಮೋ,ಸೈ ನಂ ಕೆಎ 32 ಎಸ್ 4456 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ  ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿದ್ದು ನಾನು ಸದರ ಘಟನೆಯಿಂದ ಭಾರಿ ಪಟ್ಟಾಗಿ ರಸ್ತೆಯ ಬದಿಗೆ ತಗ್ಗಿನಲ್ಲಿ ಬಿದ್ದು ಮುಖಕ್ಕೆ ಭಾರಿ ಗಾಯಗಳಾಗಿದ್ದು ಮತ್ತು ಬಲ, ಎಡಗೈಮೇಲೆ ಭಾರಿ ತರಚಿದ ಮತ್ತು ಗುಪ್ತ ಗಾಯಗಳಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಅಫಜಲಪೂರ ಠಾಣೆ : ಶ್ರೀ ಸುಜೀತ ಕುಮಾರ ತಂದೆ ಧನಸಿಂಗ ರಾಠೋಡ ಸಾ ಮಾದಾಬಾಳ ತಾಂಡಾ ತಾ: ಅಫಜಲಪೂರ ರವರು 02-11-2013 ರಂದು ಮದ್ಯಾಹ್ನ 12-30 ಗಂಟೆಗೆ ಫಿರ್ಯಾದುದಾರರು ತಮ್ಮ ಹೊಲದಿಂದ ಮರಳಿ ಮನೆಗೆ ಹೋಗುತ್ತಿರುವಾಗ ಲಕ್ಷ್ಮಿ ಪಾಟಿ ಹತ್ತಿರ ರಸ್ತೆಯ ಎಡಗಡೆಯಿಂದ ಬರುತ್ತಿರುವಾಗ ಯಾರೊ ಒಬ್ಬ ಮೊಟಾರ ಸೈಕಲ್ ಸವಾರನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಪಡೆಸಿದರ  ಪರಿಣಾಮವಾಗಿ ನಾನು ರೋಡಿನ ಮೇಲೆ ಬಿದ್ದಿದ್ದು ನನಗೆ ಎಡಪಕ್ಕಿಗೆಎಡಕಾಲಿನ
ಹಿಂಬದಿಗೆ ತರಚಿದ ಗಾಯಎಡ ಸೊಂಟಕ್ಕೆ ರಕ್ತಗಾಯ ಹಾಗೂ ಎಡಗೈ ರಟ್ಟೆಯ  ಕೆಳಗೆ  ಹೊಟ್ಟೆಗೆತಲೆಗೆಒಳ
ಪೆಟ್ಟಾಗಿದ್ದು ಇರುತ್ತದೆಸದರಿ ಮೋಟಾರ ಸೈಕಲ್ ನಂ.ಕೆಎ-28 ಯು8338 ಅದರ ಚಾಲಕನ ಹೆಸರು ಶರಣು ತಂದೆ ರಾಜಶೇಖರ ಸಾ: ಅತನೂರ ಇರುತ್ತದೆಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 01-10-2011 ರಿಂದ 30-09-2012  ಅವದಿಯಲ್ಲಿ ರೇಣುಕಾ ಸೂಗರ ಪ್ಯಾಕ್ಟರಿಗೆ ತರೆಸಿದ ಡಿಜೆಲ್ ಟ್ಯಾಂಕರಗಳಲ್ಲಿ  1). UÀeÁ£À£À JªÀiï gÉqÉPÀgÀ, 2). ¸ÉÆêÀıÉÃRgÀ ¥Ánïï 3). ¸ÀAUÀªÉÄñÀ PÉÆ½î ªÀÄvÀÄÛ PÉ®ªÀÅ PÀA¥ÀÆålgï D¥ÀgÉÃlgïì ರವರು ಕುಡಿಕೊಂಡು ಕೇಲವೊಂದು ಪ್ರಮಾಣದ ಡಿಜೇಲ ಉಳಿಸಿ ಹೊರಗೆ ಸಾಗಿಸಿ ಸುಮಾರು 17,000 ಲೀಟರ ಅ.ಕೀ 10,00,000 ರೂ/    ರಷ್ಟು ವಂಚನೆಯಿಂದ ಅವ್ಯವಹಾರ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಿಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಗೋಪಮ್ಮ ಗಂಡ ಜಯಶಂಕರ ಸಾ;ಪ್ಲಾಟ ನಂ 15 ಸುಭಾಷಚಂದ್ರ ಭರ್ಮಾ ಇವರ ಮನೆಯಲ್ಲಿ ಬಾಡಿಗೆ ಜಯತೀರ್ಥ ಕಾಲನಿ ಗುಲಬರ್ಗಾ ಇವರ ತಂದೆ ತಾಯಿಯವರು ಈಗ ಸುಮಾರು 2 ವರ್ಷಗಳ ಹಿಂದೆ ಗುಲಬರ್ಗಾದ ಜಯಶಂಕರ ಇತನೊಂದಿಗೆ ಸಂಪ್ರದಾಯದಂತೆ ಮದುವೆಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ 6 ತೊಲೆ ಬಂಗಾರ ಮತ್ತು ಗ್ರಹಪಯೋಗಿ ಸಾಮಾನುಗಳು ಕೊಟ್ಟಿದ್ದು ಇರುತ್ತದೆ. ನನ್ನ ಗಂಡ ಜಯಶಂಕರ ಇತನು ಖಾಸಗಿ ಕೆಲಸ ಮಾಡುತ್ತಾರೆ. ನನ್ನ ಗಂಡ ಮದುವೆಯಾದಾಗಿನಿಂದಲೂ ನನ್ನೊಂದಿಗೆ ಅನ್ಯೋನ್ಯವಾಗಿಯೇ ಇರುತ್ತಾರೆ. ನನ್ನ ಅತ್ತೆಯಾದ ಸರಸ್ವತಿ ಇವಳು ನನ್ನ ಮದುವೆಯಾದಾಗಿನಿಂದ ನನ್ನ ತವರು ಮನೆಯಿಂದ 2 ತೊಲೆ ಬಂಗಾರ 10 ಲಕ್ಷ ರೂಪಾಯಿ ವರದಕ್ಷಿಣೆ ಹಣವನ್ನು ನನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ದಿನಾಲು ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡುವದಲ್ಲದೇ ನಾನು ಹಾಕುತ್ತಿರುವ ಕೂಳೂ ತಿಂದು ನಮ್ಮ ಮನೆಯಲ್ಲಿ ನಾಯಿಯಂತೆ ಬೀಳಬೇಕು.ಅಲ್ಲದೇ ದಿನಾಲು ವರದಕ್ಷಿಣೆ ಹಣವನ್ನು ಕೊಡುವಂತೆ ಪೀಡಿಸುತ್ತಿದ್ದರಿಂದ ಅವಳು ಕೊಡುವ ಹಿಂಸೆಯನ್ನು ತಾಳಲಾರದೇ ಜಯತೀರ್ಥ ಕಾಲನಿಯಲ್ಲಿ ನಾನು ನನ್ನ ಗಂಡ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆವೆ, ದಿನಾಂಕ 27.10.2013 ರಂದು 3 ಗಂಟೆಯ ಸುಮಾರಿಗೆ ನನ್ನ ಅತ್ತೆಯಾದ ಸರಸ್ವತಿ ಇವಳು ನಾವು ಬಾಡಿಗೆಯಿಂದ ಇರುವ ಮನೆಗೆ ಬಂದು ನನ್ನ ಗಂಡ ಮನೆಯಲ್ಲಿ ಇಲ್ಲದ ಸಮಯದಲ್ಲಿ ರಂಡಿ 10 ಲಕ್ಷ ರೂಪಾಯಿ 2 ತೊಲೆ ಬಂಗಾರ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂದರೆ ನನ್ನ ಮಗನಿಗೆ ಕರೆದುಕೊಂಡು ಇಲ್ಲಿ ವಾಸವಾಗಿರುವಿಯಾ ನೀನು ಹಣ ತರದೇ ಇದ್ದರೆ ನಿನಗೆ ಖಲಾಸ ಮಾಡುತ್ತೇನೆ. ಅಂತಾ ಜೀವದ ಬೆದರಿಕೆ ಹಾಕಿರುತ್ತಾಳೆ. ನನ್ನ ಗಂಡ ಮತ್ತು ನನ್ನ ಮಗನಿಗೂ  ಕೂಡ ನನ್ನ ಅತ್ತೆಯಿಂದ ಜೀವದ ಭಯವಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ. ಶರಣಮ್ಮ ಗಂಡ ಹಳ್ಳಪ್ಪ ಸಾ|| ಮನೆ ನಂ:3-944 ಜಾಂಬವೀರ ನಗರ ಗಾಜೀಪೂರ ಗುಲಬರ್ಗಾ ಇವರು ದಿನಾಂಕ:31-10-2013 ರಂದು ರಾತ್ರಿ ತಾನು ಮತ್ತು ತನ್ನ ಮಗ ಕಾರಿನಲ್ಲಿ ಕುಳಿತುಕೊಂಡು ಮನೆಗೆ ಬರುತ್ತಿರುವಾಗ ನಮ್ಮ ಬಡಾವಣೆಯ 1) ನಾಗಮ್ಮ ಗಂಡ ಸಿದ್ದಪ್ಪ,2) ಮಾಣಿಕ ತಂದೆ ಸಿದ್ದಪ್ಪ 3) ಅವಿನಾಶ ತಂದೆ ಸಿದ್ದಪ್ಪ 4) ತಿಮ್ಮಣ್ಣ 5) ಕತ್ತಿಮರವ್ವ 6)ಬಸಪ್ಪ 7) ಚಂದ್ರಕಲಾ 8)ನಾಗಮ್ಮ 9) ವಿಜಯಲಕ್ಷ್ಮಿ 10) ಶರಣಪ್ಪ 11) ಸಾಗರ ಸಾ|| ಎಲ್ಲರೂ ಜಾಂಬವೀರ ನಗರ  ಗಾಜೀಪೂರ ಗುಲಬರ್ಗಾ ಇವರೆಲ್ಲರೂ ಕೂಡಿಕೊಂಡು ಬಂದು ನಮ್ಮ ಕಾರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಮ್ಮ ತಾಯಿ ಮಗಳದು ಹೆಚ್ಚಿಗೆ ಆಗಿದೆ ನಮ್ಮ ಓಣಿಯಲ್ಲಿ ಹ್ಯಾಗೆ ಇರುತ್ತಿರಿ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳಸೂತ್ರ ಕಸಿದುಕೊಂಡು ಹೋದ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ.ಪುನಿತಾ ಗಂಡ ಸುರಜ ತಿವಾರಿ ಸಾ|| ಪ್ಲಾಟ ನಂ:ಮನೆ ನಂ 10-5-2 ಶರಣ ನಗರ  ಗುಲಬರ್ಗಾ ರವರು ದಿನಾಂಕ: 01-11-2013 ರಂದು ಸಾಯಂಕಾಲ 1700 ಗಂಟೆಯ ಸುಮಾರಿಗೆ ಮನೆಯಿಂದ ತಮ್ಮ ಅತ್ತೆಯವರಾದ ಶೋಭಾ ತಿವಾರಿಯವರೊಂದಿಗೆ ದಿಪಾವಳಿ ಹಬ್ಬದ ಪ್ರಯುಕ್ತ ಮಾರ್ಕೆಟಿಗೆ ಶಾಪಿಂಗ್ ಮಾಡಿಕೊಂಡು ಬರಲು ನಡೆದುಕೊಂಡು ಗಬರಾದಿ ಬಿಲ್ಡಿಂಗ ಹತ್ತಿರ ಅಟೋ ರೀಕ್ಷಾದ ಸಲುವಾಗಿ ಹೊಗುತ್ತಿರುವಾಗ ಎದುರಿನಿಂದ ಒಬ್ಬ ಮೋಟರ ಸೈಕಲ ಮೇಲೆ ಎನ್.ವಿ ರೋಡಿನ ಕಡೆಯಿಂದ ಬಂದವನೆ ತಮ್ಮಿಬ್ಬರ ಮದ್ಯ ಮೋಟರ ಸೈಕಲ ನಿಲ್ಲಿಸಿದವನೆ ನನ್ನ ಕೊರಳಿಗೆ ಕೈಹಾಕಿ ಕೊರಳಲ್ಲಿಯ ಬಂಗಾರದ ಮಂಗಳಸೂತ್ರ ಮತ್ತು ಒಂದು ಬಂಗಾರದ ಲಾಕೇಟ 60 ಗ್ರಾಂ  ||ಕಿ|| 1,80,000/- ಬೆಲೆ ಬಾಳುವದನ್ನು ಕಸಿದುಕೊಂಡು ಅತೀ ವೇಗದಿಂದ ಪಬ್ಲಿಕ ಗಾರ್ಡನ ರೋಡಿನಿಂದ ಹೊರಟು ಹೊದನು ಗಡಿಬಿಡಿಯಲ್ಲಿ ಮೋಟರ ಸೈಕಲ ನಂ: ನೋಡಿರುವದಿಲ್ಲಾ ಅವನನ್ನು ನೋಡಿದರೆ ಗುರುತಿಸುತ್ತೇನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತು ಅವನು ಎತ್ತರ ಇದ್ದು ಮೈ ಮೇಲೆ ನೀಲಿ ಬಣ್ಣದ ಫೂಲ ತೋಳಿ ಟೀ ಶರ್ಟ ನೀಲಿದ ಬಣ್ಣದ ತಲೆಯ ಮೇಲೆ ಕ್ಯಾಪ ಹಾಕಿದವನು ಇರುತ್ತಾನೆ ಅವನನ್ನು ಪತ್ತೆ ಹಚ್ಚಿ ನನ್ನ ಕೊರಳಿಲ್ಲಲ್ಲಿ ಬಂಗಾರದ ಒಡವೆಯನ್ನು ದೋಚಿದವನನ್ನು ಪತ್ತೆ ಮಾಡಬೇಕು ಅಂತಾ ಇತ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 163/2013 ಕಲಂ: 392 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದುಇರುತ್ತದೆ.
ಹಣವಿರುವ ಬ್ಯಾಗ ಕಸಿದುಕೊಂಡು ಹೋಗಲು ಪ್ರಯತ್ನ ಮಾಡಿದ ಪ್ರಕರಣ :
ಚೌಕ ಠಾಣೆ : ಶ್ರೀ ರಸೀದ ಖಾನ ತಂದೆ ಮಹಮೂದ ಖಾನ ಸಾ : ಮುಮಿನಪೂರ ಗುಲಬರ್ಗಾ ರವರು ದಿನಾಂಕ 28-10-2013 ರಂದು ಜಮತಿನ ಕ್ಯಾಶಿಯರರಾದ ಶ್ರೀ ಉಸ್ಮಾನಸಾಬ ಇವರು ತಮ್ಮ ಕ್ಯಾಶ ಬ್ಯಾಗನಲ್ಲಿ 5 ಲಕ್ಷ ನಗದು ಹಣ ತೆಗೆದುಕೊಂಡು ಖುನಿ ಅಲಾವಾ ದಿಂದ ಖಸಾಬ ಮಜೀದ ಹತ್ತಿರ ಇರುವ ಜಮತಲಾದ ಅಧ್ಯಕ್ಷರಾದ ಶ್ರೀ ಹಾಜಿ ಪಾಶಾ ಸಾಬ ನವಾಡೆಯವರ ಮನೆಗೆ ದ್ವೀಚಕ್ರ ವಾಹನದ ಮೇಲೆ ಬರುತ್ತಿರುವಾಗ ಯಾರೋ ಇಬ್ಬರು ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಬಂದು ವಾಹನಕ್ಕೆ ಡಿಕ್ಕಿ ಹೊಡೆದು ಕ್ಯಾಶಿಯರನ ಕೈಯಲ್ಲಿದ್ದ ಬ್ಯಾಗ ಕಸಿದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು ಆ ವೇಳೆಯಲ್ಲಿ ಗಡಿಬಿಡಿಯಲ್ಲಿ ನಮ್ಮ ಕ್ಯಾಶೀಯರ ತಮ್ಮ ಬ್ಯಾಗನ್ನು ಕಸಿದುಕೊಂಡು ಚಿರಾಡುತ್ತಿರುವಾಗ ಅಲ್ಲೆ ಇದ್ದ ಜನರು ಸೇರಿದಾಗ ಆ ಇಬ್ಬರು ಓಡಿಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.