POLICE BHAVAN KALABURAGI

POLICE BHAVAN KALABURAGI

26 July 2012

GULBARGA DIST REPORTED CRIMES


ದರೋಡೆ ಪ್ರಕರಣ:
ಅಶೋಕ ನಗರ ಪೋಲಿಸ್ ಠಾಣೆ:ಶ್ರೀಮತಿ, ಅನ್ನಪೂರ್ಣ ಗಂಡ ರಾಜೇಂದ್ರ ಬಿರಾದಾರ ಸಾ|| ಭಾಗ್ಯವಂತಿ ನಗರ ಗುಲಬರ್ಗಾ ರವರ ನಾನು ದಿನಾಂಕ 26/07/2012 ರಂದು 6-15 ಎ.ಎಂ.ಕ್ಕೆ ಮನೆಯಿಂದ ವಾಕಿಂಗ ಕುರಿತು ಹೊರಟು ರಸ್ತೆಯ ಮುಖಾಂತರ ರಾಮ ಮಂದಿರ ಶ್ರೀ ಗುರು ಕಾಲೇಜವರೆಗೆ ವಾಕಿಂಗ ಮಾಡಿ ಮರಳಿ ಮನೆಗೆ ಬರುತ್ತಿರುವಾಗ ರಸ್ತೆಯ ಎಡಭಾಗದ ವೆಂಕಟೇಶ ಸರ್ವಿಸ್ ಸೆಂಟರ ಹತ್ತಿರದಲ್ಲಿ 7-15 ಎ.ಎಂ.ಕ್ಕೆ ನನ್ನ ಹಿಂದುಗಡೆಯಿಂದ ಒಬ್ಬ ವ್ಯಕ್ತಿ ಮೋಟಾರ ಸೈಕಲ್ ಬಂದವನೆ ನನ್ನ ಕೊರಳಿಗೆ ಕೈ ಹಾಕಿ ಕೊರಳಲ್ಲಿ ಇದ್ದ ಗಂಟಣ ಮಂಗಳಸೂತ್ರ ಎರಡು ಎಳೆಯದ್ದು ದಪ್ಪ ಕರಿಮಣಿ ಹವಳು ಎರಡು ತಾಳಿ ಇದ್ದ ಗುಂಡುಗಳು 6 ಇದ್ದ ಒಟ್ಟು 5,1/2 ತೊಲೆ ಬಂಗಾರದ ಮಂಗಳಸೂತ್ರ ಕೈ ಹಾಕಿ ಕಿತ್ತುಕೊಂಡಿದ್ದು, ನನ್ನ ಕುತ್ತಿಗೆಯ ಹತ್ತಿರ ತರಚಿದ ಗಾಯವಾಗಿರುತ್ತದೆ. ಸದರಿ ಮಂಗಳಸೂತ್ರ ಸುಮಾರು 1,50,000/- ರೂ ಬೇಲೆ ಬಾಳುವದಿದ್ದು, ಮೋಟಾರ ಸೈಕಲ್ ಮೇಲೆ ಇದ್ದ ವ್ಯಕ್ತಿ ರೇನಕೋಟ ತಲೆಗೆ ಟೋಪಿ ಹಾಕಿದ್ದು ಸುಮಾರು 30 ರಿಂದ 35 ವರ್ಷ ವಯಸ್ಸಿನಿರುತ್ತಾನೆ.   ಸುಮಾರು 5,1/2 ತೊಲೆ ಇದ್ದು ಸುಮಾರು 1,50,000/- ರೂ ಬೇಲೆ ಬಾಳುವ ಮಂಗಳಸೂತ್ರ ಪತ್ತೆ ಹಚ್ಚಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆಯ ಗುನ್ನೆ ನಂ.58/2012 ಕಲಂ.392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಕೊಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ವಿಶ್ವರಾಧ್ಯ ತಂದೆ ಲಿಂಗಣ್ಣ ಸತ್ಯಂಪೇಠ ವ|| 43, ಉ|| ಪತ್ರಕರ್ತ ಸಾ|| ಸತ್ಯಂಪೇಠ, ಹಾ|| ವ|| ಶಹಾಪೂರ, ಜಿಲ್ಲಾ|| ಯಾದಗಿರಿ ರವರು ನಮ್ಮ ತಂದೆಯಾದ ಲಿಂಗಣ್ಣ ಇವರಿಗೆ ಶ್ರಾವಣ ಮಾಸದ ನಿಮಿತ್ಯ ಶರಣಬಸವೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮವಿರುವದರಿಂದ ಅದರಲ್ಲಿ ಭಾಗವಹಿಸುವ ಕುರಿತು ದಿನಾಂಕ:25-07-2012 ರಂದು ಸಾಯಂಕಾಲ 4-30 ಗಂಟೆಯ ಸುಮಾರಿಗೆ ಶಹಾಪೂರ ದಿಂದ ಗುಲಬರ್ಗಾ ಬರುವ ಬಸ್ಸಿನಲ್ಲಿ ನನ್ನ ತಮ್ಮನಾದ ಸಂತೋಷನು ಇತನು ನಮ್ಮ ತಂದೆಗೆ ಕೂಡ್ರಿಸಿ ಕಳುಹಿಸಿದ್ದು, ರಾತ್ರಿ 8 ಗಂಟೆಯವರೆಗೆ ಗುಲಬರ್ಗಾಕ್ಕೆ ಬರದೇ ಇದ್ದುದ್ದರಿಂದ  ಎಸ.ಬಿ ಕಾಲೇಜಿನ ಉಪನ್ಯಾಸಕರು ನನಗೆ ಫೋನ್ ಮಾಡಿ ನಿಮ್ಮ ತಂದೆಯವರು ಸದರಿ ಕಾರ್ಯಕ್ರಮಕ್ಕೆ ಬಂದಿರುವದಿಲ್ಲಾ ಅಂತ ತಿಳಿಸಿದರು.  ನಾನು ನನ್ನ ತಂದೆಯ ಮೊಬೈಲ್ ನಂ 9480148016 ಮತ್ತು 7899148789 ನೇದ್ದವುಗಳಿಗೆ ಫೋನ್ ಮಾಡಿದಾಗ, ಮೊಬೈಲ್ ಕರೆ ಸ್ವೀಕರಿಸಿತು. ಆದರೆ ಯಾರೂ ಮಾತಾಡಲಿಲ್ಲಾ. ಪುನಃ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ದಿನಾಂಕ 26-07-2012 ರಂದು ಮದ್ಯಾಹ್ನ 12 ಗಂಟೆಗೆ ನಾನು ಗುಲಬರ್ಗಾ ನಗರದ ಸೂಪರ್ ಮಾರ್ಕೆಟನಲ್ಲಿರುವಾಗ ನನ್ನ ತಮ್ಮ ಶಿವರಂಜನ್ ಈತನು ಫೋನ್ ಮಾಡಿ  ತಂದೆಯವರು ಶರಣಬಸವೇಶ್ವರ ದೇವಸ್ಥಾನದ ನಾಲೆಯಲ್ಲಿ ಬಿದ್ದಿದ್ದು, ನೀನು ತಕ್ಷಣ ಬರಬೇಕು ಅಂತ ತಿಳಿಸಿದಾಗ, ನಾನು ಸ್ಥಳಕ್ಕೆ ಹೋಗಿ ನೋಡಲು, ಯಾರೋ ದುಷ್ಕರ್ಮಿಗಳು ನಮ್ಮ ತಂದೆ ಲಿಂಗಣ್ಣ ತಂದೆ ಗುರಪ್ಪ ಸತ್ಯಂಪೇಠ ಇವರಿಗೆ ಕೊಲೆ ಮಾಡಿ ಗುರುತು ಸಿಗದ ಹಾಗೆ ನಾಲೆಯಲ್ಲಿ ಬಿಸಾಕಿದ್ದು ಇರುತ್ತದೆ. ಮೃತನು ಪತ್ರಕರ್ತನಾಗಿದ್ದು, ಆತನ ಬರವಣಿಗೆ ಚಾಟಿ ಏಟಿನಿಂದ ತಾಳದೇ ಮತಾಂದರು  ಈ ಕೃತ್ಯ ಮಾಡಿರಬಹುದು ಅವರುಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಕೊಟ್ಟ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 55/2012 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀ ಬೈಲನಂದನಗುಡಿ ತಂದೆ ಸೋಮಣ್ಣಾ ಗಡಸೆ  ಸಾ|| ಬ್ರಹ್ಮಪುರ ಗುಲಬರ್ಗಾರವರು ನಾನು ದಿನಾಂಕ 25-07-2012 ರಂದು ಸಾಯಂಕಾಲ4-00 ಗಂಟೆಗೆ ನನ್ನ ಸೈಕಲ ಮೇಲೆ ಆರ್.ಟಿ.ಓ ಕ್ರಾಸ ಕಡೆಗೆ ಹೋಗುತ್ತಿದ್ದಾಗ ಮಹೀಂದ್ರಾ ಷೋ ರೂಮ ಕ್ರಾಸ ಹತ್ತಿರ ಮೋಟಾರ ಸೈಕಲ ನಂ. ಸಿ.ಎನ್.ಕ್ಯೂ. 2526 ನೇದ್ದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 40/2012 ಕಲಂ 279, 337 ಐಪಿಸಿ ಸಂಗಡ 187 ಐ,ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ :ಶ್ರೀಮತಿ  ಫರಜಾನ ಬೇಗಂ ಗಂಡ ನಿಜಾಮದ್ದೀನ್ ಪಟೇಲ್  ಸಾ ||ಎಕ್ಬಾಲ ಕಾಲೋನಿ ಎಮ್.ಎಸ್.ಕೆ. ಮಿಲ್ ಗುಲಬರ್ಗಾರವರು ನಮ್ಮ ಹೋಲ ಆಳಂದ ಗ್ರಾಮದಲ್ಲಿದ್ದು, ಸದರಿ ಜಮೀನಿಗೆ ನೀರಾವರಿಗೊಸ್ಕರ  ಹಸನ ಅನ್ಸಾರಿ  ಸಾ || ಆಳಂದ ಇವರ ಹತ್ತಿರ 2,35,000/- ರೂ. ಹಣ ನನ್ನ ಗಂಡ ಕೈಗಡ ತೆಗೆದುಕೊಂಡು ಒಂದು ವರ್ಷದ ಒಳಗಾಗಿ ಹಣ ಕೊಡುವದಾಗಿ ಮಾತಾಗಿತ್ತು. ದಿನಾಂಕ 23.07.2012 ರಂದು ಮುಂಜಾನೆ 10 ಗಂಟೆಗೆ ನಾನು ಮನೆಯಲ್ಲಿ ಇದ್ದಾಗ ಹಸನ ಅನ್ಸಾರಿ ಹಾಗೂ ಮಹ್ಮದ ಇಸ್ಮಾಯಿಲ ರವರು ಮನೆಗೆ ಬಂದು ನನ್ನ ಗಂಡನಿಗೆ ಕೇಳಿದರು, ಆಗ ನಾನು ನನ್ನ ಗಂಡ ಮನೆಯಲ್ಲಿ ಇಲ್ಲಾ ಬಂದ ಮೇಲೆ ತಿಳಿಸುತ್ತೇನೆ  ಅಂತಾ ಹೇಳಿದರೂ ಸಹ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2012 ಕಲಂ.341, 504, 506  ಸಂಗಡ 34 ಐಪಿಸಿ ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.