POLICE BHAVAN KALABURAGI

POLICE BHAVAN KALABURAGI

07 October 2015

Kalaburagi District Reported Crimes.

ಅಫಜಲಪೂರ ಠಾಣೆ : ಫಿರ್ಯಾದುದಾರರು ಏಳು ತಿಂಗಳ ಹಿಂದೆ ತಮ್ಮ ಮಗನಾದ ಇಶಾಕ ಇತನ ಮದುವೆಗೆ ಹಣದ ಅವಶ್ಯಕತೆ ಇದ್ದರಿಂದ  ತಮ್ಮ ಗ್ರಾಮದ ಭೀಮಶ್ಯಾ ಲಾಳಸಂಗಿ ರವರ ಮಕ್ಕಳಾದ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ  ಇವರ ಹತ್ತಿರ ಹೋಗಿ ನನ್ನ ಮಗನ ಮದುವೆಯ ಸಲುವಾಗಿ  60,000/-ರೂ ಬೇಕಾಗಿದೆ ಬಡ್ಡಿಯಂತೆ ಹಣ ಕೊಡು ಅಂತ ಕೇಳಿದೆನು ಅದಕ್ಕೆ ಸಿದ್ದಪ್ಪ ಇತನು  ನಾನು 3% ರ ಬಡ್ಡಿಯಂತೆ ಹಣಕೊಡುವದಿಲ್ಲ ನನ್ನ ಹತ್ತಿರ ಬಡ್ಡಿ ಹೆಚ್ಚಿಗೆ ಇರುತ್ತದೆ ಅಂತ ಹೇಳಿದನು ನನಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಈಗ ನನಗೆ ಮೊದಲು ಹಣಕೊಡು ಅಂತ ಸಿದ್ದಪ್ಪನಿಗೆ ಹೇಳಿದ್ದು ಸಿದ್ದಪ್ಪನು ನನಗೆ 30,000/- ರೂಪಾಯಿ ಕೊಟ್ಟು ನನಗೆ ಹೇಳಿದ್ದೇನೆಂದರೆ ನನ್ನ ಹತ್ತಿರದ 30,000/-ರೂಪಾಯಿ ಹಾಗೂ ನನ್ನ ತಮ್ಮನಾದ ಪುಂಡಪ್ಪನ ಹತ್ತಿರದ 30,000/- ರೂ ಸೇರಿಸಿ ನಿನಗೆ ಒಟ್ಟು 60,000/-ರೂ ಕೊಟ್ಟಿರುತ್ತೆನೆ ಅಂತ ಹೇಳಿ ನನಗೆ ಕೊಟ್ಟನು. ನಂತರ ಸಿದ್ದಪ್ಪ ಹಾಗೂ ಅವರ ತಮ್ಮನಾದ ಪುಂಡಪ್ಪ ಇವರು  ಒಂದು  ತಿಂಗಳ  ನಂತರ ನಮ್ಮ ಹಣ ಮರಳಿಕೊಡು ಇಲ್ಲವಾದರೆ ತಿಂಗಳಿಗೆ 10% ರ ಬಡ್ಡಿದರದಲ್ಲಿ ಪ್ರತಿ ತಿಂಗಳು ಬಡ್ಡಿಯನ್ನು ಕೊಡು ಅಂತ  ಹೇಳಿದ್ದರಿಂದ ಸಿದ್ದಪ್ಪ ಮತ್ತು ಪುಂಡಪ್ಪ ಇವರಿಗೆ ಮೀಟರ ಬಡ್ಡಿ ರೂಪದಲ್ಲಿ ನಾನು ಸಾಲವಾಗಿ ತಗೆದುಕೊಂಡ 60,000/-ರೂಪಾಯಿ ಹಣಕ್ಕೆ ಪ್ರತಿ ತಿಂಗಳ 10% ರಂತೆ ಮೀಟರ ಬಡ್ಡಿ ಕೊಡುತ್ತಾ ಬಂದಿರುತ್ತೇನೆ.ದಿನಾಂಕ 21-09-2015 ರಂದು ನಾನು ಸಿದ್ದಪ್ಪ ಇವರ ಹತ್ತಿರ ಸಾಲ ಪಡೆದುಕೊಂಡಂತ60,000/-ರೂ ಹಣವನ್ನು ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿಯನ್ನು ಸಿದ್ದಪ್ಪ ಹಾಗೂ ಪುಂಡಪ್ಪ  ಇವರಿಗೆ ನಮ್ಮ ಗ್ರಾಮದ ಹಜರತ ತಂದೆ ಇಸ್ಮಾಯಿಲ್ ಅತ್ತರ, ಮೋತಿರಾಮ ನಾಯ್ಕ ಕರಜಗಿ ತಾಂಡಾ ಹಾಗೂ ನನ್ನ ಹೆಂಡತಿಯಾದ ಅಮೀನಾ ಇವರ ಸಮಕ್ಷಮ ನಮ್ಮ ಮನೆಗೆ ಕರೆಯಿಸಿ ನಾನು ಸಾಲವಾಗಿ ಪಡೆದುಕೊಂಡ ಹಣಕ್ಕೆ ಬಡ್ಡಿ ಸೇರಿಸಿ ಒಟ್ಟು 1,00,000/- ರೂ ಹಣವನ್ನು ಕೊಟ್ಟು ನಿಮ್ಮ ಬಾಕಿ ಏನು ಇರುವುದಿಲ್ಲಾ ಅಂತ ಹೇಳಿರುತ್ತೇನೆ. ಆದರೆ ಸದರಿ ಸಿದ್ದಪ್ಪ ಲಾಳಸಂಗಿ ಹಾಗೂ ಪುಂಡಪ್ಪ ಲಾಳಸಂಗಿ ಇವರು ಈಗ ಒಂದು ವಾರದಿಂದ ನಾವು ನಿನಗೆ ಕೊಟ್ಟಂತಹ 60,000/-ರೂಪಾಯಿ ಹಣಕ್ಕೆ ಇನ್ನೂ ಬಡ್ಡಿಕೊಡಬೇಕು ನಿನು ಪೂರ್ತಿ ಬಡ್ಡಿಕೊಟ್ಟಿಲ್ಲಾ ಅಂತ ನನಗೆ ಪೀಡಿಸುತ್ತಿರುತ್ತಾನೆ. ನಿನ್ನೆ ದಿನಾಂಕ 05-10-2015 ರಂದು ರಾತ್ರಿ 10.00 ಗಂಟೆ ಸಮಯಕ್ಕೆ ನಾನು ನಮ್ಮ ಮನೆಯಲಿದ್ದಾಗ ಸಿದ್ದಪ್ಪ ಲಾಳಸಂಗಿ ಹಾಗೂ ಪುಂಡಪ್ಪ ಲಾಳಸಂಗಿ ಇವರು ನಮ್ಮ ಮನೆಗೆ ಬಂದು ನಿನಗೆ  ನಾವು ಕೊಟ್ಟ 60,000/- ರೂಪಾಯಿಗೆ  ಬಡ್ಡಿಕೊಡು ಎಂದು ಕೊಡುತ್ತಿ ಅಂತ ಹೇಳಿ ಹೋಗಿರುತ್ತಾರೆ.ನಾನು ನಮ್ಮ ಮನೆಯಲ್ಲಿ ನನ್ನ ಹೆಂಡತಿಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ. ಸದರಿ ಸಿದ್ದಪ್ಪ ತಂದೆ ಭಿಮಶ್ಯಾ ಲಾಳಸಂಗಿ ಹಾಗೂ ಪುಂಡಪ್ಪ ತಂದೆ ಭಿಮಶ್ಯಾ ಲಾಳಸಂಗಿ ಸಾ|| ಕರಜಗಿ ಇವರು  ಕರಜಗಿ ಗ್ರಾಮದಲ್ಲಿ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮೀಟರ ಬಡ್ಡಿಯಂತೆ ಕರಜಗಿ ಗ್ರಾಮದ ರೈತರಿಗೂ ಹಾಗೂ ಇನ್ನೂಳಿದ ಜನರಿಗೂ ಹಣ ಕೊಟ್ಟು ಮೀಟರ ಬಡ್ಡಿ ರೂಪದಲ್ಲಿ ಹಣ ಪಡೆದು ಜನರಿಗೆ ಮೋಸ ಮಾಡಿ ಬಡ್ಡಿ ವ್ಯವಹಾರ ಮಾಡುತ್ತಿರುತ್ತಾರೆ. ಅದರಂತೆ ನಾನು ಸಹ ಸದರಿಯವರ ಹತ್ತಿರ  ಹಣದ ಅಡಚಣೆಯಿಂದ ಹಣವನ್ನು ಪಡೆದುಕೊಂಡು  ಪಡೆದುಕೊಂಡ ಹಣ ಹಾಗೂ ಅದಕ್ಕೆ ಸಂಬಂಧಪಟ್ಟ ಬಡ್ಡಿಯನ್ನು  ಮರಳಿಕೊಟ್ಟರು ಸಹ ಇನ್ನೂ ಬಡ್ಡಿ ಹಣ ಬರಬೇಕು ಅಂತ ನನಗೆ ಪಿಡಿಸುತ್ತಿರುತ್ತಾರೆ ಆದ್ದರಿಂದ ಸದರಿ ಸಿದ್ದಪ್ಪ ಲಾಳಸಂಗಿ ಹಾಗೂ ಅವನ ತಮ್ಮನಾದ ಪುಂಡಪ್ಪ  ಇವರ ಮೇಲೆ ಕಾನುನು ಕ್ರಮ ಜರೂಗಿಸಬೇಕೆಂದು ಪ್ರಕರಣ ದಾಖಲಾಗಿರುತ್ತದೆ.

ಗ್ರಾಮೀಣ ಠಾಣೆ : ದಿನಾಂಕ: 06/10/2015 ರಂದು 09-30 ಪಿಎಮ್ ಕ್ಕೆ ಫಿರ್ಯಾದಿದಾರರಾದ ಶ್ರೀ ಸೈಯದ್ ಇರ್ಫಾನ ತಂದೆ ಸೈಯದ್ ಚಾಂದಪಟೇಲ್ ವಯ: 32 ವರ್ಷ ಜಾತಿ: ಮುಸ್ಲಿಂ ಉ: ಮೆಕ್ಯಾನಿಕ ಕೆಲಸ ಸಾ: ಸಿಟಿ ಸ್ಕೂಲ ಅಕಾಡೆಮಿ ಹತ್ತಿರ ಜಂ ಜಂ ಕಾಲನಿ ಕಲಬುರಗಿ ಇವರು ಠಾಣೆಗೆ ಹಾಜರಾಗಿ ನೀಡಿದ ಒಂದು ಲಿಖಿತ ಫಿರ್ಯಾದಿ ಸಾರಾಂಶವೆನೆಂದರೆ ತಾನು ದಿನಾಂಕ: 24/09/2015 ರಂದು ಬಕ್ರೀದ ಹಬ್ಬದ ಆಚರಣೆಗಾಗಿ ನಮ್ಮ ಸ್ವಂತ ಊರಾದ ತಡಗೋಳ ಗ್ರಾಮಕ್ಕೆ ಸಂಜೆ ಸಮಯ 6-00 ಗಂಟೆಗೆ ಜಂ ಜಂ ಕಾಲನಿಯ ನನ್ನ ಮನೆ ಕೀಲಿ ಹಾಕಿಕೊಂಡು ಹೆಂಡತಿ ಮಕ್ಕಳೊಂದಿಗೆ ಹೋಗಿರುತ್ತೇನೆ. ದಿನಾಂಕ: 25/09/2015 ರಂದು 07-00 ಎಎಮ್ ಕ್ಕೆ ನನ್ನ ಮನೆಯ ಪಕ್ಕದಲ್ಲಿಯೇ ಇರುವ ನಮ್ಮ ಮಾವ ಮಹಮ್ಮದ ಅಯ್ಯೂಬ್ ಇವರು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮನೆ  ಬಾಗಿಲ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ ತೆರೆದಿರುತ್ತದೆ ಮನೆ ಕಳ್ಳತನವಾಗಿರಬಹುದು ಬೇಗ ಬಾ ಅಂತ ತಿಳಿಸಿದ್ದು ನಾನು ನಮ್ಮೂರಿನಿಂದ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ನಾನು ಗಾಬರಿಯಿಂದ ಮನೆಯೋಳಗೆ ಹೋಗಿ ನೋಡಲು ಬೆಡ್ ರೂಮನ ಬಾಗಿಲು ತೆರೆದಿದ್ದು ಬೆಡರೂಮನಲ್ಲಿದ್ದ ಅಲಮಾರಾದ ಲಾಕ ಮುರಿದಿದ್ದು ಬಾಗಿಲು ತೆರೆದಿರುತ್ತದೆ ಮತ್ತು ಅಲಮಾರಾದಲ್ಲಿದ್ದ ಬಟ್ಟೆ ಬರೆ ಸಾಮಾನುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು  ಆಗ ನಾನು ಗಾಬರಿಯಿಂದ ಅಲಮಾರಾದಲ್ಲಿ ನೋಡಲು 15-20 ವರ್ಷಗಳ ಹಿಂದೆ ನಮ್ಮ ತಂದೆಯವರು  ಖರೀದಿಸಿದ್ದ  1) 20 ಗ್ರಾಂ ಬಂಗಾರದ ನಕ್ಲೇಸ್ ಅ.ಕಿ= 10000/-ರೂ 2) 15 ಗ್ರಾಂ ಬಂಗಾರದ ಗಲಸರಿ (ತಾಳಿ) .ಕಿ= 7500/-ರೂ 3) ಪ್ರತಿ 5ಗ್ರಾಂ ಬಂಗಾರದ ( ಒಟ್ಟು 10 ಗ್ರಾಂ2 ಸುತ್ತುಂಗುರ ಅ.ಕಿ= 10000/-ರೂ 4) 5 ಗ್ರಾಂ ಬಂಗಾರದ ಕಿವಿಯೋಲೆ ಅ.ಕಿ= 2500/-ರೂ ಹೀಗೆ ಒಟ್ಟು 50 ಗ್ರಾಂ ಬಂಗಾರದ 25000/-ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ: 24/09/2015 ರಂದು  6-00 ಪಿಎಮ್ ಗಂಟೆಯಿಂದ ದಿನಾಂಕ: 25/09/2015 ರಂದು 07-00ಎಎಮ್ ಮಧ್ಯದ ಅವಧಿಯಲ್ಲಿ ನಮ್ಮ ಮನೆ ಬಾಗಿಲ ಕೊಂಡಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ವಿಚಾರವನ್ನು  ನಮ್ಮ ಸ್ವಂತ ಊರಾದ ತಡಗೋಳಕ್ಕೆ ಹೋಗಿ ಅಲ್ಲಿ  ಬಕ್ರೀದ ಹಬ್ಬದ ಆಚರಣೆಯಲ್ಲಿದ್ದ ನನ್ನ ಹೆಂಡತಿಗೆ ತಿಳಿಸಿದ್ದು  ಅವಳು ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದು ಅಲ್ಲೇ ಉಪಚಾರ ಪಡೆದುಕೊಂಡು ಇಂದು ಜಂಜಂ ಕಾಲನಿ ಕಲಬುರಗಿಯ ನನ್ನ ಮನೆಗೆ ಹೆಂಡತಿಯೊಂದಿಗೆ ವಾಪಸ್ ಬಂದಿರುವುದರಿಂದ ಮನೆಯಲ್ಲಿ ನೋಡಿ ವಿಚಾರಿಸಿ ಈ ದಿನ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ಕೊಟ್ಟಿರುತ್ತೇನೆ. ಕಾರಣ ಕಳ್ಳತನವಾದ ನನ್ನ ಬಂಗಾರದ ಆಭರಣಗಳನ್ನು ಪತ್ತೆ ಹಚ್ಚಿ ನಮಗೆ ವಾಪಸ್ಸ್ ಕೊಡಿಸಬೇಕು ಮತ್ತು ಕಳ್ಳತನ ಮಾಡಿದ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಂತ ವಗೈರೆ ನೀಡಿದ ಫಿರ್ಯಾದಿ ಹೇಳಿಕೆ ಮೇಲಿಂದ ಪ್ರಕರಣ ದಾಖಲಾಗಿರುತ್ತದೆ.