POLICE BHAVAN KALABURAGI

POLICE BHAVAN KALABURAGI

08 January 2014

Gulbarga District Reported Crimes

ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಅನೀತಾ ಗಂಡ ನಾಗೇಶ್ವರ ರಾವ  ಸಾ: ವೈಜಾಕ ತಾ: ಕೊಂಡಪಾಲಮ (ಎ.ಪಿ.) ಹಾ:ವ: ಬಿದ್ದಾಪೂರ ಕಾಲೋನಿ  ಗುಲಬರ್ಗಾ ರವರು ಮತ್ತು ಗಂಡನಾದ ನಾಗೇಶ್ವರ ಹಾಗು ವಿಶ್ವನಾಥ ರವರು 07-01-2014 ರಂದು ಸಾಯಂಕಾಲ ಅಪ್ಪನ ಕೆರೆ ಗಾರ್ಡನಕ್ಕೆ ನನ್ನ ಗಂಡ ಚಲಾಯಿಸುತ್ತಿರುವ ಮೋ./ಸೈಕಲ್ ನಂ: ಎ.ಪಿ. 31 ಬಿಹೆಚ್-0559 ರ ಮೇಲೆ ನಾನು ಮತ್ತು ವಿಶ್ವನಾಥ ಇಬ್ಬರು ಹಿಂದುಗಡೆ ಕುಳಿತು ಹೋಗಿ ವಾಪಸ ಮನೆಯ ಕಡೆಗೆ ರಾಮ ಮಂದೀರ ಸರ್ಕಲ್ ಮುಖಾಂತರ ಹೋಗುವಾಗ ರಾತ್ರಿ 8=15 ಗಂಟೆ ಸುಮಾರಿಗೆ ಸರ್ವಜ್ಞಾ ಶಾಲೆಯ ಎದುರು ರೋಡ ಡಿವೈಡರನಲ್ಲಿ ಸಿಲ್ವರ ಕಲರ ಕಾರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಕರುಣೇಶ್ವರ ನಗರ ಕಡೆಯಿಂದ ಅಡ್ಡವಾಗಿ ಬಂದು ಹೈ ಕೋರ್ಟ ಕಡೆಗೆ ತಿರುಗಿಸಿ ನಮ್ಮ ಮೋ/ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಗಾಯಗೊಳಿಸಿದ್ದು ಮತ್ತು ನನ್ನ ಗಂಡನಿಗೆ ಹಾಗೂ ವಿಶ್ವನಾಥ ಇವರಿಗೆ ಭಾರಿ ಗಾಯಗೊಳಿಸಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಸಂಚಾರಿ ಠಾಣೆ : ಕುಮಾರಿ ಸುರೇಖಾ ತಂದೆ ವೈಜನಾಥ ನಾಟಿಕರ, ಸಾಃ ರಾಮ ನಗರ ಗುಲಬರ್ಗಾ ಇವಳು ನಗರೇಶ್ವರ ಶಾಲೆಯಲ್ಲಿ ನೇ ತರಗತಿಯಲ್ಲಿ ಓದುತ್ತಿದ್ದು ಪ್ರತಿ ದಿವಸ ಶಾಲೆಗೆ ಅಟೋರಿಕ್ಷಾ ನಂ. ಕೆ 32  8991 ನೇದ್ದರಲ್ಲಿ ಹೋಗಿ ಬರುವದು ಮಾಡುತ್ತಿದ್ದು ದಿನಾಂಕ 07-01-2014 ರಂದು ಎಂದಿನಂತೆ ಅಟೋರಿಕ್ಷಾ ನಂ. ಕೆ.ಎ  32  8991 ನೇದ್ದರಲ್ಲಿ ಶಾಲೆಗೆ ಹೋಗುತ್ತಿದ್ದಾಗ ಅಟೋರಿಕ್ಷಾ ಚಾಲಕ ಮಲ್ಲಿಕಾರ್ಜುನ ಇತನು 9-30 ಎ.ಎಮ್ ಕ್ಕೆ ಅಟೋರಿಕ್ಷಾ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಅಣಕಲ್ ಪೆಟ್ರೊಲ್ ಬಂಕ ಹತ್ತಿರ ರೋಡಿನ ಪಕ್ಕಕ್ಕೆ ನಿಂತ  ಅಟೋರಿಕ್ಷಾ ನಂ. ಕೆ.ಎ 32 -8196 ನೇದ್ದರ ಹಿಂದಿನ ಎಡಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಅಪಘಾತದಿಂದ ಫಿರ್ಯಾದಿ ಅಟೋರಿಕ್ಷಾದಿಂದ ಕೆಳಗೆ ಬಿದ್ದು ಎಡಗಾಲು ತೊಡೆಗೆ ಭಾರಿ ಪೆಟ್ಟು ಬಿದ್ದು ಗಾಯಹೊಂದಿರುತ್ತೆನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 07-01-2014 ರಂದು 11:45 ಎ.ಎಮ್ ಸುಮಾರಿಗೆ ರೇವಣಸಿದ್ದ ತಂ, ಅಪ್ಪಣ್ಣ ಕೋರಿ ಸಾ||ರಾಜನಾಳ ಇತನು ತನ್ನ ವಶದಲ್ಲಿದ್ದ ಹಿರೋ ಸ್ಪ್ಲೇಂಡರ್ ಪ್ಲಸ್ ನಂ; ಕೆ.ಎ-32-ಇಡಿ-2675 ನೇದ್ದು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕುರಿಕೋಟಾ ಗ್ರಾಮದ ಹತ್ತಿರ ಇರುವ ಶಿವಪ್ರಭು ಪಾಟೀಲ ಇವರ ಪೆಟ್ರೋಲ್ ಪಂಪ ಹತ್ತಿರ ಪಲ್ಟಿ ಮಾಡಿದ್ದರಿಂದ ಆತನ ತಲೆಗೆ ಭಾರಿರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ಮಾಡಿದ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 06-01-2014 ರಂದು ಸಂಜೆಯ ವೇಳೆಯಲ್ಲಿ ಶ್ರೀ ಜಗಧೀಶ ಕೆ ಜಿ ಪಿ ಎಸ್ ಐ ನೆಲೋಗಿ ಪೊಲೀಸ್ ಠಾಣೆ ರವರು ಹಳ್ಳಿ  ಗಸ್ತಿನಲ್ಲಿ ಸಿಬ್ಬಂದಿಯೊಂದಿಗೆ ಇದ್ದಾಗ ಮಾವನೂರ ಗ್ರಾಮದ ದೇವಿಂದ್ರ ಮೈನಾಳ ಇತನು ಫೋನ ಮಾಡಿ ತಿಳಿಸಿದ್ದೇನೆಂದರೆ ಅರ್ಜುನ ಕಿರಣಗಿ ಮತ್ತು ಅವನ ಸಂಬಂಧಿಕರು ನಮ್ಮ ಮಗನಿಗೆ ಹಾಗೂ ನಮ್ಮ ಅಣ್ಣನ ಮಗನಿಗೆ ಗಿಡಕ್ಕೆ ಕಟ್ಟಿ ಹೊಡೆಯುತ್ತಿದ್ದಾರೆ ಅಂತಾ ಹೇಳಿದಾಗ ಅಲ್ಲಿಗೆ ಜೀಪಿನಲ್ಲಿ ಹೋಗಿ ಗಿಡಕ್ಕೆ ಕಟ್ಟಿದ ಕೆಂಚಪ್ಪ ಹಾಗೂ ಶರಣಪ್ಪನಿಗೆ ಬಿಡಿಸಲು ಹೋದಾಗ ಆರೋಪಿತರು ಗುಂಪು ಕಟ್ಟಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಲು ಯತ್ನಿಸಿ ಕೆಕೆ ಹಾಕುತ್ತಾ ಉದ್ತಿಕ್ತವಾಗಿ ವರ್ತಿಸಿ, ಪಿಸಿ 200 ಮತ್ತು ಪಿಸಿ 417 ರವರ ಮೇಲೆ ಹಲ್ಲೆ ಮಾಡಿದ್ದು, ಅವರ ಕೈಯಲ್ಲಿಒದ್ದ ಲಾಠಿಗಳನ್ನು ಕಸಿಯಲು ಯತ್ನಿಸಿದ್ದು, ನಂತರ ಆರೋಪಿತರೆಲ್ಲರು ಸಿಬ್ಬಂದಿಯವರಿಗೆ ಸಾಯಿಸಲ ಪ್ರಯತ್ನ ಮಾಡಿ ಕಾನೂನು ರೀತ್ಯಾ ಕರ್ತವ್ಯ ಮಾಡಲು ಅಡ ತಡೆ ಮಾಡಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ. ಅಮೀತ ತಂದೆ ಸೇವುಸಿಂಗ ರಾಠೋಡ  ಸಾ: ದಮರಾಸ ತಾ: ಕಾಲ್ಪಿ ಜಿ: ಜಾಲೂನ (ಯು.ಪಿ ರಾಜ್ಯ) ಹಾ.ವ:  ಖದಿರ ಚೌಕ  ಎಂ.ಎಸ್‌.ಕೆ ಮೀಲ ಗುಲಬರ್ಗಾ ರವರು ದಿನಾಂಕ 07-01-2014 ರಂದು ರಾತ್ರಿ  7:00 ಗಂಟೆ ಸುಮಾರಿಗೆ ವಡ್ಡರಗಲ್ಲಿಯಲ್ಲಿ ಪಾನಿಪೂರಿ ಬಂಡಿ ವ್ಯಾಪಾರ ಮಾಡಿತ್ತಿರುವಾಗ ಬಸವನಗರದ ಆವಾರ ಹುಡುಗುರಾದ ಅಂಬರಿಷ, ಮತ್ತು ಅವನ ಗೆಳೆಯರಾದ ಬಿನ್, ಶಿವಶರಣ, ವಿರೇಶ ಇವರು ಬಂದು ಪಾನಿಪುರಿ ತಿಂದಿದ್ದು ಬಿಲ್ ಕೇಳಿದಕ್ಕೆ ಅವರು ಅವಾಚ್ಯ ಶಬ್ದಗಳಿಂದ ಬೈದು ನಮಗೆ ಹಣ ಕೇಳುತ್ತಿ ಅಂತಾ ಅಂದು ನನ್ನ ಪಾನಿಪುರಿ ಬಂಡಿಯ ಗ್ಲಾಸ ಒಡೆದಿದ್ದರಿಂದ ಪಾನಿ ಮತ್ತು ಪುರಿ ಎಲ್ಲಾ ಚಲ್ಲಾಪಿಲ್ಲಿಯಾಗಿರುತ್ತವೆ. ಆಗ ನಾನು ಮೇರಾ (900/-)   ನೌಸೋ ರೂಪಿಯಾ ಲಾಸ ಹೋಗಯಾ ದೇವೊ”  ಅಂತಾ ಕೇಳಿದಕ್ಕೆ ಮಾಕೇ ಲೌಡೆ ಫೀರ ಹಮ್ ಸೇ ಪೈಸಾ ಪುಛತಾ ಸಾಲೇ ತೆರೋಕು ಛೋಡತಾ ನಹಿ ಖತಮ ಕರತು ಅಂತಾ ಅಂದವರೆ ತಲವಾರದಿಂದ ನನ್ನ ಕುತ್ತಿಗೆಗೆ ಹೋಡೆಯುತ್ತಿರುವಾಗ ನಾನು  ಏಡಗೈ ಅಡ್ಡಪಡಿಸಿದ್ದರಿಂದ ಏಟು ನನ್ನ ಏಡಗೈ ಹಸ್ತಕ್ಕೆ ಬಿದ್ದು ಭಾರಿ ರಕ್ತಗಾಯವಾಗಿರುತ್ತದೆ. ನನಗೆ ಅವಾಚ್ಯ ಶಬ್ದಗಳಿಂದ ಬೈದು ತಲವಾರದಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನೆಲೋಗಿ ಠಾಣೆ : ಶ್ರೀ  ಕೆಂಚಪ್ಪ ತಂದೆ ದೇವಿಂದ್ರ ಮೈನಾಳ ಸಾ: ಮಾವನೂರ   ರವರು ದಿನಾಂಕ: 06-01-2014 ರಂದು 06.15 ಪಿ ಎಮ್ ಕ್ಕೆ ತಮ್ಮ ಹೊದಲ್ಲಿ ತೊಗರಿ ರಾಶಿ ಮಾಡುವಾಗ 1. ಕೆಂಚಪ್ಪ ತಂದೆ ದೇವಿಂದ್ರ ಮೈನಾಳ 2. ಶರಣಪ್ಪ ತಂದೆ ತಿಪ್ಪಣ್ಣ ಆಲೂರ ಸಂಗಡ 5-6 ಜನರು ಸಾ: ಎಲ್ಲರು ಮಾವನೂರ ಇವರು ಗುಂಪು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಹೊಲಕ್ಕೆ ಹೋಗಿ ನಮ್ಮ ಮಗಳಾದ ಮರೆಮ್ಮ ಇವಳು ಮೌನೇಶ ಒಡ್ಡರ ಇವನ ಸಂಗಡ ಅನೈತಿಕ ಸಂಬಂಧ ಹೊಂದಲು ನೀವೆ 3 ಜನರು ಕಾರಣರೆಂದು ಫಿರ್ಯಾದಿಗೆ ಕೊಡಲಿಯಿಂದ ಹೊಡೆದು, ಬಿಡಿಸಲು ಬಂದವನಿಗೆ ಬಡಿಗೆಯಿಂದ ಹೊಡೆದು ಇವರಿಗೆ ಇಷ್ಟಕ್ಕೆ ಬಿಡಬಾರದು ಊರಲ್ಲಿ ಕರೆದುಕೊಂಡು ಹೋಗಿ ಜನರು ನೋಡುವಂತೆ ಗಿಡಕ್ಕೆ ಕಟ್ಟಬೇಕು ಅಂತಾ ಫಿರ್ಯಾದಿಗೆ ಹಾಗೂ ಶರಣಪ್ಪ ಬೇಲೂರ ಇತನಿಗೆ ಊರಿನ ತನಕ ಎಳೆದುಕೊಂಡು ಬಂದು ಗಿಡಕ್ಕೆ ಕಟ್ಟಿ, ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಬ್ರಹ್ಮಪೂರ ಠಾಣೆ : ದಿನಾಂಕ 07-01-2014 ರಂದು 7-15 ಪಿ.ಎಮ.ಕ್ಕೆ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಪ್ರಕಾಶ ಹೆಚ್.ಸಿ. 259, ಅಶೋಕ ಪಿಸಿ 86,  ಹಾಗು ಪಂಚರೋಂದಿಗೆ ಖಚಿತ ಬಾತ್ಮಿ ಮೇರೆಗೆ ಮಿಲನ ಚೌಕ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದವನ ಮೇಲೆ ದಾಳಿ ಮಾಡಿ ಮಟಕಾ ಬರೆಯಿಸುತ್ತಿದ್ದವರು ಓಡಿ ಹೋಗಿದ್ದುಬರೆದುಕೊಳ್ಳುತ್ತಿದ್ದ ವ್ಯಕ್ತಿಯನ್ನು ಹಿಡಿದು ವಿಚಾರಿಸಲು ತನ್ನ ಹೆಸರು ಅಬ್ದುಲ್ ಸತ್ತಾರ್ ತಂದೆ ಖಾಸಿಂ ಅಲಿ ಸಾ|| ಗಾಜೀಪೂರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನ ಅಂಗ ಜಡ್ತಿ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಿಸಿದ  ನಗದು ಹಣ 875/-, ಮಟಕಾ ಚೀಟಿ, ಬಾಲ ಪೆನ್ನಇವುಗಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು  ಆರೋಪಿ ಅಬ್ದುಲ್ ಸತ್ತಾರ್ ಈತನೊಂದಿಗೆ ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿದ್ಯಾರ್ಥಿ ಕಾಣೆಯಾದ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಶಿವಲಿಂಗಪ್ಪಾತಂದೆ ಭೀಮಶ್ಯಾ ಮದರಿ ಸಾ;ಸಿಂಧಗಿ(ಬಿ) ತಾ;ಜಿ;ಗುಲಬರ್ಗಾ, ರವರ ªÀÄUÀ£Áಮಹಾಂತಪ್ಪಾ ವಯಸ್ಸು;16 ವರ್ಷ ಸದೃಡ ಮೈಕಟ್ಟು ಎಣ್ಣೆಗೆಂಪು ಮೈಬಣ್ಣ ನೇರವಾದ ಮೂಗು ಕನ್ನಡ ಭಾಷೆ ಮಾತನಾಡುವ 9 ನೇತರಗತಿ ವಿದ್ಯಾರ್ಥಿ ಇತನು ದಿನಾಂಕ. 4-11-2013 ರಂದು ಮನೆಯಿಂದ ಶಾಲೆಗೆ  ಹೋಗುತ್ತೇನೆ ಅಂತಾ ಮನೆಯಿಂದ ಹೋದವನು ಇವತ್ತಿನ ವರೆಗೆ ಬಂದಿರುವದಿಲ್ಲಾ ಕಾಣೆಯಾಗಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ಸಿದ್ರಾಮಯ್ಯ ತಂದೆ ಬಸಯ್ಯ ಮಠ ಮು|| ನಾವದಗಿ ಸಧ್ಯ ವಾಸ ಪ್ಲಾಟ.ನಂ: 5 ರಘೋಜಿ ಲೆಔಟ್ ರೇವಣಸಿದ್ದೇಶ್ವರ ಕಾಲೋನಿ ಗುಲ್ಬರ್ಗಾ, ರವರ  ªÀÄUÀ£Áವೀರೇಶ ವಯಸ್ಸು;27 ವರ್ಷ ಎತ್ತರ 5 4 ಸದೃಡ ಮೈಕಟ್ಟು ನೇರವಾದ ಮೂಗು ಎಣ್ಣೆಗೆಂಪು ಮೈಬಣ್ಣ ಕನ್ನಡ, ಹಿಂದಿ ಭಾಷೆ ಮಾತನಾಡುವ ಇತನು ದಿನಾಂಕ. 21-12-2013 ರಂದು ಮನೆಯಿಂದ ಹೋದವನು ಇವತ್ತಿನ ವರೆಗೆ ಬಂದಿರುವದಿಲ್ಲಾ ಕಾಣೆಯಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.