POLICE BHAVAN KALABURAGI

POLICE BHAVAN KALABURAGI

27 December 2013

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಗ್ರಾಮೀಣ ಠಾಣೆ : ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಭೀಮಳ್ಳಿ ಗ್ರಾಮದ  ಹನುಮನ ಮಂದಿರ ಹತ್ತಿರ ಇರುವ ಪಾನ್ ಡಬ್ಬದಲ್ಲಿ ದಿನಾಂಕ 26-12-2013 ರಂದು ಸಂಜೆ 07-00 ಗಂಟೆ ಸುಮಾರಿಗೆ ಭೀಮಳ್ಳಿ ಗ್ರಾಮದ ಉದಯ ತಂದೆ ಶಣ್ಮಕಪ್ಪ ಸ್ಥಾವರೇ ಮಠ ವ-35 ವರ್ಷಎಂಬುವವನು ಮಟಕಾ ಜೂಜಾಟ  ನಡೆಸುವ ವಿಷಯದಲ್ಲಿ ಗುಲಬರ್ಗಾದ ಡಿಸಿಐಬಿ ಘಟಕದವರು ಮಾಹಿತಿ ಸಂಗ್ರಹಿಸಿ ಎಸ್. ಪಿ. ಸಾಹೇಬ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಈ ಘಟಕದ ಅಧಿಕಾರಿಯವರಾದ ಶ್ರೀ ಯು. ಶರಣಪ್ಪ.  ಪೊಲೀಸ್ ಇನ್ಸಪೆಕ್ಟರ ಮತ್ತು ಅವರ ಸಿಬ್ಬಂದಿಯವರಾದ ದತ್ತಾತ್ರೇಯ ಎ.ಎಸ್.ಐ ಮತ್ತು ಬಸವರಾಜ ಎ.ಎಸ್.ಐ, ಹಾಗೂ ಹೆಚ್.ಸಿ ಜನರಾದ ಶಿವಯೋಗಿ, ಬಸವರಾಜ ಪಾಟೀಲ್, ಅಂಬರಾಯ, ಅಣ್ಣರಾಯ, ಹಾಗೂ ಈರಣ್ಣ ಇವರು ಮತ್ತು ಗ್ರಾಮೀಣ ಪೊಲೀಸ್ ಠಾಣೆಯ ಪಿ.ಎಸ್.ಐ.  ರವರಾದ ಹರಿಬಾ, ಹಾಗೂ ಶರಣಪ್ಪ. ಪಿ.ಸಿ, ಕೂಡಿಕೊಂಡು   ಸದರಿ ಗ್ರಾಮಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತಲ್ಲಿನಾನಾದ ಉದಯ  ತಂದೆ ಶಣ್ಮಕಪ್ಪ ಸ್ಥಾವರ ಮಠ ಇತನಿಗೆ ಹಿಡಿದು ಮಟಕಾ ಜೂಜಾಟಕ್ಕೆ ಸಂಭಂದಪಟ್ಟ ಮಟಕಾ ನಂ ಬರೆದ ಚೀಟಿ, ಒಂದು ಬಾಲ್ ಪೆನ್ನು, ಎರಡು ಮೊಬೈಲ್ಗಳು  ಹಾಗೂ ನಗದು ಹಣ 26,930 ಜಪ್ತು ಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುರ್ದ  ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ.ಅಬ್ದುಲ ರಹೇಮಾನ ತಂದೆ ಮಹ್ಮದ್ ಮೈನೊದ್ದಿನ್ ಸಾ : ಎಮ್.ಎಸ್.ಕೆ.ಮಿಲ್ ಜಿಲಾನಾಬಾದ ಗುಲಬರ್ಗಾ ಇವರು ಕಳೆದ ಒಂದು ವಾರದ ಹಿಂದೆ ಎಮ್.ಎಸ್.ಕೆ.ಮಿಲ್ ಹತ್ತಿರ ಇರುವ ಇಲಿಯಾಸ್ ಭಾಗವಾನ್ ಇವರಿಗೆ ಸಂಭಂದಪಟ್ಟ ಕೊಲ್ಡ ಸ್ಟೋರೆಜದಲ್ಲಿಯ ಗ್ಯಾಸ ಲಿಕೇಜ ಆಗಿದ್ದರಿಂದ ಆ ಸಮಯದಲ್ಲಿ ಎಮ್.ಎಸ್.ಕೆ.ಮಿಲ್ಜಿಲಾನಾಬಾದ ಬಡಾವಣೆಯ ಸಾರ್ವಜನಿಕರಿಗೆ ಗ್ಯಾಸ ಲಿಕೇಜ ದುರ್ವಾಸನೆಯಿಂದ ಓಣಿಯ ಜನರಿಗೆ ತೊಂದರೆ ಆಗಿದ್ದು ಇದಕ್ಕೆ ಸಂಬಂದಪಟ್ಟಂತೆ ಶ್ರೀ.ಎಸ್.ಕೆ ಕಾಂತಾ ರವರು ಇಂದು ದಿನಾಂಕ 26-12-2013 ರಂದು ಬೆಳಗ್ಗೆ 11 ಗಂಟೆಗೆ ಹಳೆಯ ಡಿ.ಸಿ.ಆಫೀಸ್ ಹತ್ತಿರ ಪ್ರೇಸ್ ಮೀಟ್ ಕರೆದಿದ್ದು ಇರುತ್ತದೆ. ಪ್ರೇಸ್ ಮೀಟ್ ಮುಗಿದ ನಂತರ ನಾನು ಮತ್ತು ಎಸ್.ಕೆ.ಕಾಂತಾ ಹಾಗೂ ನಮ್ಮ ಓಣಿಯ ಅಸ್ಲಂ ಕಲ್ಯಾಣಿ 3 ಜನರು ಕೂಡಿ ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಇರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಊಟ ಮಾಡಿಕೊಂಡು ಕಲ್ಯಾಣ ಮಂಟಪದ ಮುಂದುಗಡೆ ನಿಂತಿರುವಾಗ ಇದೆ ವೇಳೆಗೆ ಇಲಿಯಾಸ್ ಭಾಗವಾನ ಈತನು ತನ್ನ ಸಂಗಡ ತನ್ನ 2 ಜನ ಅಣ್ಣನ ಮಕ್ಕಳೊಂದಿಗೆ ಬಂದವನೇ ನಮಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬೋಸಡಿ ಮಕ್ಕಳ್ಯಾ ನೀವುಗಳು ನಮ್ಮ ವ್ಯಾಪಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪ್ರೇಸ್ ಮೀಟ ಮಾಡಿದ್ದಿರಿ ಅಂತಾ ಬೈಯುತ್ತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ನನಗೆ ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಕೈಯಿಂದ ಎಡಗಡೆ ಕಪಾಳದ ಮೇಲೆ ಮತ್ತು ಬಾಯಿ ಮೇಲೆ ಹೊಡೆದಿದ್ದು ಆಗ ಜಗಳ ಬಿಡಿಸಲು ಬಂದ ಎಸ್.ಕೆ.ಕಾಂತಾ ಮತ್ತು ಅಸ್ಲಂ ಕಲ್ಯಾಣಿ ಇವರಿಗೂ ಕೂಡಾ ಇಲಿಯಾಸ್ ಭಾಗವಾನ ಮತ್ತು ಅವನ ಅಣ್ಣನ ಮಕ್ಕಳು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ತಿಮ್ಮಯ್ಯಾ ತಂ ಭರಮಯ್ಯಾ ಇಂಗಳೇಶ್ವರ ಸಾ|| ಅಂಬಲಗಾ ತಾ|| ಆಳಂದ ಜಿ|| ಗುಲಬರ್ಗಾ ರವರು ದಿನಾಂಕ 26-12-2013 ರಂದು  6 ಎ,ಎಮ್,ಕ್ಕೆ ಅಂಬಲಗಾದಿಂದ  ತಾನು ಹಾಗೂ ತಮ್ಮೂರಿನವನಾದ ಗೌತಮರಾವ  ಇಬ್ಬರೂ ಕೂಡಿ ತನ್ನ ಸಂಬಂಧಿಕನಾದ ನೀಲಕಂಠ ತಂ, ಮಾಳಿಂಗರಾಯ ಸಾ||ಶಹಾ ಹುಸೇನಿ ಚಿಲ್ಲಾ ಗುಲಬರ್ಗಾ ಇತನ ಸ್ಪ್ಲೇಂಡರ್ ಪ್ಲಸ್ ಮೋಟಾರ ಸೈಕಲ್ ನಂ: ಕೆ.ಎ-32-ಇಡಿ-1638 ನೇದ್ದರ ಮೇಲೆ ತಮ್ಮೂರಿನಿಂದ ನಂದೂರು ಗ್ರಾಮಕ್ಕೆ ಕಟ್ಟಡ ಕಟ್ಟುವ ಕೆಲಸಕ್ಕೆ ಹೋಗುತ್ತಿರುವಾಗ  ಅರೋಪಿತನು  ತನ್ನ ವಶದಲ್ಲಿದ್ದ ಮೋಟಾರ ಸೈಕಲನ್ನು ಅತಿವೇಗ & ಅಲಕ್ಷತನದಿಂದ ಚಲಾಯಿಸುತ್ತಾ ಅಂಕಲಗಾ ಗ್ರಾಮದ ಹತ್ತಿರ ಒಮ್ಮಲೆ ಕಟ್ ಮಾಡಿ ಮೊಟಾರ ಸೈಕಲ್ ಅಪಘಾತ ಗೊಳಿಸಿದ್ದರಿಂದ ತನಗೆ ಬಲಕಿವಿ ಹತ್ತಿರ ಭಾರಿರಕ್ತಗಾಯಗಳಾಗಿ ಬಲಗಣ್ಣಿನ ಮೇಲೆ ಮತ್ತು ಬಲಭುಜಕ್ಕೆ ತರುಚಿದ ರಕ್ತಗಾಯಗಳಾಗಿರುತ್ತವೆ ಗೌತಮರಾವ ಇತನಿಗೆ ನೋಡಲಾಗಿ ಬಲಗಾಲು ಮೊಳಕಾಲು ಕೆಳಗೆ ಭಾರಿರಕ್ತಗಾಯವಾಗಿ ಕಾಲು ಮುರಿದಿರುತ್ತದೆ ಪಾದದ ಹತ್ತಿರ ಮೂಗಿನ ಕೆಳಗೆ ಮತ್ತು ಹಣೆಯ ಮೇಲೆ ಸಾಧಾ ತರಚಿದ ರಕ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.