POLICE BHAVAN KALABURAGI

POLICE BHAVAN KALABURAGI

07 March 2013

GULBARGA DISTRICT REPORTED CRIMES


ಅಪಘಾತ ಪ್ರಕರಣ ಒಂದು ಸಾವು:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಅನೀಲ ತಂದೆ ಅಂಬಾರಾಯ ಸರಡಗಿ ವಯಾ:20 ವರ್ಷ,ಉ:ವಿಧ್ಯಾರ್ಥಿ  ಸಾ:ಸುಂದರ ನಗರ ಗುಲಬರ್ಗಾರವರು ನಾನು ಮತ್ತು ಸಾಯಿಬಣ್ಣ ಕೂಡಿಕೊಂಡು ದಿನಾಂಕ:06-03-2013 ರಂದು ಸಾಯಂಕಾಲ 6=45 ಗಂಟೆ ಸುಮಾರಿಗೆ ಮೋಟಾರ ಸೈಕಲ್ ನಂ:ಕೆಎ-32 ವಾಯ್-1114 ನೇದ್ದರ ಮೇಲೆ ಹೊರಟಾಗ ಸಾಯಿಬಣ್ಣಾ ಇತನು ನನಗೆ ಮೋಟಾರ ಸೈಕಲ್ ಹಿಂದೆ ಕೂಡಿಸಿಕೊಂಡು ಸಾಯಿ ಮಂದಿರಕ್ಕೆ ಆರ್.ಪಿ.ಸರ್ಕಲ್ ದಿಂದ ರಾಮ ಮಂದಿರ ರೋಡ ಕಡೆಗೆ ಹೋಗುತ್ತಿದ್ದಾಗ ಸನ್ ಇಂಟರ ನ್ಯಾಶನಲ್ ಹೊಟೇಲ್ ಎದುರುಗಡೆ ಟಂಟಂ ವಾಹನಕ್ಕೆ ಓವರ ಟೇಕ ಮಾಡಲು ಹೋಗಿ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡ ಡಿವೈಡರಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ತಾನು ಭಾರಿಗಾಯ ಹೊಂದಿದ್ದನು. ನನಗೆ ಮತ್ತು ಸಾಯಿಬಣ್ಣನಿಗೆ  ಉಪಚಾರ ಕುರಿತು 108 ಅಂಬುಲೆನ್ಸ ವಾಹನದಲ್ಲಿ ಸರಕಾರಿ ಆಸ್ಪತ್ರೆಗೆ ಹೋಗುತ್ತಿದ್ದಾಗ ಆರ್.ಪಿ.ಸರ್ಕಲ್ ಹತ್ತಿರ ಸಾಯಂಕಾಲ 7=10 ಪಿ.ಎಮ್.ಕ್ಕೆ ಮಾರ್ಗ ಮಧ್ಯ ಸಾಯಿಬಣ್ಣಾ ಇತನು ಮೃತ ಪಟ್ಟಿರುತ್ತಾನೆ. ಅಂತಾ ಗಾಯಾಳು ಅನೀಲ ಇತನು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:14/2013 ಕಲಂ:279, 337, 304(ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:06-03-2013 ರಂದು ಮದ್ಯಾಹ್ನ 1-00 ಗಂಟೆಯ ಸಮಯಕ್ಕೆ ಅಶೋಕ ನಗರ ಬಡಾವಣೆಯಲ್ಲಿ ವಾರ್ಡ ನಂ.39 ರಲ್ಲಿ ಇದ್ದಾಗ ಕೆ.ಜೆ.ಪಿ ಅಭ್ಯರ್ಥಿ  ತನ್ನ ಬೆಂಬಲಿಗರೊಂದಿಗೆ ಅಟೊ ರೀಕ್ಷಾ ನಂ. ಕೆಎ-32 ಬಿ-3962 ನೇದ್ದರಲ್ಲಿ ತನ್ನ ಪಕ್ಷದ ಗುರುತಿನ ಟೆಂಗಿನಕಾಯಿಗಳು ಸುಮಾರು 80-90  ಗಳು ಅಟೊದಲ್ಲಿ ಇಟ್ಟುಕೊಂಡು ಮತದಾರರಿಗೆ ಹಂಚುತ್ತಿದ್ದರು. ನಮ್ಮನ್ನು ನೋಡಿ ತಪ್ಪಿಸಿಕೊಂಡಿದ್ದು ನಂತರ ಅಟೊ ಚಾಲಕ ಜಗದೀಶ ಮತ್ತು  ಚುನಾವಣೆಯ ಮತದಾರರಿಗೆ ವಿತರಣೆ ಮಾಡಲು ತಂದಿರುವ  ಟೆಂಗಗಳು ಅಕ್ರಮವಾಗಿ ಇಟ್ಟುಕೊಂಡಿದ್ದು ಇದು ಚುನಾವಣೆಯ ಅಕ್ರಮವಾಗಿದ್ದು ಅಲ್ಲದೇ ಪಕ್ಕದ ಅಭ್ಯರ್ಥಿ ಗುರುಶರಣ ನೊಂದಿಗೆ ಸುಮಾರು 15 ರಿಂದ  20 ಜನರು ಇದ್ದು ಸುಮಾರು 200 ಕರ ಪತ್ರಗಳು ಶ್ರೀ.ಸುರೇಶ ಜಾಧವ  ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು  ಹಾಗು ಚುನಾವಣೆ ನೀತಿ ಸಂಹಿತೆ ಅಧಿಕಾರಿ ರವರು ಜಪ್ತಿ ಪಡಿಸಿಕೊಂಡು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:34/2013 ಕಲಂ 171 (ಇ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ದಿನಾಂಕ:06-03-2013 ರಂದು ರಾತ್ರಿ 10-30 ಗಂಟೆಗೆ ಗುಲಬರ್ಗಾ ನಗರದ ಬ್ರಹ್ಮಪೂರ ಬಡಾವಣೆಯ ವಾರ್ಡ ನಂ:40 ರಲ್ಲಿ ಬರುವ ಭಗತಸಿಂಗ ಚೌಕನಲ್ಲಿ ಲಕ್ಷ್ಮಣ ತಂದೆ ಶ್ರೀಮಂತ ವಡ್ಡರ ಸಾ:ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾ ಇತನು 3300/- ರೂಪಾಯಿಗಳು ಮತದಾರರಿಗೆ ಹಂಚಿಕೆ ಮಾಡುತ್ತಿರುವಾಗ  ಶ್ರೀ ಡಿ ಸುರೇಶ ಜಾಧವ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಹಾಗು ಚುನಾವಣಾ ಸಂಹಿತೆ ಜಾರಿ ಅಧಿಕಾರಿಗಳು ಗುಲಬರ್ಗಾರವರು ಜಪ್ತಿ ಪಡಿಸಿಕೊಂಡು ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:23/2013 ಕಲಂ 171 (ಇ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.