POLICE BHAVAN KALABURAGI

POLICE BHAVAN KALABURAGI

30 January 2015

Kalburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 29-01-15 ರಂದು ಬೆಳಿಗ್ಗೆ ಶ್ರೀ ವೇದಮೂರ್ತಿ ತಂದೆ ಶರಣಯ್ಯ ಮಠ  ಸಾ: ನಾಗನಹಳ್ಳಿ ತಾ:ಜಿ: ಕಲಬುರಗಿ ಇವರ ಹೆಂಡತಿ ಪಾರ್ವತಿ ಇವಳು ತನ್ನ ಅಕ್ಕನ ಮನೆಯಾದ ಜಂಬಗಾ (ಬಿ) ಗ್ರಾಮದಲ್ಲಿ  ಕಾರ್ಯಕ್ರಮ ಇದ್ದ ಪ್ರಯುಕ್ತ ತನ್ನ ಮಗನೊಂದಿಗೆ ಬಜಾಜ ಪಲ್ಸರ ಕೆಎ 32 ಯು 8291 ನೇದ್ದರ ಹಿಂದೆ ಕುಳಿತುಕೊಂಡು ಜಂಬಗಾ (ಬಿ) ಗ್ರಾಮಕ್ಕೆ ಹೋಗಿ ಮರಳಿ, ಅದೇ ಮೋಟಾರ ಸೈಕಲ ಹೊರಟಿದ್ದು, ಮಧ್ಯಾಹ್ನ 4-30 ಗಂಟೆ ಸುಮಾರಿಗೆ ಮಾಹಾದೇವ ಇತನು ತನ್ನ ವಶದಲ್ಲಿದ್ದ ಬಜಾಜ ಪಲ್ಸರಮೋಟಾರ ಸೈಕಲ ಕೆಎ 32 ಯು 8291 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಮದ ಚಲಾಯಿಸಿ, ಹಿಂದೆ ಕುಳಿತ ತನ್ನ ಹೆಂಡತಿ ಪಾರ್ವತಿಯನ್ನು ಲೆಕ್ಕಿಸದೇ ಮತ್ತು ಯಾವುದೇ ರೀತಿಯಿಂದ ನೋಡದೇ ತನ್ನ ಮೋಟಾರ ಸೈಕಲ ಚಲಾಯಿಸಿದ್ದರಿಂದ ಹಿಂದೆ ಕುಳಿತ ತನ್ನ ಹೆಂಡತಿ ಸೀರೆ ಸೆರಗವು ಮೊಟಾರ ಸೈಕಲದ ಹಿಂದಿನ ಚಕ್ರದಲ್ಲಿ ಸಿಲುಕಿ ಮೋಟಾರ ಸೈಕಲದೊಂದಿಗೆ ರೋಡಿನ ಮೇಲೆ ಬಿದ್ದು ತಲೆ ಹಾಗೂ ಇತರೇ ಭಾಗದಲ್ಲಿ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ ಮತ್ತು ಮಗ ಮಾಹಾದೇವನಿಗೂ ಸಹಾ ಗಾಯಾಗಳು ಆಗಿರುತ್ತೇವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ:- 12/12/2014 ರಂದು ಜೇವರ್ಗಿ(ಕೆ) ಸಿಮೆಯಲ್ಲಿರುವ ಫಿರ್ಯಾದಿ ಹೊಲ ಸರ್ವೆ ನಂ- 63/1, 63/2 ನೇದ್ದರಲ್ಲಿ ಬಾಬುರಾವ ತಂದೆ ಸಿದ್ರಾಮಪ್ಪ ಚಿಂಚೋಳಿ, ಪ್ರಕಾಶ ತಂದೆ ಶಾಮರಾವ ಚಿಂಚೋಳಿ ಮತ್ತು ಬಸವರಾಜ ತಂದೆ ಶಾಮರಾವ ಚಿಂಚೋಳಿ ಸಾ : ಎಲ್ಲರು ಜೇವರ್ಗಿ (ಕೆ)   ರವರು  ಅತಿಕ್ರಮ ಪ್ರವೇಶ ಮಾಡಿ ಹೊಲದಲ್ಲಿ ಬೆಳೆದ ಸೂರ್ಯಪಾನ ಬೆಳೆಯನ್ನು ಅಂದಾಜು 10 ಚೀಲದಷ್ಟು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ  ಶ್ರೀ ಶಾಮರಾವ ತಂದೆ ಸಿದ್ರಾಮಪ್ಪಾ ಚಿಒಂಚೋಳಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾದನಹಿಪ್ಪರಗಾ ಠಾಣೆ : ಶ್ರೀ ಬಸವರಾಜ ತಂದೆ ಲಕ್ಷ್ಮಣ ಮದಗುಣಕಿ ಸಾ; ಝಳಕಿ (ಕೆ) ರವರು ದಿನಾಂಕ 28/01/2015 ರಂದು ರಾತ್ರಿ ನಾನು ಮತ್ತು ನನ್ನ ಚಿಕ್ಕಪ್ಪ ಶ್ರೀಶೈಲ ತಂದೆ ಗುರುಶಾಂತಪ್ಪಾ ಮದಗುಣಕಿ ನಮ್ಮ ಹೊಲದಲ್ಲಿನ ಕಡಲೆಯನ್ನು ಕಿತ್ತಿ ಲಕ್ಷ್ಮಿದೇವರ ಪಟ್ಟಿಯಲ್ಲಿ ತಂದು ಬಡೆಯುತ್ತಾ ಇದ್ದಾಗ ನನ್ನ ದೊಡ್ಡಪ್ಪನ ಮಗನಾದ 1) ಭೊಗೇಶ ತಂದೆ ಶಿವಶರಣಪ್ಪ ಮದಗುಣಕಿ 2) ಶಿವಶರಣಪ್ಪ ತಂದೆ ಗುರುಶಾಂತಪ್ಪ ಮದಗುಣಕಿ 3) ಮಹಾದೇವಿ ಗಂಡ ಶಿವಶರಣಪ್ಪ ಮದಗುಣಕಿ 4) ಈರಣ್ಣಾ ತಂದೆ ಶಿವಶರಣಪ್ಪ ಮದಗುಣಕಿ ಇವರೆಲ್ಲರೂ ಬಂದು ನನಗೆ ಮುಂದಕ್ಕೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ನನಗೆ ಮತ್ತು ಬಿಡಿಸಲು ಬಂದ ನನ್ನ ಚಿಕ್ಕಪ್ಪ ಶ್ರೀಶೈಲ ಇವರಿಗೆ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿ ನಮ್ಮ ಹೊಲದಲ್ಲಿನ ನೀರಿನ ವಿಷಯದಲ್ಲಿ ವಿನ: ಕಾರಣ ತೊಂದರೆ ಕೊಡುತ್ತಿದ್ದಾರೆ ಇವರಿಗೆ ಖಲಾಸ ಮಾಡಬೇಕು ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಕ್ಕಳಿಗೆ ಚುಡಾಯಿಸಿದ ಪ್ರಕರಣ :
ಜೇವರ್ಗಿ ಠಾಣೆ : ಕುಮಾರಿ ವಿಜಯಲಕ್ಷ್ಮಿ ತಂದೆ ಸೋಮಣ್ಣ ಕುಳಗೇರಿ ಸಾ: ಬಿರಾಳ ಬಿ ಗ್ರಾಮ ತಾ : ಜೇವರ್ಗಿ ಇವರು ಈಗ 3-4 ತಿಂಗಳಿಂದ ನಮ್ಮೂರ 1) ಸಿದ್ರಾಮ ತಂದೆ ಹಣಮಂತ ಜೀರ  2) ಮಹೇಶ ತಂದೆ ಭೀಮಣ್ಣ ಗಯನವರ್ 3) ಭಾಗಪ್ಪ ತಂದೆ ಸಿದ್ದಪ್ಪ ಹೊನ್ನಾಳ  4) ಮಾನಪ್ಪ ತಂದೆ ತಿಪ್ಪಣ್ಣ ಮಾಚಾ ಸಾ|| ಎಲ್ಲರು ಬಿರಾಳ ಬಿ ಗ್ರಾಮ ಇವರೇಲ್ಲರು ಕೂಡಿಕೊಂಡು ಪ್ರತಿ ದೀನ ನನಗೆ ಮತ್ತು ನನ್ನ ಗೆಳತಿ ಮರೆಮ್ಮ ಶಹಾಪುರ ಇಬ್ಬರು ಕುಡಿಕೊಂಡು ಪ್ರತಿ ದಿನ ಶಾಲೆಗೆ ಮತ್ತು ಬಟ್ಟೆ ತೊಳೆಯಲು ಮತ್ತು ಇನ್ನಿತರೆ ಕಡೆಗೆ ಹೋಗಿ ಬರುವಾಗ ಆರೋಪಿತರೆಲ್ಲರು ಕೂಡಿಕೊಂಡು ಚುಡಾಯಿಸುವದು, ಅಶ್ಲೀಲ ಶಬ್ದಗಳಿಂದ ಕರೆಯುವದು, ಮತ್ತು ಒಬ್ಬರಿಗೊಬ್ಬರು ತಮ್ಮ ಮೇಲೆ ಬೈದಂತೆ ನಮಗೆ ಕರೆಯುವದು ಮಾಡುತ್ತಿದ್ದು ಅಲ್ಲದೆ ಇನ್ನಿತರೆ ರೀತಿಯಿಂದ ಚುಡಾಯಿಸುವದು ಮಾಡುತ್ತ ಬಂದಿದ್ದಲ್ಲದೆ ದಿನಾಂಕ 26.01.2015 ರಂದು ಮಧ್ಯಾಹ್ನ 01:30 ಗಂಟೆಯ ಸುಮಾರಿಗೆ ನನಗೆ ಮತ್ತು ನನ್ನ ಗೆಳತಿ ಮರೆಮ್ಮ ಹಾಗು ವೈನಿ ರೇಣುಕಾ ಎಲ್ಲರು ಕೂಡಿಕೊಂಡು ಊರ ಹೋರಗೆ ಇರುವ ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದಾಗ ಆರೋಪಿತರೆಲ್ಲರು ಕೂಡಿಕೊಂಡು ನಮ್ಮಲ್ಲಿಗೆ ಬಂದು ನನಗೆ ಮತ್ತು ನನ್ನ ಗೇಳತಿಗೆ ಫೀಗರು ಐಶ್ವರ್ಯ ಅಮೂಲ್ಯಅಂತ ಚುರಾಯಿಸಿದ್ದು ಮತ್ತು ನಮಗೆ ನಮ್ಮ ಜೋಡಿ ಬರ್ತಿರಾ ಅಂತ ಚುಡಾಯಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :

ಕಮಲಾಪೂರ ಠಾಣೆ : ಶ್ರೀಮತಿ ಮನೀಷಾ ಗಂಡ ದಿನೇಶ ಪವಾರ ಸಾ: ಮರಮಂಚಿ ತಾಂಡಾ  ತಾ:ಜಿ: ಕಲಬುರಗಿ ಇವರನ್ನು ಸುಮಾರು  5 ವರ್ಷಗಳ ಹಿಂದೆ ನನಗೆ  ನಮ್ಮ  ತಂದೆ-ತಾಯಿಗಳು  ಗುರು ಹಿರಿಯರ ಸಮಕ್ಷಮದಲ್ಲಿ ಮರಮಂಚಿ  ತಾಂಡಾದಲ್ಲಿ  ಶ್ರೀ. ದಿನೇಶ  ತಂದೆ ಗೋಪಾಲ  ಪವಾರ  ಸಾ: ಮರಮಂಚಿ  ತಾಂಡಾ  ಇವರೊಂದಿಗೆ ಮದುವೆ ಮಾಡಿಕೊಟ್ಟಿದ್ದು,  ಮದುವೆ ಸಮಯದಲ್ಲಿ ನನ್ನ  ಗಂಡನಿಗೆ ನನ್ನ  ತಂದೆ  ತಾಯಿಗಳು  ಗುರು ಹಿರಿಯರ ಸಮಕ್ಷಮದಲ್ಲಿ ನಾಲ್ಕುವರೆ ತೋಲೆ ಬಂಗಾರ  ಮತ್ತು  51000/-  ರೂಪಾಯಿ  ನಗದು ಹಣವನ್ನು  ವರದಕ್ಷಿಣೆ  ರೂಪದಲ್ಲಿ  ಕೊಟ್ಟಿರುತ್ತಾರೆ. ಮದುವೆಯಾಗಿ  ಸ್ವಲ್ಪ ದಿವಸಗಳ ಕಾಲ  ಚೆನ್ನಾಗಿ ನೋಡಿಕೊಂಡಿದ್ದು ನಂತರ ತವರು ಮನೆಯಿಂದ  ಇನ್ನಷ್ಟು ವರದಕ್ಷಿಣೆ  ಹಣ  ತರುವಂತೆ  ನನ್ನ ಗಂಡ ದಿನೇಶ  , ಅತ್ತೆ ಸೋನಾಬಾಯಿ ನಾದಿನಿ, ಇನ್ನು ಹಾಗೂ ರಮಾಬಾಯಿ  ಭಾವಂದಿರುರಾದ  ಹಣಮಂತ  ಮತ್ತು ಶ್ರೀಮಂತ [ ಆರೋಪಿತರು ] ಮಾನಸಿಕವಾಗಿ ಮತ್ತು  ದೈಹಿಕವಾಗಿ  ಕಿರುಕುಳ ಕೊಡುತ್ತಿದ್ದರು  ನಾನು  ಸಹಿಸಿಕೊಂಢು ಬಂದಿದ್ದು, ಮುಂಬೈದಲ್ಲಿ  ನನ್ನ  ಗಂಡ  ಮನೆ  ಕಟ್ಟುವಾಗ ನನಗೆ  ಒತ್ತಾಯ ಮಾಡಿಸಿ ನನ್ನ  ತಂದೆಯಿಂದ ಮತ್ತೆ   60, 000/- ರೂಫಾಯಿ ತರಿಸಿಕೊಟ್ಟಿರುತ್ತೇವೆ. ಅಲ್ಲದೇ  ನನಗೆ  ಐದು  ವರ್ಷಗಳಿಂದ  ಮಕ್ಕಳಾಗದೇ  ಇರುವುದರಿಂದ ನನ್ನ ಅತ್ತೆ  ನನ್ನ  ಗಂಡನಿಗೆ  ಬೇರೆ  ಮದುವೆ ಮಾಡಲು ಯತ್ನಿಸುತ್ತಿದ್ದು, ನೀನು ನಮ್ಮ  ಮನೆಯಲ್ಲಿ  ಇರಬೇಕಾದರೆ ನಿನ್ನ  ತವರು ಮನೆಯಿಂದ ಇನ್ನೂ 2 ಲಕ್ಷ ಹಣ  ತಂದು  ಕೊಡು ಇಲ್ಲದಿದ್ದರೆ ನಮ್ಮ  ಮನೆ ಬಿಟ್ಟು  ಹೋಗು  ಅಂತಾ ದೈಹಿಕ  ಮತ್ತು  ಮಾನಸಿಕ ಕಿರುಕುಳ  ನೀಡುತ್ತಿದ್ದಾರೆ. ದಿನಾಂಕ: 12/01/2015 ರಂದು  ರಾತ್ರಿ  01-30  ಗಂಟೆಯ  ಸುಮಾರಿಗೆ  ನಾನು ಮರಮಂಚಿಯ   ನನ್ನ ಗಂಡನ  ಮನೆಯಲ್ಲಿದ್ದಾಗ  ನನ್ನ ಗಂಡ ದಿನೇಶ  ಈತನು  ಕುಡಿದು ಬಂದು ನನಗೆ  ಉಸಿರುಗಟ್ಟಿಸಿ ಕೊಲೆ ಮಾಡಲು  ಪ್ರಯತ್ನ ಪಟ್ಟಿದ್ದು,ಆಗ  ನಾನು  ಆತನಿಂದ  ಬಿಡಿಸಿಕೊಂಡಿರುತ್ತೇನೆ. ವಿಷಯವನ್ನು ನಾನು ನನ್ನ ತಂದೆ-ತಾಯಿಗೆ  ಫೋನಿನಲ್ಲಿ  ತಿಳಿಸಿರುತ್ತೇನೆ. ನಂತರ  ದಿನಾಂಕ: 20-01-2015 ರಂದು ಮತ್ತೆ  ನನ್ನ  ಗಂಡ , ಅತ್ತೆ ಕೂಡಿಕೊಂಢು ನನಗೆ  ತವರು  ಮನೆಗೆ  ಹೋಗು ಅಂತಾ  ಹೇಳಿ   ನನಗೆ ಮನೆಯಿಂದ ಹೊರಗೆ  ಹಾಕಿರುತ್ತಾರೆ. ನನಗೆ  ಮೇಲೆ  ತಿಳಿಸಿದ ಜನರು  ದಿನಾಲು  ಮಕ್ಕಳಾಗಿಲ್ಲವೆಂದು  ಹಿಯಾಳಿಸುತ್ತಾ  ತವರು ಮನೆಯಿಂದ  ಇನ್ನಷ್ಟು  ಹಣ  ತೆಗೆದುಕೊಂಡು  ಬಾ  ಅಂತಾ  ಹೇಳಿ ನನಗೆ ದೈಹಿಕವಾಗಿ  ಮತ್ತು  ಮಾನಸಿಕವಾಗಿ  ಕಿರುಕುಳ  ನೀಡುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.