POLICE BHAVAN KALABURAGI

POLICE BHAVAN KALABURAGI

24 July 2014

Gulbarga District Reported Crimes

ಅಪಘಾತ ಪ್ರಕರಣ :
ಮುಧೋಳ ಠಾಣೆ : ಶ್ರೀ ಶಿವಯೋಗಿ ತಂದೆ ಹಿರಗಪ್ಪಾ ಕಲಬುರ್ಗಿ ಸಾ: ವಚ್ಚಾ ಇವರು ಟ್ರ್ಯಾಕ್ಟರ ನಂ.ಕೆಎ-32 ಟಿಎ 7043 ನೇದ್ದನ್ನು 7 ತಿಂಗಳ ಹಿಂದೆ ಖರೀದಿಸಿದ್ದು ನಮ್ಮ ತಂದೆ ಹೆಸರಿನಲ್ಲಿದ್ದು ಟ್ರ್ಯಾಲಿಗೆ ನಂ.ಹಾಕಿಸಿರುವುದಿಲ್ಲಾ. ನಮ್ಮ ಟ್ರ್ಯಾಕ್ಟರ ಮೇಲೆ ವಿಜಯ ಕುಮಾರ ಆದರ್ಶ ಕಾಲೋನಿ ಗುಲಬರ್ಗಾ ಇತನಿಗೆ ಚಾಲಕ ಅಂತ ಇಟ್ಟುಕೊಂಡಿದ್ದು ಇಂದು ದಿನಾಂಕ: 24-07-14 ರಂದು 6 ಎಎಂದ ಸುಮಾರಿಗೆ ನಮ್ಮ ತಂದೆ ಹೋಲದಲ್ಲಿ ಎತ್ತಿನ ಕೊಟ್ಟಿಗೆ ಕಟ್ಟಿಸುತ್ತಿದ್ದು ಅದಕ್ಕೆ ಒಂದು ಟ್ರೀಪ ಭಾಗೋಡಿ ಹಳ್ಳದಿಂದ ಸಾದಾ ಮರಳು ತೆಗೆದುಕೊಂಡು ಬರಲು ಚಾಲಕನಿಗೆ ಹೇಳಿ ಕೊಟ್ಟು ಕಳುಹಿಸಿದ್ದು ನಂತರ 10 ಎಎಂದ ಸುಮಾರಿಗೆ ನಾನು ಮನೆಯಲ್ಲಿದ್ದಾಗ ನಮ್ಮ ಸಂಬಂಧಿ ಯಲ್ಲಾಲಿಂಗ ತಂದೆ ಬೀರಪ್ಪಾ ಸಾ:ಮುಗಟಾ ಇತನೂ ನನಗೆ ಫೋನ ಮಾಡಿ ತಿಳಿಸಿದೆನೆಂದರೆ ನಿಮ್ಮ ತಮ್ಮ ಶರಣಪ್ಪ ನಾನು ಗುಂಡಗುರ್ತಿ ಸಮೀಪ ರಾಧಾ ಕೃಷ್ಣ ದೊಡ್ಡಮನಿ ರವರ ಹೋಲದ ಹತ್ತಿರ ಇರುವ ರೋಡಿನ ಎಡ ಬದಿಯಿಂದ ಬರುತ್ತಿರುವಾಗ ಎದುರಿನಿಂದ 2-3 ಟ್ರ್ಯಾಕ್ಟರಗಳು ಮರಳು ತುಂಬಿಕೊಂಡು ಬರುತ್ತಿದ್ದು ಅದರ ಹಿಂದೆ ತಹಶೀಲ್ದಾರ ಚಿತ್ತಾಪೂರ ರವರ ಜೀಪ ಇದ್ದು ಅವುಗಳಲ್ಲಿ ನಿಮ್ಮ ಟ್ರ್ಯಾಕ್ಟರ ಸಹ ಇದ್ದು ಟ್ರ್ತಾಕ್ಟರ ಚಾಲಕ ನಿಮ್ಮ ತಮ್ಮನಿಗೆ ನೋಡಿ ಟ್ರ್ಯಾಕ್ಟರನ್ನು ವೇಗವಾಗಿ ಗಾಭರಿಯಿಂದ ನಮ್ಮ ಹತ್ತಿರ ತಂದೆ ಬ್ರೇಕ ಮಾಡಿದ್ದಾಗ ಟ್ರ್ಯಾಕ್ಟರ ಆಯ ತಪ್ಪಿ ರೋಡಿನ ಎಡ ಬದಿಗೆ ಪಲ್ಟಿಯಾಗಿ ನಿಮ್ಮ ತಮ್ಮನ ಮೇಲೆ ಟ್ರ್ಯಾಲಿ ಮರಳು ಸಮೇತ ಬಿದ್ದು ಟ್ರ್ಯಾಲಿಯಲ್ಲಿ ನಿಮ್ಮ ತಮ್ಮ ಸಿಕ್ಕು ಮೃತಪಟ್ಟಿರುತ್ತಾನೆ ಅಂತ ತಿಳಿಸಿರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ರಾಮಶೆಟ್ಟಿ ತಂದೆ ಶಿವರುದ್ರಪ್ಪಾ ಮಾನಕರ ಸಾಃ ಪ್ಲಾಟ ನಂ. 2-907/49/225, ವಿರೇಂದ್ರ ಪಾಟೀಲ ಬಡಾವಣೆ ಜಿ.ಡಿ.ಎ ಕಾಲೋನಿ ಸೇಡಂ ರೋಡ್ ಗುಲಬರ್ಗಾ ಇವರು ದಿನಾಂಕ 04/03/2014 ರಂದು ರಾತ್ರಿ 08:00 ಪಿ.ಎಂ. ಕ್ಕೆ ಫಿರ್ಯಾದಿಯು ವಿರೇಂದ್ರ ಪಾಟೀಲ ಬಡಾವಣೆ ಜಿ.ಡಿ.ಎ ಕಾಲೋನಿಯಲ್ಲಿರುವ ಪ್ಲಾಟ ನಂ. 2-907/49/225, ನೇದ್ದಕ್ಕೆ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕಃ 05/03/2014 ರ 06:30 ಎ.ಎಂ. ರಂದು ಬಂದು ನೋಡಲು ಮನೆಯ ಬಾಗಿಲಿನ ಕೊಂಡಿ ಮುರಿದು ಮನೆಯಲ್ಲಿದ್ದ 1) ಒಂದು HAIER ಕಂಪನೀಯ ಎಲ್.ಇ.ಡಿ 32 ಟೀವಿ ಅಃಕಿಃ 23,500/- ಹಾಗು 2) ಒಂದು ತೊಲೆಯ ಬಂಗಾರದ ಬ್ರಾಸಲೆಟ್ ಅಃಕಿಃ 28,000/- ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Gulbarga District Reported Crimes

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಗುರುನಾಥ ತಂದೆ ಶ್ರೀಮಂತ ಸಾ: ಕೆ.ಹೆಚ್.ಬಿ.ಕಾಲೋನಿ  ಹಳೆ ಜೇವರ್ಗಿ ರೋಡ ಗುಲಬರ್ಗಾ ರವರು ದಿನಾಂಕ: 23-07-2014  ರಂದು ರಾತ್ರಿ 09-30 ಗಂಟೆಗೆ ತನ್ನ ಮೋ/ಸೈಕಲ್ ನಂ: ಕೆಎ 32 ಇಇ 1324 ನೆದ್ದರ ಮೇಲೆ ಹಳೆ ಜೇವರ್ಗಿ ರೋಡ ,ಆನಂದ ಆಸ್ಪತ್ರೆ ದಾಟಿ ,ಹೌಸಿಂಗ ಬೋರ್ಡ ಕಾಲೋನಿ ಕ್ರಾಸ್ ಸಮೀಪ ರೋಡ ಮೇಲೆ ಹೋಗುತ್ತಿದ್ದಾಗ ಯಾವುದೊ ಲಾರಿ ಅಥವಾ ಟಿಪ್ಪರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋ/ಸೈಕಲ್ ಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿ ಗಾಯಗೊಳಿಸಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವಜಾತ ಮರಣ ಹೊಂದಿದ ಹೆಣ್ಣು ಶಿಶುವನ್ನು ಒಗೆದು ಹೋದ ಪ್ರಕರಣ :
ಮಹಿಳಾ ಠಾಣೆ : ಶ್ರೀ ಚೇತನ ತಂದೆ ಗುರುನಾಥ ಮರತೂರಕರ ವಿರೇಶ ನಗರ ಗುಲಬರ್ಗಾ ಇವರು  ದಿನಾಂಕ: 23.07.2014 ರಂದು 10.00 ಎ.ಎಮ್ ಕ್ಕೆ  ನಾನು ವಿರೇಶ ನಗರದ ಬಯಲು ಜಾಗೆಯ ಕಡೆಗೆ ಹೋದಾಗ  ನಾಲಿಯ ಹತ್ತಿರ  ಬಹಳ ಜನ ನೆರೆದಿದ್ದು ನಾನು ಕೂಡ ಅಲ್ಲಿಗೆ  ಹೋಗಿ ನೋಡಲಾಗಿ  ಯಾವುದೇ ನವಜಾತ  ಹೆಣ್ಣು ಮಗು (ಮೃತ) ಬಿದ್ದಿದ್ದು ಯಾರೋ ಹೆಣ್ಣು ಮಗಳು ಆ ಮಗುವಿನ ಜನನವನ್ನು ಮರೆ ಮಾಚುವ ಸಲುವಾಗಿ ಮಗುವನ್ನು ನಾಲಿಯಲ್ಲಿ ಬಿಸಾಕಿ ಹೋಗಿದ್ದು ಇರುತ್ತದೆ. ಕಾರಣ ಸದರಿ ಮಗುವಿನ ಜನನವನ್ನು ಮರೆಮಾಚುವ ಗೋಸ್ಕರ ಬಿಸಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.