POLICE BHAVAN KALABURAGI

POLICE BHAVAN KALABURAGI

11 March 2014

Gulbarga District Reported Crimes

ವೈದ್ಯರ ನಿಸ್ಕಾಳಜಿತನದಿಂದ ಮಹಿಳೆ ಸಾವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ.ಸುಭಾಶ ತಂದೆ ಹಣಮಂತ ಹರಿಜನ ಸಾ|| ಕುಮ್ಮನ ಶಿರಸಗಿ ತಾ|| ಜೇವರ್ಗಿ ಜಿ||  ಗುಲಬರ್ಗಾ. ಇವರು ,ದಿನಾಂಕ 07-03-2014 ರಂದು ಸಾಯಂಕಾಲ 6:00 ಗಂಟೆಗೆ ನನ್ನ ಹೆಂಡತಿಯಾದ ಕವಿತಾ ಇವಳ ಸಿಜೆರೀನ ಹೇರಿಗೆಯನ್ನು ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಆಗಿದ್ದು ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಹೇಚ್ಚಿನ ಉಪಚಾರಕ್ಕಾಗಿ ಸಂತ್ರಾಸವಾಡಿಯಲ್ಲಿರುವ ಮೇಡಿಕೆರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ನನ್ನ ಹೆಂಡತಿಗೆ ಉಸಿರಾಟದ ತೊಂದರೆ ಇರುವದರಿಂದ ಐ.ಸಿ.ಯು ನಲ್ಲಿ ದಾಖಲಿಸಿ ಅಲ್ಲಿಯ ವೈದ್ಯರಾದ ಡಾ|| ಬಸವ ಪ್ರಭು ರವರು ಚಿಕಿತ್ಸೆ ಆರಂಭಿಸಿದ್ದು ದಿನಾಂಕ:09-03-2014 ರಂದು  ವೈದ್ಯರು ನನ್ನ ಹೆಂಡತಿಯನ್ನು ನೋಡಲಾಗಿ ಆರಾಮ ಆಗಿದೆ ನಾಳೆ ನಾರ್ಮಲ ವಾರ್ಡಿಗೆ ಸೇರಿಕೆ ಮಾಡುತ್ತೇವೆ ಅಂತಾ ಹೇಳಿದರು. ಇಂದು ದಿನಾಂಕ 10-03-20147 ರಂದು ನನ್ನ ಹೆಂಡತಿ ಕವಿತಾ ಇವಳು ನಾಷ್ಟಾ ಮಾಡಿ ಎಲ್ಲರ ಜೋತೆ ಚನ್ನಾಗಿ ಮಾತಾಡಿರುತ್ತಾಳೆ ರಕ್ತ ಪರಿಕ್ಷೆಗಾಗಿ ನನ್ನ ಹೆಂಡತಿ ಎರಡು ಕೈಗಳಿಗೆ 4-5 ಕಡೆ ಚುಚ್ಚಿ ತ್ರಾಸ ಮಾಡಿದನ್ನು ನಾನು ನೋಡಿ ನರ್ಸಗೆ ಪೆಸಂಟಿಗೆ ಈ ರೀತಿ ತ್ರಾಸ ಮಾಡುವದು ತಪ್ಪು ಅಂತಾ ಹೇಳಿದಾಗ ಆ ನರ್ಸ ನನಗೆ ಏನಪ್ಪಾ ಈ ರಂಡಿ ನಮಗೆ ಬೈತಾಳೆ ಇದ್ದರಷ್ಟು ಸತ್ತರೆಷ್ಟು ಅಂತಾ ಅಂದು ಸಹಾಯಕರಿಂದ ಆಗ ಹಚ್ಚಿದ ಮಸೀನ ಬಂದ ಮಾಡಿದಾಗ ಒಮ್ಮಲೆ ಉಸಿರಾಟ ನಿಂತಾಗೆ ಕೈ ಕಾಲು ಅಲುಗಾಡಿಸದೆ ಕಣ್ಣು ಪಳಿಕಸದೇ ಪ್ರಜ್ಞೆ ತಪ್ಪಿದಳು ನಂತರ ಸ್ವಲ್ಪ ಪ್ರಜ್ಞೆ ಬಂದಾಗ ಹಾಲು ಬಿಸ್ಕಿಟ ತಿನ್ನಿಸಲಾಯಿತು ನನ್ನ ಹೆಂಡತಿ ಯುರೀನ ಪಾಸಾಗಲು ಹಚ್ಚಿದ ಚೀಲದ ಪೈಪಿನಿಂದ ಸೀರಂಜ ಹಾಕಿ ಜೋಗಿದ್ದಾಗ ಪೈಪಿನಿಂದ ರಕ್ತ ಬರುವದನ್ನು ಕಂಡು ನಾನು ನರ್ಸಗೆ ಏನ್ರಿ ಮೇಡಮ ರಕ್ತ ಬರ್ತಾಯಿದೆ ಅಂದಾಗ ನನ್ನ ಹೆಂಡತಿ ನೋವು ತಾಳಲಾರದೆ ಚಿರಾಟ ಪ್ರಾರಂಭಿಸಿದಳು ಆಗ ನನ್ನ ನರ್ಸಗಳು ನನ್ನ ಹೋರಗೆ ಹಾಕಿದರು ಆಗ ನನ್ನ ಹೆಂಡತಿಗೆ ಏನು ಟ್ರೇಟಮೇಂಟ ಮಾಡಿದರು ನನಗೆ ತಿಳಿಯಲ್ಲಿಲ್ಲಾ. ಮೇಡಿಕಲನಿಂದ 1000/- ರೂಪಾಯಿ ಔಷಧ ತರಿಸಿಕೊಂಡಿರುತ್ತಾರೆ. ಸುಮಾರು 4:30 ಪಿ.ಎಮ್.ಸುಮಾರಿಗೆ ನನ್ನ ಹೆಂಡತಿ ಮೃತಪಟ್ಟಿರುತ್ತಾಳೆ.ಅಂತಾ ತಿಳಿಸಿದ್ದು ವೈದ್ಯರ ನಿರ್ಲಕ್ಷತನದಿಂದ ನನ್ನ ಹೆಂಡತಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಗ್ರಾಮೀಣ ಠಾಣೆ : ದಿನಾಂಕ 10/03/2014 ರಂದು ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯ ಪೈಕಿ ಸಾವಳಗಿ.ಬಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಗುಲಬರ್ಗಾ ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ ರಾತ್ರಿ 08.00 ಗಂಟೆ ಸುಮಾರಿಗೆ ಶ್ರಿ. ಯು.ಶರಣಪ್ಪ ಪೊಲೀಸ ಇನ್ಸಪೆಕ್ಟರ ಡಿಸಿಐಬಿ ಘಟಕ ಗುಲಬರ್ಗಾ ರವರ ಸೂಕ್ತ ಮಾರ್ಗದರ್ಶನದಲ್ಲಿ ಶ್ರೀ ದತ್ತಾತ್ರೇಯ ಎ.ಎಸ್.ಐ ಶ್ರೀ ಬಸವರಾಜ ಎ.ಎಸ್.ಐ. ಹಾಗೂ ಸಿಬ್ಬಂದಿಯವರ ತಂಡ ಸದರ ಸಾವಳಗಿ. ಬಿ. ಗ್ರಾಮಕ್ಕೆ ಭೇಟಿ ಕೊಟ್ಟು ಶ್ರೀ.ಶಿವಲಿಂಗಶ್ವೇರ ಮಠದ ಮುಂಭಾಗದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಶರಣಪ್ಪ ತಂದೆ ಹಣಮಂತ ಧನ್ನೂರು. ಸಾ-ಸಾವಳಗಿ.ಬಿ.ಇತನಿಗೆ  ಮುತ್ತಿಗೆ ಹಾಕಿ  ಹಿಡಿದು ಸದರಿಯವನ ಕಡೆಯಿಂದ ಮಕಾ ಜೂಜಾಟಕ್ಕೆ ತೊಡಗಿಸಿದ  ಒಂದು ಮಟಕಾ ನಂ ಬರೆದ ಚೀಟಿ, ಒಂದು ಬಾಲ ಪೆನ್ನು, ಹಾಗೂ ನಗದು ಹಣ 2,040/- ಜಪ್ತು ಮಾಡಿಕೊಂಡಿದ್ದು ಅದೆ. ಈ ಮಟಕಾ ಜೂಜಾಟಕ್ಕೆ ಪ್ರೋತ್ಸಾಹ ನೀಡುತ್ತಿದ್ದ ದಶರಥ ಜಮದಾರ ಕೊಗನೂರು ಇತನು ಪರಾರಿ ಇರುತ್ತಾನೆ. ಈ ಬಗ್ಗೆ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 08/03/2014 ರಂದು ಗುಲಬರ್ಗಾ  ಗ್ರಾಮೀಣ ಪೊಲೀಸ ಠಾಣೆ ವ್ಯಾಪ್ತಿಯ ಪೈಕಿ ಹಮಲ್ವಾಡಿ ಬಡಾವನೆಯ ರಸ್ತೆ ಪಕ್ಕದಲ್ಲಿ ಮಟಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಗುಲಬರ್ಗಾ  ಡಿಸಿಐಬಿ ಘಟಕದ ಸಿಬ್ಬಂದಿಯವರು ಮಾಹಿತಿ ಸಂಗ್ರಹಣೆ ಮಾಡಿ,ಅಂದೆ ದಿನಾಕ 08/03/14 ರಂದು  ಮುಂಜಾನೆ 11.15 ಗಂಟೆ ಸುಮಾರಿಗೆ ಶ್ರಿ. ಯು.ಶರಣಪ್ಪ ಪೊಲೀಸ ಇನ್ಸಪೆಕ್ಟರ ಡಿಸಿಐಬಿ ಘಟಕ ಗುಲಬರ್ಗಾ ರವರ ಸೂಕ್ತ ಮಾರ್ಗದರ್ಶನದಲ್ಲಿ ಶ್ರೀ ದತ್ತಾತ್ರೇಯ ಎ.ಎಸ್.ಐ ಶ್ರೀ ಬಸವರಾಜ ಎ.ಎಸ್.ಐ. ಹಾಗೂ ಸಿಬ್ಬಂದಿಯವರ ತಂಡ ಸದರ ಹಮಲ್ವಾಡಿ ಬಡಾವಣೆಗೆ ಭೇಟಿ ಕೊಟ್ಟು ಮಟಕಾ ಜೂಜಾಟದಲ್ಲಿ ತೊಡಗಿದ ರಾಣೋಜಿ ತಂದೆ ತಮ್ಮಣ್ಣ ಸಾ- ಹಮಲ ವಾಡಿ ಇತನಿಗೆ  ಮುತ್ತಿಗೆ ಹಾಕಿ  ಹಿಡಿದು ಸದರಿಯವನ ಕಡೆಯಿಂದ ಮಟಕಾ ಜೂಜಾಟಕ್ಕೆ ತೊಡಗಿಸಿದ  ಒಂದು ಮಟಕಾ ನಂ ಬರೆದ ಚೀಟಿ, ಒಂದು ಬಾಲ ಪೆನ್ನು, ಹಾಗೂ ನಗದು ಹಣ 1530/- ಜಪ್ತು ಮಾಡಿಕೊಂಡಿದ್ದು  ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಲಾಲಸಾಬ ತಂದೆ ಅಕ್ಬರಸಾಬ ಶಿರವಾಳ ಸಾ : ಮಾಶ್ಯಾಳ ರವರು ದಿನಾಂಕ 08-03-2014 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಮನೆಯಲ್ಲಿದ್ದಾಗ, ನನ್ನ 3 ನೇಯ ಮಗಳಾದ ರೇಷ್ಮಾ ಇವಳು ಬಹೀರದೇಸೆಗೆ ಹೊಗಿಬರುತ್ತೆನೆ ಅಂತಾ ಮನೆಯಿಂದ ಹೊದವಳು ಎಷ್ಟೊತ್ತಾದರು ಮರಳಿ ಬರದೆ ಇದ್ದ ಕಾರಣ, ನಾನು ಮತ್ತು ನನ್ನ ಹೆಂಡತಿ ಮಕ್ಕಳು ಎಲ್ಲಾ ಕಡೆ ಹುಡುಕಾಡುತ್ತಿದ್ದೆವು, ಅಂದಾಜು ಸಾಯಂಕಾಲ 5:00 ಗಂಟೆ ಸಮಯಕ್ಕೆ ನಾನು ಬಸ್ ಸ್ಟ್ಯಾಂಡ ಹತ್ತಿರ ನನ್ನ ಮಗಳನ್ನು ಹುಡುಕಾಡುತ್ತಿದ್ದಾಗ, ನಮ್ಮ ಗ್ರಾಮದ ರಾಜು ಕಾಂಬ್ಳೆ ಮತ್ತು ಅಕ್ಬರ ಮುಜಾವರ ಇವರು ತಿಳಿಸಿದ್ದು ಎನೆಂದರೆ, ನಾವು ಬಸ್ ಸ್ಟ್ಯಾಂಡ ಹತ್ತಿರ ಇದ್ದಾಗ ನಿಮ್ಮ ಮಗಳಾದ ರೇಷ್ಮಾ ಇವಳು ಅಮೀನಸಾಬ ಈತನ ಮಗನಾದ ಜಾಫರ ಕುರೇಶಿ ಈತನ ಜೋತೆಗೆ ಅಕ್ಕಲಕೋಟಕ್ಕೆ ಹೊಗುವ ಬಸ್ಸಿನಲ್ಲಿ ಹೊಗಿರುತ್ತಾಳೆ ಎಂದು ತಿಳಿಸಿದರು, ನಂತರ ನಾನು ನಮ್ಮ ಸಮಾಜದ ಮುಖಂಡರ ಹತ್ತಿರ  ಹೋಗಿ ನನ್ನ ಮಗಳನ್ನು ಜಾಫರ ಈತನು ಅಫಹರಿಸಿಕೊಂಡು ಹೋದ ಬಗ್ಗೆ ತಿಳಿಸಿದೆನು, ಸದರಿಯವರು ಜಾಫರ ಈತನ ತಂದೆಯಾದ ಅಮೀನಸಾಬ ಈತನನ್ನು ಕರೆಸಿ ನಿನ್ನ ಮಗನನ್ನು ಕರಕೊಂಡು ಬಾ ಅಂತಾ ತಿಳಿಸಿ ಹೇಳಿದರು. ನಿನ್ನೆ ದಿನಾಂಕ 09-03-2014 ರಂದು ಮೇಲೆ ಹೇಳಿದ ನಮ್ಮ ಸಮಾಜದ ಮುಖಂಡರೆಲ್ಲರೂ ಸೇರಿ ಜಾಫರ ಈತನಿಗೆ ಪೋನ ಮಾಡಿ, ಲಾಲಸಾಬ ಈತನ ಮಗಳಿಗಿ ಕರಕೊಂಡು ಬಾ, ಇಲ್ಲ ಅಂದರ, ಲಾಲಸಾಬ ನಿನ್ನ ಮ್ಯಾಲ ಕೇಸ್ ಮಾಡ್ತಿನಿ ಅಂತಾ ಹೇಳ್ಯಾನ ಜಲ್ದಿ ಕರಕೊಂಡು ಬಾ, ಇಲ್ಲೆ ಎಲ್ಲರೂ ಕೂಡಿ ಬಗಿ ಹರಸೊಣ ಅಂತಾ ಹೇಳಿದರು, ಅದಕ್ಕೆ ಜಾಫರ ಈತನು ಕರಕೊಂಡು ಬರತಿನಿ ಅಂತಾ ಹೇಳಿ ಪೊನ ಬಂದ ಮಾಡಿದನು. ಹಿಗಿದ್ದು ಇಂದು ದಿನಾಂಕ  10-03-2014 ರಂದು ಮದ್ಯಾಹ್ನ 2:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಮನೆಯಲ್ಲಿದ್ದಾಗ, ನನ್ನ ಮಗಳಾದ ರೇಷ್ಮಾ ಇವಳು ನಮ್ಮ ಮನೆಗೆ ಬಂದಿದ್ದು, ಅವಳಿಗೆ ವಿಚಾರಿಸಿದಾಗ ಅವಳು ತಿಳಿಸಿದ್ದೆನೆಂದರೆ, ದಿನಾಂಕ 08-03-2014 ರಂದು ಮದ್ಯಾಹ್ನ 2:00 ಗಂಟೆಗೆ ನಾನು ಬಹಿರದೇಸೆಗೆ ಹೊಗುತ್ತಿದ್ದಾಗ, ಜಾಫರ ಕುರೇಶಿ ಈತನು, ನಮಾಜ ಕಟ್ಟೆಯ ಹತ್ತಿರ ನಿಂತಿದ್ದು, ನನಗೆ ನಿನ್ನನ್ನು ಮದುವೆ ಆಗ್ತಿನಿ ನನ್ನ ಜೋಡಿ ಬಾ ಅಂತಾ ಹೇಳಿ, ಅಲ್ಲಿಂದ ನನ್ನನ್ನು ಪುಸಲಾಯಿಸಿ ಅಫಹರಿಸಿಕೊಂಡು  ಬಸ್ ಸ್ಟ್ಯಾಂಡಿಗಿ ಕರಕೊಂಡು ಹೊಗಿ, ಮಾಶಾಳ ಬಸ್ ಸ್ಟ್ಯಾಂಡದಿಂದ ನನ್ನನ್ನು ಅಕ್ಕಲಕೋಟಕ್ಕೆ ಹೊಗುವ ಸರ್ಕಾರಿ ಬಸ್ಸಿನಲ್ಲಿ ಕರಕೊಂಡು ಹೊದನು, ಸಂಜೆ ಅಕ್ಕಲಕೋಟದಿಂದ ರೇಲ್ವೆದಲ್ಲಿ ಪೂನಾಕ್ಕೆ ಕರಕೊಂಡು ಹೋಗಿ, ಬೆಳಿಗ್ಗೆ ಪೂನಾದಲ್ಲಿ ಯಾರೊ ಅವರ ಗೆಳೆಯರ ಮನೆಗೆ ಕರಕೊಂಡು ಹೊದನು, ಅಲ್ಲಿ ನಾನು ಮತ್ತು ಜಾಫರ ಇಬ್ಬರು ಒಂದೆ ರೂಮಿನಲ್ಲಿ ಮಲಗಿಕೊಂಡೆವು, ಆಗ ಜಾಫರ ಈತನು ನನ್ನ ಮೇಲೆ ಒತ್ತಾಯ ಪೂರ್ವಕವಾಗಿ ಸಂಬೋಗ ಮಾಡಿರುತ್ತಾನೆ, ಇದೆ ರೀತಿ 2-3  ಸಲ ಬಲತ್ಕಾರದಿಂದ ನನಗೆ ಸಂಬೋಗ ಮಾಡಿರುತ್ತಾನೆ, ನಿನ್ನೆ ಸಾಯಂಕಾಲ ನೀವು ಪೋನ ಮಾಡಿದಾಗ, ಜಾಫರ ಈತನು ನನ್ನನ್ನು ರಾತ್ರಿ ಪೂನಾದಿಂದ ಬಿಟ್ಟು, ಬೆಳಿಗ್ಗೆ ಅಕ್ಕಲಕೋಟಕ್ಕೆ ಕರಕೊಂಡು ಬಂದಿರುತ್ತಾನೆ ಅಂತಾ ತಿಳಿಸಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಅಫಜಲಪೂರ ಠಾಣೆ : ಶ್ರೀ ಚಂದಪ್ಪ ತಂದೆ ಮರೆಪ್ಪಾ ಸಿಂಗೆ  ಸಾ: ತೆಲ್ಲಣಗಿ  ರವರು ದಿನಾಂಕ 10-03-2014 ರಂದು ಬೆಳಿಗ್ಗೆ ನಾನು ಅಫಜಲಪೂರಕ್ಕೆ ಸಂತೆ ಮಾಡಿಕೊಂಡು ಬರಲು ಹೊಗಿದ್ದು, ಸಂತೆ ಮುಗಿಸಿಕೊಂಡು ಮದ್ಯಾಹ್ನ 3:00 ಗಂಟೆಗೆ ಮರಳಿ ನಮ್ಮ ಮನೆಗೆ ಹೊದಾಗ ನನ್ನ ಮಗನಾದ ಅಣ್ಣಪ್ಪ ಈತನ ತಲೆಯಿಮದ ರಕ್ತ ಬರುತ್ತಿತ್ತು, ನನ್ನ ಹೆಂಡತಿಗೆ ಮತ್ತು ನನ್ನ ಮಗ ಅಣ್ಣಪ್ಪನಿಗೆ ಏನಾಗಿದೆ ಎಂದು ವಿಚಾರಿಸಿದ್ದು, ಅವನು ತಿಳಿಸಿದ್ದು ಎನೆಂದರೆ, ನೀನು ಅಫಜಲಪೂರಕ್ಕೆ ಹೊಗಿದ್ದಿ, ಮರಳಿ ಬರುವಾಗ ಏನಾದರು ಒಜ್ಜಿ ಸಾಮಾನಿ ಇರ್ತಾದ ತಗೊಂಡು ಹೋಗಬೇಕು ಅಂತಾ ನಮ್ಮ ಗ್ರಾಮದ ಅಪ್ಪು ಜಮಾದಾರ ಈತನ ಅಂಗಡಿಯ ಹತ್ತಿರ ಹೋಗಿ ನಿಂತುಕೊಂಡಿದ್ದೆನು, ಆಗ ನಮ್ಮ ಗ್ರಾಮದ ಸೋಮನಿಂಗ ಲೋಡ್ಡೆ ಈತನ ಮಗಳ ಗಂಡನಾದ ಖಾಜಪ್ಪ ಈತನು ನನಗೆ ಏನಲೆ ಹುಚ್ಚ, ಸೂಳೆ ಮಗನೆ ಎಂದು ರೇಗಿಸುವುದು ಮಾಡಿದನು, ಅದಕ್ಕೆ ನಾನು ಯಾಕಲೆ ನನಗ ಯಾಕ ರೇಗಸ್ತಿ ಎಂದು ಕೇಳಿದರೂ ಇನ್ನು ಜಾಸ್ತಿ ರೇಗಿಸತೊಡಗಿದನು. ನನಗೆ ಸಿಟ್ಟ ಬಂದು ಯಾಕಲೆ ಸೂಳೆ ಮಗನೆ ನನಗ ಯಾಕ ರೇಗಸ್ತಿ ಎಂದಾಗ ಖಾಜಪ್ಪ ಈತನು ಬೋಸಡಿ ಮಗನೆ ನನಗ ಬೈತಿ ಅಂತಾ ಕೈಯಿಂದ ಮೈ ಕೈಗೆ ಹೊಡೆದು, ಅಲ್ಲಿಯೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಅಶೋಕ ತಂದೆ ದತ್ತಪ್ಪಾ ಅಪ್ಪಗುಂಡಿ ಸಾ : ದೇವರ ದಾಸಿಮಯ್ಯ ನಗರ ಗುಲಬರ್ಗಾ ಇವರು ತಮ್ಮ ಬಡಾವಣೆಯ ಶರಣಪ್ಪ ತಂದೆ ಕಿಶನ ಅನ್ನಶೇಟ್ಟಿ ಇವನು ನನ್ನ ಅಳಿಯನಿದ್ದು ಕಳೆದು 3-4 ತಿಂಗಳ ಹಿಂದೆ ನಮ್ಮ ಬಡಾವಣೆಯ ಮಹೇಶ ಬನ್ನಗುಂಡಿ ಇವನ ಹತ್ತೀರ 3 ನೂರು ರೂಪಾಯಿ ಕೈಗಡ ತೆಗೆದುಕೊಂಡಿದ್ದು ಇಲ್ಲಿಯವರೆಗೆ ಕೊಟ್ಟಿರುವದಿಲ್ಲಾ. ನೀನ್ನೆ ದಿನಾಂಕ 09-03-2014 ರಂದು ರಾತ್ರಿ 08-45 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಅಳಿಯ ಶರಣಪ್ಪ ಅನ್ನಶೇಟ್ಟಿ ಇಬ್ಬರು ನಮ್ಮ ಬಡಾವಣೆಯ ನೀಲಕಂಠ ಇವರ ಕೀರಾಣಿ ಅಂಗಡಿಯ ಮುಂದಿನಿಂದ ನಡೆದುಕೊಂಡು ಹೊಗುತ್ತಿರುವಾಗ ಅಂಗಡಿಯ ಮುಂದೆ ಮಹೇಶ ಆತನ ಅಣ್ಣ ಜಗನ್ನಾಥ ಇಬ್ಬರು ಬಂದು ನಮಗೆ ತಡೆದು ಮಹೇಶ ಇತನು ನನ್ನ ಅಳಿಯ ಶರಣಪ್ಪನಗೆ ನಾನು ಕೊಟ್ಟಿದ್ದ ಕೈಗಡ ಹಣ ಕೊಡಬೇಕೆಂದು ಕೇಳಿ ಅವನ ಎದೆಯ ಮೇಲೆ ಅಂಗಿ ಹಿಡಿದು ಕೈ ಮುಷ್ಠಿಮಾಡಿ ಬೆನ್ನಿನ ಮೇಲೆ ಹೊಡೆಯಹತ್ತಿದನು. ಆಗ ನಾನು ಬಿಡಿಸಲು ಹೊದಾಗ ಜಗನ್ನಾಥ ಇವನು ನೀನು ಯಾರು ಬಿಡಿಸಲು ಬರುವವ ಸುಳೆ ಮಗನೆ ರಂಡಿಮಗನೆ ಅಂತಾ ಬೈಯ್ಯುತ್ತಾ ನನಗೆ ದಬ್ಬಿಕೊಂಡು ಹೋಗಿ ನೀಲಕಂಠ ಇವರ ಅಂಗಡಿಯ ಕೌಂಟರಮೇಲೆ ಬಿದ್ದಿದ್ದರಿಂದ ಕೌಂಟರನ ಗ್ಲಾಸುಗಳು ಒಡೆದಿದ್ದು ಅದರಲ್ಲಿಯ ಒಂದು ತುಕಡಿ ತೆಗೆದುಕೊಂಡು ನನ್ನ ಎಡಗೈಮೇಲೆ ಹೊಡೆದಿದ್ದರಿಂದ ನನ್ನ ಎಡಗೈಗೆ ರಕ್ತಗಾಯವಾಯಿತು ಅಲ್ಲದೆ ಅಶೋಕನಿಗೆ ಖಲಾಸ ಮಾಡುತ್ತೆನೆ, ಅಂತಾ ಜೀವದಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಮಶಾಕಸಾಬ ತಂದೆ ಅಜೀಜಸಾಬ ಮೋಮಿನ ಸಾ: ಬೇಲೂರ(ಕೆ) ತಾ:ಜಿ: ಗುಲಬರ್ಗಾ ಇವರ ತಂದೆಯವರಿಗೆ ನಮಗೆ ಆಗಿ ಬರದ ಕಾರಣ ನಾವು ಹೊಲ ಹಂಚಿಕೆ ಮಾಡಿಕೊಂಡು ಬೇರೆ ಬೇರೆಯಾಗಿ ಹೆಂಡತಿ ಮಕ್ಕಳೊಂದಿಗೆ ಉಪಜೀವಿಸುತ್ತಿದ್ದೇವೆ. ದಿನಾಂಕ: 10-03-2014 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ ನಮ್ಮ ಹೊಲಕ್ಕೆ ನಾನುನನ್ನ ಹೆಂಡತಿ ಮಹಿಬೂಬ ಭೀ ಇವಳೊಂದಿಗೆ ಹೋಗಿದ್ದು. ನಮ್ಮ ಹೊಲದ ಬಂದಾರಿಯಲ್ಲಿ ಬಿದ್ದಿರುವ ಕಲ್ಲುಗಳು ತೆಗೆದು ಹಾಕುತ್ತಿದ್ದಾಗ 1. ಪೀರಸಾಬ ತಂದೆ ಮಶಾಕ ಸಾಬ 2. ಬಾಬು ತಂದೆ ಪೀರಸಾಬ 3).ನಬೀ ತಂದೆ ಪೀರಸಾಬ ಇವರೊಂದಿಗೆ ನನ್ನ ತಂದೆಯಾದ ಅಜೀಜಸಾಬ ಇವರು ಬಂದು ಪೀರಸಾಬನು ಅರೇ ಮಾಕೆ ಲವಡೇ ತೇರೆಕೊ ಬಂದಾರೇ ಪೇ ಫತ್ತರ ಮತ್ ದಾಲ ಭೋಲೆತೋ ಕ್ಯೂಂವ ಡಾಲ ರಹಾ ಹೈ ಅಂತಾ ಬೈಯ ತೊಡಗಿದರು. ಆಗ ಯಾಕೆ ಸುಮ್ಮನೆ ಬೈಯುತ್ತಿರಿ ಅಂತಾ ಅಂದಾಗ ಪೀರಸಾಬನು ಕೈಯಲ್ಲಿರುವ ಕೊಯಿತಾ ದಿಂದ ಎಡಗೈ ಮೇಲೆ ಹೊಡೆದು ಎಳೆದನು. ಆಗ ಬಾಬುನಬೀ ಇವರು ನನಗೆ ತಡೆದು ನಿಲ್ಲಿಸಿಕೈಗಳಿಂದ ಹೊಡೆಯ ತೊಡಗಿದರು. ನನ್ನ ತಂದೆ ಅಜೀಜ ಈತನು ಮಾರೋ ಸಾಲೇಕೆ ಜಾನೇ ನಹೀಂ ದೇನಾ ಜಾನಸೇ ಮಾರೋ ಅಂತಾ ಜೀವದ ಭಯ ಹಾಕಿದರು. ಅವರು ಹೊಡೆಯುವಾಗ ನನ್ನ ಹೆಂಡತಿ ಮಹಿಬೂಬ ಭೀ ಬಡಿಸಲು ಬಂದಾಗ ಬಾಬುನಬೀ ಇವರು ನನ್ನ ಹೆಂಡತಿಯ ಕೂದಲು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದಿರುತ್ತಾರೆ.ಅಲ್ಲದೇ ಮುಂದೇನಾದರೂ ನಮ್ಮ ಹೆಸರಿಗೆ ಬಂದರೇ ನಿನ್ನ ಹೆಂಡತಿಗೆ ಬೆತ್ತಲೇ ಮಾಡುವದಾಗಿ ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಮಲಾಪೂರ ಠಾಣೆ : ಶ್ರೀಮತಿ.ಗುರುಬಾಯಿ ಗಂಡ ಸಿದ್ರಾಮಪ್ಪ ಬಾಪೂರೆ  ಸಾಕಾಳಮಂದರ್ಗಿ ತಾ:ಜಿ:ಗುಲಬರ್ಗಾ ಇವರು ತಮ್ಮ ಮತ್ತು ತನ್ನ ನೆಗೆಣಿಯಾದ ತಾರಾಬಾಯಿ ಗಂಡ ಶಾಂತಪ್ಪ ಬಾಪೂರೆ ಇವರ ಮಧ್ಯದಲ್ಲಿ ಹೊಲದ ಬಂದಾರಿಯಲ್ಲಿ ಬೆಳೆದ ಹುಣಸಿ ಮರದ ಫಲ ತೆಗೆದುಕೊಳ್ಳುವ ವಿಷಯದಲ್ಲಿ ವೈಮನಸ್ಸು ಇರುತ್ತದೆ. ಈ ದಿವಸ ದಿನಾಂಕ: 10-03-2014 ರಂದು ಸಾಯಂಕಾಲ 04-00 ಗಂಟೆ ಸುಮಾರಿಗೆ ನಾನು ನನ್ನ ಮನೆಯ ಮುಂದೆ ಕುಳಿತುಕೊಂಡಿದ್ದಾಗ ನನ್ನ ನೆಗೆಣಿಯಾದ 1.ತಾರಾಬಾಯಿ ಗಂಡ ಶಾಂತಪ್ಪ ಬಾಪೂರೆ ಅವಳ ಮಕ್ಕಳಾದ 2. ಶ್ರೀಶೈಲ ತಂದೆ ಶಾಂತಪ್ಪ ಬಾಪೂರೆ  3. ಮಲ್ಲಪ್ಪ ತಂದೆ ಶಾಂತಪ್ಪ ಬಾಪೂರೆ 4.ವೈಜುನಾಥ ತಂದೆ ಶಾಂತಪ್ಪ ಬಾಪೂರೆ ಇವರುಗಳೊಂದಿಗೆ ಬಂದವಳೆ ಲೇ ರಂಡಿ ನಿನ್ನ ಗಂಡ ಹುಣಸಿ ಗಿಡದ ಹಣಸೇ ಹಣ್ಣನ್ನು ಯಾಕೆ ಕಡಿದುಕೊಂಡು ಹೋಗಿದ್ದಾನೆ ಅಂತಾ ಬೈಯ್ಯುತ್ತಿರುವಾಗ ವೈಜುನಾಥನು ನನ್ನ ಕುತ್ತಿಗೆಗೆ ಕೈ ಹಾಕಿ ಹಿಡಿದು ತಡೆದು ನಿಲ್ಲಿಸಿದಾಗ ಮಲ್ಲಪ್ಪನು ಚಪ್ಪಲಿಯಿಂದ ತೆಲೆಯ ಮೇಲೆ ಮತ್ತು ಮುಖದ ಮೇಲೆ ಹೊಡೆಯ ತೊಡಗಿದನು. ಶ್ರೀಶೈಲ ಮತ್ತು ತಾರಾಬಾಯಿ ಕೂಡಾ ಕೈಯಿಂದ ಹೊಡೆದು ದುಖಾ:ಪತಗೊಳಿಸಿರು ತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 10-03-2014  ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಶ್ರೀ ಮಹಾದೇವಪ್ಪ ತಂದೆ ಬಂಡಪ್ಪಾ  ಉ: ಹೆಡಕಾನ್ಸಟೇಬಲ ಸಾ: ಶಿವಲಿಂಗೇಶ್ವರ ನಗರ ಆಳಂದ ರೋಡ ಗುಲಬರ್ಗಾ  ರವರು ಕೋಠಾರಿ ಭವನ ಎದುರುಗಡೆ ಸಂಚಾರಿ ಕರ್ತವ್ಯ ನಿರ್ವಹಿಸುತ್ತಿರುವಾಗ ಆರ್.ಪಿ.ಸರ್ಕಲ್ ಕಡೆಯಿಂದ ಅಟೋರೀಕ್ಷಾ ನಂ:ಕೆಎ 32 ಬಿ 5122 ನೆದ್ದರ ಚಾಲಕ ವಿಶ್ವನಾಥ ಈತನು ಮಧ್ಯ ಸೇವನೆ ಮಾಡಿದ ಅಮಲಿನಲ್ಲಿ ಅಟೋರೀಕ್ಷಾ ವಾಹನವು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಅಪಘಾತಮಾಡಿ ವಾಹನ ಸ್ಥಳದಲ್ಲೇ ಬಿಟ್ಟು ಚಾಲಕ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.