POLICE BHAVAN KALABURAGI

POLICE BHAVAN KALABURAGI

09 May 2012

GULBARGA DIST REPORTED CRIME


ವಾರಸುದಾರರಿಲ್ಲದ ಇಲ್ಲದೆ ಇರುವ ಮೋಟಾರ ಸೈಕಲ ಜಪ್ತಿ:
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:09/05/2012 ರಂದು ಮುಂಜಾನೆ ಠಾಣೆಯ ಪೊಲೀಸ್ ಪೇದೆಗಳಾದ ಪರಶುರಾಮ ಮತ್ತು ಬಸವರಾಜ ಕೂಡಿಕೊಂಡು ಠಾಣೆ ವ್ಯಾಪ್ತಿಯ ಬಸವೇಶ್ವರ ಕ್ರಾಸನಲ್ಲಿ ಪೆಟ್ರೋಲಿಂಗ ಮಾಡುತ್ತಿರುವಾಗ ಮುಂಜಾನೆ 10-30 ಗಂಟೆ ಸುಮಾರಿಗೆ ಹಳೆ ಶಹಾಬಾದ ಕಡೆಯಿಂದ ಒಬ್ಬನು ಸೈಕಲ ಮೊಟಾರ ಮೇಲೆ ಬಂದವನೆ ನಮ್ಮನು ನೊಡಿ ಮೋಟರ ಸೈಕಲನ್ನು ಪುನಃ ತಿರುಗಿಸಿ ಓಡಿಸಿಕೊಂಡು ಹೋಗಲು ಪ್ರಯತ್ನ ಮಾಡುತ್ತಿರುವಾಗ ಆತನನ್ನು ಹಿಡಿದು ಹೆಸರು  ವಿಚಾರಿಸಲಾಗಿ ರಾಜು ತಂದೆ ಮುಕುಂದ ಸಾ: ಶಿಬರಕಟ್ಟಾ ಹಳೆ ಶಹಾಬಾದ ಅಂತಾ ತಿಳಿಸಿದನು, ಮೋಟಾರ ಸೈಕಲ ದಾಖಲಾತಿ ಬಗ್ಗೆ ಕೇಳಲಾಗಿ ಕಾಗದ ಪತ್ರಗಳು ಇರುವದಿಲ್ಲಾ ಅಂತಾ ತಿಳಿಸಿದನು. ಕೂಲಂಕೂಶವಾಗಿ ವಿಚಾರಿಸಲಾಗಿ ಗುಲಬರ್ಗಾ ನಗರದ  ಜನತಾ ಹೊಟೇಲ ಎದುರಗಡೆ ನಿಲ್ಲಿಸಿದ ಹೀರೊಹೊಂಡಾ ಸ್ಪೇಲೆಂಡರ ಮೋಟಾರ ಸೈಕಲ  ನಂಬರ ಕೆ.ಎ. 38 ಜೆ 9461 ನೇದ್ದು ಇರುತ್ತದೆ.  ಅಂತಾ ತಿಳಿಸಿದ್ದರಿಂದ ಆತನನ್ನು ಮತ್ತು ಮೋಟಾರ ಸೈಕಲ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 57/2012 ಕಲಂ: 41(ಡಿ), 102 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 


GULBARGA DIST REPORTED CRIMES


ಮುಂಜಾಗ್ರತೆ ಕ್ರಮ :
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಪ್ರದೀಪ ಸಿಪಿಸಿ-1140 ಶಹಾಬಾದ ನಗರ ಠಾಣೆ ರವರು ಪೆಟ್ರೋಲಿಂಗ ಕುರಿತು ಭಂಕೂರ ಕ್ರಾಸ ಹತ್ತಿರ ಹೋದಾಗ ಎಸ್‌ಬಿಐ ಬ್ಯಾಂಕ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಕುಡಿದ ಅಮಲಿನಲ್ಲಿ ಚಿರಾಡುವದು ಅವಾಚ್ಯ ಶಬ್ದಗಳಿಂದ ಬೈಯುವದು ಮಾಡುತ್ತಿದ್ದು ಸಾರ್ವಜನಿಕ ಸ್ಥಳದಲ್ಲಿ ಶಾಂತತಾ ಭಂಗವನ್ನುಂಟು ಮಾಡುತ್ತಿದದ್ದನ್ನು ನೋಡಿ ವಿಚಾರಿಸಲಾಗಿ ತನ್ನ ಹೆಸರು ಖಾಸಿಂ ಅಲಿ ತಂದೆ ಮಹೇಬೂಬಸಾಬ ಖತಾರ ಸಾ:ಆಶ್ರಯ ಯೋಜನಾ ಕಾಲೋನಿ ಭಂಕೂರ ಅಂತಾ ಹೇಳಿದನು. ಸದರಿಯವನಿಗೆ ಸಮಜಾಯಿಸಿ ಕಳುಹಿಸಿದರೂ ಕೂಡ ಮತ್ತೆ ಅದೇ ರೀತಿ ಮಾಡುತ್ತಿದ್ದು ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಸಾರ್ವಜನಿಕರಿಗೆ ಹೋಗಿ ಬರುವವರಿಗೆ ತೊಂದರೆ ಮಾಡುತ್ತಿದ್ದ ಬಗ್ಗೆ ವರದಿ ಸಲ್ಲಿಸಿದ ಮೇರೆಗೆ ಮುಂಜಾಗೃತ ಕ್ರಮ ಕುರಿತು ಠಾಣೆ ಗುನ್ನೆ ನಂ: 55/2012 ಕಲಂ 110 (ಇ)& (ಜೆ) ಸಿಆರ್‌ಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಶರಣಪ್ಪಾ ಹಿಪ್ಪರಗಿ ಪಿ.ಐ ಶಹಬಾದ ನಗರ ಠಾಣೆ ರವರು ಮತ್ತು ಸಿಬ್ಬಂದಿರವರು ಗುನ್ನೆ ಮತ್ತು ಆರೋಪಿ ಪತ್ತೆ ಕುರಿತು ಹೋದಾಗ  ಶಹಾಬಾದದ ವಡ್ಡರ ಸಂಘ ಶಾಲೆಯ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಇಸ್ಪೀಟ ಆಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ  ಹೋಗಿ ದಾಳಿ ಮಾಡಿ ಅವರನ್ನು ವಿಚಾರಿಸಲಾಗಿ ತಮ್ಮ ಹೆಸರುಗಳು ರಾಮು ತಂದೆ ಹೊಸೂರಪ್ಪಾ ಚೌದರಿ ಸಾ:ನರಸಪ್ಪಾ ಮೇಸ್ತ್ರಿ ನಗರ ಶಹಾಬಾದ. ಮಹ್ಮದ ಶರೀಫ ತಂದೆ ಅಹ್ಮದ ಹುಸೇನ ಸಾ:ಬಿರ್ಲಾ ಏರಿಯಾ ವಾಡಿ, ಯಲ್ಲಪ್ಪಾ ತಂದೆ ಯಲಪ್ಪಾ ಅಲಕುಂಟಿ ಸಾ:ಚಕ್ಕಿ ವಡ್ಡರಗಲ್ಲಿ ಶಹಾಬಾದ. ಹಾಜಪ್ಪಾ ತಂದೆ ಹಣಮಂತ ಸಾಗರ ಸಾ:ಚಕ್ಕಿವಡ್ಡರಗಲ್ಲಿ ಶಹಾಬಾದ.ಮಹ್ಮದ ರಫೀಕ ತಂದೆ ವಸಂತರಾವ ಬಿಲಗುಂದಿ ಸಾ:ನರಸಪ್ಪಾ ಮೇಸ್ತ್ರಿ ನಗರ ಶಹಾಬಾದ ರವರನ್ನು ದಸ್ತಗಿರಿ ಮಾಡಿ  ಅವರಿಂದ ನಗದು ಹಣ 4100/-ರೂ ಮತ್ತು ಇಸ್ಪೀಟ ಎಲೆಗಳು   ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 56/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಸಿದ್ದಪ್ಪ ತಂದೆ ಪೀರಪ್ಪ ಭರತನೂರ ವಯ|| 66 ವರ್ಷ ಸಾ|| ಮನೆನಂ  280 ಡಿಪೋ ನಂ 03 ರ ಹತ್ತಿರ ವಿಧ್ಯಾ ನಗರ ಗುಲಬರ್ಗಾ ರವರು ನಾನು ದಿನಾಂಕ : 08/05/2012 ರಂದು ಮಧ್ಯಾಹ್ನ 1.00 ಪಿ.ಎಮ್.ಕ್ಕೆ ಎಸ್.ಬಿ.ಹೆಚ್ ವಿಧ್ಯಾನಗರ ಬ್ರಾಂಚ್ ನಲ್ಲಿ ನನ್ನ ಹೆಂಡತಿಯಾದ ರತ್ನಾಬಾಯಿ ಇವರ ಖಾತೆಯಿಂದ 80000=00 ರೂ ಡ್ರಾ ಮಾಡಿಕೊಂಡು ಎಸ್.ಬಿ.ಐ ಸ್ಟೇಷನ ಬಜಾರ ಶಾಖೆಯಲ್ಲಿ ಜಮಾ ಮಾಡುವುದಕ್ಕಾಗಿ 1.30 ಗಂಟೆ ಸುಮಾರಿಗೆ ಎಸ್.ಬಿ.ಐ ಲೀಡ್ ಬ್ಯಾಂಕ್ ಮುಂದುಗಡೆ ಕುಳಿತು ಹಣ ತುಂಬುವ ಚರ್ ಬರೆಯುತ್ತಿರುವಾಗ 80000=00 ರೂಪಾಯಿ ಹಾಗೂ ಪಾಸ್ ಬುಕ್ ,ಚೆಕ್ಕಬುಕ್ ಇತರೆ ದಾಖಲಾತಿಗಳಿದ್ದ ಬ್ಯಾಗ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 64/2012 ಕಲಂ 379 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ:ಶ್ರೀಮತಿ ಸುಲೋಚನಾ ಗಂಡ ರಾಜು ಗುತ್ತೆದಾರ ಸಾ: ಕಲ್ಲಬೇನೂರ ಗ್ರಾಮ ತಾ:ಜಿ:ಗುಲಬರ್ಗಾ ರವರು ನನ್ನ ಮದುವೆಯು ದಿನಾಂಕ 20-04-2009 ರಂದು ಕಲ್ಲಬೇನೂರ ಗ್ರಾಮದ ರಾಜು ಗಂಡ ಕಾಮಯ್ಯಾ ಗುತ್ತೇದಾರ ಇತನೊಂದಿಗೆ ಸಂಪ್ರದಾಯದ ಪ್ರಕಾರ ಮದುವೆ ಮಾಡಿದ್ದು, ಮದುವೆ ಕಾಲಕ್ಕೆ ನನ್ನ  ತಂದೆ ತಾಯಿಯವರು ವರದಕ್ಷಿಣೆ ಅಂತಾ  7 ತೊಲಿ ಬಂಗಾರ 1 ಲಕ್ಷ ರೂ ನಗದು ಹಣ ಹಾಗೂ ಇನ್ನಿತರ ಸಾಮಾನುಗಳು ಕೊಟ್ಟು ಮದುವೆ ಮಾಡಿರುತ್ತಾರೆ  ಲಗ್ನವಾದ 6 ತಿಂಗಳವರೆಗೆ ಸರಿಯಾಗಿದ್ದು, ನಂತರ ನನ್ನ ಗಂಡ ರಾಜು, ಅತ್ತೆ ಸುಶೀಲಮ್ಮ ಮಾವ ಕಾಮಯ್ಯಾ ಇವರು ನಿಮ್ಮ ತಂದೆ ಅಡತಿ ಇಟ್ಟಿದ್ದಾನೆ, ನಿಮ್ಮಪ್ಪನ ಹತ್ತೀರ ಸಾಕಷ್ಟು ಬಂಗಾರ ಇದೆ ನೀವು ಕೊಟ್ಟ ವರದಕ್ಷಿಣೆ ರೂಪದಲ್ಲಿ ನಿನ್ನ ತವರು ಮನೆಯಿಂದ ಇನ್ನೂ 10 ತೊಲಿ ಬಂಗಾರ 2 ಲಕ್ಷ ರೂಪಾಯಿಗಳು ತೆಗೆದುಕೊಂಡು ಬಾ ಅಂತಾ ಗಂಡ ಅತ್ತೆ ಮಾವ ಮೂರು ಜನ ಸೇರಿ ನನಗೆ ದಿನಾಲು ಹೊಡೆಬಡೆ ಮಾಡುತ್ತಾ ಚಿತ್ರಹಿಂಸೆ ಕೊಡುತ್ತಾ ಬಂದಿರುತ್ತಾರೆ. ಸುಮಾರು 20 ದಿವಸಗಳ ಹಿಂದೆ ತವರು ಮನೆಯಿಂದ ನನ್ನ ಗಂಡನ ಮನೆಗೆ ಬಂದಿದ್ದು, ಆಗ ನನ್ನ ಗಂಡ ಮತ್ತು ಅತ್ತೆ, ಮಾವ ಇವರು ನನಗೆ ಅವಾಚ್ಯವಾಗಿ ಬೈದು ಬಂಗಾರ ಮತ್ತು ಹಣ ಯಾಕೇ ತರಲಿಲ್ಲ ಅಂತಾ ಎಲ್ಲರೂ ಚಿತ್ರಹಿಂಸೆ ಕೊಟ್ಟು ಹೊಡೆಬಡೆ ಮಾಡಿರುತ್ತಾರೆ ಮತ್ತು ನನ್ನ ಗಂಡ ಬೇರೊಂದು ಹೆಣ್ಣು ಮಗಳೊಂದಿಗೆ ಲಗ್ನ ಆಗುತ್ತಿದ್ದಾನೆ ಅಂತಾ ತಿಳಿದು ಬಂದಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 106/2012 ಕಲಂ 498(ಎ),323, 504, ಸಂಗಡ 34 ಐಪಿಸಿ ಮತ್ತ 3 & 4 ಡಿ.ಪಿ.ಎಕ್ಟ 1961. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಅರ್. ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಆಲಗೂಡ ಗ್ರಾಮದ ಹಣಮಂತರಾಯ ಮುಲಗೇ ಇವರ ಹೋಲ ಸರ್ವೆ ನಂ 297 ನೇದ್ದರಲ್ಲಿ ಪೂರ್ವಕ್ಕೆ 12  ಕೀ.ಮೀ.ಅಂತರದಲ್ಲಿ ಮೃತ ಅಪರಿಚಿತ ವ್ಯಕ್ತಿಯು ಬಿಕ್ಷಕನಂತೆ ಇದ್ದು ಸದರಿಯವನು ಯಾವುದೊ ಒಂದು ರೋಗದಿಂದ ಅಥವಾ ಹೊಟ್ಟೆಗೆ ಅನ್ನ ನೀರು ಇಲ್ಲದೇ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಹಣಮಂತರಾಯ ತಂದೆ ಶಿವರಾಯ ಮುಲಗೇ ಸಾ:ಆಲಗೂಡ ತಾ:ಜಿ:ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯುಡಿಅರ್ ನಂ: 13/2012 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ವಿನೋದ ತಂದೆ ಉಮಲಾ ರಾಠೋಡ ಅಕ್ಕ ಮಹಾದೇವಿ ಕಾಲೋನಿ ಹೈಕೊರ್ಟ ಎದುರುಗಡೆ ಗುಲಬರ್ಗಾ ರವರು  ನನ್ನ ಕಾಕನಾದ ಗುರುನಾಥ ತಂದೆ ಗೇಮು ರಾಠೋಡ ರವರು ದಿನಾಂಕ: 07-05-2012 ರಂದು ಮೋಟಾರ ಸೈಕಲ ಮೇಲೆ ಉದನೂರ ಕ್ರಾಸ ಹತ್ತಿರ  ಮೋಟಾರ ಸೈಕಲ ನಂ: ಕೆಎ 32 ಇಎ 8102 ನೇದ್ದರ ಮೇಲೆ ಹೊರಟಾಗ ಉದನೂರ ಕ್ರಾಸ ಹತ್ತಿರವಿರುವ ರೋಡ ಡಿವೈಡರಕ್ಕೆ ಡಿಕ್ಕಿ ಹೊಡೆದು ತಲೆಗೆ ಭಾರಿ ಪೆಟ್ಟು ಬಿದ್ದು ಉಪಚಾರದ ಸಲುವಾಗಿ ಸೋಲಾಪೂರಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 144/2012 ಕಲಂ 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.