POLICE BHAVAN KALABURAGI

POLICE BHAVAN KALABURAGI

10 January 2013

GULBARGA DISTRICT




ಗುಲಬರ್ಗಾ ಜಿಲ್ಲಾ ಪೊಲೀಸ್ ಕ್ರೀಡಾಕೂಟವನ್ನು ಪ್ರತಿ ವರ್ಷದಂತೆ ಈ ವರ್ಷವು ಕೂಡಾ ದಿನಾಂಕ:08-01-2013 ರಿಂದ ದಿನಾಂಕ:10-01-2013 ರ ವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ವರ್ಷದ  ಕ್ರೀಡಾ ಕೂಟವನ್ನು ಗುಲಬರ್ಗಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್,. ರವರು ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂಧಿಯವರಿಗೆ ಅತೀ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ರಾಹ ನೀಡಿರುತ್ತಾರೆ. ಈ ಕ್ರೀಡಾ ಕೂಟವನ್ನು ಅತೀ ವಿಜೃಂಭಣೆಯಿಂದ ನಿರೂಪಿಸಿದ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಯಾದ ಶ್ರೀ,ಎನ.ಸತೀಶಕುಮಾರ ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಕಳೆದ ಮೂರು ದಿನಗಳಿಂದ ಕ್ರೀಡಾ ಕೂಟದಲ್ಲಿ  ಭಾಗವಹಿಸಿ ವಿಜೇತರಾದವರಿಗೆ ಮಾನ್ಯ ಶ್ರೀ ಮಹಮದ ವಜೀರ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ ರವರು (ಪೊಲೀಸ್ ಪೇದೆಯಿಂದ ಮೇಲಾಧಿಕಾರಿಯವರಿಗೆ) ಕ್ರೀಡಾ ಪಟುಗಳಿಗೆ ಬಹುಮಾನ ವಿತರಣೆ ಮಾಡಿ, ಪೊಲೀಸ್ ಪೇದೆಯಿಂದ ಮೇಲಾಧಿಕಾರಿಯರಿಗೆ ಈ ಕ್ರೀಡಾ ಕೂಟವು ಹಬ್ಬದ ವಾತವರಣವನ್ನಾಗಿ ಮಾರ್ಪಟ್ಟಿತ್ತು ಎಂದು ಮಾನ್ಯ ಐ.ಜಿ.ಪಿ. ಸಾಹೇಬರು ವಿಶ್ಲೇಷಿಸಿರುತ್ತಾರೆ. ಈ ಕೀಡ್ರಾಕೂಟದಲ್ಲಿ ಎಲ್ಲಾ ವಿಭಾಗಗಳ ಕ್ರೀಡೆಯಲ್ಲಿ ಡಿ.ಎ.ಅರ್. ಘಟಕ ಅತ್ಯುತ್ತಮವಾಗಿ ಹೊರ ಹೊಮ್ಮಿದೆ. ಹಾಗು ಅಮರಯ್ಯ ಎಪಿಸಿ ಡಿಎಅರ್ ಘಟಕರವರು ಹೆಚ್ಚಿನ ಪ್ರಶಸ್ತಿ ಪಡೆದಿರುತ್ತಾರೆ. ಮತ್ತು ಮಹಿಳಾ ವಿಭಾಗದಿಂದ ಅತೀ ಹೆಚ್ಚು ಪ್ರಶ್ತಸ್ತಿಗಳನ್ನು ರೋಜಾ ಪೊಲೀಸ್ ಠಾಣೆಯ ಮಹಿಳಾ ಪೊಲೀಸ ಪೇದೆಯವರು ಪಡೆದಿರುತ್ತಾರೆ. 2012 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಹೆಚ್ಚಿನ ಮೆರಗು ತಂದಿರುವ ಎಲ್ಲರಿಗೂ ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು ಅಭಿನಂದನೆ ಸಲ್ಲಿಸಿರುತ್ತಾರೆ. 

GULBARGA DISTRICT REPORTED CRIMES


ಕೊಲೆ ಪ್ರಕರಣ:
ನರೋಣಾ ಪೊಲೀಸ್ ಠಾಣೆ:ದಿನಾಂಕ 09/01/2013 ರಂದು ಸನಗುಂದಾ ಗ್ರಾಮದ ಮಾಳಿಂಗರಾಯ ಗುಡಿಯಲ್ಲಿ ಒಬ್ಬ ಹೆಣ್ಣು ಮಗಳ ಕೊಲೆಯಾಗಿರುತ್ತದೆ ಎನ್ನುವ ಮಾಹಿತಿಯನ್ನು ಆಪಾಧಿತನ ಧಾನಯ್ಯ ತಂದೆ ರಾಮನಯ್ಯ ಚಿರಕುರಿ ಸಾ:ಸಿಂಗಪೇಠ [ಆಂದ್ರ ಪ್ರದೇಶ] ಇತನು ತೆಲಗು ಭಾಷೆಯಲ್ಲಿ ಹೇಳಿಕೆ ನೀಡಿದ್ದ ಸಾರಂಶವೇನೆಂದರೆ, ನಾನು ಮತ್ತು ತನ್ನೊಂದಿಗೆ ಈಗ ಒಂದು ವರ್ಷದಿಂದ ಅನೈತಿಕ ಸಂಬಂದ ಹೊಂದಿರುವ ಮಸನಮ್ಮ ಗಂಡ ವೆಂಕಯ್ಯ ಧೋಬಿ ಇಬ್ಬರು ಕೂಡಿ ಸನಗುಂದಾ ಗ್ರಾಮದಲ್ಲಿ ಆರ್ ಎಂ ಎನ್ ಕಂಪನಿಯಲ್ಲಿ ಕುಕ್ಕರ್ ಅಂತಾ ಕೆಲಸ ಮಾಡುತ್ತಿದ್ದು,ಕೆಲವು ದಿವಸಗಳಿಂದ ಅವಳ ನಡತೆಯ ಬಗ್ಗೆ ಬಲವಾಗಿ ಸಂಶ ಬರುತ್ತಿರುವದ್ದರಿಂದ ಜಗಳವಾಡುತ್ತಿದ್ದೆವು.ದಿನಾಂಕ:09//01/2013 ರಂದು ಬೆಳಿಗ್ಗೆ ಆರ್ ಎಂ ಎನ್ ಕ್ಯಾಂಪಿಗೆ ಹೋಗಿದ್ದು ಅಲ್ಲಿಯವರು ಕೆಲಸಕ್ಕೆ ಬೇಡವೆಂದಿದಕ್ಕೆ ಮರಳಿ ನಾನು ಮತ್ತು ಮಸನಮ್ಮ ಇಬ್ಬರು ಕೂಡಿ ನೇರವಾಗಿ ಊರ ಹತ್ತಿರ ಗುಡ್ಡದ ಮೇಲೆ ಇರುವ ಮಾಳಿಂಗರಾಯ ದೇವಸ್ಥಾನಕ್ಕೆ ಮಧ್ಯಾಹ್ನ 12-30 ಪಿ ಎಂ ಕ್ಕೆ ಹೋಗಿದ್ದು, ಅವಳ ನಡತೆಯ ವಿಷಯದಲ್ಲಿ ನಾನು ಜಗಳ ಮಾಡಿ ಅಲ್ಲಿಯೇ ಇರುವ ದೊಡ್ಡದ್ದಾದ ಕಲ್ಲಿನಿಂದ ಅವಳ ಮುಖದ ಮೇಲೆ 8-9 ಭಾರಿ ಹೊಡೆದು ಜಜ್ಜಿದ್ದರಿಂದ ಮುಖದ ಭಾಗ ಮತ್ತು ತಲೆಯ ಭಾಗ ಪೂರ್ತಿಯಾಗಿ ಒಡೆದು ಮೌಂಸ್ ಖಂಡ ಹೊರಬಂದು ಭಾರಿ ರಕ್ತಗಾಯವಾಗಿ ಚಿರಾಡುತ್ತಾ ಸ್ಥಳದಲ್ಲಿಯೇ ಸತ್ತಿರುತ್ತಾಳೆ. ಖುದ್ದಾಗಿ ಆರೋಪಿ ಠಾಣೆಗೆ ಹಾಜರಾಗಿದ್ದರಿಂದ, ನಾನು ಮತ್ತು ಸಿಬ್ಬಂದಿಯವರು ಆರೋಪಿತನೊಂದಿಗೆ ಸನಗುಂದಾ ಗ್ರಾಮದ  ಮಾಳಿಂಗರಾಯನ ದೇವಸ್ಥಾನದ ಗರ್ಭಗುಡಿಯಲ್ಲಿ  ಆರೋಪಿತನು ತೋರಿಸಿರುವ ಘಟನೆಯನ್ನು ನೋಡಲಾಗಿ ವಿಷಯ ನಿಜವೆಂದು ಕಂಡು ಬಂದಿರುತ್ತದೆ. ದಿನಾಂಕ;10/01/2013 ರಂದು ಮಧ್ಯರಾತ್ರಿ 00-30  ಎ ಎಂ ಕ್ಕೆ ಬಂದು ಆಪಾಧಿತ ಧಾನಯ್ಯ ತಂದೆ ರಾಮನಯ್ಯ ಚಿರುಕುರಿ ಇತನ ಮೇಲೆ ಸರಕಾರಿ ತರ್ಫೇ ಯಾಗಿ ಠಾಣೆ ಗುನ್ನೆ  ನಂ:07/2013 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಸಂದೀಪ ರಾವಸಾಹೇಬ ಸಿತೋಲೆ ವಯ|| 35, || ಜನರಲ್ ಮ್ಯಾನೇಜರ, ಸಾ|| ಶ್ರೀಶಾಂತ ಮಾಲ್, ಪಿಂಪೇಲೈನ ರೋಡ ಸವೇಡಿ ಅಹ್ಮದನಗರ (ಮಹಾರಾಷ್ಟ್ರ ರಾಜ್ಯ) ರವರು ನಮ್ಮ ಗುಲಬರ್ಗಾ ಶಾಖೆಯ ಮ್ಯಾನೇಜರ ದಿನಾಂಕ:09/01/2013 ರಂದು 09-00 ಗಂಟೆಗೆ ಪೋನ್ ಮಾಡಿ ಹೇಳಿದ್ದೆನೆಂದರೆ ನಮ್ಮ ಶಾಖೆಯ ಬಾಗಿಲು ತೆಗೆದು ನೋಡಲಾಗಿ ಯಾರೋ ಕಳ್ಳರು ದಿನಾಂಕ:08/01/2013 ರಂದು 2200 ಗಂಟೆಯಿಂದದಿ:09/01/2013ರಬೆಳಿಗ್ಗೆ 09-00 ಗಂಟೆಯ ಮಧ್ಯದ ವೇಳೆಯಲ್ಲಿ ಬ್ಯಾಂಕ ಲಾಕರದಲ್ಲಿಟ್ಟ ನಗದು ಹಣ ರೂ.56,61,341/- ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದರಿಂದ ಸದರಿ ಕಳ್ಳತನ ಮಾಡಿದ ಆರೋಪಿತರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:03/2013 ಕಲಂ: 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.