POLICE BHAVAN KALABURAGI

POLICE BHAVAN KALABURAGI

08 January 2013

GULBARGA DISTRICT

ಗುಲಬರ್ಗಾ ನಗರದಲ್ಲಿ ಆಕ್ರಮವಾಗಿ ಅಟೋಗಳಿಗೆ ಗ್ಯಾಸ್ ತುಂಬುವವರ  ಬಂಧನ:
:: ಬಂಧಿತರಿಂದ ಗ್ಯಾಸ್ ಸಿಲಿಂಡರಗಳು ಮತ್ತು ತೂಕದ ಯಂತ್ರ ಮತ್ತು ಅಟೋಗಳು ಜಪ್ತಿ:
ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು, ಮತ್ತು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ, ನಗರದಲ್ಲಿ ಆಕ್ರಮವಾಗಿ ಅಟೋಗಳಿಗೆ ಗ್ಯಾಸ್ ರಿಪಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ಡಿಸಿಐಬಿ ಘಟಕದ ಪೊಲೀಸ್ ಇನ್ಸಪೇಕ್ಟರ ಶ್ರೀ ಎಸ್.ಎಸ್.ಹುಲ್ಲೂರ  ಮತ್ತು ಸಿಬ್ಬಂದಿಯವರಾದ ಬಸವರಾಜ ಎ.ಎಸ.ಐ, ಅಣ್ಣಪ್ಪಾ, ವಿಜಯಕುಮಾರ, ಅಣ್ಣರಾಯ, ಲಕ್ಕಪ್ಪಾ, ಪ್ರಕಾಶ, ಅಶೋಕ, ಮತ್ತು ಚೌಕ ಠಾಣೆಯ ಪೊಲೀಸ್ ಇನ್ಸಪೇಕ್ಟರರಾದ ಬಿ.ಬಿ ಭಜಂತ್ರಿ ಮತ್ತು ಚೌಕ ಠಾಣೆಯ ಸಿಬ್ಬಂದಿಯವರು ದಿನಾಂಕ:07-01-2013 ರಂದು ಚೆನ್ನವೀರ ನಗರದ ಬಡಾವಣೆಯ ಚೆನ್ನಬಸಪ್ಪಾ ತಂದೆ ಶಾಂತಪ್ಪ ಉಮ್ಮರಗಿ ವ|| 29 ಸಾ|| ಚೆನ್ನವೀರ ನಗರ ಗುಲಬರ್ಗಾ ಇತನ ಮನೆಯ ಮೇಲೆ ದಾಳಿ ಚೆನ್ನವೀರ ಇತನು ತನ್ನ ಮನೆಯ ಅಂಗಳದ ಪತ್ರಾ ಶೇಡ್ಡಿನಲ್ಲಿ ಯಾವದೇ ಪರವಾನಿಗೆ ಪಡೆಯದೆ ಆಕ್ರಮವಾಗಿ ಅಟೋಗಳಿಗೆ ಗ್ಯಾಸ ರಿಪೀಲಿಂಗ್ ಮಾಡುತ್ತಿರುವವನ ಮೇಲೆ ದಾಳಿ ಮಾಡಿ, ಆಕ್ರಮವಾಗಿ ಉಪಯೋಗಿಸುತ್ತಿರುವ ಭಾರತ ಗ್ಯಾಸ್ ಸಿಲಿಂಡರಗಳು, ಇಂಡಿಯನ್ ಗ್ಯಾಸ್ ಸಿಲಿಂಡರಗಳು, ತೂಕದ ಯಂತ್ರ, ಹಾಗು ಅಟೋ ನಂ: ಕೆಎ 32/5353 ನೇದ್ದನ್ನು  ಮತ್ತು ಚಾಲಕ ಪ್ರಕಾಶ ತಂದೆ ರಾಜು ರೇವೂರ ಸಾ|| ಚೆನ್ನವೀರ ನಗರ ಗುಲಬರ್ಗಾ ಇತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಹಾಗೆಯೇ  ಚೆನ್ನವೀರ ನಗರದ ಸುರೇಶ ತಂದೆ ಮಲ್ಕಣ್ಣಾ ಹನಗುಂಡಿ ಇತನು ಸಹ ಆಕ್ರವಾಗಿ ಯಾವದೇ ಪರವಾನಿಗೆ ಇಲ್ಲದೆ ಅಟೋಗಳಿಗೆ ಒಂದು ಕೆ.ಜಿ.ಗೆ 90 ರೂಪಾಯಿಗಳಂತೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿ ಸಾರ್ವಕಜನಿಕರಿಗೆ ಮೋಸ ಮಾಡುತ್ತಿರುವವನ ಮೇಲೆ ದಾಳಿ ಮಾಡಿ ಇತನಿಂದಲೂ ಸಹ ಗ್ಯಾಸ ಸಿಲಿಂಡರಗಳು,  ತೂಕ ಮಾಡುವ ಯಂತ್ರ, ಮತ್ತು ಅಟೋ ನಂ:ಕೆಎ 32/ಎ-388 ನೇದ್ದನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ಗ್ಯಾಸ ತುಂಬುವ ವ್ಯಕ್ತಿ  ಸುರೇಶ ಇತನು ಓಡಿಹೋಗಿರುತ್ತಾನೆ.
ಶಿವಶಕ್ತಿ ನಗರದ ಈರಣ್ಣಾ ತಂದೆ ನಿಂಗಣ್ಣ ರೇವೂರ ವ||28 ಸಾ|| ಶಿವಶಕ್ತಿ ನಗರ ಗುಲಬರ್ಗಾ ಇತನು ಸಹ ತನ್ನ ಮನೆಯ ಅಂಗಳದ ಪತ್ರಾ ಶೆಡ್ಡಿನಲ್ಲಿ  ಯಾವದೇ ಪರವಾನಿಗೆ ಇಲ್ಲದೇ ಅಟೋಗಳಿಗೆ ವಾಣಿಜ್ಯ ಉಪಯೋಗದ ಗ್ಯಾಸ್ ಸಿಲಿಂಡರಗಳನ್ನು ಖರೀದಿಸಿ ಅವುಗಳನ್ನು ಅಟೋಗಳಿಗೆ ಒಂದು ಕೆ.ಜಿ. ಗೆ  90 ರೂಪಾಯಿಯಂತೆ  ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವನ್ನು ವಶಕ್ಕೆ ತೆಗೆದುಕೊಂಡು ಆತನಿಂದ ಗ್ಯಾಸ್ ಸಿಲಿಂಡರಗಳು, ತೂಕದ ಯಂತ್ರ, ಒಂದು ಅಟೋ ನಂ: ಕೆಎ 32/ 8620 ನೇದ್ದ ಜಪ್ತಿ ಪಡಿಸಿಕೊಂಡಿರುತ್ತಾರೆ. ಹೀಗೆ ಒಟ್ಟು ಅಟೋಗಳು ಮತ್ತು ಗ್ಯಾಸ ಸಿಲಿಂಡರ್ ಗಳು, ತೂಕದ ಯಂತ್ರ ಮತ್ತು ರಿಫಿಲ್ಲಿಂಗ್ ಯಂತ್ರ ಅ||ಕಿ|| 3,52,000/- ಗಳ ಮೌಲ್ಯದ್ದು ಜಪ್ತಿ ಪಡಿಸಿಕೊಳ್ಳಲಾಗಿದೆ. ಸದರಿಯವರ ಮೇಲೆ ಅನುಕ್ರಮವಾಗಿ ಚೌಕ ಪೊಲೀಸ್ ಠಾಣೆ ಗುನ್ನೆ ನಂ: 09/2013, 10/2013, 11/2013,  ಕಲಂ, 420 ಐಪಿಸಿ ಮತ್ತು 3 & 7 ಇ.ಸಿ ಆಕ್ಟ ಹಾಗು ಕಲಂ 3 ಎಲ್.ಪಿ.ಜಿ. ಸಪ್ಲಾಯ ಕಂಟ್ರೋಲ್ ಆರ್ಡರ್ 2000 ನೇದ್ದರಂತೆ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಿಲಾಗಿದೆ. 

GULBARGA DISTRICT REPORTED CRIMES

ದರೋಡೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಜಮೀರ ಅಹ್ಮದ ತಂದೆ ಮಸ್ತಾನಸಾಬ ಭಾಗವಾನ ವ|| 28 ವರ್ಷ ಸಾ|| ಮಕ್ದುಮ ದರ್ಗಾ ಹತ್ತಿರ, ಶೇಖ ರೋಜಾ ಹತ್ತಿರ, ಹಾ||ವ|| ಲಕ್ಷ್ಮಿ ನಗರ, ಡಬರಾಬಾದ ಕ್ರಾಸ್ ರಿಂಗ್ ರೋಡ ಗುಲಬರ್ಗಾರವರು ನಾನು ದಿನಾಂಕ:06-01-2013 ರಂದು ಅಳಂದ ಚಕ್ ಪೋಸ್ಟ ಹತ್ತಿರವಿರುವ ನನ್ನ ಹೋಟೇಲ ತೆರೆದು ವ್ಯಾಪರ ಮಾಡಿಕೊಂಡು ರಾತ್ರಿ 10-00 ಗಂಟೆಗೆ ಹೋಟೆಲ್ ಮುಚ್ಚಿಕೊಂಡು ಡಬರಾಬಾದ ಕ್ರಾಸ ಹತ್ತಿರ ಲಕ್ಷ್ಮೀ ನಗರದಲ್ಲಿರುವ ನನ್ನ ಮನೆಗೆ ರಿಂಗ ರೋಡ ಮುಖಾಂತರ ನಡೆದುಕೊಂಡು ಮನೆಗೆ ಬರುತ್ತಿದ್ದಾಗ  ಚೋರ ಗುಮ್ಮಜ ಇನ್ನು ಸ್ವಲ್ಪ ಮುಂದೆ ಇರುತ್ತಿದ್ದಂತೆ ರೋಡಿನ ಪಕ್ಕದಲ್ಲಿ  ಬ್ರಿಜಿನ ಕವನರಳಿನಲ್ಲಿ  ಒಮ್ಮೆಲೆ 7-8 ಜನರು ಬಂದು ಅದರೆಲ್ಲಿ ಒಬ್ಬನು ನನಗೆ ಆಯುಧ ತೆಗೆದು ಕುತ್ತಿಗೆ ಹತ್ತಿರ ಹಿಡಿದು,  ಏ ಮಾಕೆ ತೇರಾ ಪಾಸ ಪೈಸಾ ಕಿತ್ತನೆ ಹೈ  ಹಮಾರೆಕು ದೇ  ಅಂತ ಹಿಂದಿನಲ್ಲಿ ಹೇಳುತ್ತ ನನಗೆ ಅಂಜೀಸುತಿದ್ದು ಇನ್ನೊಳಿದ 6-7 ಜನರು  ಅಂಗಿಯ ಹಾಗು ಪ್ಯಾಂಟಿನ ಜೇಬ ಚೆಕ್ಕ ಮಾಡಿ ನನ್ನ ಹತ್ತಿರವಿರುವ ಸುಮಾರು 1500/- ರೂ ಹಾಗು ಒಂದು ಸಾಮ ಸಂಗ ಕಂಪನಿಯ ಮೋಬೈಲ್ ಪೋನ ಹೇದರಿಸಿ ಕಿತ್ತುಕೊಂಡು ಹೊರಟು ಹೋಗಿರುತ್ತಾರೆ. ಈ ವಿಷಯದ ಬಗ್ಗೆ ನನ್ನ ತಂದೆಯವರಿಗೆ ಹೇಳಿದ್ದು, ಅವರು ದೂರು ಕೊಡಲು ತಿಳಿಸಿದ ಮೇರೆಗೆ ಇಂದು ದಿನಾಂಕ: 07-01-2013 ರಂದು ಠಾಣೆಗೆ ಬಂದು ದೂರು ಸಲ್ಲಿಸುತ್ತಿದ್ದೆನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:03/13 ಕಲಂ 395, 397 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME