POLICE BHAVAN KALABURAGI

POLICE BHAVAN KALABURAGI

01 August 2011

GULBARGA DISTRICT REPORTED CRIME

ಜೂಜಾಟ ಪ್ರಕರಣ;
ನಿಂಬರ್ಗಾ ಪೊಲೀಸ ಠಾಣೆ:
ದಿನಾಂಕಃ 01/08/2011 ರಂದು ಮಧ್ಯಾಹ್ನ ಹಿತ್ತಲಶಿರೂರ ಗ್ರಾಮದಲ್ಲಿರುವ ಹನುಮಾನ ದೇವರ ಕಟ್ಟಿಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ರಾಜು ತಂದೆ ಧೂಳಪ್ಪ ಮ್ಯಾಗಿನಕೇರಿ ಸಂಗಡ 6 ಜನರು  ಎಲ್ಲರೂ ಸಾ|| ಹಿತ್ತಲಶಿರೂರ ಗ್ರಾಮ ದವರು ದುಂಡಾಗಿ ಕುಳಿತು ಇಸ್ಪೇಟ್ ಆಡುತ್ತಿರುವಾಗ ಎ.ಎಸ್.ಐ ಶ್ರೀ ದೇವಿಂದ್ರ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಜೂಜಾಡುತ್ತಿರುವವರಿಂದ ನಗದು ಹಣ 995/- ರೂ. ಇಸ್ಪೇಟ್ ಎಲೆಗಳು ಜಪ್ತಿ ಮಾಡಿಕೊಂಡಿದ್ದರ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DISTRICT REPORTED CRIMES

ನಂಬಿಕೆ ದ್ರೋಹ ಮೋಸದ ಪ್ರರಕಣ:

ಸ್ಟೇಷನ ಬಜಾರ ಠಾಣೆ: ಶ್ರೀಮತಿ ಕಮಲಾಬಾಯಿ ಗಂಡ ತುಳಜಾರಾಮ ಸಾ|| ಮನೆ ನಂ ಇ-8 3207 ರಾಜೀವ ಗಾಂಧಿ ನಗರ ರವರು ನಾನು ಮತ್ತು ನನ್ನ ಸಂಬಂದಿಯಾದ ಸುಮಿತ್ರಾಭಾಯಿ ಢೋಣಿ ಇಬ್ಬರೂ ಕೂಡಿ ಹಣ ಡ್ರಾ ಮಾಡಲು ಸುಪರ ಮಾರ್ಕೆಟನಲ್ಲಿರುವ ಎಸ್.ಬಿ.ಐ ಎ. ಎ.ಎಟಿ.ಎಮ್. ಕ್ಕೆ ಹೋಗಿ ಹಣ ಡ್ರಾ ಮಾಡುವಾಗ ತನ್ನ ಪಕ್ಕದಲ್ಲಿ ಇದ್ದ ಒಬ್ಬ ಅಪರಿಚಿತ ವ್ಯಕ್ತಿ ನನ್ನ ಎ.ಟಿ.ಎಮ್. ಕಾರ್ಡನ ರಹಸ್ಯ ನಂಬರನ್ನು ನೋಡಿಕೊಂಡು ನನಗೆ ಮೋಸದಿಂದ ನನ್ನ ಎಟಿಎಮ್ ಕಾರ್ಡನ್ನು ತೆಗೆದುಕೊಂಡು ತನ್ನಲ್ಲಿದ್ದ ಎ.ಟಿ.ಎಮ್. ಕಾರ್ಡನ್ನು ಕೊಟ್ಟು ಹೋಗಿರುತ್ತಾನೆ ನನ್ನ ಎಟಿಎಮ್ ಕಾರ್ಡದಿಂದ ದಿನಾಂಕ 23-07-11 ರಂದು 1315 ನಿಮಿಷಕ್ಕೆ 10,000=00 ರೂ ಹಾಗೂ 1320 ನಿಮಿಷಕ್ಕೆ 1,900=00 ರೂಗಳನ್ನು ಹೀಗೆ ಒಟ್ಟು 11,9000=00 ರೂಗಳನ್ನು ಡ್ರಾ ಮಾಡಿಕೊಂಡು ಮೋಸ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀಮತಿ ಸುಮೀತ್ರಾಬಾಯಿ ಗಂಡ ಅಣ್ಣಪ್ಪಾ ಬಡಿಗೇರ ಸಾಃಕಲ್ಮೂಡ ನಾನು ದಿನಾಂಕ: 30,31,/07/2011 ರಂದು ರಾತ್ರಿ ವೇಳೆಯಲ್ಲಿ ಭಾರಿ ಮಳೆ ಬಿದ್ದ ಪ್ರಯಕ್ತ ಬೆಳಿಗ್ಗೆ ಎದ್ದು ನೋಡಲಾಗಿ, ತುಕಾರಾಮ ಇವರು ತಮ್ಮ ಮನೆಯ ಅಂಗಳದಲ್ಲಿ ಮುರುಮ ಹಾಕಿ ನಾಲೆ ಬಂದು ಮಾಡಿದ್ದರಿಂದ ಮಳೆಯ ನೀರು ನಮ್ಮ ಅಂಗಳದಲ್ಲಿ ಬಂದು ನಿಂತಿರುವುದನ್ನು ನೋಡಿ, ನಾನು, ನನ್ನ ಮಗ ಮೌನೇಶ, ಸೊಸೆ ಅಂಬಿಕಾ ಮತ್ತು ಮಗಳು ರೇಣುಕಾ ಎಲ್ಲರೂ ಕೂಡಿ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ನಿಂತುಕೊಂಡು ತುಕರಾಮ, ಶಾರದಾಬಾಯಿ ಮಾಣಿಕ, ಮೌನೇಶ ಎಲ್ಲರೂ ನಿಂತಿರುವುದನ್ನು ನೋಡಿ, ನಾನು, ತುಕಾರಾಮ ಇತನಿಗೆ ನಿಮ್ಮ ಅಂಗಳದಲ್ಲಿ ಮುರುಮ ಹಾಕಿದಲ್ಲದೇ ನಾಲೆ ಕೂಡಾ ಬಂದು ಮಾಡಿದ್ದರಿಂದ ನಿಮ್ಮ ಮನೆಯ ಮೇಲೆ ಬಿದ್ದಿರುವ ಮಳೆ ನೀರು ನಮ್ಮ ಅಂಗಳದಲ್ಲಿ ಬಂದು ನಿಂತುಕೊಂಡಿವೆ. ಹೋಗುವದಕ್ಕೆ ಬರುವದಕ್ಕೆ ಆಗುತ್ತಿಲ್ಲಾ. ನೀನು ಬಂದು ಮಾಡಿರುವ ನಾಲೆಯನ್ನು ತೆರೆದರೆ ನೀರು ನಾಲೆಗೆ ಹರಿದು ಹೋಗುತ್ತವೆ ಅಂತಾ ಅಂದಿದಕ್ಕೆ ತುಕಾರಾಮ ಮತ್ತು ಆತನ ಹೆಂಡತಿ ಮಕ್ಕಳು ಎಲ್ಲರೂ ಬಂದವರೇ ಅವಾಚ್ಯವಾಗಿ ಬೈದು ನೆಲಕ್ಕೆ ಕೆಡುವಿ, ಬಾಯಿಯಿಂದ ಕಚ್ಚಿ ರಕ್ತಗಾಯ ಪಡಿಸಿದನು. ಜಗಳ ಬಿಡಿಸಲು ಬಂದ ನನ್ನ ಮಕ್ಕಳು ಮತ್ತು ಸೊಸೆ, ಅಂಬಿಕಾ ಇವಳಿಗೆ ಶಾರಾದಾಬಾಯಿ ಇವಳಿಗೆ ಎಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಜಾಗ್ರತೆ ಪ್ರಕರಣ:

ವಿಶ್ವ ವಿದ್ಯಾಲಯ ಠಾಣೆ : ದಿನಾಂಕ: 31-07-2011 ರಂದು ಹಾಗರಗಾ ರೋಡ ಮಾಲಗತ್ತಿ ಕ್ರಾಸ ಹತ್ತಿರ ಇಬ್ಬರು ಅಂಬಾರಯ ತಂದೆ ಮಲ್ಲೆಶಪ್ಪ ಮಡಿವಾಳ ಸಾ: ಹಗರಗಾ ಗ್ರಾಮ ಮತ್ತು ಮಹಿಬೂಬಸಾಬ್ ತಂದೆ ಸತ್ತರ ಪಟೇಲ ಸಾ: ಹಾಗರಗಾ ಗ್ರಾಮ ರವರು ರಸ್ತೆಯ ಮೇಲೆ ಹೋಗಿ ಬರುವ ಜನರಿಗೆ ಅವಾಚ್ಯ ಶಬ್ದಗಳನ್ನು ಬೈಯ್ಯುತ್ತಾ ಸಾರ್ವಜನಿಕ ಶಾಂತತಾ ಭಂಗವನನುಂಟು ಮಾಡುತ್ತಿದ್ದು ಇವರನ್ನು ಹೀಗೆ ಬಿಟ್ಟಲ್ಲಿ ಯಾವುದಾದರೊಂದು ಅಪರಾದ ಮಾಡಬಹುದು ಅಂತಾ ತಿಳಿದು ಮುಂಜಾಗ್ರತೆ ಕ್ರಮದ ಅಡಿಯಲ್ಲಿ ಪಿ.ಎಸ.ಐ ವಿಶ್ವ ವಿದ್ಯಾಲಯ ರವರು ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುರುತ್ತಾರೆ.

ಮೋಸ ಪ್ರಕರಣ:

ಗ್ರಾಮೀಣ ಠಾಣೆ : ಶ್ರೀ ಮಹ್ಮದ ಇಬ್ರಾಹಿಂ @ ಮಹ್ಮದ ಫಿರೋಜ ತಂದೆ ಮಹ್ಮದ ಇಸ್ಮಾಯಿಲ್ ರವರು ಬುಲಂದ ಪರವೇಜ ಕಾಲನಿ ರಿಂಗ ರೋಡ ಗುಲಬರ್ಗಾದಲ್ಲಿ ಬೋರವೆಲ್ಲ ಬೀಟ್ಸ್ ಗ್ರೀಡಿಂಗ ಮೊಟಾರ್ಸ ರಜಿಸ್ಟ್ರೇಷನ್ ನ್ಯಾಷನಲ್ ಇಂಜನಿಯರಿಂಗ ವರ್ಕ್ಸ ಸಪ್ಲಾಯ ವ್ಯವಹಾರ ಮಾಡಿಕೊಂಡಿದ್ದು , ದಿನಾಂಕ 1-2-2009 ರಂದು ಅನೀಶ ಉಲ್‌ ಹಕ್‌ ತಂದೆ ವಾಹೀದ ಉಲ್‌ -ಹಕ್‌ ಸಾ: ಹಜಾರ ಎಂಟರಪ್ರ್ಐಜ್ಸ್‌ ನಂ 45 ವಿಕಾಸ ಟವರ್‌ ಇಂದ್ರಾ ಕಾಂಪ್ಲೇಕ್ಸ್‌‌ ಎ.ಬಿ ರೋಡ ಇಂದೋರ ಮದ್ಯಪ್ರದೇಶ ರಾಜ್ಯ ಮತ್ತು ಎಮ್‌ಅಯಾಜ-ಉಲ್‌ -ಹಕ್‌ ಹತ್ತರ ಮಿನಾ ಹೊಟೇಲ ಬಾಲನಗರ ಹೈದ್ರಾಬಾದ ಆಂದ್ರ ಪ್ರದೇಶ ನೇದ್ದವರು ನೀವು ಸಪ್ಲಾಯ ಮಾಡಿದ ಸಾಮಾನುಗಳು ಸಾಗಿಸುವಾಗ ಡ್ಯಾಮೇಜ ಆಗಿರುತ್ತವೆ ಈ ಬಗ್ಗೆ ಇಂದೋರಕ್ಕೆ ಬಂದು ಕ್ಲಾರಿಫಿಕೇಷನ ಮಾಡಿಕೊಳ್ಳಿರೀ ಮತ್ತು ಡ್ಯಾಮೇಜ ಸಾಮಾನುಗಳ ಹಣ ಸಂದಾಯ ಮಾಡಿರಿ ಎಂದು ತಿಳಿಸಿದ ಮೇರೆಗೆ ಇಂದೋರಕ್ಕೆ ಹೋಗಲು ಅನೀಸ ಉಲ್ಲ ಹಕ್ಕ್ ಮತ್ತು ಮಹ್ಮದ ಎಜಾಜ್ ಇವರಿಬ್ಬರು ದಿನಾಂಕ 7-02-2009 ರಂದು ಹಿಂದಿಯಲ್ಲಿ ಅಗ್ರೀಮೆಂಟ ಮುಖಾಂತರ ಹಾನಿ ಹಣ ಕೊಡುವಂತೆ ಮತ್ತು ಕೆಲವು ಖಾಲಿ ಚೆಕ್ಕುಗಳು ಕೊಡಲು ಹೇಳಿದ ಪ್ರಕಾರ ನನ್ನ ಚೆಕ್ಕ ನಂಬರ 685381, 382, 385, 387, 388, 393, 394 ಪಡೆದುಕೊಂಡು ಅಗ್ರಿಮೆಂಟ ಮಾಡಿಕೊಂಡಿದ್ದು , ನಂತರ ಶೋ ರೂಮಕ್ಕೆ ಹೋಗಿ ಹಾನಿ ವಿವರ ನೋಡಲಾಗಿ ಕೇವಲ್ 4,53,000/- ರೂ. ಆಗಿದ್ದು, ಆದರೆ ನನಗೆ 5,68,000 ಮತ್ತು 1,50,500 ರೂ. ಕಂತುಗಳಲ್ಲಿ ರೂಪದಲ್ಲಿ ಕೊಟ್ಟು ಅವರಿಂದ ಲಿಖಿತ ರೂಪದಲ್ಲಿ ಹಣ ಪಡೆದ ಬಗ್ಗೆ ಬರೆದುಕೊಂಡಿದ್ದು ಇರುತ್ತದೆ. ಸದರಿಯವರು ನನಗೆ ಹಣ ಮತ್ತು ಚೆಕ್ಕ ಹಿಂದಿರುಗಿಸದೇ ಹಣ ತೆಗೆದುಕೊಂಡು ಮೋಸ ಮಾಡಿರುತ್ತಾರೆ. ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.