POLICE BHAVAN KALABURAGI

POLICE BHAVAN KALABURAGI

23 November 2014

Kalaburagi District Reported Crimes

ಅಪಘಾತ ಪ್ರಕರಣಗಳು :
ಆಳಂದ ಠಾಣೆ : ಶ್ರೀ ಮೃತುಜಾ ತಂದೆ ಗುಲಾಬಸಾಬ ನದಾಫ್‌ ಸಾ: ಆಯಾ ಜಂಗಲ ನೀರಿನ ಟಾಕಿ ಹತ್ತಿರ ಆಳಂದ ರವರು ದಿನಾಂಕ 22-11-2014 ರಂದು ಬೆಳಿಗ್ಗೆ 9 :00 ಗಂಟೆಗೆ ನಾನು ಮತ್ತು ನನ್ನೊಂದಿಗೆ ಕಾರಪೆಂಟರ ಕೆಲಸ ಮಾಡುತ್ತಿದ್ದ ಮಕಬೂಲ ಅಹ್ಮದ ತಂದೆ ಅಹ್ಮದ ಜರ್ದಿ ಕೂಡಿಕೊಂಡು ನನ್ನ ಮೋಟರ ಸೈಕಲ ನಂ ಎಮ್‌ಎಚ್‌ 13 ಎವಿ 8521 ನೇದ್ದರ ಮೇಲೆ ತಡಕಲಕ್ಕೆ ಕಾರಪೆಂಟರ ಕೆಲಸಕ್ಕಾಗಿ ಹೋಗಿ ಮದ್ಯಾಹ್ನ 3:00 ಗಂಟೆ ಸುಮಾರಿಗೆ ಮುಗಿಸಿಕೊಂಡು ಬರುವಾಗ ನಾನು ಮೋಟರ ಸೈಕಲ ಚಲಾಯಿಸುತ್ತಿದ್ದು ನನ್ನ ಹಿಂದೆ ಮಕಬೂಲ ಅಹ್ಮದ ಕುಳಿತಿದ್ದು ಹೊನ್ನಳ್ಳಿ ಕ್ರಾಸ ದಾಟಿ 1 ಕೀಮೀ ಮುಂದೆ ಬಂದಾಗ ಎದುರಿನಿಂದ ಅಂದರೆ ಆಳಂದ ಕಡೆಯಿಂದ ಒಬ್ಬ ಮೋಟರ ಸೈಕಲ ಚಾಲಕನು ಒಬ್ಬನನ್ನು ಹಿಂದುಗಡೆ ಕುಡಿಸಿಕೊಂಡು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿ ನಮ್ಮ ಮೋಟರ ಸೈಕಲಿಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾವು ಕೆಳಗಡೆ ಬಿದಿದ್ದು ನನಗೆ ಎರಡು ಹುಬ್ಬಿನ ಮೇಲ್ಭಾಗದಲ್ಲಿ , ಕೀವಿಯ, ಭಾಯಿಯ ಮೇಲೆ ಭಾರಿ ರಕ್ತಗಾಯವಾಗಿದ್ದು ಮತ್ತು ನನ್ನ ಹಿಂದೆ ಕುಳಿತ ಮಕಬೂಲನಿಗೆ ಬಲಮೇಲಕಿನ ಮೇಲ್ಬಾಗದಲ್ಲಿ ಬಡೆದು ಮೆದಳು ಹೊರಬಂದಿದ್ದು ಭಾರಿ ರಕ್ತಗಾಯವಾಗಿದ್ದು ಮತ್ತು ಬಲಗಾಲಿನ ಮೇಲೆ ಭಾರಿ ಗುಪ್ತಗಾಯವಾಗಿದ್ದು . ನಮಗೆ ಡಿಕ್ಕಿ ಪಡಿಸಿದವರು ಸಹ ಕೆಳಗಡೆ ಬಿದಿದ್ದು ಅವರಿಗೂ ಗಾಯಗಳಾಗಿದ್ದು . ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ನಂ ಕೆಎ 39 ಕೆ 4300 ಬಜಾಜ ಡಿಸ್ಕೋವರಿ ಇದ್ದು ನಮಗೆ ಡಿಕ್ಕಿ ಪಡಿಸಿದ ಮೋಟರ ಸೈಕಲ ಚಾಲಕನ ಹೆಸರು ಮಲ್ಲಿಕಾರ್ಜುನ ತಂದೆ ಲಕ್ಷ್ಮನ ಕಾಂಬಳೆ ಸಾ: ಮುನ್ನೊಳ್ಳಿ ಮತ್ತು ಅವನ ಹಿಂದೆ ಕುಳಿತವನ ಹೆಸರು ರಾಜಕುಮಾರ ತಂದೆ ಸುಭಾಸ ಅಟ್ಟೂರ ಮು: ಮನ್ನೊಳ್ಳಿ ಅಂತಾ ಕೇಳಿ ಗೊತ್ತಾಯಿತು. ನಂತರ ನನಗೆ ಮತ್ತು ನಮಗೆ ಡಿಕ್ಕಿ ಪಡಿಸಿದವರಿಗೆ ಯಾರೋ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತಾರೆ.ನಮಗೆ ಅಪಘಾತ ಪಟಿಸಿದ  ಮೋ.ಸೈಕಲ ನಂ ಕೆಎ 39 ಕೆ 4300 ನೇದ್ದರ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಮೋ.ಸೈಕಲ ಚಲಾಯಿಸಿ ನನಗೆ ಭಾರಿ ರಕ್ತಗಾಯಗೊಳಿಸಿ ನನ್ನೊಂದಿಗೆ ಇದ್ದ ಮಕಬೂಲ ಜರ್ದಿ ಇತನು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಶಿವಕುಮಾರ ತಂದೆ ಬಸವರಾಜ ಬಿರಾದಾರ ಸಾ|| ಅಫಜಲಪೂರ ರವರು ದಿನಾಂಕ 21-11-2014 ರಂದು ಬೆಳಿಗ್ಗೆ ಬಿಜಾಪೂರಕ್ಕೆ ಹೋಗಿ ಬಿಜಾಪೂರದಲ್ಲಿ ನನ್ನ ಕೆಲಸ ಮುಗಿಸಿಕೊಂಡು ಮರಳಿ ಅಫಜಲಪೂರಕ್ಕೆ ಬರಬೇಕೆಂದು ರಾತ್ರಿ 10:30 ಗಂಟೆಗೆ ಮರಳಿ ಬಿಜಾಪೂರ ಬಸ್ ನಿಲ್ದಾಣಕ್ಕೆ ಬಂದು ಬಿಜಾಪೂರದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ ಕೆಎ-32 ಎಫ್-1997 ಪಣಜಿಸೇಡಂ ಬಸ್ಸಿನಲ್ಲಿ ಡ್ರೈವರ ಹಿಂದೆ ಇರುವ ಸೀಟಿನಲ್ಲಿ ಕುಳಿತುಕೊಂಡು ಅಫಜಲಪೂರ ಕ್ಕೆ ಹೋರಟಿದ್ದು ಸದರಿ ಬಸ್ಸಿಗೆ ನಾನು ಕುಳಿತಿದ್ದ ಏಡಗಡೆ ಬಾಗದಲ್ಲಿ ಮುಂದಿನ ಗಾಲಿಯ ಟಾಯರ ಹಿಂದೆಯೆ ಪ್ರಯಾಣಿಕರು ಇಳಿಯಲು ಬಸ್ಸಿನ ಬಾಗಿಲು ಇರುತ್ತದೆ. ಸದರಿ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತಿವೇಗವಾಗಿ ನಡೆಸುತ್ತಿದ್ದನು, ಆಗ ನಾನು ಮತ್ತು ನನ್ನಂತೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ಬಸ್ಸಿನ ಚಾಲಕನಿಗೆ ನಿದಾನವಾಗಿ ನಡೆಸಿ ಅಂತಾ ಹೇಳುತ್ತಾ ಬಂದಿರುತ್ತೆವೆ, ಆದರೂ ಬಸ್ಸಿನ ಚಾಲಕ ಬಸ್ಸನ್ನು ವೇಗವಾಗಿ ನಡೆಸುತ್ತಿದ್ದು ದಿನಾಂಕ  22-11-2014  ರಂದು ಬೆಳಗಿನಜಾವ 2:00 ಗಂಟೆ ಸುಮಾರಿಗೆ ಬಸ್ಸು ಅಫಜಲಪೂರ ಪಟ್ಟಣದ ತಹಸಿಲ ಕಾರ್ಯಾಲಯ ದಾಟಿದ ತಕ್ಷಣ ನಾನು ನನ್ನ ಸೀಟಿನಿಂದ ಎದ್ದು ನಿಂತುಕೊಂಡೆನು, ಬಸ್ಸಿನ ಬಾಗಿಲು ತೆರದಿತ್ತು, ಸದರಿ ಬಸ್ಸಿನ ಚಾಲಕ ಮುಂದೆ ಅಂಬೆಡ್ಕರ ಸರ್ಕಲ ಹತ್ತಿರ ಬಸ್ಸನ್ನು ಜೋರಾಗಿ ತಿರುಗಿಸಿದನು, ಬಸ್ಸಿನ ಚಾಲಕ ಅತಿವೇಗವಾಗಿ ಮತ್ತು ನಿಸ್ಕಾಳಜಿತನಿಂದ ತನ್ನ ಬಸ್ಸನ್ನು ಅಂಭೆಡ್ಕರ ಸರ್ಕಲದಲ್ಲಿ ತಿರುಗಿಸಿದ್ದರಿಂದ ಆಗ ನಾನು ನಿಂತಿದ್ದ ಸ್ಥಳದಿಂದ ಜೋಲಿ ಹೋಗಿ ಬಾಗಿಲಿನಿಂದ ಕೆಳಗೆ ಬಿದ್ದೆನು ಆಗ ಸದರಿ ಬಸ್ಸಿನ ಹಿಂದಿನ ಗಾಲಿಯ ಟಾಯರಗಳು ನನ್ನ ಏರಡು ಕಾಲಿನ ಮೇಲೆ ಹಾಯ್ದು ಹೋದವು, ಇದರಿಂದ ನನ್ನ ಎರಡು ಕಾಲುಗಳಿಗೆ ಮೋಳಕಾಲಿನಿಂದ ಪಾದದ ವರೆಗೆ ಬಾರಿ ರಕ್ತಗಾಯವಾಗಿರುತ್ತವೆ ಅಂತಾ ಸಲ್ಲಿಸಿದ ದುರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ಸಂಜಯಕುಮಾರ ತಂದೆ ಪ್ರಕಾಶ ದೊಡ್ಡಮನಿ ಸಾ:  ಬ್ಲಾಕ್ ನಂ.9 ಪೊಲೀಸ್ ಕ್ವಾಟರ್ಸ ಕಲಬುರಗಿ ರವರು ದಿನಾಂಕ 21/11/2014 ರಂದು ಮುಂಜಾನೆ 10 ಎ.ಎಂ.ಕ್ಕೆ ನಾನು ಮೋಟಾರು ಸೈಕಲ್ ತೆಗೆದುಕೊಂಡು ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ನನ್ನ ಮೋಟಾರ ಸೈಕಲ್ ಬಸ್  ಸ್ಟ್ಯಾಂಡ ಒಳಗಡೆ ಇರುವ ಇನ್ವೇರಿ ಹತ್ತಿರ ನಿಲ್ಲಿಸಿ ಕೀಲಿ ಹಾಕಿ ನಾನು ನನ್ನ ಕೆಲಸದ ನಿಮಿತ್ಯ ಬಸ್ ಮುಖಾಂತರ ನನ್ನ ಗ್ರಾಮಕ್ಕೆ ಹೋಗಿ ಮರಳಿ ಮದ್ಯಾಹ್ನ 2 ಗಂಟೆಗೆ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ್ ಕೆ.ಎ-32 ಎಸ್- 2323 ನೇದ್ದರ ಬ್ಲೂ ಬ್ಯಾಕ ಬಣ್ಣದ್ದು ಮಾಡಲ ನಂ. 2007 ಹಾಗು ಇಂಜನ್ ನಂ. 07B08M15885 ಚಸ್ಸಿ ನಂ. 07B09C01447  ಅ.ಕಿ. 45,000/- ರೂ ನೇದ್ದು ಇಟ್ಟ ಸ್ಥಳದಲ್ಲಿ ಇರಲಿಲ್ಲಾ ಈ ಬಗ್ಗೆ ಬಸ್ ನಿಲ್ದಾಣ ಇತರ ನನ್ನ ಗೆಳೆಯರಿಗೆ ಮತ್ತು ಎಲ್ಲಾ ಕಡೆಗೆ ವಿಚಾರಿಸಿದ್ದು ಕಳುವಾದ ನನ್ನ ಮೋಟಾರ ಸೈಕಲ್ ಸುಮಾರು 45 ಸಾವಿರ  ಬೆಲೆ ಬಾಳುವ ಇದ್ದು ಪತ್ತೆಯಾಗಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.