POLICE BHAVAN KALABURAGI

POLICE BHAVAN KALABURAGI

23 December 2016

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 22.12.2016 ರಂದು ಸಾಯಂಕಾಲ ಜೇವರಗಿ ಪಟ್ಟಣದ ಹೊರ ವಲಯದ ಸೊಮಣ್ಣಾ ಕಲ್ಲಾ ಇವರ ಹೊಲದ ಭಂಡಿ ದಾರಿ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಕೆಲವು ಜನರು ಹಣ ಪಣಕ್ಕೆ ಇಟ್ಟು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿದ್ದಾರೆ ಅಂತ  ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ ಎಸ್.ಭಿಸೆ ಪಿ.ಎಸ್.ಐ . ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಶ್ರೀ ಹೆಚ್.ಎಮ್. ಇಂಗಳೇಶ್ವರ ಸಿಪಿಐ ಜೇವರಗಿ ವೃತ್ತ ರವ ಮಾರ್ಗದರ್ಶನದಲ್ಲಿ  ಬಾತ್ಮೀ ಇದ್ದ ಸ್ಥಳದ ಸಮೀಪ ಹೋಗಿ ಬಂಡಿ ರಸ್ತೆ  ಪಕ್ಕದ ಗಿಡಕಂಠಿಗಳ ಮರೆಯಲ್ಲಿ  ನಿಂತು ನೋಡಲು  ಸದರಿ ರಸ್ತೆಯ  ಪಕ್ಕದಲ್ಲಿ ಖುಲ್ಲಾ ಸಾರ್ವಜನಿಕ  ಜಾಗೆಯಲ್ಲಿ ಕೆಲವು ಜನರು ಹಣ ಪಣಕ್ಕೆ ಹಚ್ಚಿ  ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಹಾರ ಜೂಜಾಟ ಆಡುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ಕ್ಕೆ ದಾಳಿ ಮಾಡಿ ಅವರಿಗೆ ಹಿಡಿದುಕೊಳಲು ಹೋದಾಗ ಅವರಲ್ಲಿ ಒಬ್ಬನು ಓಡಿ ಹೋದನು ಸಿಕ್ಕವರಿಗೆ  ಹೆಸರು ವಿಳಾಸ ವಿಚಾರಿಸಿ ಅಂಗಶೋದನೆ ಮಾಡಲಾಗಿ  1) ಖಾಲೀದ ತಂದೆ ಅಬ್ದುಲ್ ಸತ್ತಾರ  ಗುತ್ತೆದಾರ  ಸಾಃ ಟಿಪ್ಪುಸುಲ್ತಾನ ಚೌಕ ಜೇವರಗಿ 2) ಗುಂಡಪ್ಪ ತಂದೆ ಮರೆಪ್ಪ ಕುನ್ನೂರ  ಸಾ: ಕನಕದಾಸಚೌಕ ಜೇವರಗಿ . 3) ದೇವಿಂದ್ರಪ್ಪ ತಂದೆ ಶರಣಪ್ಪ ಗಂವ್ಹಾರ   ಸಾ: ಲಕ್ಮೀಚೌಕ ಜೇವರಗಿ  ಓಡಿ ಹೋದವನ ಹೆಸರು ಕೇಳಲಾಗಿ ಹೋಡಿ ಹೋದವನು ಶಿವಶಂಕರ ತಂದೆ ಮಲ್ಲಪ್ಪ ನಾಟೀಕಾರ ಸಾಃ ತಳವಾರ ಓಣಿ ಜೇವರಗಿ ಅಂತಾ ತಿಳಿಸಿದ್ದು ಜೂಜಾಟಕ್ಕೆ ಬಳಸಿದ ನಗದು ಹಣ 1150=00 ರೂ, 52 ಇಸ್ಪೇಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ.22-12-2016 ರಂದು  ಮದ್ಯಾನ 1-00 ಗಂಟೆಯ ಸುಮಾರಿಗೆ ರಾಮತೀರ್ಥ ಗುಡಿಯ ಕಡೆಗೆ ಹೋಗುತ್ತಿರುವಾಗ ರೋಡಿನ ಪಕ್ಕದಲ್ಲಿ ಜಾಲಿ ಗಿಡದ ಕೆಳಗೆ ಒಬ್ಬ ವ್ಯಕ್ತಿ ಮಲಗಿದ್ದು ಮೃತ ಪಟ್ಟಿರುವ ಬಗ್ಗೆ ಜನರು ನೋಡುತಿದ್ದರು ಆಗ ನಾನು ಕೂಡಾ ಹೋಗಿ ನೋಡಲಾಗಿ ಒಬ್ಬ ಭೀಕ್ಷುಕನಂತೆ ಇರುವ  ಅಪರಿಚಿತ ವ್ಯಕ್ತಿ ಮಲಗಿದಲ್ಲಿಯೇ ಮೃತ ಪಟ್ಟಿದ್ದು, ಸದರಿ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ ವಯಸ್ಸು ಅಂದಾಜು 60-65 ವರ್ಷದವನಿದ್ದು   ಬಡಕಲು ಶರೀರ ಹೊಂದಿದ್ದು ,ಎತ್ತರ 5 ಫೀಟ, 2 ಇಂಚು ಇದ್ದು, ಸಾಧಗಪ್ಪು ಮೈಬಣ್ಣ ಹೊಂದಿದ್ದು ,ಮೈ ಮೇಲೆ  ಚಾಕಲೇಟ ಕಲರ ಅಂಗಿ ಮತ್ತು ಒಂದು ಮಾಸಿದ ಬನಿಯಾನ ಮಾತ್ರ ಇದ್ದು, ಸದರಿಯವನು ಅಶಕ್ತನಾಗಿದ್ದು,  ಯಾವುದೋ ಕಾಯಿಲೆಯಿಂದ, ಮಲಗಿದ ಸ್ಥಳದಲ್ಲಿಯೇ ಮೃತ ಪಟ್ಟಂತೆ ಕಂಡು ಬಂದಿರುತ್ತದೆ. ಅಂತಾ ಶ್ರೀ ಬ್ರಹ್ಮಮಾನಂದ ತಂದೆ ವಿಷ್ಣ ಕೋತುಳೆ ಸಾ;ರಾಮತೀರ್ಥ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 20-12-2016 ರಂದು ನಾನು ನನ್ನ ಹೆಂಡತಿಯಾದ ಲಲೀತಾ ಇಬ್ಬರು ಕೂಡಿಕೊಂಡು ನನ್ನ ಹೆಂಡತಿಯ ಅಕ್ಕನ ಮಗಳಾದ ಜ್ಯೋತಿ ಇವರಿಗೆ ವರ ನೊಡಿಕೊಂಡು ಬರಲು ಹೋಗೊಣ ಅಂತಾ ನನ್ನ ಹೆಂಡತಿಯ ಅಕ್ಕನವರು ಹೇಳಿದ್ದರಿಂದ ಸಾಯಂಕಾಲ 6 ಗಂಟೆಗೆ ನಾನು ಮತ್ತು ನನ್ನ ಹೆಂಡತಿ ಮನೆ ಮತ್ತು ಅಂಗಡಿಗಳಿಗೆ ಕೀಲಿ ಹಾಕಿಕೊಂಡು ಸಿಂದಗಿಗೆ ಹೋಗಿ ಅಲ್ಲಿಂದ ಒಂದು ಖಾಸಗಿ ವಾಹನ ತೆಗೆದುಕೊಂಡು ಸಿಂದಗಿಯಿಂದ ಬೆಂಗಳೂರಿಗೆ ದಿನಾಂಕ 21-12-2016 ರಂದು ಬೇಳಿಗ್ಗೆ ಹೊದೆವು ಅಲ್ಲಿ ಹೋಗುತ್ತಿದ್ದಂತೆ ನಮ್ಮೂರಿನ ಭೀಮಣ್ಣಗೌಡ ಇವರು ನನಗೆ ಫೋನ್ ಮಾಡಿ ಹೇಳಿದ್ದೆನೆಂದರೆ ನಿಮ್ಮ ಮನೆಯ ಎಲ್ಲಾ ಬಾಗಿಲಗಳು ತೆರದಂತಾಗಿವೆ  ಮನೆಯು ಕಳವು ಆದಂತೆ ಕಂಡುಬರುತ್ತದೆ ಅಂತಾ ಹೇಳಿದ ಕೂಡಲೆ ನಾವು ಬೆಂಗಳೂರಿನಿಂದ ಅದೆ ವಾಹನದಲ್ಲಿ ಕುಳಿತು ದಿನಾಂಕ 22-12-2016 ರಂದು ಬೆಳಿಗ್ಗೆ ಬಂದು ಮನೆಗೆ ಹೋಗಿ ನೊಡಲಾಗಿ ಮನೆಯ ಎಲ್ಲಾ ಬಾಗಲಿಗೆ ಹಾಕಿದ ಕೀಲಿಗಳು ಇರಲಿಲ್ಲ. ಬೆಡ್ ರೂಮ ಪಕ್ಕದ ರೂಮಿನಲ್ಲಿದ್ದ ಅಲಮಾರ ಕೆಳಗೆ ಹಾಕಿ ಅಲಮಾರದ ಬಾಗಿಲು ಕಿತ್ತಿ ಅಲಮಾರದಲ್ಲಿಟ್ಟ 1) 4 ತೊಲೆ ಬಂಗಾರದ ಪಾಟಲಿ (ಎರಡು ಬಂಗಾರದ ಬಳೆಗಳು.ಕಿ. 72,000/- ರೂ. 2)  3. ½  ತೊಲೆಯ ಬಂಗಾರದ ತಾಳಿಸರ ಅ.ಕಿ. 63,000/- ರೂ. 3) ಒಂದು ತೊಲೆಯ ಬಂಗಾರದ ಲಾಕಿಟು ಅ.ಕಿ. 20,000/- ರೂ. 4) 1. ½ ತೊಲೆಯ ಬಂಗಾರದ ನೆಕ್ಲೆಸ್ ಅ.ಕಿ. 30,000/- ರೂ ಆಗಿನ ಬೆಲೆಬಾಳುವ ವಸ್ತುಗಳು.   5) ಟ್ರಜರಿಯಲ್ಲಿದ್ದ ನಗದು ಹಣ 52,500/- ರೂ. ಗಳು ಹೀಗೆ ಒಟ್ಟು 2,37,500/- ರೂ ಗಳ ಮೌಲ್ಯದ ಬಂಗಾರ ಮತ್ತು ನಗದು ಹಣ ದಿನಾಂಕ 20-12-2016 ರಂದು ರಾತ್ರಿ 11-30 ರಿಂದ ದಿನಾಂಕ 21-12-2016 ರ ಬೆಳಿಗಿನ ಜಾವ 4 ಗಂಟೆಯ ಅವದಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಶ್ರೀ ಈರಯ್ಯ ತಂದೆ ಸಿದ್ದಯ್ಯ ಹಿರೇಮಠ ಸಾ|| ಅಲ್ಲಾಪೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅಂಬ್ರೀಶ ತಂದೆ ಶಿವಶರಣಪ್ಪಾ ದಂಡರಗೋಳ ಸಾ: ಸರಡಗಿ (ಬಿ) ತಾ: ಕಲಬುರಗಿ ರವರು ದಿನಾಂಕ 21-12-2016 ರಂದು ರಾತ್ರಿ ತಮ್ಮೂರಾದ ಸರಡಗಿ (ಬಿ) ಗ್ರಾಮ್ಕಕೆ ಹೋಗವ ಕುರಿತು ರಸ್ತೆಯ ಬಂದಿಯಲ್ಲಿ ಸುರಬೀ ಧಾಬಾದ ಮುಂದೆ ನಿಂತಾಗ ಕಲಬುರಗಿ ಕಡೆಯಿಂದ ಮೋಟಾರ ಸೈಕಲ ನಂಬರ ಕೆಎ 32 ಇಹೆಚ್ 4945 ನೇದ್ದರ ಸವಾರ ತನ್ನ ಮೋಟಾರ ಸೈಕಲ ಅತೀವೇಗ ಅಲಕ್ಷತ ನದಿಂದ ಚಲಾಯಿಸಿಕೊಂಡು ಬಂದು ಅಪಘಾತ ಪಡಿಸಿ ಗಾಯಗೊಳಿಸಿ  ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ. ಮರೇಪ್ಪ ತಂದೆ ಮಲ್ಲಪ್ಪ ಚಲವಾದಿ ಸಾ|| ಕೀರ್ತಿ ಕಾಲೇಜ ಹತ್ತಿರ ಪ್ರಶಾಂತ ನಗರ ರಾಜಾಪೂರ ರೋಡ ಕಲಬುರಗಿ ಇವರು ದಿನಾಂಕ: 20-12-2016 ರಂದು ರಾತ್ರಿ ತನ್ನ ಗೆಳೆಯನಾದ ಸಂಜುಕುಮಾರ ಯಳವಂತಗಿ ಇವರ ಮನೆಗೆ ಬಿಡಲು ನನ್ನ ಬೈಕ್ ಮೇಲೆ ಆಳಂದ ರೋಡ ದೇವಿನಗರ ಬಡಾವಣೆಗೆ ಹೋಗಿ ಗೆಳೆಯನನ್ನು ಮನೆಗೆ ಬಿಟ್ಟು ವಾಪಸ ಗೋವಾ ಹೋಟೆಲ ಮುಖಾಂತರ ಮನೆಗೆ ಹೊರಟ್ಟಿದೆ ರಾತ್ರಿ 11:30 ಗಂಟೆಗೆ ಟ್ಯಾಂಕ್ ಬಂಡ ರೋಡ ವಿಜ್ಞಾನ ಕೇಂದ್ರದ ಹತ್ತಿರ ಇಬ್ಬರು ಅಪರಿಚಿತರು ಪಲ್ಸರ್ ಗಾಡಿಯ ಮೇಲೆ ನನ್ನ ಹಿಂದೆ ಬಂದಿದ್ದು ಇನ್ನೋಬ್ಬ ಗಾರ್ಡನ ಓಳಗಡೆಯಿಂದ ಬಂದಿದ್ದು, ಬೈಕ್ ಮೇಲೆ ಇದ್ದವನು ನನ್ನ ಹತ್ತಿರ ಬಂದು ನನ್ನನ್ನು ಹಿಡಿದುಕೊಂಡು ನನಗೆ ಏ ಮಗನೆ ಸಿದಾ ಹೋಗು ಅಂತಾ ಅಂದವನೆ ಎಲ್ಲಾ 3 ಜನ ಕೂಡಿ ನನಗೆ ಕೈಗಳಿಂದ ಹೊಟ್ಟೆ, ಎದೆ, ಮುಖದ ಮೇಲೆ ಹೊಡೆದು ಗುದ್ದುತ್ತಾ ಓಳಪೆಟ್ಟು ಮಾಡಿ ನೆಲಕ್ಕೆ ಹಾಕಿದ್ದು, ಹಣೆಯ ಬಲಭಾಗ ರಕ್ತಗಾಯ ಆಗಿದ್ದು ಬಲವಂತವಾಗಿ ನನ್ನಲ್ಲಿದ್ದ 1)ಬಂಗಾರದ ಉಂಗುರ ತೂಕ 8 ಗ್ರಾಂ ಅ.ಕಿ:15000/- , 2) ನಗದು ಹಣ 11000/- ರೂ (2000 ನೋಟು-4 , 500-ನೋಟು 3, 100 ನೋಟು-15) 3)ಸ್ಯಾಮಸಂಗ್ ಜೆ-2 ಮೊಬೈಲ್ ಅದರಲ್ಲಿ ಸಿಮ್ ನಂ: 9845629564 ಮತ್ತು 8660505968 ಇದ್ದದ್ದು ಅ.ಕಿ:8500/- 4) ಸಿಟಿಜನ್ ಕೈ ಗಡಿಯಾರ ಅ.ಕಿ-1800/-  ಈ ಪ್ರಕಾರ ನನ್ನಲ್ಲಿದ್ದ ಬೆಲೆಬಾಳುವ ವಸ್ತುಗಳು ಹೆದರಿಸಿ ನನ್ನ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಸುಲಿಗೆ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಜೇವರಗಿ ಠಾಣೆ : ದಿನಾಂಕ: 23.12.2016 ರಂದು ಕಟ್ಟಿಸಂಗಾವಿ ಗ್ರಾಮದ ಭೀಮಾದನದಿಯಲ್ಲಿ ಮರಳು ಟ್ರ್ಯಾಕ್ಟರ್ಗಳಲ್ಲಿ ಕಳ್ಳತನದಿಂದ  ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಪ್ರದೀಪ. ಎಸ್. ಭಿಸೆ ಪಿ.ಎಸ್.ಐ  ಜೇವರ್ಗಿ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿಪಿಐ ಜೇವರಗಿ ವೃತ್ತ ರವಮಾರ್ಗದರ್ಶನದಲ್ಲಿ ಕಟ್ಟಿಸಂಗಾವವಿ ಕಡೆಗೆ ಹೊರಟು ಕಟ್ಟಿ ಸಂಗಾವಿ ಗ್ರಾಮದ ಸಮೀಪ ಬ್ರೀಡ್ಜ ಹತ್ತಿರ ರೋಡಿನ ಪಕ್ಕದಲ್ಲಿ ನಿಂತು ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಬರುವದನ್ನು ಕಾಯುತ್ತ ನಿಂತು ನೋಡಲಾಗಿ, ಕಟ್ಟಿಸಂಗಾವಿ ಗ್ರಾಮದ ಕಡೆಯಿಂದ  ಜೇವರಗಿ ಕಡೆಗೆ ಮರಳು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರನ್ನು ನೋಡಿ ಕೈ ಮಾಡಿ ನಿಲ್ಲಿಸಲು ಹೋದಾಗ  ಸದರಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ನ್ನು ಸ್ಥಳದಲ್ಲಿಯೇ ಬಿಟ್ಟು ಕತ್ತಲಲ್ಲಿ ಓಡಿ ಹೋದನು ನಾವು ಬೆನ್ನು ಹತ್ತಿ ಹಿಡಯಲು ಪ್ರಯತ್ನ ಮಾಡಿದರೂ ಸಿಕ್ಕಿರುವುದಿಲ್ಲಾ  ನಂತರ ಸ್ಥಳದಲ್ಲಿದ್ದ ಟ್ಯಾಕ್ಟರನ್ನು  ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು 1) ಸ್ವರಾಜ ಕಂಪನಿ ಕಂಪನಿಯ ಟ್ರ್ಯಾಕ್ಟರ ಇದ್ದು ಅದರ ಮೇಲೆ ನಂಬರ ಇರುವುದಿಲ್ಲಾ ಅದರ ಇಂಜೀನ ನಂ 433008/SWL19321, ಚೆಸ್ಸಿ ನಂ WYCL43906152077 ನೇದ್ದು ಅದರ ಟ್ಯಾಲಿ ನಂ ಕೆಎ-32-ಟಿಎ- 5828 ಇದ್ದು ಅದರಲ್ಲಿ ಒಂದು ಬ್ರಾಸ್ ಮರಳು ಅ.ಕಿ. 1000/- ರೂ ಮತ್ತು ಟ್ರ್ಯಾಕ್ಟರ್ ಅ.ಕಿ. 3,00,000/- ರೂ ಆಗಬಹುದದು ಸದರಿ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕ ಸರಕಾದಿಂದ ಅಥವಾ ಸಂಭಂದ ಪಟ್ಟ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸರಕಾರಕ್ಕೆ ರಾಜ ದನ ಭರಿಸದೇ ಮಾಡಿ ಕಳ್ಳತನದಿಂದ ಕಟ್ಟಿ ಸಂಗಾವಿ ಭೀಮಾ ನದಿಯಿಂದ ಮರಳು ತುಂಬಿಕೊಂಡು ಮಾರಾಟ ಮಾಡಲು ಸಾಗಿಸುತ್ತಿರುವದು ಕಂಡು ಬಂದಿದ್ದರಿಂದ ಸದರಿ ಟ್ರ್ಯಾಕ್ಟರ್ ನ್ನು ಮರಳು ಸಮೇತ ವಶಕ್ಕೆ ತೆಗೆದುಕೊಂಡು ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.