POLICE BHAVAN KALABURAGI

POLICE BHAVAN KALABURAGI

17 February 2014

Gulbarga District Reported Crimes

ಅನಧಿಕೃತವಾಗಿ  ಮದ್ಯ ಸಾಗಿಸುತ್ತಿರುವ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ.ಕೆ.ಎಂ.ಸತೀಶ ಪಿ.ಐ. ಬ್ರಹ್ಮಪೂರ ಠಾಣೆ ರವರು ದಿನಾಂಕ: 16-02-2014 ರಂದು ಬೆಳಗ್ಗೆ  8-30 ಗಂಟೆಯ ಬ್ರಹ್ಮಪೂರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಪ್ನಾ ಬಾರ ರೇಸ್ಟೋರೆಂಟದಿಂದ ಕೆಲವು ಜನರು ಗೋಣಿ ಚೀಲದಲ್ಲಿ ವಿವಿಧ ನಮೂನೆಯ ಮದ್ಯದ ಬಾಟಲಿಗಳನ್ನು ಅನಧೀಕೃತವಾಗಿ ಮಾರಾಟ ಮಾಡಲು ಜಗತ ಸರ್ಕಲ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದ ಬಗ್ಗೆ ಖಚಿತ ಬಾತ್ಮಿ ದೊರೆತ ಮೇರೆಗೆ ಮಾನ್ಯ ಬಿ.ಎಸ್ . ಸವಿಶಂಕರ ನಾಯ್ಕ ಡಿ.ಎಸ್.ಪಿ 'ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಠಾಣೆಯ ಸಿಬ್ಬಂದಿ ಮತ್ತು ಪಂಚರೊಂದಿಗೆ ಜಗತ ಸರ್ಕಲ ಹತ್ತಿರ ಹೋದಾಗ ಅಲ್ಲಿ ಎರಡು ಜನರು ತಲೆಯ ಮೇಲೆ ಗೋಣಿ ಚೀಲಗಳು ಹೊತ್ತುಕೊಂಡು ಹೋಗುತ್ತಿದ್ದಾಗ ಸದರಿಯವರ ಮೇಲೆ ಸಂಶಯ ಬಂದು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಒಬ್ಬನು ತನ್ನ ಹೆಸರು ಅನೀಲ ತಂದೆ ಬಸವರಾಜ ಕಲಾಲ ಸಾ|| ಡಬರಾಬಾದ ಗುಲಬರ್ಗಾ ಮತ್ತು  ಸಂತೋಷ ತಂದೆ ಭೀಮಯ್ಯಾ ಕಲಾಲ ಸಾ|| ಡಬರಾಬಾದ ಅಂತಾ ತಿಳಿಸಿದ್ದು ನಂತರ ಅನೀಲ ಇವನ ಹತ್ತಿರ ಇದ್ದ ಗೋಣಿ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ 1. ನಾಕ ಔಟ್ ಸ್ಟ್ರಾಂಗ್ 650  ಎಮ್.ಎಲ್.ನ 12 ಬಾಟಲಿಗಳು ಇದ್ದು ಒಂದಕ್ಕೆ 90 ರೂಪಾಯಿಗಳಂತೆ ಒಟ್ಟು ಅ|| ಕಿ|| 1080, 2  ಯು.ಎಸ್.ವಿಸ್ಕಿ  180 ಎಮ್.ಎಲ್.ನ  12 ಬಾಟಲಿಗಳು ಒಂದಕ್ಕೆ 49 ರೂಪಾಯಿಗಳಂತೆ ಒಟ್ಟು ಅ|| ಕಿ|| 588, 3. ಓರಿಜನಲ್ ಚಾಯ್ಸ್ 180  ಎಮ್.ಎಲ್.ನ  24 ಬಾಟಲಿಗಳು ಒಂದಕ್ಕೆ 49 ರೂಪಾಯಿಗಳಂತೆ ಒಟ್ಟು ಅ|| ಕಿ|| 1176 ದೊರೆತ್ತಿದ್ದು ಇರುತ್ತದೆ. ನಂತರ ಸಂತೋಷ ಈತನ ಹತ್ತಿರ ಇದ್ದ ಗೋಣಿ ಚೀಲವನ್ನು ಪರೀಶಿಲಿಸಲಾಗಿ ಅದರಲ್ಲಿ  1. ಕಿಂಗ ಫಿಶರ್ 650 ಎಮ್.ಎಲ್.ನ 12  ಬಾಟಲಿಗಳು  ಒಂದಕ್ಕೆ 90  ರೂಪಾಯಿಗಳಂತೆ ಒಟ್ಟು ಅ|| ಕಿ|| 1080, 2. ಓ.ಟಿ. 180 ಎಮ್.ಎಲ್.ನ 22 ಟೇಟ್ರ್ಯಾ ಪಾಕೀಟಗಳು ಒಂದಕ್ಕೆ 56 ರೂಪಾಯಿಗಳಂತೆ ಒಟ್ಟು ಅ|| ಕಿ|| 1232, 3. ಓರಿಜನಲ್ ಚಾಯ್ಸ 90 ಎಮ್.ಎಲ್.ನ  48 ಟೇಟ್ರ್ಯಾ ಪಾಕೀಟಗಳು ಒಂದಕ್ಕೆ 24 ರೂಪಾಯಿಗಳಂತೆ ಒಟ್ಟು ಅ|| ಕಿ|| 1152ಹೀಗೆ ಒಟ್ಟು 6308/- ಬೆಲೆ ಬಾಳುವ ಮದ್ಯದ ಬಾಟಲಿ ಮತ್ತು ಟೇಟ್ರ್ಯಾ ಪಾಕೀಟಗಳು ದೊರೆತ್ತಿದ್ದು ಇದರ ಬಗ್ಗೆ ಅನೀಲ ಇತನಿಗೆ ಕೇಳಲಾಗಿ ನಾವು ಇಬ್ಬರೂ ಸಪ್ನಾ ಬಾರ ರೇಸ್ಟೋರೆಂಟ ಮ್ಯಾನೇಜರರಾದ ಅಂಜು ಇವರ ಕಡೆಯಿಂದ ಅನದೀಕೃತವಾಗಿ ಮದ್ಯದ ಬಾಟಲಿಗಳು ಖರೀದಿ ಮಾಡಿಕೊಂಡು ಚಿಲ್ಲರೆ ಆಗಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ ಹೆಳಿರುತ್ತಾರೆ ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ಸದರಿಯವರ ವಿರುದ್ಧ ಬ್ರಹ್ಮಪೂರ  ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಮಹೇಂದ್ರ ತಂದೆ ಲಕ್ಷ್ಮಣ ಪವಾರ ಸಾಃ ಕವನಳ್ಳಿ ತಾಂಡಾ ದಿನಾಂಕ: 16/02/2014 ರಂದು ಸಾಯಂಕಾಲ 6-00 ಗಂಟೆಗೆ ತನ್ನ ಮೋಟಾರ ಸೈಕಲನ್ನು ನಮ್ಮ ಮನೆಯ ಮುಂದೆ ಹಚ್ಚಿ ಕಟ್ಟೆಯ ಮೇಲೆ ಕುಳಿತು ಕೊಂಡಾಗ ನಮ್ಮ ತಾಂಡಾದ 1. ರವಿಂದ್ರ ತಂದೆ ರಾಮಚಂದ್ರ ರಾಠೋಡ ಈತನು ಬಂದವನೇ ನನ್ನ ಮೋಟಾರ ಸೈಕಲನ್ನು ಕೆಡವಿ ಕಲ್ಲು ಎತ್ತಿ ಹಾಕಿದನು. ಅದಕ್ಕೆ ನಾನು ಯಾಕೆ ಕಲ್ಲು ಹಾಕಿದ್ದಿ ಅಂತಾ ಕೇಳಿದಾಗ ಆತನು ಭೋಸಡಿ ಮಗನೇ ನಿನ್ನ ಅಣ್ಣನು ಜೂಜಾಟದಲ್ಲಿ ನಮಗೆ ಮೋಸ ಮಾಡಿದ್ದಾನೆ. ಅಂತಾ ಬೈಯ ತೊಡಗಿದನು. ಆಗ ಅವನಿಗೂ ನನಗೂ ಬಾಯಿ ಬಾಯಿ ಯಾಗುವ ಸಮಯದಲ್ಲಿ 2. ರಾಮಚಂದ್ರ ತಂದೆ ಪಾಂಡು 3. ಪ್ರಕಾಶ ತಂದೆ ರಾಮಚಂದ್ರ 4. ಅಶೋಕ ತಂದೆ ರಾಮಚಂದ್ರ ರಾಠೋಡ 5. ಸುನೀತಾ ಗಂಡ ರವೀಂದ್ರ 6ಕವಿತಾಬಾಯಿ ಗಂಡ ಅಶೋಕ ಮತ್ತು 7. ಜಮುನಾಬಾಯಿ ಗಂಡ ರಾಮಚಂದ್ರ ಎಲ್ಲರೂ ಕೂಡಿ ಬಂದವರೇ ರಾಮಚಂದ್ರ ಈತನು ಬಡಿಗೆಯಿಂದ ನನ್ನ ಬಲಗಡೆ ತಲೆಯ ಮೇಲೆ ಹಾಗು ಎಡಗಡೆ ಕಿವಿಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಸಾಯಬಣ್ಣ ತಂದೆ ಸಿದ್ದಪ್ಪಾಕೊಣ್ಣುರ ಸಾಃ ಮನೆ ನಂ. 121 ಜಿ.ಡಿ.ಎ ಲೇಔಟ ಡಂಕೀನ ಬಾವಿಯ ಹತ್ತಿರ 8 ನೇ ಕ್ರಾಸ್  ಅಂಬಿಕಾನಗರ  ಗುಲಬರ್ಗಾ ಇವರು  ಸುಮಾರು ಮೂರು ತಿಂಗಳ ಹಿಂದೆ ಪಕ್ಕದಲ್ಲಿರುವ ಮಧುಸುಧನ ಉಂತಕಲ  ಮತ್ತು ಅವನ ಹೆಂಡತಿ ಮಮತಾ  ಇವರು ಫಿರ್ಯಾದಿಯ ಮನೆ ಮುಂದೆ  ಇದ್ದ ಬೇವಿನ ಮರವನ್ನು ಕಡಿಯಬೇಕು ನಮ್ಮ  ಅಂಗಳದಲ್ಲಿ ಎಲೆಗಳು ಬಿಳುತ್ತಿವೆ ಅಂತಾ ಅವಾಚ್ಯ ಶಬ್ದಗಳಿಂದ ಫಿರ್ಯಾದಿಗೆ ಬೈಯುತ್ತಿದ್ದರು ಮತ್ತು ದಿನಾಂಕ 08-02-2014 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ಸದರಿ ಮಧುಸುಧ   ಉಂತಕಲ ಮತ್ತು ಅವನ ಹೆಂಡತಿ ಮಮತಾ ಕೂಡಿ  ಫಿರ್ಯಾದಿಯ  ಮನೆ ಮುಂದೆ ಬಂದು  ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶ್ರೀಶೈಲ ತಂದೆ ರಾಜಶೇಖರ ನಿಗ್ಗುಡಗಿ ರವರು ದಿನಾಂಕ: 16.02.2014 ರಂದು ಬೆಳಿಗ್ಗೆ  08=50 ಗಂಟೆಗೆ ತನ್ನ ಜೊತೆಗೆ ಕೆಲಸ ಮಾಡುವ  ಗುರುಪಾದಪ್ಪ ಚಿನಮಳ್ಳಿ ಇಬ್ಬರು ಕೂಡಿಕೊಂಡು ಶಹಾಬಜಾರ ದಿಂದ ಗುರುಪಾದಪ್ಪ ಇತನು ಚಲಾಯಿಸುತ್ತಿರುವ ಮೋ/ಸೈಕಲ್ ನಂ: ಕೆಎ 32 ಆರ್ 1713 ರ ಹಿಂದುಗಡೆ ಕುಳಿತು ಗೋವಾ ಹೊಟೇಲ ಕ್ರಾಸ್ ಮುಖಾಂತರವಾಗಿ ಜಗತ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ದೋಬಿ ಘಾಟ ಎದುರಿನ ರೋಡ ಮೇಲೆ ದೋಬಿ ಘಾಟ ಕಡೆಯಿಂದ ಒಬ್ಬ ಟಾಟಾ ಎ.ಸಿ.ಇ  ನಂ: ಕೆಎ 32 ಸಿ 213  ನೆದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಗೋವಾ ಹೊಟೇಲ  ಕಡೆಗೆ ಹೋಗುವ ಕುರಿತು ತಿರುಗಿಸಲು ಹೊಗಿ ಫಿರ್ಯಾದಿ ಕುಳಿತ ಮೋ/ಸೈಕಲ್ ಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಮತ್ತು ಗುರುಪಾದಪ್ಪ ಈತನಿಗೆ  ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಮಾಡಲು ಪ್ರಯತ್ನ ಮಾಡಿದ ಪ್ರಕರಣ :

ಸ್ಟೇಷನ ಬಜಾರ ಠಾಣೆ : ಶ್ರೀ ವಿಜಯ ತಂದೆ ಸಿದ್ದಣ್ಣ ಕೋರೆ ಸಾ :ವಿದ್ಯಾನಗರ ಗುಲಬರ್ಗಾ ಇವರು ಇವರದು ಪಿ & ಟಿ ಕ್ರಾಸ ಹತ್ತಿರದ ಝಾನ್ಸಿರಾಣಿ ವಕೀಲರ ಮನೆಯಲ್ಲಿಯ ನಮ್ಮ ಬಾರತಿ ಆಫೀಸ ಇದ್ದು ದಿನಾಂಕ; 15-02-2014 ರಂದು 7 ಪಿಎಮ್‌ಕ್ಕೆ ಕೆಲಸ ಮುಗಿಸಿಕೊಂಡು ಬಾಗಿಲ ಕೀಲಿ ಹಾಕಿಕೊಂಡು ಹೊಗಿ ದಿನಾಂಕ;16-02-2014  ರಂದು 730 ಎಎಮ್‌ಕ್ಕೆ ಬಂದು ನೋಡಲಾಗಿ ಬಾರತಿ ಸಿಮೆಂಟ ಆಫೀಸ ಕೀಲಿ ಮುರಿದು ಯಾರೋ ಕಳ್ಳರು ಕಳ್ಳತನ ಮಾಡಿಲು ಪ್ರಯತ್ನಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.