POLICE BHAVAN KALABURAGI

POLICE BHAVAN KALABURAGI

05 April 2017

Kalaburagi District Reported Crimes

ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀಮತಿ ರವರ ಮಗಳಾದ ಕುಮಾರಿ ಇವಳಿಗೆ ಒಂದು ವರ್ಷದ ಹಿಂದಿನಿಂದ ನಮ್ಮೂರ ಉಮೇಶ ಇತನು ಮನೆಯ ಕಡೆಗೆ ಬಂದು ನಮ್ಮ ಮಗಳಿಗೆ ಚುಡಾಯಿಸುವದು ಕಣ್ಣು ಸೊನ್ನೆ ಕೈ ಮಾಡಿ ಕರೆಯುವುದು ಮಾಡುವದು ಮಾಡುತ್ತಿದ್ದನು. ನಾವು ಅವನಿಗೆ ಮತ್ತು ಅವನ ಮನೆಯವರಿಗೆ ವಿಷಯ ತಿಳಿಸಿದಾಗ ಅವನ ಮನೆಯವರು ಉಮೇಶನಿಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಆದರೂ ಕೂಡಾ ಅವನು ಆಗಾಗ ಊರಿಗೆ ಬಂದಾಗ ನಮ್ಮ ಮಗಳಿಗೆ ನೋಡಿ ಚುಡಾಯಿಸುವದು ಮಾಡುತ್ತಾ ಬಂದಿರುತ್ತಾನೆ ನಾವು ಮರ್ಯಾದೆಗೆ ಅಂಜಿ ಮತ್ತು ನನ್ನ ಮಗಳ ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಸುಮ್ಮನಿದ್ದೇವು. ಈಗ 2-3 ದಿವಸಗಳಿಂದ ನಮ್ಮೂರ ಉಮೇಶ ಇತನು ಊರಿಗೆ ಬಂದಿರುತ್ತಾನೆ. ಮತ್ತೆ ಅವನು ನಮ್ಮ ಮನೆಯ ಕಡೆಗೆ ಬಂದು ತಿರುಗಾಡುವದು ಮತ್ತು ನಮ್ಮ ಮಗಳಿಗೆ ನೋಡಿ ಕೈ ಸೊನ್ನೆ ಮಾಡಿ ಕರೆಯುವದು ಮತ್ತು ನನ್ನ ಮಗಳಿಗೆ ಎತ್ತಿಕೊಂಡು ಹೋಗುತ್ತೇನೆ ಅಂತ ಹೇಳಿದ ವಿಷಯ ನನ್ನ ಮಗಳಿಂದ ನನಗೆ ಗೊತ್ತಾಗಿರುತ್ತದೆ.  ದಿನಾಂಕ: 30.03.2017 ರಂದು ಮುಂಜಾನೆ ಸಮಯದಲ್ಲಿ ನಾನು ನಮ್ಮ ಕುರಿ ಕಾಯುವ ಸಲುವಾಗಿ ಹೊಲಕ್ಕೆ ಹೋಗಿದ್ದೇನು. ನನ್ನ ಗಂಡನು ಟಂಟಂ ತಗೆದುಕೊಂಡು ಜೇವರಗಿಗೆ ಹೋಗಿದ್ದನು. ಮನೆಯಲ್ಲಿ ನನ್ನ ಎರಡು ಜನ ಹೆಣ್ಣು ಮಕ್ಕಳು ಇದ್ದರು. ಸಾಯಾಂಕಾಲ ಸಮಯದಲ್ಲಿ ನಾನು ಮನೆಗೆ ಬಂದಾಗ  ನನ್ನ ಸಣ್ಣ ಇರದೆ ಇರುವದರಿಂದ ಮಗಳಾದ ನಿರ್ಮಲಾ ಇವಳಿಗೆ ಕೇಳಲು ಅವಳು ತಿಳಿಸಿದೆನಂದರೆ, ಮದ್ಯಾಹ್ನ 12.00 ಗಂಟೆ ಸುಮಾರಿಗೆ ತಂಗಿ ಸಂಡಾಸಕ್ಕೆ ಹೋಗುತ್ತೇನೆ ಅಂತ ಮನೆಯಿಂದ ಹೋದವಳು ಮರಳಿ ಮನೆಗೆ ಬಂದಿರುವದಿಲ್ಲಾ ಅಂತ ಹೇಳಿದಳು. ನಾನು ಮತ್ತು ನನ್ನ ಮಗಳು ಇಬ್ಬರು ಕೂಡಿ ಊರಲ್ಲಿ ಹುಡುಕಾಡಿದ್ದೇವು. ಅಲ್ಲದೇ ನಮ್ಮೂರ ಉಮೇಶ ಇತನ ಮನೆಗೆ ಕಡೆಗೆ ಹೋಗಿ ನೋಡಲು ಅವನ ಮನೆಯ ಬಾಗಿಲು ಕೀಲಿ ಹಾಕಿತ್ತು. ಅಲ್ಲದೇ ಅವನ ಮನೆಯ ಅಕ್ಕ ಪಕ್ಕದವರಿಗೆ ವಿಚಾರ ಮಾಡಲು ಅವರು ಉಮೇಶನು ಮದ್ಯಾಹ್ನ ಸಮಯದಲ್ಲಿ   ತನ್ನ ಮನೆ ಕೀಲಿ ಹಾಕಿಕೊಂಡು ಹೋಗಿರುತ್ತಾನೆ ಅಂತ ಹೇಳಿದರು. ನಾವು ಉಮೇಶನ ತಂದೆಗೆ ಫೋನ ಮಾಡಿ ಉಮೇಶನ ಬಗ್ಗೆ ಕೇಳಲಾಗಿ ನಮ್ಮ ಮಗ ಉಮೇಶನು ಬೆಂಗಳೂರಿನಿಂದ ಚನ್ನೂರಕ್ಕೆ ಹೋಗಿದ್ದು ಅವನು ಚನ್ನೂರದಿಂದ ಮರಳಿ ಬೆಂಗಳೂರಿಗೆ ಬಂದಿರುವದಿಲ್ಲಾ ಅಂತ ಹೇಳಿದರು. ಮರು ದಿವಸ ಊರಲ್ಲಿ  ವಿಚಾರ ಮಾಡುತ್ತಿದ್ದಾಗ ನಮ್ಮ ಸಮಾಜದ ಮಲ್ಲಿಕಾರ್ಜುನ ಪೂಜಾರಿ ಇತನು ನಿನ್ನೆ ದಿ: 30.03.17 ರಂದು ಮದ್ಯಾಹ್ನ ಸಮಯದಲ್ಲಿ ಉಮೇಶ ಕುಂಬಾರ ಇತನು ನಮ್ಮೂರ ಚನ್ನೂರ ಡಿಬ್ಬಿ ಹತ್ತಿರ ರೋಡಿನಲ್ಲಿ ಒಂದು ಅಟೋದಲ್ಲಿ ನಿಮ್ ಮಗಳಿಗೆ ಕರೆದುಕೊಂಡು ಹೋಗುವದನ್ನು ನೋಡಿರುತ್ತೇನೆ. ಅಂತಾ ತಿಳಿಸಿದನು.   ಬಗ್ಗೆ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ದಿನಾಂಕ: 04.04.2017 ರಂದು ಮದ್ಯಾಹ್ನ 3.00 ಗಂಟೆಗೆ ಫಿರ್ಯಾದಿ ಮತ್ತು ಅಪಹರಣಕ್ಕೊಳಗಾದ ಅಪ್ರಾಪ್ತ ವಯಸ್ಸಿನ ಬಾಲಕಿ ಇಬ್ಬರು ಠಾಣೆಗೆ ಹಾಜರಾಗಿ  ದಿ: 30.03.2017 ರಂದು ಮದ್ಯಾಹ್ನ 12.00 ಗಂಟೆ ಸುಮಾರಿಗೆ ನಾನು ಸಂಡಾಸಕ್ಕೆಂದು ನಮ್ಮ ಮನೆಯ ಹತ್ತಿರ ಹೋಗುತ್ತಿದ್ದಾಗ ನಮ್ಮೂರ ಉಮೇಶ ತಂದೆ ಹೈಯಾಳಪ್ಪ ಕುಂಬಾರ ನಮ್ಮ ಮನೆ ಹತ್ತಿರ ಬಂದು ಉಮೇಶ ಕುಂಬಾರ ಈತನು ನನಗೆ ಬೆಂಗಳೂರು ತೊರಿಸಿಕೊಂಡು ಬರುತ್ತೇನೆ ಅಂತ ಅಂತಾ ನಂಬಿಸಿ ಪುಸಲಾಯಿಸಿ ಅದೆ ದಿವಸ ನಮ್ಮೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಒಂದು ದಿವಸ ಇದ್ದು ಅಲ್ಲಿಂದ ದಿ. 02.04.17 ರಂದು ಮದ್ಯಾಹ್ನ 1.30 ಗಂಟೆಯ ಸುಮಾರಿಗೆ ಜೇವರಗಿ ತಾಲೂಕಿನ ಕರಕಿಹಳ್ಳಿ ಗ್ರಾಮ ಸಿಮಾಂತರದ ನಿಂಬೆ ತೋಟದ ಹೊಲಕ್ಕೆ ಕರದುಕೊಂಡು ಹೋಗಿ ನನಗೆ ಜಬರ ದಸ್ತ್ತಿಯಿಂದ ಸಂಭೋಗ ಮಾಡಿದನು. ಅವನು ನೀನು ಯಾರಿಗಾದರೂ ಹೇಳಿದರೆ ನೀನ್ನ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿದರಿಂದ ಒಂದು ದಿವಸ ತೋಟದಲ್ಲಿ ಇದ್ದು ಮರು ದಿವಸ ದಿನಾಂಕ: 04.04.17 ರಂದು ಮುಂಜಾನೆ ನನಗೆ ಬಿಟ್ಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಜೇವರಗಿ ಠಾಣೆ : ಶ್ರೀ ಸೈಯ್ಯದ ಜಾಫರ್ ಹುಸೇನ ತಂದೆ ಸೈಯ್ಯದ ಕಾಸೀಮ್ ಹುಸೇನ ಗಲ್ಫಾಡ  ಸಾಃ ಆಂದೊಲಾ ಇದ್ದು ಅರ್ಜಿಯ ಮೂಲಕ ತಮ್ಮಲ್ಲಿ ವಿನಂತಿಸಿಕೊಳುವುದೆನೆಂದರೆ, ನಮ್ಮ ಅಣ್ಣತಮ್ಮಕೀಯ ಸೈಯ್ಯದ ಸೋಹೇಲ್ ಹುಸೇನ್ & ಅವನ ಅಣ್ಣತಮ್ಮಂದಿರಿಗೂ ನನಗೂ ಹಿಂದಿನಿಂದ ಹೊಲದ ಬಂದಾರಿಯ ವಿಷಯದಲ್ಲಿ ತಕರಾರು ಇರುತ್ತದೆ. ಅದರಿಂದ ಅವರಿಗೂ ನಮಗೂ ವೈಮನಸ್ಸು ಇರುತ್ತದೆ. ಹೀಗಿದ್ದು  ದಿ. 02.04.2017 ರಂದು ರಾತ್ರಿ ನಾನು ನನ್ನ ಮೊಟಾರ್ ಸೈಕಲ ಮೇಲೆ ಕುಳಿತುಕೊಂಡು ಮನೆಗೆ ಕಡೆಗೆ ಹೋಗುತ್ತಿದ್ದೆನು. ರಾತ್ರಿ 7.00 ಗಂಟೆಯ ಸುಮಾರಿಗೆ ನಮ್ಮೂರ ಟಿಪ್ಪು ಸುಲ್ತಾನ ಚೌಕ ಹತ್ತಿರ ಡಿಗ್ಗಿರವರ ಹೊಟೆಲ ಎದುರುಗಡೆ ರೋಡನಲ್ಲಿ ಹೋಗುತ್ತಿದ್ದಾಗ ಸೈಯದ ಸೋಹೇಲ್ ಇತನು ನನ್ನ ಎದುರುಗಡೆ ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯ ಹತ್ತಿದ್ದನು ಆಗ ನಾನು ಅವನಿಗೆ ಯಾಕೆ? ಬೈಯುತ್ತಿದ್ದಿ ಅಂತಾ ಕೇಳಿದಾಗ ಬೊಸಡಿ ಮಗನೆ ಊರಲ್ಲಿ ನೀನ್ನದು ಬಹಳ ನಡೆದಿದೆ ಎಂದು ನನಗೆ ಹೊಡೆಯಲು ಬಂದಾಗ ನಾನು ನನ್ನ ಮೊಟಾರ್ ಸೈಕಲ್ ಮೇಲಿಂದ ಕೆಳಗೆ ಇಳಿದೆನು ಆಗ  1) ಸೈಯ್ಯದ ಸೋಹೇಲ ಹುಸೇನ ತಂದೆ ಸೈಯದ ಸಿರಾಜ ಹುಸೇನ ಗಲ್ಫಾಡ, ಈತನ ಅಣ್ಣತಮ್ಮಕಿಯವರಾದ  2) ಸೈಯ್ಯದ ಸಿರಾಜ ಹುಸೇನ ತಂದೆ ಸೈಯ್ಯದ ಸರದರ ಹುಸೇನ ಗಲ್ಪಾಡ 3) ಸೈಯದ ಆರೀಫ ಹುಸೇನ ತಂದೆ ಸೈಯ್ಯದ ಕಾಸಿಮ್ ಹುಸೇನ ಗಲ್ಪಾಡ 4) ಸೈಯ್ಯದ ಸಾಧೀಕ ಹುಸೇನ ತಂದೆ ಸೈಯ್ಯದ ಕಾಸೀಮ್ ಹುಸೇನ ಗಲ್ಪಾಡ 5) ಸೈಯ್ಯದ ಅಲೀ ಹುಸೇನ ತಂದೆ ಸೈಯದ ಜಾಫರ್ ಹುಸೇನ ಗಲ್ಪಾಡ 6) ಸೈಯ್ಯದ ಅಬ್ದುಲ್ ಬಾಷಾ ತಂದೆ ಸೈಯ್ಯದ ಲಾಡ್ಲೇಸಾಬ ಗಲ್ಪಾಡ 7) ಸೈಯ್ಯದ ಸಾಧೀಕ ಹುಸೇನ ತಂದೆ ಸೈಯ್ಯದ ಜಿಲಾನಿ ಗಲ್ಪಾಡ 8) ಪಾತೀಮಾ ಬೇಗಂ ಗಂಡ ಸೈಯ್ಯದ ಜಿಲಾನಿ ಗಲ್ಪಾಡ 9) ಸೈಯದಾ ಸಹಾನ ಗಂಡ ಸೈಯ್ಯದ ಆರೀಫ್ ಹುಸೇನ ಗಲ್ಪಾಡ 10) ಸಾಲೀಯಾಬೇಗಂ ಗಂಡ ಸೈಯದ ಅಬ್ದುಲ್ ಬಾಷಾ ಗಲ್ಪಾಡ ಸಾಃ ಎಲ್ಲರೂ ಆಂದೊಲಾ  ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಜಗಳ ಮಾಡ ಹತ್ತಿದ್ದರು ಸೈಯ್ಯದ ಸೊಹೇಲ್ ಇತನು ನಮಗೆ ಎದುರು ಮಾತನಾಡುತ್ತಿ ರಂಡೀ ಮಗನೆ ಅಂತಾ ಕಲ್ಲಿನಿಂದ ನನ್ನ ಎಡಕಾಲಿನ ಪಾದದ ಮೇಲೆ ಹೊಡೆದನು, ಮತ್ತು ಸೈಯ್ಯದ ಸಿರಾಜ ಹುಸೇನ ಇತನು ಕಾಲಿನಿಂದ ನನ್ನ ಸೊಂಟದ ಮೇಲೆ ಒದ್ದನು, ಸೈಯ್ಯದ ಆರೀಫ್ ಹುಸೇನ ಇತನು ಕೈಯಿಂದ ನನ್ನ ಕಪಾಳದ ಮೇಲೆ ಹೊಡೆದನು, ಸೈಯ್ಯದ ಸಾಧೀಕ ಹುಸೇನ ಇತನು ಚಪ್ಪಲಿಯಿಂದ ನನ್ನ ಬೇನ್ನು ಮೇಲೆ ಹೊಡೆದನು. ಉಳಿದವರೆಲ್ಲರೂ ಸೂಳಿಮಗನದು ಊರಲ್ಲಿ ಬಹಳ ನಡೆದಿದೆ ಜೀವ ಸಹಿತ ಬಿಡಬ್ಯಾಡಿರಿ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಫಜಲಪೂರ ಠಾಣೆ : ಶ್ರೀ ಸೈಯಪ್ಪ ತಂದೆ ಪಂಚಪ್ಪ ಕಾಳೆ ಸಾ|| ಉಡಚಾಣ ಹಟ್ಟಿ ರವರು 1) ಸಿದ್ದಪ್ಪ 2) ಸೈಯಪ್ಪ 3) ದತ್ತಪ್ಪ ಅಂತಾ ಮೂರು ಜನ ಅಣ್ಣ ತಮ್ಮರಿರುತ್ತೇವೆ. ನಮ್ಮೆಲ್ಲರ ಒಟ್ಟಿನಲ್ಲಿ ಒಟ್ಟು 15.14 ಎಕರೆ ಜಮೀನು ಇರುತ್ತದೆ, ಸದ್ಯ ನಾವೆಲ್ಲರೂ ಬೇರೆ ಬೇರೆಯಾಗಿ ಹೊಲ ಮನೆ ಹಂಚಿಕೆ ಮಾಡಿಕೊಂಡಿರುತ್ತೇವೆ. ನನ್ನ ತಮ್ಮನಾದ ಸಿದ್ದಪ್ಪ ಈತನು ನನ್ನ ಪಾಲಿಗೆ ಬಂದ ಜಮೀನಿನಲ್ಲಿ ತನಗೂ ಇನ್ನು ಸ್ವಲ್ಪ ಹೊಲ ಬರುತ್ತದೆ ಅಂತಾ ನನ್ನೊಂದಿಗೆ ಜಗಳ ಮಾಡುತ್ತಿರುತ್ತಾನೆ. ದಿನಾಂಕ 04-04-2017 ರಂದು ಸಾಯಂಕಾಲ ನಾನು ಮತ್ತು ನನ್ನ ಹೆಂಡತಿ ಹಾಗೂ ನನ್ನ ಅಳಿಯನಾದ ಕೋಂಡಿಬಾ ಮೂರು ಜನರು ನನ್ನ ಹೊಲದಲ್ಲಿದ್ದಾಗ, ಹೊಲದ ಸಂಬಂದ ನನ್ನೋಂದಿಗೆ ಜಗಳ ಮಾಡುತ್ತಿದ್ದ ನನ್ನ ತಮ್ಮ 1) ದತ್ತಪ್ಪ ತಂದೆ ಪಂಚಪ್ಪ ಕಾಳೆ, ಅಕ್ಕನ ಮಗನಾದ 2) ಗುರುನಾಥ ತಂದೆ ನಾಮದೇವ ಮಾರನೂರ, ತಂಗಿಯಾದ 3) ಮಕ್ಕಾಬಾಯಿ ಗಂಡ ಪರಮೇಶ್ವರ ತಾಂಬೆ, ನನ್ನ ಅಕ್ಕಳಾದ 4) ಈಠಾಬಾಯಿ ಗಂಡ ನಾಮದೇವ ಮಾರನೂರ, ಅಕ್ಕನ ಮಗಳಾದ 5) ಅಂಬುಬಾಯಿ ತಂದೆ ನಾಮದೇವ ಮಾರನೂರ, ಹಾಗೂ ನನ್ನ ತಾಯಿಯಾದ 6) ರಾಜಾಬಾಯಿ ಗಂಡ ಪಂಚಪ್ಪ ಕಾಳೆ ಸಾ|| ಎಲ್ಲರೂ ಉಡಚಾಣ ಹಟ್ಟಿ ಇವರೆಲ್ಲರು ನನ್ನನ್ನು ಬೈಯುತ್ತಾ ನನ್ನ ಹತ್ತಿರ ಬಂದರು, ಅವರರಲ್ಲಿ ನನ್ನ ಅಕ್ಕ ತಂಗಿ ಹಾಗೂ ಅಕ್ಕನ ಮಗಳು ಮತ್ತು ನನ್ನ ತಾಯಿ ಇವರು ನನ್ನನ್ನು ಹಿಡಿದುಕೊಂಡಾಗ ನನ್ನ ತಮ್ಮ ದತ್ತಪ್ಪ ಹಾಗೂ ನನ್ನ ಅಕ್ಕನ ಮಗ ಗುರುನಾಥ ಇಬ್ಬರು ಕೂಡಿ ನನಗೆ ಹೊಡೆದಿರುತ್ತಾರೆ, ದತ್ತಪ್ಪ ಈತನು ಅಲ್ಲಿಯೆ ಬಿದ್ದ ಬಡಿಗೆ ತಗೆದುಕೊಂಡು ಬಡಿಗೆಯಿಂದ ನನ್ನ ಬಲಗಾಲಿನ ಮೇಲೆ ಹೊಡೆದಿರುತ್ತಾನೆ. ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ಹೆಂಡತಿ ಮತ್ತು ಅಳಿಯ ಹೊಡೆಯುವುದನ್ನು ಬಿಡಿಸಿರುತ್ತಾರೆ. ಸದರಿಯವರು ನನಗೆ ಹೊಡೆದರಿಂದ ನನ್ನ ಬಲಗಾಲಿನ ಮೋಳಕಾಲ ಕೆಳಗೆ ಗುಪ್ತಗಾಯ ಮತ್ತು ಮೈ ಕೈಗೆ ಗುಪ್ತಗಾಯಗಳು ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.
ಆಕ್ರಮ ಮರಳು ದಾಸ್ತಾನು ಮಾಡಿ ಸಾಗಿಸುತ್ತಿದ್ದವರ ವಿರುದ್ಧ ಕ್ರಮ :
ಶಹಾಬಾದ ನಗರ ಠಾಣೆ : ದಿನಾಂಕ 04-04-2017 ರಂದು  ಶಂಕರವಾಡಿ ಸೀಮಾಂತರದ ಕಾಗಿಣಾ ನದಿಯಲ್ಲಿ ಮರಳು ದಾಸ್ತಾನು ಮಾಡಿ ಸಾಗಾಟ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ  ಶ್ರೀ ಎಸ್ ಅಸ್ಲಾಂ ಭಾಷ ಪಿ   ಶಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗಿ ನೋಡಲಾಗಿ ಎರಡು ಜನ ಕಾಗಿಣಾ ನದಿಯಲ್ಲಿ ಕಬ್ಬಿಣದ ಬಕೆಟ್ ಗಳ  ಸಹಾಯದಿಂದ ಮರಳು ಜಗ್ಗಿ ದಾಸ್ತಾನು ಮಾಡುವುದು ನೋಡಿ ದಾಳಿ ಮಾಡಿದಾಗ ಸದರಿಯವರು ಓಡಿ ಹೋಗಿದ್ದು ನಂತರ ಅವರ ಹೆಸರು ವಿಚಾರಿಸಲು 1) ಆನಂದ ತಂದೆ ಶಂಕ್ರೇಪ್ಪ  2) ಕಿರಣ ತಂದೆ  ಕಲ್ಲಪ್ಪ  ಸಂಗಡ ಸಾ: ಇಬ್ಬರು ಶಂಕರವಾಡಿ  ಅಂತಾ ತಿಳಿಸಿದ್ದು ಸದರಿಯವರ ವಿರುದ್ದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ವಾಡಿ ಠಾಣೆ : ದಿನಾಂಕ 03/04/2017 ರಂದು ರಮೇಶ ತಂದೆ ಗಣೇಶ @ ಗಣಪತಿ ಚವ್ಹಾಣ ಸಾ||ರೆಸ್ಟಕ್ಯಾಂಪ ತಾಂಡಾ ವಾಡಿ. ಇವನು ತನ್ನ ಮೊಟರ ಸೈಕಲ್ ನಂ ಕೆಎ-32 ಇ ಎಮ್ -2456 ನೇದ್ದರ ಮೇಲೆ ನನ್ನ ಹೆಂಡತಿಯ ತಂಗಿಯಾದ ಮೀನಾ ಇವಳಿಗೆ ಕೂಡಿಸಿಕೊಂಡು ವಾಡಿ ರೇಲ್ವೇ ಸ್ಟೇಷನಕ್ಕೆ ಬಿಟ್ಟು ಬರಲು ನನಗೆ ಮತ್ತು ನನ್ನ ಹೆಂಡತಿಗೆ ಹೇಳಿ ಹೋಗಿರುತ್ತಾನೆ. ನಂತರ 08-45 ಪಿ.ಎಮ್ ಕ್ಕೆ ನನಗೆ ಪರಿಚಯದವರಾದ ಸತೀಷ ತಂದೆ ಶಂಕರ ಚವ್ಹಾಣ ರವರು ಪೋನ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ಮಗ ರಮೇಶ ಇತನು ತನ್ನ ಮೊಟರ ಸೈಕಲ್ ನಂ ಕೆಎ-32 ಇ ಎಮ್ -2456 ನೇದ್ದರ ಮೇಲೆ ರೇಲ್ವೇ  ಸ್ಟೇಷನದಿಂದ ನಿಮ್ಮ ಮನೆಯ ಕಡೆಗೆ ಬರುವಾಗ ವಾಡಿ ಪಟ್ಟಣದ ಡಾ||ಗೋವಿಂದ ನಾಯಕ ಆಸ್ಪತ್ರೆಯ ಮುಂದಿನ ರೊಡಿಗೆ ತನ್ನ ಮೊಟರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಕಟ್ ಹೊಡೆದು ಬ್ರೇಕ ಹಾಕಿದ್ದರಿಂದ ಸ್ಕಿಡ್ಡಾಗಿ ಬಿದ್ದು ಆತನ ತಲೆಗೆ ,ಮುಖಕ್ಕೆ, ಹಣೆಗೆ, ಬಲ ಕಪಾಳಕ್ಕೆ , ಗದ್ದಕ್ಕೆ ಭಾರಿ ಒಳಪೆಟ್ಟಾಗಿ ಅಲ್ಲಲ್ಲಿ ತೆರಚಿದ ರಕ್ತಗಾಯವಾಗಿ ಬಿದ್ದಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಹೆಂಡತಿ ಮತ್ತು ಪರಶುರಾಮ ರಾಠೋಡ ಕೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನಿಜವಿದ್ದು ನನ್ನ ಮಗನಿಗೆ ಯಾವದೋ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸೇರಿಕೆ ಮಾಡಿ ನಂತರ ಅಲ್ಲಿಂದ 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಚಿತ್ತಾಪೂರ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ರಾತ್ರಿ 10-00 ಪಿ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಗಣೇಶ @ಗಣಪತಿ ತಂದೆ ಲಕ್ಷ್ಮಣ ಚವ್ಹಾಣ ಸಾ||ರೆಸ್ಟಕ್ಯಾಂಪ ತಾಂಡಾ ವಾಡಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.