POLICE BHAVAN KALABURAGI

POLICE BHAVAN KALABURAGI

26 April 2014

Gulbarga District Reported Crimes

ಅಪಘಾತ ಪ್ರಕರಣಗಳು :
ಶಾಹಾಬಾದ ನಗರ ಠಾಣೆ : ದಿನಾಂಕ: 25.04.2014 ರಂದು  4.30 ಪಿ.ಎಮ್.ಕ್ಕೆ ಶ್ರೀ. ಮಹಮ್ಮದ ನಿಜಾಮ ತಂದೆ  ಬಸೀರೊದ್ದಿನ ಮುಲ್ಲಾ  ಸಾ|| ಆಸರಾ ಮೊಹಲ್ಲಾ ಚಿತ್ತಾಪೂರ  ರವರು  ತನ್ನ ಆಟೊ ನಂ ಕೆಎ-32 ಬಿ-5210 ನೇದ್ದರಲ್ಲಿ ತನ್ನ  ತಾಯಿ ,  ಹೆಂಡತಿ,  ಹಾಗು  ಅಕ್ಕ,  ಅಕ್ಕನ ಮಗಳು,  ಹಾಗೂ ಮಕ್ಕಳು  ಕೂಡಿಕೊಂಡು  ಶಹಾಬಾದದ ಸ್ಟಾರ ಪಂಕ್ಷ್ಚನ   ಹಾಲದಲ್ಲಿ ಸಂಬಂಧಿಕರ ಮದುವೆ ಇದ್ದ ಕಾರಣ ಚಿತ್ತಾಪೂರದಿಂದ ಸದರಿ ಆಟೊವನ್ನು ಫಿರ್ಯಾದಿ ಚಲಾಯಿಸಿಕೊಂಡು  ಶಹಾಬಾದದ ಆಲಸ್ಟಮ ಕಂಪನಿಯ  ಗೆಸ್ಟ ಹೌಸ ಎದುರುಗಡೆ ಬರುತ್ತಿರುವಾಗ  ಶಹಬಾದ ಕಡೆಯಿಂದ ಗುಲಬರ್ಗಾ ಕಡೆಗೆ ಲಾರಿ ನಂ ಎಮ್.ಹೆಚ್.-43 / ಯು-5259 ನೇದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಆಟೊಕ್ಕೆ ಡಿಕ್ಕಿ ಪಡಿಸಿದ್ದರಿಂದ ಆಟೊದಲ್ಲಿದ್ದ ಫಿರ್ಯಾದಿಗೆ ಹಾಗೂ  ,  ಫಿರ್ಯಾದಿ ತಾಯಿ, ಹೆಂಡತಿಗೆ, ಅಕ್ಕ, ಹಾಗೂ ಅಕ್ಕನ ಮಗಳೀಗೆ ಹಾಗೂ ಮಗನಿಗೆ  ಸಾಧಾ ಮತ್ತ ಭಾರಿ ಗಾಯವಾಗಿರುತ್ತದೆ.  ಸದರಿ ಅಪಘಾತ ಪಡಿಸಿದ ಲಾರಿ ಚಾಲಕನು ತನ್ನ ಲಾರಿಯನ್ನು  ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಸದರಿ ಗಾಯಾಳುದಾರರಿಗೆ  ಹೆಚ್ಚಿನ  ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು ದಿನಾಂಕ 25-04—2014 ರಂದು 1050 ಪಿ.ಎಮ್.ಕ್ಕೆ  ಹಮೀದಾ ಬೇಗಂ ಇವರು ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಮಾದನ ಹಿಪ್ಪರಗಾ ಠಾಣೆ : ಶ್ರೀ ನಾಗೇಶ ತಂದೆ ಹಣಮಂತರಾಯ ಕಲಶೆಟ್ಟಿ  ಸಾ:ಬೊಳೆವಾಡ ತಾ:ಜಿ: ಗುಲಬರ್ಗಾ ಇವರು ದಿನಾಂಕ 24-04-2014 ರಂದು ರಾತ್ರಿ 09:30 ಗಂಟೆಯ ಸುಮಾರಿಗೆ ಹಿರೋಳ್ಳಿ ದೇಶಮುಖ ಇವರ ಹೊಲದ ಹತ್ತಿರ ರಸ್ತೆಯಲ್ಲಿ  ಲಾರಿ ನಂ: KA:25 C-492  ನೇದ್ದರ ಚಾಲಕನಾದ ಆತ್ಮರಾಮ ತಂದೆ ಮಲ್ಲಿಕಾರ್ಜುನ ಬೆಳಮಗಿ ಇತನು ಲಾರಿಯನ್ನು  ಅತೀವೇಗದಿಂದ ಮತ್ತು ನಿಷ್ಕಳಜಿತನದಿಂದ ಚಲಾಯಿಸಿ ಅಫಘಾತ ಪಡಿಸಿದ್ದರಿಂದ ನನ್ನ ಅಣ್ಣನಾದ ಅನೀಲ @ ಅಣ್ಣಪ್ಪ ಇತನಿಗೆ ಬಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ನನ್ನ ಅಣ್ಣನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲಾ. ಲಾರಿ ಕ್ಲೀನರನಿಗೂ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಕಳವು ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಶರಣಪ್ಪ ಸಣ್ಣೂರ್ ನಿವೃತ್ತ ಡಿ.ವೈ.ಎಸ್.ಪಿ  ಸಾಃ ಮ.ನಂ. ಎಂ.ಐ.ಜಿ-07 2 ನೇ ಹಂತ, ರಿಂಗ್ ರೋಡ್ ಆದರ್ಶ ನಗರ ಗುಲಬರ್ಗಾ ರವರು ದಿನಾಂಕ 23/04/2014 ರಂದು 8.00 ಪಿ.ಎಂ ದ ಸುಮಾರಿಗೆ ಫಿರ್ಯಾದಿದಾರರು ತಮ್ಮ ಬುಲೇರೋ ನಂ.ಎ.ಪಿ-09 ಎಆರ್-3337 ಹಸಿರು ಬಣ್ಣದ್ದು ನೇದ್ದು, ತಮ್ಮ ಮನೆಯ ಮುಂದೆ ನಿಲ್ಲಿಸಿ, ದಿಃ 24/04/2014 ರಂದು ಬೆಳಿಗ್ಗೆ 5.30 ಎಎಂ ಕ್ಕೆ ಎದ್ದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ್ದ ಬುಲೇರೋ ಇರಲಿಲ್ಲ. ಯಾರೋ ಕಳ್ಳರು ದಿಃ 23/04/2014 ರಂದು ರಾತ್ರಿ 10.00 ಗಂಟೆಯಿಂದ ದಿಃ 24/04/2014 ರ ಬೆಳಗಿನ ಜಾವ 5.30 ಎಎಂ ದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಸದರಿ ವಾಹನದ ಕಿಮ್ಮತ್ತು 2,75,000/- ರೂ. ಆಗುತ್ತದೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸ್ಟೇಷನ ಬಜಾರ ಠಾಣೆ : ಶ್ರೀ ಅಂಬಾರಾಯ ತಂದೆ ಮಾರುತಿ ಕಾಂಬ್ಳೆ  ಸಾ|| ಮನೆ ನಂ; ಇ/9/1198/1 ಶಹಾಬಜಾರ ಹರಿಜನ ವಾಢಾ ಗುಲಬರ್ಗಾ ಇವರು ತಮ್ಮ  ಮೋಟಾರ ಸೈಕಲ್  ಹಿರೋ  ಸ್ಪ್ಲಂಡರ ಪ್ಲಸ್ ನಂ ಕೆಎ 32 ಇಸಿ 9145 ನೇದ್ದನ್ನು  ದಿನಾಂಕ  15-04-2014  ರಂದು ಸಾಯಂಕಾಲ 08-30 ಗಂಟೆ ಸುಮಾರಿಗೆ ಪಿಡಿಎ ರಸ್ತೆಯಲ್ಲಿರುವ ಹನುಮಾನ ಗುಡಿಯ ಹತ್ತಿರ ನಿಲ್ಲಗಡೆ ಮಾಡಿ ಝರಾಕ್ಸ ಮಾಡಿಸಿ ಕೊಂಡು 09-45 ಗಂಟೆಗೆ ಮರಳಿ ಬಂದು ನೋಡಲಾಗಿ ಸದರಿ ನನ್ನ ಸೈಕಲ್ ಮೋಟಾರ ಇರಲಿಲ್ಲಿ. ನಾನು ಎಲ್ಲಾಕಡೆ ಹುಡಕಾಡಿದರೂ ಸಹ  ಸೈಕಲ್ ಮೋಟಾರ ಸಿಕ್ಕಿರುವದಿಲ್ಲ. ನ್ನ ಸೈಕಲ್ ಮೋಟಾರ ಹಿರೋ ಸ್ಪ್ಲಂಡರ ಪ್ಲಸ್ ನಂ ಕೆಎ 32 ಇಸಿ 9145  ಚಸ್ಸಿ ನಂ; MBLHA10AMCHM13502  ಇಂಜಿನ್ ನಂ;  HA10EJCHM31631  || ಕಿ|| 45000/-ರೂ ನೇದ್ದು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ಜಗನ್ನಾಥ ತಂದೆ ಬಸವರಾಜ ಪಾಟೀಲ ಸಾ: ಪ್ಲಾಟ ನಂ. 258 ಗೊದುತಾಯಿ ಕಾಲೋನಿ ಗುಲಬರ್ಗಾ ರವರು ದಿನಾಂಕ 24-04-2014 ರಂದು ರಾತ್ರಿ 10-30 ಗಂಟೆಗೆ  ನಾನು ಮತ್ತು ನನ್ನ ಹೆಂಡತಿ  ಹಾಗು ಮಗಳೊಂದಿಗೆ  ಗೊದುತಾಯಿ ನಗರದ ಮದರ ತೆರೆಸಾ  ಶಾಲೆ  ಹತ್ತಿರ  ವಾಕಿಂಗ ಮಾಡುತ್ತಿರುವಾಗ  ಒಬ್ಬ  ವ್ಯಕ್ತಿ ಹಿರೊ ಹೊಂಡಾ ಮೊಟರ ಸೈಕಲ ಮೇಲೆ ಬಂದು  ನನ್ನ  ಕೊರಳಲ್ಲಿಯ 12 ಗ್ರಾಂ ಬಂಗಾರದ  ಚೈನ ಕಸಿದುಕೊಂಡು ರೈಲ್ವೆ ಗೇಟ ಕಡೆಗೆ  ಹೊಗಿರುತ್ತಾನೆ. ಅದರ ಬೆಲೆ  30,000/- ರೂ. ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಿವಪ್ಪ ತಂದೆ ಗುರಪ್ಪ ಸಾ:ಹಸನಾಪೂರ ತಾ:ಜಿ:ಗುಲಬರ್ಗಾ ರವರಿಗೆ ಬೆಳಗ್ಗೆ 8:30  ಕ್ಕೆ ನನ್ನ ಜೋತೆಯಲ್ಲಿ ಅನಾವಶ್ಯಕವಾಗಿ ನನ್ನ ಸಂಬಂದಿಕನಾದ ಸಾಯಬಣ್ಣ ತಂದೆ ಬಿರಪ್ಪ ಕೊನ್ನುರ ಸಾ:ಹಸನಾಪೂರ ಗ್ರಾಂದಲ್ಲಿ ನನ್ನ ಜೋತೆ ಊಟಕ್ಕೆ ಅಂತಾ ಮನೆಗೆ ಹೊರಟಾಗ ನಮ್ಮ ಗ್ರಾಮದವರಾದ 1) ಸೀತಾರಾಂ ತಂದೆ ತಿಪ್ಪಣ್ಣ ಸುಬೆದಾರ 2) ಶರಣಬಸಪ್ಪ ತಂಎ ತಿಪ್ಪಣ್ಣ ಸುಬೆದಾರ 3) ದೆವರಾಜ ತಂದೆ ತಿಪ್ಪಣ್ಣ ಸುಬೆದಾರ 4) ಗೌಡಪ್ಪಗೌಡ ತಂದೆ ಭಿಮರಾಯ ಗೌಡ 5) ಜೀತೆಂದ್ರ ತಂದೆ ಗೌಡಪ್ಪಗೌಡ ಐದು ಜನರು ಕೂಡಿ ನನ್ನ ಮೇಲೆ ಹಾಗೂ ನನ್ನ ಸಂಬಂದಿಕನಾದ ಸಾಯಬಣ್ಣನಿಗೆ ರಸ್ತೆಯಿಂದ ಎಳೆದು ತನ್ನ ಮನೆಗೆ ಕರೆದುಕೊಂಡು ಹೋಗಿ ಚಾಕು, ಚೂರಿ, ಬೆಲ್ಟ, ಬಡಿಗೆ ಇನ್ನಿತರ ವಸ್ತ್ರಗಳಿಂದ ನನ್ನನ್ನು ತಳಿಸಿದರು ಸಾಯಬಣ್ಣನು ಜನರಲ್ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ