POLICE BHAVAN KALABURAGI

POLICE BHAVAN KALABURAGI

18 August 2012

GULBARGA DISTRICT


ಎಸ್.ಎಮ್.ಎಸ್ ಕಳುಹಿಸಿ ಸಾರ್ವಜನಿಕ ಜೀವನದಲ್ಲಿ ಭಯ-ಬೀತಿ ಹುಟ್ಟಿಸುತ್ತಿರುವವರ ಮೇಲೆ ಕ್ರಮ ಜರುಗಿಸುತ್ತಿರುವ  ಬಗ್ಗೆ.
ಇತ್ತೀಚಿನ ದಿವಸಗಳಲ್ಲಿ ಮೊಬಾಯಿಲ್, ಈ ಮೇಲ್ ಮತ್ತು ಪೇಸ್ ಬುಕ್ ಮುಖಾಂತರ ಸುಳ್ಳು ಎಸ್.ಎಮ್.ಎಸ್. ಕಳುಹಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಮೆಸೆಜಗಳನ್ನು ಕಳುಹಿಸಿ ಜನರಲ್ಲಿ ಆತಂಕದ ವಾತವರಣವನ್ನುಂಟು ಮಾಡುತ್ತಿದ್ದು, ಈ ಬಗ್ಗೆ ಈಗಾಗಲೇ ಗುಲಬರ್ಗಾ ನಗರದ ಸ್ಟೇಷನ ಬಜಾರ ಪೊಲೀಸ್ ಠಾಣೆಯಲ್ಲಿ ಸುಳ್ಳು ಎಸ್.ಎಮ್.ಎಸ್ ಬಗ್ಗೆ ಪ್ರಕರಣ ದಾಖಲಾಗಿದೆ. ಇಂತಹ ಸುಳ್ಳು ಎಸ್.ಎಮ್.ಎಸ್ ಮೆಸೆಜಗಳು ಕಳುಹಿಸುತ್ತಿರುವವರನ್ನು ಪತ್ತೆ ಮಾಡಲು ಈಗಾಗಲೇ ಕ್ರಮ ಕೈಕೊಳ್ಳಲಾಗುತ್ತಿದೆ. ಸಾರ್ವಜನಿಕರು ಈ ತರಹ ಸುಳ್ಳು ಎಸ್.ಎಮ್.ಎಸ್ ಬಂದಲ್ಲಿ ನಿರ್ಲಕ್ಷ ಮಾಡತಕ್ಕದ್ದು, ಮತ್ತು ಇಂತಹ ಮೆಸೆಜಗಳನ್ನು ಸ್ವಿಕರಿಸಿದಲ್ಲಿ ಮೊತ್ತೊಬ್ಬರಿಗೆ ಕಳುಹಿಸಬಾರದು. ಇದು ಸಹ ಅಪರಾದ ಆಗುತ್ತದೆ. ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದೆಂದು ಜಿಲ್ಲಾ ಪೊಲೀಸ್ ವತಿಯಿಂದ ಮನವಿ. 

GULBARGA DISTRICT REPORTED CRIMES

ಆತ್ಮಹತ್ಯೆಗೆ ಪ್ರಚೋದನೆ:
ಚಿತ್ತಾಪೂರ ಪೊಲೀಸ್ ಠಾಣೆ: ತಿಪ್ಪವ್ವ ಗಂಡ ಫಕೀರಪ್ಪ ಗಾಯಕವಾಡ ಸಾ|| ಬೈರು ವಸ್ತಿ ಲಿಂಬೆವಾಡಿ ಸೋಲಾಪುರ ರವರು ನನ್ನ ಮಗಳಾದ ಲಕ್ಷ್ಮಿ ಇವಳಿಗೆ ಚಿತ್ತಾಪೂರದ ನರಸಪ್ಪ ತಂದೆ ರಾಮಲು ಕಾಸಿವಡ್ಡರ ಸಾ|| ಆಶ್ರಯ ಕಾಲೋನಿ ಇತನ ಜೋತೆ ಮದುವೆ ಮಾಡಿದ್ದು, ಮದುವೆಯಾದ ನಂತರ ಅವಳಿಗೆ ತವರು ಮನೆಯಿಂದ ಬಂಗಾರ ಮತ್ತು ಹಣ ತೆಗೆದುಕೊಂಡು ಬಾ ಅಂತ ಪದೇ ಪದೇ ಕಿರುಕುಳ ನೀಡುತ್ತಾ ಬಂದಿದ್ದಕ್ಕೆ ಅವಳ ಕೊಟ್ಟ ಕಿರುಕುಳ ತಾಳಲಾರದ್ದಕ್ಕೆ ನನ್ನ ಮಗಳು ಲಕ್ಷ್ಮಿ ಇವಳು ದಿನಾಂಕ 17/08/2012 ರಂದು ಮುಂಜಾನೆ 9-30 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಹಗ್ಗದಿಂದ ಉರುಲು ಹಾಕಿಕೊಂಡು ಮೃತ ಪಟ್ಟಿರುತ್ತಾಳೆ. ಈ ಕೃತ್ಕಕ್ಕೆ ಪ್ರಚೋದನೆ ಮಾಡಿದ ಆಕೆಯ  ಗಂಡ ಮತ್ತು ಅತ್ತೆಯರ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ದೂರು  ಸಾರಾಂಶದ ಮೇಲಿಂದ ಠಾಣೆ ಗುನ್ನ ನಂ:77/2012 ಕಲಂ 306 ಐಪಿಸಿ ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಶಿವಾಜಿ ತಂದೆ ಸೈದಪ್ಪಾ ಗಜಕೋಶ ಸಾ:ಜೋಪಡ ಪಟ್ಟಿ ಏರಿಯಾ ಜೇವರ್ಗಿ ವರು ನಾನು ಜೇವರ್ಗಿಯಿಂದ ಶಹಾಬಾದಕ್ಕೆ ಕರ್ತವ್ಯದ ನಿಮಿತ್ಯ ಬಂದು ಕರ್ತವ್ಯ ಮುಗಿಸಿಕೊಂಡು ಜೇವರ್ಗಿಗೆ ಹೋಗುವಾಗ ದಾದಾಪೀರ ದರ್ಗಾದ ಹತ್ತಿರ ಬೆಳಿಗ್ಗೆ 11.45 ಗಂಟೆ ಸುಮಾರಿಗೆ ತೊನಸಳ್ಳಿ (ಎಸ್‌) ಗ್ರಾಮದ ಕಡೆಯಿಂದ ಮೋಟಾರ ಸೈಕಲ  ನಂ.ಕೆಎ-37/ಎಸ್‌-3476 ನೇದ್ದರ ಚಾಲಕ ರಮೇಶನು ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಜೀಪ ನಂ.ಕೆಎ-23 ಎಮ್‌-4717 ನೇದ್ದಕ್ಕೆ  ಡಿಕ್ಕಿ ಹೊಡೆದಿರುತ್ತಾನೆ. ಸದರಿ ಮೋಟಾರ ಸೈಕಲ ಚಾಲಕನಿಗೆ ಬಲಗಣ್ಣಿನ ಹುಬ್ಬಿಗೆ, ಬಲ ಗಡೆ ತುಟಿಗೆ, ಬಲಗಾಲ ಮೋಳಕಾಲಿಗೆ,ಬಲಪಾದಕ್ಕೆ , ಬಲ ಮುಂಗೈಗೆ ರಕ್ತಗಾಯ ಮತ್ತು ಭಾರಿ ಗಾಯವಾಗಿರುತ್ತದೆ. ಮತ್ತು ನನಗೆ ಬಲಗೈಗೆ ಒಳಪೆಟ್ಟಾಗಿರುತ್ತದೆ. ಹಾಗೂ ನನ್ನ ಜೀಪಿಗೆ ಬಲಗಡೆ ಸೈಡಿಗೆ ಬಂಪರ ಡಿಸ್ಕ ಮತ್ತು ಟಾಯರ ಬ್ಲಸ್ಟ್‌ ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 106/2012 ಕಲಂ: 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ನಾಗೇಂದ್ರ ತಂದೆ ಮಲ್ಕಪ್ಪಾ ಹುಗ್ಗಿ ಸಾ:ತೊನಸಳ್ಳಿ (ಎಸ್‌) ವರು ನಾನು ದಿನಾಂಕ:17/08/2012 ರಂದು ಮುಂಜಾನೆ ಬೆಳಿಗ್ಗೆ 11-45 ಗಂಟೆ ಸುಮಾರಿಗೆ ನಾನು ಮತ್ತು ತಿಪ್ಪಣ್ಣಾ ಹಾಗರ ಗುಂಡಗಿ ಕೂಡಿಕೊಂಡು ಮೋಟಾರ ಸೈಕಲ ಮೇಲೆ ತೊನಸಳ್ಳಿಯಿಂದ ಶಹಾಬಾದಕ್ಕೆ ಹೋಗುತ್ತಿದ್ದೇವು.ಎದುರಿಗೆ ನಮ್ಮೂರ ರಮೇಶ ತಂದೆ ನಾಗಪ್ಪಾ ಬೆಳಗುಂಪಿ ಇವನು ಮೋಟಾರ ಸೈಕಲ ಮೇಲೆ ಹೋಗುತ್ತಿದ್ದನು ದಾದಾ ಪೀರ ದರ್ಗಾದ ಹತ್ತಿರ ರೋಡಿನ ಮೇಲೆ ಹೋಗುತ್ತಿರುವಾಗ ಎದರುಗಡೆಯಿಂದ ಜೀಪಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಮೇಶನ ಮೋಟರ ಸೈಕಲಗೆ ಡಿಕ್ಕಿ ಹೊಡೆದನು. ಅದರಿಂದ ರಮೇಶನಿಗೆ ಬಲಗಣ್ಣಿನ ಹುಬ್ಬಿಗೆ ಬಲಗಡೆ ತುಟಿಗೆ ಬಲಗೈ ಮುಂಗೈಗೆ ಬಲ ಮೊಳಕಾಲಿಗೆ ಹಾಗೂ ಬಲಪಾದಕ್ಕೆ ಭಾರಿ ಮತ್ತು ಸಾದಾ ರಕ್ತಗಾಯ ವಾಗಿರುತ್ತದೆ. ಸದರಿ ಮೋಟಾರ ಸೈಕಲ ನಂ.ಕೆಎ-37 ಎಸ್‌-3476 ಇದ್ದು ಮತ್ತು ಜೀಪ ನಂಬರ ಕೆಎ-23/ಎಮ್‌-4717 ನೇದ್ದರ ಚಾಲಕ ಶಿವಾಜಿ ತಂದೆ ಸೈದಪ್ಪಾ ಅಂತಾ ಇರುತ್ತದೆ ಸದರಿ ಜೀಪ ಚಾಲಕನಿಗೂ ಬಲಗೈ ಮುಂಡಿಗೆ ಒಳಪೆಟ್ಟಾಗಿದ್ದು ಇರುತ್ತದೆ. ರಮೇಶನಿಗೆ ಡಿಕ್ಕಿ ಹೊಡೆದ ಜೀಪ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂಬ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 107/2012 ಕಲಂ: 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಅಬ್ದುಲ ನಬಿ ತಂದೆ ಮೊಹ್ಮದ ಅನ್ಸರ್ ಮೊಜಮ್ ಡಾ: ರಸೀದ ರವರ ಆಸ್ಪತ್ರೆಯಲ್ಲಿ ನರ್ಸ ಕೆಲಸ ಸಾ: ಹಳೆ ಶಹಾಬಾದ ವರು ನಾನು ಆಸ್ಪತ್ರೆಯಿಂದ ಕೆಲಸ ಮುಗಿಸಿಕೊಂಡು ಮೋಟಾರ ಸೈಕಲ  ನಂ: ಕೆ.ಎ/32-ಎಸ್-6257 ನೇದ್ದರ ಮೇಲೆ  ಮನೆಗೆ ಹೋಗುವಾಗ ಮೇನ ರೋಡ ಹತ್ತಿರ ದನಗಳ ಆಸ್ಪತ್ರೆ ಶಹಾಬಾದ ಹತ್ತಿರ ರೋಡಿನ ಮೇಲೆ ಹೊಗುತ್ತಿರುವಾಗ  ಎದರುಗಡೆಯಿಂದ ಕೆಎ-32/ಎನ್-1722 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿದನು. ಡಿಕ್ಕಿ ಹೊಡೆದ ಪರಿಣಾಮದಿಂದ ನನಗೆ ಬಲ ಮೊಳಕಾಲಿಗೆ ಹಾಗೂ ಪಾದಕ್ಕೆ ಗುಪ್ತಗಾಯ ಆಗಿರುತ್ತದೆ. ಸದರಿ ವಾಹವನ್ನು ನಿಲ್ಲಿಸದೇ ಹಾಗೇಯೇ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 108/2012 ಕಲಂ: 279,337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪರಮೇಶ್ವರ ತಂದೆ ನಿಂಗಪ್ಪ ಕಾನಳ್ಳಿ ಸಾ: ತಾಜ ಸುಲ್ತಾನಪೂರ ಗ್ರಾಮ ತಾ||ಜಿ||ಗುಲಬರ್ಗಾರವರು ನಾನು ಮತ್ತು ರಾಜಕುಮಾರ, ಸೈಬಣ್ಣ ಕೂಡಿಕೊಂಡು ಸೈಬಣ್ಣನ ಹೊಸ ಮೋಟಾರ  ಸೈಕಲ ನಂ  ಕೆಎ 32 ಆರ್‌ಟಿ 7060 ನೇದ್ದರ ಮೇಲೆ ಕೂಡಿಸಿಕೊಂಡನು ಹಾಗೂ ಮೃತ ರಾಜಕುಮಾರ ಇತನು ತನ್ನ ಮೋ ಸೈಕಲ ನಂ ಕೆಎ 32 ಎಕ್ಸ್‌ 5658 ನೇದ್ದರ ಮೇಲೆ ಮದ್ಯಾಹ್ನ 12:15 ಗಂಟೆಗೆ ಹೊರಟ್ಟಿದ್ದು. ಮುಂದೆ ರಾಜಕುಮಾರ ತನ್ನ ಮೋಟಾರ ಸೈಕಲ ಮೇಲೆ ಹೊರಟಿದ್ದು ಅವನ ಹಿಂದೆ ಸೈಬಣ್ಣನ ಮೋಟಾರ ಸೈಕಲ ಹಿಂದೆ ಕುಳಿತು ನಾನು ಹೋಗುತ್ತಿದ್ದಾಗ, ಬೇಲೂರ ಕ್ರಾಸ ಹತ್ತಿರ ಇರುವ ಮಲ್ಲಿಕಾರ್ಜುನ ದಾಲ ಮಿಲ ಎದುರಿನ ರಸ್ತೆಯ ಮೇಲೆ ಎದುರಿನಿಂದ ಮ್ಯಾಕ್ಷಿ ಕ್ಯಾಬ ನಂಬರ ಕೆಎ17-3716 ನೇದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ತನ್ನ ಸೈಡಿಗೆ ಹೋಗದೆ ಒಮ್ಮಿಂದ ಒಮ್ಮೇಲೆ ಬಲಭಾಗಕ್ಕೆ ಬಂದು ರಾಜಕುಮಾರ ಇತನ ಮೋಟಾರ ಸೈಕಲ ಡಿಕ್ಕಿ ಹೊಡೆದು ನೋಡುವಷ್ಟರಲ್ಲಿ ನಾನು ಕುಳಿತು ಹೊರಟ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ  ಮೂರು ಜನರು ಕೆಳಗೆ ಬಿದಿದ್ದು ಅದರಿಂದ ರಾಜಕುಮಾರ & ಸೈಬಣ್ಣ ಇಬ್ಬರು ಬೇಹುಷ ಆಗಿ ಬಿದ್ದಿರುತ್ತಾರೆ. ನನಗೆ ಭಾರಿ ರಕ್ತ & ಗುಪ್ತಗಾಯವಾಗಿರುತ್ತದೆ. 108 ಅಂಬುಲೆನ್ಸ ಬಂದು ರಾಜಕುಮಾರ & ಸೈಬಣ್ಣ ಇಬ್ಬರು ಮೃತಪಟ್ಟಿರುತ್ತಾರೆ ಅಂತ ತಿಳಿಸಿದರು ನಾನು ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ, ಕಾರಣ ಸದರಿ  ಮ್ಯಾಕ್ಸಿ ಕ್ಯಾಬ ಕೆಎ 17 3716 ನೇದ್ದರ ಚಾಲಕನಾದ ದಶರಥ ತಂದೆ ಬಸವಣ್ಣಪ್ಪ ಸಾ: ಸುಂಠಾಣ ಇವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 269/12 ಕಲಂ 279, 338, 304(ಎ) ಐಪಿಸಿ ಸಂ. 187 ಐಎಂವಿ ಆಕ್ಟ್  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.