POLICE BHAVAN KALABURAGI

POLICE BHAVAN KALABURAGI

23 May 2016

Kalaburagi District Reported Crimes

ಅಪಘಾತ  ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಲಕ್ಷ್ಮಿಬಾಯಿ ಗಂಡ ಮಲಕಣ್ಣಾ ವಾಲಿಕಾರ ಸಾ:ರುದ್ರವಾಡಿ ತಾ:ಆಳಂದ ಜಿ:ಕಲಬುರಗಿ ರರರ ತಾಯಿಯಾದ ರುಕ್ಕಮ್ಮಾ @ ರುಕ್ಮಣಿ ಇವಳು ಕಲಬುರಗಿ ನಗರದ ಸೈಯ್ಯದ ಚಿಂಚೋಳಿ ರೋಡಿಗೆ ಇರುವ ರುದ್ರಾಶ್ರಮದಲ್ಲಿ  ಇರುತ್ತಿದ್ದು  ದಿನಾಂಕ:-22/05/2016 ರಂದು ಸಂಜೆ 05:30 ಗಂಟೆ ಸುಮಾರಿಗೆ ನಿಮ್ಮ ತಾಯಿಯವರಾದ ರುಕ್ಕಮ್ಮಾ @ ರುಕ್ಮಣಿ ಇವರು ಸೈಯ್ಯದ ಚಿಂಚೋಳಿ ಕ್ರಾಸ ದಾಟಿ ಸ್ವಲ್ಪ ಮುಂದುಗಡೆ ರುದ್ರಾಶ್ರಮಕ್ಕೆ ಹೋಗಬೆಕೆಂದು ರೋಡ ದಾಟುತ್ತಿದ್ದಾಗ ಆಗ ಅದೇ ವೇಳೆಗೆ ಹುಮನಾಬಾದ ರಿಂಗ ರೋಡ ಕಡೆಯಿಂದ ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದವನೇ ರೋಡ ದಾಟುತ್ತಿದ್ದ ನಿಮ್ಮ ತಾಯಿಯವರಿಗೆ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ಲಾರಿಯನ್ನು ಸ್ವಲ್ಪ ಮುಂದೆ ಒಯ್ದು ನಿಲ್ಲಿಸಿದನು ಆಗ ಇದನ್ನು ನೋಡಿ ನಾನು ಮತ್ತು ನನ್ನಂತೆ ರುದ್ರಾಶ್ರಮದಲ್ಲಿ ಕೆಲಸ ಮಾಡುವ ಶೋಭಾ ಚವ್ಹಾಣ ಇಬ್ಬರು ಹೋಗಿ ನಿಮ್ಮ ತಾಯಿಯವರಿಗೆ ನೋಡಲಾಗಿ ಅವಳಿಗೆ ಎಡ ತಲೆಗೆ ಭಾರಿ ರಕ್ತಗಾಯ, ಎಡಗಾಲ ಪಾದದ ಮೇಲಭಾಗಕ್ಕೆ ಹಾಗು ಪಾದಕ್ಕೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತಸ್ರಾವವಾಗಿ ಬೇಹೊಸ ಆಗಿದ್ದು ಅವಳಿಗೆ 108 ಅಂಬುಲೆನ್ಸದಲ್ಲಿ ಹಾಕಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ಕರೆದುಕೊಂಡು ಹೋಗುತ್ತಿದ್ದೇವೆ. ಅಪಘಾತಪಡಿಸಿದ ಲಾರಿ ನಂ ಕೆಎ-28 ಎ-3035 ಅಂತಾ ಇದ್ದು ಅದರ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ ನಿಮ್ಮ ತಾಯಿಯವರಿಗೆ ಉಪಚಾರ ಕುರಿತು 108 ಅಂಬುಲೆನ್ಸದಲ್ಲಿ ತರುವಾಗ ಸಾಯಂಕಾಲ 07:00 ಗಂಟೆಗೆ ಮಾರ್ಗಮದ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ರುದ್ರಾಶ್ರಮದಲ್ಲಿ ಸಹಾಯಕಿ ಅಂತಾ ಕೆಲಸ ಮಾಡುವ ಜಲಜಾಕ್ಷಿ ಕೋರೆ  ರವರು ಫೊನಮೂಲಕ ತಿಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣಗಳು :
ಚೌಕ ಠಾಣೆ : ಶ್ರೀ ಶರಣಬಸಪ್ಪಾ ತಂದೆ ಹಣಮಂತಪ್ಪಾ ದ್ಯಾಗಾಂವ ಸಾಃ ಕಪನೂರ ಗ್ರಾಮ ತಾಃಜಿಃ ಕಲಬುರಗಿ. ಇವರು ಟ್ಯಾಕ್ಸಿ ಡ್ರೈವರನಾಗಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಶಾಂತಕುಮಾರ ತಂದೆ ಸಾಃ ಬಸವೇಶ್ವರ ಕಾಲೋನಿ ಕಲಬುರಗಿ ಇವರು ನನ್ನ ಗೆಳೆಯನಿರುತ್ತಾನೆ.  ಹೀಗಿದ್ದು ನಿನ್ನೆ ದಿನಾಂಕಃ 21.05.2016 ರಂದು ಬೆಳಿಗ್ಗೆ 10.00ಎ.ಎಮ್ ಕ್ಕೆ ಡಾ. ಬಾಬಾ ಸಹೇಬ ಅಂಬೇಡ್ಕರ್ ರವರ ಬುದ್ದ ಪೂರ್ಣಿಮೆ ಜಯಂತಿ ಕಾರ್ಯಕ್ರಮ ಇರುವುದರಿಂದ ನಾನು ಕಲಬುರಗಿ ನಗರಕ್ಕೆ ಬೆಳಿಗ್ಗೆ ಬಂದಿದ್ದು ಮಧ್ಯಾಹ್ನ 2.00 ಪಿ.ಎಮ್ ವರಗೆ ಸದರಿ ಕಾರ್ಯಕ್ರಮ ಮುಕ್ತಾಯವಾಗಿದ್ದು ನಂತರ ನಾನು ಮತ್ತು ನನ್ನ ಗೆಳೆಯನಾದ ಶಾಂತಕುಮಾರ ತಂದೆ ಬಸವರಾಜ ಬಿರಾದಾರ ಇತನು ಜಗತ್ ಸರ್ಕಲದಲ್ಲಿ ಸಿಕ್ಕಿದ್ದು ನಾವು ಇಬ್ಬರೂ ಕೂಡಿಕೊಂಡು ಉಟ ಮಾಡುವ ಕುರಿತು ಅಂದಾಜು 2.30 ಪಿ.ಎಮ್ ಸುಮಾರಿಗೆ ಕಲಬುರಗಿ ನಗರದ ಸಿಟಿ ಬಸ್ ಸ್ಯ್ಟಾಂಡ ಸೂಪರ್ ಮಾರ್ಕಿಟ್ ಹತ್ತಿರ ಬಿ.ಎಸ.ಎನ್.ಎಲ್ ಆಫೀಸ್ ಏದುರುಗಡೆ ಇರುವ ಹೆರಿಟೇಜ್ ಇನ್ ಹೋಟೆಲದಲ್ಲಿ ಉಟಕ್ಕೆ ಬಂದು ಅಲ್ಲಿ ನಾನು & ನನ್ನ ಗೆಳೆಯ ಇಬ್ಬರೂ ಕೂಡಿಕೊಂಡು ಬಿಯರ್, ಮಟನ್ ಇತ್ಯಾದಿಯಾಗಿ ಉಟ ತಿಂಡಿಯನ್ನು ಅಂದಾಜು 5.00ಪಿ.ಎಮ್ ವರೆಗೆ ಹೋಟೆಲದಲ್ಲಿ ಮುಗಿಸಿಕೊಂಡು ಅಂದಾಜು 1100/- ಬಿಲ್ ಆಗಿದ್ದು ಅದನ್ನು ಪಾವತಿ ಮಾಡಿದ್ದು ನಂತರ ಹೊರಗಡೆ 5.30ಪಿ.ಎಮ್ ಕ್ಕೆ ಬಂದು ಹೆರಿಟೇಜ್ ಇನ್ ಹೋಟೆಲ್ ಗೇಟ್ ಹತ್ತೀರ ಇರುವ ಪಾನ್ ಅಂಗಡಿಗೆ ಬಂದು ನನ್ನ ಗೆಳೆಯನಾದ ಶಾಂತಕುಮಾರ ಇತನು ಸಿಗರೇಟ್ ಸೇದುವ ಚಟದವನಿರುವುದರಿಂದ ಅವನು ಪಾನ್ ಅಂಗಡಿಯಲ್ಲಿ ಸಿಗರೇಟ್ ಸೇದುತ್ತಾ ನಿಂತನು. ನನಗೂ ಸಹ ಅದೆ ಸಮಯಕ್ಕೆ ಮೂತ್ರ ಬಂದಿದ್ದರಿಂದ ನಾನು ಗೆಳೆಯ ಶಾಂತಕುಮಾರ ಇತನಿಗೆ ನಾನು ಹೇರಿಟೆಜ್ ಹೋಟೆಲನಲ್ಲಿ ಹೋಗಿ ಮೂತ್ರ ವಿಸರ್ಜನೆ ಮಾಡಿಕೊಂಡು ಬರುತ್ತೇನೆ ಅಂತಾ ಹೇಳಿ ಹೇರಿಟೇಜ್ ಹೋಟೆಲದಲ್ಲಿ ಶೌಚಾಲಯಕ್ಕೆ ಹೊಗಿ ಮೂತ್ರ ವಿಸರ್ಜನೆಗೆ ಹೊದಾಗ ಶೌಚಾಲಯದ ಹತ್ತೀರವೆ ಹೋಟೆಲದವರು, ಪಕ್ಕದಲ್ಲಿ ನೀರು ಕುಡಿಯುವ ಗ್ಲಾಸಗಳು ಇತರೆ ಸಾಮಾನುಗಳನ್ನು ಟೇಬಲ್ ಮೇಲೆ ಇಟ್ಟಿದ್ದು ನಾನು ಮೂತ್ರ ವಿಸರ್ಜನೆಗೆ ಹೋಗುವಾಗ ಆಕಸ್ಮೀಕವಾಗಿ ನನ್ನ ಕೈ ಗ್ಲಾಸ ಇಟ್ಟಿರುವ ಟೇಬಲಕ್ಕೆ ಬಡಿಯಲು 1-2 ಗ್ಲಾಸಗಳು ಕೆಳಗಡೆ ಬಿದ್ದು ಒಡೆಯಲು ಅದನ್ನು ನೋಡಿ ಕೌಂಟರ್ ಹತ್ತೀರ ಇದ್ದಂತಹ ಹೆರಿಟೇಜ್ ಹೋಟೆಲ್ ಮಾಲೀಕ ಬಾಲರಾಜ ಗುತ್ತೇದಾರ,ಮ್ಯಾನೇಜರ್ ಸಂಜು ಅಲ್ಲೀಯೆ ಇದ್ದ ಈರಣ್ಣಾ ವಾಚಮೇನ್ ಇವರೇಲ್ಲರೂ ಬಂದವರೇ ಏ ರಂಡಿ ಮಗನೇ, ಬೋಸಡಿ ಮಗನೇ, ಕಣ್ಣು ಕಾಣಿಸೋದಿಲ್ಲಾ ರಂಡೀ ಮಗನೇ ಅಂತಾ ನನಗೆ ಅವಾಚ್ಯವಾಗಿ ಬೈಯ್ಯಲು ಶುರು ಮಾಡಿದ್ದರಿಂದ ನನಗೆ ಯ್ಯಾಕೆ ಬೈಯ್ಯುತ್ತೀದ್ದೀರಿ, ಮರ್ಯಾದೆ ಕೋಟ್ಟು ಮಾತಾಡಿರಿ ಅಂತಾ ನಾನು ಹೇಳಿದ್ದಕ್ಕೆ , ನನ್ನ ಹೋಟೇಲಗೆ ಬಂದು ನನಗೆ ಏದುರು ಕೇಳುತ್ತೀ ಸೂಳಿ ಮಗನೇ ಅಂತಾ ಬೈಯುತ್ತಾ, ಮಾಲೀಕನಾದ ಬಾಲರಾಜ ಇತನು ಹಿಡಿರೂ ಸೂಳಿ ಮಗನಿಗೆ ಬಾಳ ಸೋಕ್ಕು ಬಂದಿದೆ ಹೋಲೆ ಮಾದರಿಗೆ ಕಲ್ಲು ಎತ್ತಿ ಹಾಕಿ ಹೊಡೆಯಿರಿ ಅಂತಾ ಹೇಳಲು ಮ್ಯಾನೇಜರ್ ಸಂಜು ಇತನು ಬಂದವನೇ ಕೈಯಲ್ಲಿ ಒಂದು ರಾಡು ತೆಗೆದುಕೊಂಡು ಬಂದವನೆ ಬಲಗಾಲಿನ ಪೆಂಡ್ರಿ ಮೇಲೆ ಹೊಡೆದು ಗುಪ್ತಗಾಯ ಪಡಿಸಿದನು, ವಾಚಮೇನ್ ಈರಣ್ಣಾ ಇತನು ಅಲ್ಲೆ ಬಿದ್ದ ಒಂದು ಬಡಿಗೆಯಿಂದ ನನ್ನ ಬೇನ್ನಿನ ಮೇಲೆ ಹಾಗೂ ಕೈ ಮೇಲೆ ಹೊಡೆದನು. ಅಷ್ಠರಲ್ಲೀಯೆ ಅಲ್ಲೇ ಇದ್ದಂತಹ 5-6 ಜನ ವೇಟರಗಳು ಕೂಡಿಕೊಂಡು ಬಂದು ನನ್ನ ಕುತ್ತೀಗೆ ಒತ್ತೀ ಹಿಡಿದು ನೆಲೆಕ್ಕೆ ಕೆಡವಿ ಕೈಯಿಂದ ಹೊಟ್ಟೆಯಲ್ಲಿ ಬೆನ್ನಿನಲ್ಲಿ ಹೊಡೆದು ಗುಪ್ತಗಾಯ ಪಡಿಸಿದ್ದು ಇದರಿಂದ ನಾನು ಕೆಳಗಡೆ ಬಿದ್ದು ಚಿರಾಡುವುದನ್ನು ಕಂಡು ಅಲ್ಲೇ ಇದ್ದ ನನ್ನ ಗೆಳೆಯ ಶಾಂತಕುಮಾರ ತಂದೆ ಬಸವರಾಜ ಬಿರಾದರ ಇತನು ಜಗಳ ಬಿಡಿಸಲು ಬಂದಾಗ ಅವನಿಗೂ ಸಹ ಮ್ಯಾನೇಜರ್ ಸಂಜು ಇತನು ರಾಡದಿಂದ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲೇ ಅವರ ಹಿಂದೆ ಇದ್ದ 5-6 ಜನರು ಅವನಿಗೂ ಸಹ ಕೈಯಿಂದ ಹೊಟ್ಟೆಯಲ್ಲಿ ಬೇನ್ನೀನನ್ನಲ್ಲಿ ಹೊಡೆದು ರಕ್ತಗಾಯ ಪಡಿಸಿದ್ದು ಅಷ್ಟರಲ್ಲೀಯೆ ನಮಗೆ ಹೊಡೆಯುತ್ತೀರುವುದರಿಂದ ನಾವಿಬ್ಬರೂ ಚೀರಾಡುತ್ತೀರುವುದನ್ನು ಕಂಡು ಏದುರುಗಡೆ ಇದ್ದಂತಹ ಅಶೋಕ ಜಗತ್ ಕೂಗನೂರ, ಸುರೇಶ ಹೋಳ್ಕರ್, ವಿರುಪಾಕ್ಷಿ ಅನ್ನುವವರು ಒಡಿಬಂದು ಜಗಳ ಬಿಡಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೌಕ ಠಾಣೆ : ಶ್ರೀ ಸಂಜಯಕುಮಾರ ತಂದೆ ಜಗದೇವಪ್ಪಾ ನಾಟೀಕರ ಸಾಃ ಹಳಿಯಾಳ ತಾಃ ಅಫಜಲಪೂರ ಜಿಃ ಕಲಬುರಗಿ  ಅಫಜಲಪೂರ ತಾಲೂಕಿನ ಹಳಿಯಾಳ ಗ್ರಾಮದ ನಿವಾಸಿಯಾಗಿದ್ದು ಕಲಬುರಗಿ ನಗರದ ಸಿಟಿ ಬಸ ಸ್ಟ್ಯಾಂಡ ಹತ್ತಿರದ ಹೊಟೆಲ್‌ ಹೆರೆಟೆಜ್‌ ಇನ್‌ ನಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡುತ್ತಿದೆನೆ ದಿನಾಂಕಃ 21.05.2016 ರಂದು  ನಮ್ಮ ಹೋಟೆಲ್‌ನಲ್ಲಿ ನಡೆದ ಘಟನೆ ಮಾನ್ಯರೆ ನಾನು ಸುಮಾರು ನಾನು ಸುಮಾರು 3 ತಿಂಗಳಿಂದ ಈ ಹೋಟೆಲ್‌ ನಲ್ಲಿ  ಕೆಲಸ ಮಾಡುತ್ತಿದ್ದು ನಾನು ಬೆಳಿಗ್ಗೆ 11.00 ಗಂಟೆಯಿಂದ ರಾತ್ರಿ 11.30 ಗಂಟೆಯವರೆಗೆ ಹೆರೆಟೆಜ ಹೋಟೆಲ್‌ ನಲ್ಲಿ ಕೆಲಸ ಮಾಡುತ್ತೇನೆ ಹೀಗಿದ್ದು ನಮ್ಮ ಹೊಟೆಲ್‌ನಲ್ಲಿ ಶಾಂತಕುಮಾರ ಹಾಗೂ ಆತನ ಸ್ನೇಹಿತ ಶರಣಬಸಪ್ಪಾ ಆಗಾಗೆ ನಮ್ಮ ಹೋಟೆಲ್‌ಗೆ ಬರುತ್ತಿರುವದರಿಂದ  ನನಗೆ ಅವರ ಪರಿಚಯ ಇರುತ್ತದೆ. ಹೀಗೆ ಇರುವಾಗ ದಿನಾಂಕಃ 21.05.216 ರಂದು  ಮದ್ಯಾಹ್ನ 2.30 ಗಂಟೆಯ ಸುಮಾರಿಗೆ ನಮ್ಮ ಹೋಟೆಲೆಗೆ ಬಂದು ಏಸಿ ರೂಂ ನಲ್ಲಿ ಟೇಬಲ್ ನಂ 8 ರ ಮೇಲೆ  ಕುಡಿಯವದಕ್ಕೆ ಕುಳಿತಿಕೊಂಡಿದ್ದು ಆಗ ನಮ್ಮ ಹೊಟೆಲ್‌ನಲ್ಲಿ ವೇಟರ್‌ ಕೆಲಸ ಮಾಡುವ ಹುಡಗನಾದ ಸುರೇಶ ಇತನು  ಸಪ್ಲೈ ಮಾಡಿರುತ್ತಾನೆ. ಶಾಂತಕುಮಾರ ಹಾಗೂ ಅವನ ಗೆಳೆಯರು ಕೂಡಿ ಸುಮಾರು ಸಾಯಂಕಾಲ 5.00 ಗಂಟೆಯವರೆಗೆ ಕುಡಿದು ನಂತರ ನಮ್ಮ ಹೋಟೆಲ್ಲಿನ ಬಿಲ್ಲ ಪಾವತಿಸಿ ಹೊರಗೆ ಹೋಗಿ ಮರಳಿ ನಮ್ಮ ಹೋಟೆಲಿನಲ್ಲಿ ಶಾಂತಕುಮಾರ ಹಾಗೂ ಅವನ್ ಗೆಳೆಯ ಶರಣಬಸಪ್ಪಾ ಹೋಟೆಲ್‌ ಒಳಗೆ ಬಂದು ಶೌಚಾಲಯಕ್ಕೆ ಹೋಗುವಾಗ ಶರಣಬಸಪ್ಪ ಇತನು ಅಲ್ಲೆ  ಇರುವ ಸುಮಾರು 3-4 ಗ್ಲಾಸ್‌ಗಳು ಕೆಳಗೆ ಬಳಿಸಿ ಒಡೆದು ಶೌಚಾಲಯದ ಒಳಗೆ ಹೋಗಿ ನಂತರ ನನ್ನ ಕಣೆದುರು ಮತ್ತೆ 10-15 ಗ್ಲಾಸ್‌ಗಳು ಒಡೆದು ಹಾಳು ಮಾಡಿರುತ್ತಾರೆ ಅದನು ಕೇಳುವದಕ್ಕೆ ಹೋಗಿದ್ದಾಗ ಏ ಬೋಸಿಡಿ ರಂಡಿ ಮಗನೆ ಏನು ಸೆಂಟಾ ಕಿತ್ತಕೊತ್ತೇ ಸುಳೆ ಮಗನೆ ನಾನು ಯಾರೂ ಇದ್ದಿನಿ ಗೊತ್ತಾ ನಾನು ಕಪನೂರ ರಾಜು ಕಾರ್ಪೋರೆಟರ್‌ನ ತಮ್ಮ ಹಾಗೂ ಗೆಳೆಯರಿದೆವೆ ಏ ಸೋಳೆ ಮಗನ್ನೆ ಹೊಲೆಯ ಸೋಳೆ ಮಗನೆ ಎಂದು ಶಾಂತಕುಮಾರ ಇತನು ನನಗೆ ಜಾತಿ ನಿಂದನೆ ಮಾಡಿರುತ್ತಾನೆ. ಹಾಗೂ ಎದೆಯ ಮೇಲಿನ ಅಂಗಿ ಹಿಡಿದ್ದು ಕೈ ಮುಷ್ಠಿ ಮಾಡಿ ಜೋರಾಗಿ ನನ ಕಪಾಳದ ಎಡ ಕಪಾಳಕ್ಕೆ  ಹೋಡೆದನು ಅಲ್ಲದೇ ಈ ಹೊಲೆಯ ಸೋಳ್ಳೆ ಮಗನದ್ದು  ಬಾಹಳ ಸೊಕ್ಕು ಇದೆ ಎಂದು ಶಾಂತಕುಮಾರ ಹಾಗೂ ಶರಣಬಸಪ್ಪಾ ನನ್ನು ಹೊಡೆಯ ತೊಡಗಿದ್ದರು, ಹಾಗೂ ಅಲ್ಲೇ ಇರವ ಸುಮಾರ  25 ರಿಂದ 30 ಗ್ಲಾಸಗಳು ಒಡೆದು ಏ ಸೋಳ್ಳೆ ಮಗನೆ ನಿಲ್ಲು ನಮ್ಮ ಅಣ್ಣನಿಗೆ ಕರೆಯಿಸಿ ನೋಡು ನಿನಗೆ ಹಾಗೂ ನಿಮ್ಮ ಹೊಟೆಲ್‌ಕ್ಕೆ ಹೇಗೆ ಮಾಡುತ್ತೇವೆ ಅಂತಾ ಬೈದು ಹೊರೆಗೆ ಬಂದು ಯಾರಿಗೋ ಪೋನ್‌ ಮಾಡಿ ಕರೆಯಿಸಿದ್ದು ಸ್ವಲ್ಪ ಸಮಯ ಬಿಟ್ಟು ರಾಜು ಕಪನೂರ ಹಾಗೂ ಅವನ 7-8 ಜನರು ಮೋಟಾರ ಸೈಕಿಲ್‌ ಮೇಲೆ ಬಂದು ನನ್ನಗೆ ಹೊಡೆಯ ತೊಡಗಿದ್ದರು ಮತ್ತು ನಮ್ಮ ತಮ್ಮ ಹಾಗೂ ಸ್ನೇಹಿತರಿಗೆ ಬೈಯುತ್ತಿರಾ ಅಂತಾ ಎಳೆದುಕೊಂಡು ಹೋಗುತ್ತಿರುವಾಗ  ನಮ್ಮ ಹೋಟೆಲ್‌ನಲ್ಲಿ ವೇಟರ್‌ಗಳಾದ  ರಾಜು,  ನಾಗು, ಅಂಬರೇಶ ಸುರೇಶ ಹಾಗೂ ವಾಚಮ್ಯಾನ ಈರಣ್ಣ ಇವರಗಳು ಓಡಿ ಬಂದರು  ಜೀವ ಸಹಿತ ಬಿಡಬ್ಯಾಡರಿ ಅಂತಾ ನನಗೆ  ಎಳೆದು ಕೊಂಡು ಹೋಗುತ್ತಿರುವಾಗ ನನ್ನ ಸ್ಟಾಫ ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲೀಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.