POLICE BHAVAN KALABURAGI

POLICE BHAVAN KALABURAGI

24 November 2012

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:23/11/2012 ರಂದು ನಸುಕಿನ ವೇಳೆ 4-00 ಗಂಟೆಗೆ ಸ್ವತ್ತಿನ ಅಪರಾಧಗಳು ತಡೆಯುವ ನಿಮಿತ್ಯ ನಾನು ಮತ್ತು  ಸಿಬ್ಬಂದಿಯವರಾದ ಗುರುಮೂರ್ತಿ,ಚಂದ್ರಕಾಂತ,ಮಹ್ಮದ ರಫೀಯೋದ್ದಿನ,ದೇವಿಂದ್ರ ಪಿಸಿರವರೊಂದಿಗೆ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋದುತಾಯಿ ಕಾಲೋನಿ ಮದರಾ ತೇರಿಸಾ ಶಾಲೆಯ ಹತ್ತಿರ ಒಬ್ಬ ವ್ಯಕ್ತಿ ನಮ್ಮನ್ನು ನೋಡಿ ಮೋಟಾರ ಸೈಕಲ್ ಅಲ್ಲಿಯೆ ಬಿಟ್ಟು ರೇಲ್ವೆ ಹಳಿಗಳ ಕಡೆಗೆ ಓಡಿ ಹೋಗುತ್ತಿದ್ದಾಗ  ಸಂಶಯ ಬಂದು ಆತನನ್ನು ಹಿಡಿದು ಹೆಸರು ಇತ್ಯಾದಿ ವಿಚಾರಿಸಲು ಆನಂದ ತಂದೆ ಹಣಮಂತ ರಾಮದುರ್ಗ ಸಾ:ಕಾಂತಾ ಕಾಲೋನಿ ಗುಲಬರ್ಗಾ ಇತನಿಗೆ ಕೂಲಂಕುಷವಾಗಿ ವಿಚಾರಣೆ ಮಾಡಲಾಗಿ ತಾನು ಸುಮಾರು ದಿನಗಳ ಹಿಂದೆ ನನಗೆ ಯಾವುದೇ ಕೆಲಸ ಇಲ್ಲದಕ್ಕೆ ನನ್ನ ಖರ್ಚಿನ ಹಣಕ್ಕಾಗಿ ಮತ್ತು ಕೆಲಸಕ್ಕಾಗಿ ಒಂದು ಮೋಟಾರ ಸೈಕಲ್ ನಂದಿಕೂರ ದಾಬಾದ ಹತ್ತಿರದಿಂದ ತೆಗೆದುಕೊಂಡು ಬಂದು ನನ್ನ ಕೆಲಸಕ್ಕಾಗಿ ಉಪಯೋಗಿಸುತ್ತಿದ್ದೇನೆ. ಆ ಮೋಟಾರ ಸೈಕಲ್ ಸಹ ಚಾಲು ಆಗದಕ್ಕೆ ಸೂಪರ ಮಾರ್ಕೆಟ ಹತ್ತಿರದಿಂದ ಒಂದು ಮೋಟಾರ ಸೈಕಲ ತೆಗೆದುಕೊಂಡು ಬಂದು ಇಲ್ಲಿಯೇ ಇಟ್ಟಿದ್ದು ಸದರಿ ಮೋಟಾರ ಸೈಕಲ ನಂ: ಕೆಎ-01 ವಾಯ್=4974 ಹಿರೋ ಹೊಂಡಾ ಸ್ಪೇಲಂಡರ್ ಪ್ಲಸ್ ಇಂಜನ ನಂ:06ಇ15ಎಂ31246 ಚೆಸ್ಸಿ ನಂ:05ಇ16ಸಿ30335  ನೀಲಿ ಮತ್ತು ಕರಿ ಬಣ್ಣದ್ದು ಅ.ಕಿ. 25,000/-ರೂಪಾಯಿಗಳದ್ದು ಮತ್ತು ಹಿರೋ ಹೊಂಡಾ ಪ್ಯಾಶನ ಪ್ರೋ  ಮೋಟಾರ ಸೈಕಲ್ ನಂ.ಕೆಎ-32 ವಾಯ-8033 ಚೆಸ್ಸಿನ ನಂ: MBLHA10EWBGF27757 ಇಂಜನ್ ನಂ:HA10EDBGF55424 ಕೆಂಪ್ಪು ಮತ್ತು ಕರಿಯ ಬಣ್ಣದ್ದು ಅ.ಕಿ. 30,000/- ರೂಪಾಯಿಗಳು   ಹೀಗೆ ಸುಮಾರು 55,000/- ರೂ ಬೆಲೆ ಬಾಳುವ  ಮೋಟಾರ ಸೈಕಲ ಮತ್ತು ಆರೋಪಿಯೊಂದಿಗೆ ಕರೆ ತಂದಿದ್ದರಿಂದ ಗುನ್ನೆ ನಂ:105/2012 ಕಲಂ 41(ಡಿ) 102 ಸಿ.ಆರ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIME

ಮಟಕಾ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ 23-11-12 ರಂದು ಮಧ್ಯಾಹ್ನ  4-30 ಗಂಟೆ ಸುಮಾರಿಗೆ ಹಳೆಯ ವಾಣಿಜ್ಯ ತೆರಿಗೆ  ಚೆಕ್ಕ ಪೋಸ್ಟ ಹತ್ತಿರವಿರುವ ಪಾನ ಡಬ್ಬಾದ ಪಕ್ಕದಲ್ಲಿ ಶ್ರೀಕಾಂತ ತಂದೆ ಚಂದ್ರಶೇಖರ ಬಶೆಟ್ಟಿ ಸಂಗಡ ಇನ್ನೂ 3 ಜನರು ಮೋಟಾರ ಸೈಕಲಗಳಾದ ಹಿರೋ ಹೊಂಡಾ ಸ್ಪೆಂಡರ ಪ್ಲಸ  ಕೆಎ-32 ವಿ-2009, ಹಿರೋ ಹೊಂಡಾ ಫ್ಯಾಶನ ಕೆಎ-32 ಇಬಿ-5275 ನೇದ್ದರ ಮೇಲೆ ಕುಳಿತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂ ಅಂತಾ ಮಟಕಾ ಚೀಟಿ ಬರೆದುಕೊಡುತ್ತಿರುವವರ ಮೇಲೆ ದಾಳಿ ಮಾಡಿ ನಗದು ಹಣ 10,600/- ರೂ. 12 ಮಟಕಾ ಚೀಟಿಗಳು,ಬಾಲಪೆನ್ನುಗಳು ,ನಾಲ್ಕು ಮೋಬಾಯಿಲಗಳು ಹೀಗೆ ಒಟ್ಟು 1,01.200 ರೂ. ಜಪ್ತ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:381/2012 ಕಲಂ, 78 (3) ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.