POLICE BHAVAN KALABURAGI

POLICE BHAVAN KALABURAGI

04 July 2014

Gulbarga District Reported Crimes

ಕೊಲೆ ಪ್ರಕರಣ :
ವಾಡಿ ಠಾಣೆ : ದಿನಾಂಕ 04-07-2014 ರಂದು ರಾತ್ರಿ ಮೃತ ಶಾರುಬಾಯಿ ಗಂಡ ಮಹಾದೇವಸಿಂಗ ರಾಠೋಡ ಸಾ|| ಬಿಯಾಬಾನಿ ಏರಿಯಾ ವಾಡಿ ಇವಳು ತನ್ನ ಮಕ್ಕಳಾದ ಪ್ರೀತಮಸಿಂಗ್ ವ|| 11 ವರ್ಷ, ಸೂರಜ ವ|| 9 ವರ್ಷ ಮತ್ತು ಪೂಜಾ ವ|| 7 ವರ್ಷ ಇವರೆಲ್ಲರೂ ಕೂಡಿಕೊಂಡು ಊಟಮಾಡಿ ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ 12 ಗಂಟೆ ಸುಮಾರು ಮಹಾದೇವಸಿಂಗ ಈತನು ಹೊರಗಡೆಯಿಂದ ಮದ್ಯಪಾನ ಮಾಡಿ ಮನೆಗೆ ಬಂದು ಮನೆಯ ಬಾಗಿಲು ಕೊಂಡಿ ಬಡೆದಾಗ ಆತನ ಹೆಂಡತಿ ಬಾಗಿಲು ತೆರೆದಳು ಒಳಗಡೆ ಬಂದಾಗ ಆತನಿಗೆ ಊಟ ಮಾಡಲು ಹೇಳಿದರೆ ಊಟ ಮಾಡುವುದಿಲ್ಲಾ ನಾನು ಮತ್ತೆ ಬರುತ್ತೇನೆ ಅಂತಾ ಹೇಳಿ ಮನೆಯ ಹೊರಗೆ ಹೋದನು ಮೃತಳು ಮನೆಯ ಬಾಗಿಲು ಸ್ವಲ್ಪ ಮುಂದಕ್ಕೆ ಮಾಡಿ ತನ್ನ ಮಕ್ಕಳೊಂದಿಗೆ ಮಲಗಿಕೊಂಡಳು ರಾತ್ರಿ 1 ಗಂಟೆಯ ಸುಮಾರು ಮಹಾದೇವಸಿಂಗ ಈತನು ಮನೆಗೆ ಬಂದು ಮನೆಯ ಒಳಗಡೆ ಇಟ್ಟ ಕೊಡಲಿಯನ್ನು ತೆಗೆದುಕೊಂಡು ಮನೆಯಲ್ಲಿ ಮಲಗಿಕೊಂಡ ಶಾರೂಬಾಯಿ ಇವಳ ಬಲ ಕಿವಿ ಹಾಗೂ ಕುತ್ತಿಗೆಗೆ ಹೊಡೆದು ಬಾರಿ ರಕ್ತಗಾಯ ಪಡಿಸಿದ್ದು ನಂತರ ಆತನ ಮಗ ಎದ್ದು ನೋಡಿದಾಗ ಆತನಿಗೆ ಬೆದರಿಕೆ ಹಾಕಿ ಕೊಡಲಿಯನ್ನು ಮತ್ತೆ ಮನೆಯ ಒಳಗೆ ಇಟ್ಟು ವೈದ್ಯರಿಗೆ ಕರೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೊರಗಡೆ ಹೊರಟು ಹೋಗಿದ್ದು ಶಾರೂಬಾಯಿ ಇವಳು ಸ್ಥಳದಲ್ಲೇ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ; 04/07/2014 ರಂದು 2-30 ,ಎಮ ಗಂಟೆ ಸುಮಾರಿಗೆ  ಲಾರಿ ನಂಬರ್ ಕೆಎ-32--5361 ನೇದ್ದರ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಆಳಂದ ಚೆಕಪೋಸ್ಟದಿಂದ ಹುಮ್ನಾಬಾದ ರಿಂಗ ರೋಡಿನ ತಾಜಸುಲ್ತಾನಪುರ ಕ್ರಾಸ ದಾಟಿ ಹುಮ್ನಾಬಾದ ರಿಂಗ ರೋಡಿಗೆ ಬರುವ ಬಾಂಬೇ ಗ್ಯಾರೇಜ್ ಹತ್ತೀರ ರೋಡಿನ ಮಧ್ಯದ ಡಿವೈಡರ್ಕ್ಕೆ ಜೋರಾಗಿ ಅಪಘಾತ ಪಡಿಸಿದ್ದ ರಿಂದ ಕಟ್ಟಿಗೆ ತುಂಬಿದ ಲಾರಿಯು ಎಡಗಡೆ ಪಲ್ಟೀಯಾಗಿದ್ದರಿಂದ ಕ್ಲೀನರ್ ಕೆಲಸ ಮಾಡುತ್ತಿದ್ದ ಮುನೀರಷಾ ಈತನು ಲಾರಿ ಕೆಳಗ್ಗೆ ಸಿಕ್ಕಿಬಿದ್ದು ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಅಪಘಾತವಾದ ನಂತರ ಲಾರಿ ಚಾಲಕನು ಓಡಿ ಹೋಗಿರುತ್ತಾನೆ ಅಂತಾ ಶ್ರೀ ಹುಸೇನಷಾ ತಂದೆ ಮಸ್ತಾನಷಾ ದರವೇಶ ಸಾ : ಪಸಪೂರ ತಾ: ಚಿಂಚೋಳಿ ಜಿ: ಗುಲ್ಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಶಿವಪುತ್ರಪ್ಪಾ ತಂದೆ ಶಿವರಾಯ ರಾಮನಗೌಡರ ಸಾ|| ಮೇಳಕುಂದಾ (ಬಿ) ಇವರ ತಂದೆ ತಾಯಿಗೆ ನಾವು 3 ಜನ ಮಕ್ಕಳಿದ್ದು ನಾವೆಲ್ಲರೂ ಬೇರೆ ಬೇರೆಯಾಗಿ ಉಪಜೀವಿಸುತ್ತಿದ್ದೆವೆ.ನಮ್ಮೆಲ್ಲರ ನಡುವೆ ಒಂದು ಸಾಮೂಹಿಕ ಭಾವಿ ಇದ್ದು ಅದು ನಮ್ಮ ತಮ್ಮನಾದ  ಗುರುಭೀಮರಾಯ ಇವರ ಪಾಲಿಗೆ ಬಂದ ಹೊಲದಲ್ಲಿ ಇದ್ದಿರುತ್ತದೆ. ನಾವು 3 ಜನರು ಪಾಳಿ ಪ್ರಕಾರ ಬೆಳೆಗಳಿಗೆ ನೀರು ಬಿಡುತ್ತಿದ್ದೆವೆ. ದಿನಾಂಕ 01/03/2014 ರಂದು ಬೆಳಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ನಮ್ಮ ಹೊಲದಲ್ಲಿನ ರೆಷ್ಮೆ ಬೆಳೆಗೆ ನಾನು ನನ್ನ ಪಾಳಿಯಂತೆ ನೀರು ಬಿಟ್ಟು ಮನೆಗೆ ಬಂದಿರುತ್ತೆನೆ. ನಾನು ದಿನಾಂಕ 01/07/2014 ರಂದು ರಾತ್ರಿ 8.30 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮಾಡಿ ಬೀಡಿ ಸೇದಲು ನಮ್ಮೂರಿನ ಮಲ್ಲು ಮಾಲಿ ಪಾಟೀಲ ಇವರ ಕಿರಾಣಿ ಅಂಗಡಿಗೆ ಹೋಗಿದ್ದು ಅಲ್ಲಿ ಬೀಡಿ ತೆಗೆದುಕೊಂಡು ಬೀಡಿ ಸೇದುತ್ತಾ ನಿಂತಿದ್ದಾಗ ನಮ್ಮ ತಮ್ಮನಾದ ಗುರುಭೀಮರಾಯ ,ಅವನ ಮಕ್ಕಳಾದ ಸಿದ್ದು, ಹಾಗೂ ಸಂತೋಷ ಹಾಗೂ ಅವನ ಹೆಂಡತಿ ಬಸಮ್ಮಾ ಇವರೆಲ್ಲರೂ  ಬಂದು ನನಗೆ ಸಂತೋಷ ಈತನು ಏ ಬೋಸ್ಡಿ ಮಗನೇ ಇವತ್ತು ನಮ್ಮ ಪಾಳಿ ಇದೇ ನೀನು ನೀರು ಬಿಟ್ಟಿದ್ದಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಇವತ್ತು ನಮ್ಮ ಪಾಳಿ ಇದೇ ನಾನು ನೀರು ಬಿಟ್ಟಿದ್ದಿನಿ ನಾಳೆ ನಿಮ್ಮ ಪಾಳಿ ಇದೆ ನೀವು ಬಿಟ್ಟು ಕೊಳ್ಳಿರಿ ಅಂತಾ ಅನ್ನುತ್ತಿದ್ದಾಗ ನಮ್ಮ ತಮ್ಮನಾದ ಗುರುಬೀಮರಾಯ ಈತನು ಮಗನೇ ನೀನು ದಿವಸ ಹೀಗೆ ಹೇಳಿತ್ತಿ ನೀರು ಬಿಟ್ಟಕೊತ್ತಿ ಅಂತಾ ಅವಾಚ್ಯವಾಗಿ ಬೈದು ಅಲ್ಲೆ ಬಿದ್ದಿದ್ದ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಪಡಿತರ ಆಹಾರ ಧಾನ್ಯ ಕಾಳಸಮತೆಯಲ್ಲಿ ಸಾಗಿಸುತ್ತಿದ್ದವರ ಬಂಧನ :
ಸೇಡಂ ಠಾಣೆ : ಮಾನ್ಯ ತಹಸಿಲ್ದಾರರು ಶ್ರೀ. ಬಿ.ಎಮ್. ಖಂಡೆ ರವರು ದಿನಾಂಕ: 02-07-2014 ರಂದು ರಾತ್ರಿ 10-00 ಗಂಟೆಗೆ ಸೇಡಂ ಪಟ್ಟಣದ ನ್ಯಾಯ ಬೆಲೆ ಅಂಗಡಿ ಸಂಖ್ಯೆ-81ರ ಡೀಲರರಾದ ಶ್ರೀ. ಶಂಕರ ಎಮ್.ಜಿ. ಇವರು ಸಾರ್ವಜನಿಕರಿಗೆ ವಿತರಣಾ ಪದ್ದತಿಯಡಿಯಲ್ಲಿ ಕಾರ್ಡುದಾರರಿಗೆ ವಿತರಿಸಬೇಕಾದ ಅಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ಮಾಹಿತಿ ಬಂದ ಪ್ರಯುಕ್ತ ಮಾನ್ಯ ಸಹಾಯಕ ಆಯುಕ್ತರು ಸೇಡಂ ಮತ್ತು  ಶಿರಸ್ತೇದಾರರು ಸೇಡಂ ಹಾಗೂ ಪಂಚರೊಂದಿಗೆ ಸದರಿ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಲಾಗಿ ಅಂಗಡಿಯ ಮುಂದೆ ವಾಹನ ಸಂಖ್ಯೆ:AP27-W-9637 ನಿಂತಿದ್ದು ವಾಹನದ ಹತ್ತಿರ ಹೋದಾಗ ಚಾಲಕ ನಮ್ಮನ್ನು ನೋಡಿ ಓಡಿ ಹೋಗಿದ್ದು. ವಾಹನದಲ್ಲಿ ಹಾಗೂ ಮಳಿಗೆಯ ದಾಸ್ತಾನು ಪರಿಶೀಲಿಸಲಾಗಿ 429 ಆಕ್ಕಿಯ ಚೀಲಗಳು, 242 ಗೋದಿ ಚೀಲಗಳು ಹಾಗೂ 7 ಸಕ್ಕರೆಯ ಚೀಲಗಳು ಇವುಗಳ ಒಟ್ಟು ಅಂದಾಜು ಕಿಮ್ಮತ್ತು 6,54,000/- ರೂಪಾಯಿ ನೇದ್ದು ಇದ್ದದ್ದು ಕಂಡುಬಂದಿರುತ್ತದೆ. ಸದರಿ ನ್ಯಾಯಬೆಲೆ ಅಂಗಡಿಯ ಡೀಲರನು ಕಾಳಸಂತೆಯಲ್ಲಿ ಮಾರಾಟ ಮಾಡಲು ಪಡಿತರ ವಸ್ತುಗಳನ್ನು ವಾಹನದ ಮೂಲಕ ಸಾಗಾಣಿಕೆ ಮಾಡುತ್ತಿದ್ದಿದ್ದು ತನಿಖಾ ಸಮಯದಲ್ಲಿ ಖಚಿತಪಟ್ಟಿರುವದರಿಂದ, ನ್ಯಾಯ ಬೆಲೆ ಅಂಗಡಿಯಲ್ಲಿದ್ದ ದಾಸ್ತನು ಹಾಗೂ ವಾಹನದಲ್ಲಿದ್ದ ದಾಸ್ತಾನನ್ನು ಜಫ್ತಿ ಮಾಡಿದ್ದು ವಾಹನದ ಅಂದಜು ಬೆಲೆ 6,00,000/- ರೂಪಾಯಿ, ಅಹಾರ ಧಾನ್ಯದ ಅಂದಾಜು ಬೆಲೆ 6, 54, 000/- ರೂಪಾಯಿ ಇರುತ್ತದೆ.ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 03/07/2014 ರಂದು 1000 ಗಂಟೆಗೆ ಹಿತ್ತಲಶೀರೂರ ಗ್ರಾಮದ ಕಲ್ಮೇಶ್ವರ ಗುಡಿಯ ಹತ್ತಿರ ಬೇವಿನ ಮರದ ಕೇಳಗೆ ಸಾರ್ವಜನಿಕ ರಸ್ತೆಯಲ್ಲಿ ಇಸ್ಪೇಟ್ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದಿದ್ದು ಕೂಡಲೇ ಎ.ಎಸ್.ಐ. ಸಿದ್ರಾಮಪ್ಪಾ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹಿತ್ತಿಲಶೀರೂರ ಗ್ರಾಮಕ್ಕೆ ಹೋಗಿ ಅಲ್ಲಿ ಸಿಪಿಐ ಸಾಹೇಬರು ಬಂದಿದ್ದು  ನಾವೆಲ್ಲರೂ ಕೂಡಿ  ಕಲ್ಮೇಶರ ದೇವರ ಗುಡಿಯ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ರಸ್ತೆಯ ಬೇವಿನ ಮರದ ಕೆಳಗೆ 6 ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು 1030 ಗಂಟೆಗೆ ಪಂಚರ ಸಮಕ್ಷಮದಲ್ಲಿ ನಾನು ಹಾಗೂ ಸಿಬ್ಬಂಧಿ ಜನರು ಕೂಡಿ ದಾಳಿ ಮಾಡಿ 06 ಜನರನ್ನು ಹಿಡಿದು ಒಬ್ಬೋಬ್ಬರನ್ನಾಗಿ ವಿಚಾರಿಸಿ ಚೆಕ ಮಾಡಲಾಗಿ 01] ಚಂದ್ರಕಾಂತ ತಂದೆ ಶ್ರೀಮಂತ ತಳವಾರ 02] ಗುಂಡೇರಾಯ ತಂದೆ ಶರಣಪ್ಪ ಹಾವಳಗಿ 03] ನಿಂಗಪ್ಪ ತಂದೆ ಚಂದ್ರಾಮ ಶೀರೂರ 04] ಶರಣಪ್ಪ ತಂದೆ ಹಾವಣ್ಣ ಪೂಜಾರಿ 05] ಭೀರಣ್ಣ ತಂದೆ ಲಾಡಪ್ಪ ಯಳಸಂಗಿ 06] ಸಾಯಬಣ್ಣ ತಂದೆ ಬಾಬು ಶೀರೂರ  ಸಾ: ಎಲ್ಲರೂ ಹಿತ್ತಲಶೀರೂರ ಗ್ರಾಮ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಹೀಗೆ ಒಟ್ಟು 2460/- ರೂಪಾಯಿ ನಗದು ಹಣ ಹಾಗೂ 52 ಇಸ್ಪೀಟ ಎಲೆಗಳನ್ನು ಜಪ್ತಿಜಪ್ತಿಮಾಡಿಕೊಂಡು ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಸಂಜೀವರೆಡ್ಡಿ ತಂದೆ ಗುಂಡಾರೆಡ್ಡಿ ಸಾ:ಆಶ್ರಯ ಕಾಲೋನಿ ಜಾಫರಾಬಾದ ಗುಲಬರ್ಗಾ ಮತ್ತು ಸತೀಷರೆಡ್ಡಿ ಇಬ್ಬರು ದಿನಾಂಕ:-29/06/2014 ರಂದು ಮದ್ಯಾಹ್ನ 01:30 ಗಂಟೆ ಸುಮಾರಿಗೆ ಮೋಟಾರ ಸೈಕಲ್ ನಂ ಕೆಎ-32 ಜೆ-6453 ನೇದ್ದರ ಮೇಲೆ ಜೇವರ್ಗಿ ಕಾಲೋನಿಗೆ ಹೆಣ್ಣು ನೋಡಲು ಹೋಗಿ ಮರಳಿ ಬಿದ್ದಾಪುರ ಕಾಲೋನಿಯ ಉದ್ಯಾನ ವೈನಶಾಪ ಎದುರಗಡೆ ರೋಡಿನ ಮೇಲೆ ಬರುವಾಗ ಅದೆ ವೇಳೆಗೆ ಎದುರಗಡೆಯಿಂದ ಅಂದರೆ ಗುಲಬರ್ಗಾ ಬಿದ್ದಾಪುರ ರೇಲ್ವೆ ಗೇಟ ಕಡೆಯಿಂದ ಟಿಪ್ಪರ ಬನಂ ಎಂ.ಎಚ್-24 ಎಪ್-8233 ನೇದ್ದರ ಚಾಲಕನು ಅತೀವೇಗ ಮತ್ತ ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೋಟಾರ ಸೈಕಲ ಸವಾರರಿಗೆ ಸಾದಾ ಮತ್ತು ಭಾರಿ ಸ್ವರೂಪದ ಗಾಯಗಳಾಗಿದ್ದು ಸತೀಷರೆಡ್ಡಿ ಇತನಿಗೆ ಹೆಚ್ಚಿನ ಉಪಚಾರ ಕುರಿತು ಸೋಲಾಪುರ ಗಂಗಾ ಮಯ್ಯಾ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು  ದಿನಾಂಕ: 03/07/2014 ರಂದು ರಾತ್ರಿ 09:00 ಗಂಟೆಗೆ ಶ್ರೀ ಸಂಗಾರೆಡ್ಡಿ ತಂದೆ ಪುಲ್ ರೆಡ್ಡಿ ವರಂಗಲ್ ಸಾ:ತಾಜಲಾಪುರ ತಾ:ಚಿಂಚೋಳಿ ಇತನು ಠಾಣೆಗೆ ಹಾಜರಾಗಿ ಫಿರ್ಯಾದಿ ಹೇಳಿಕೆ ನೀಡಿದೆನೆಂದರೆ ತನ್ನ ಮಗನಾದ ಸತೀಷ ರೆಡ್ಡಿ ಇತನು ಉಪಚಾರ ಪಡೆಯುತ್ತಾ ದಿನಾಂಕ:01/07/2014 ರಂದು ರಾತ್ರಿ 09:30 ಗಂಟೆ ಸುಮಾರಿಗೆ ಅಪಘಾತದಲ್ಲಿ ಆದ ಗಾಯದ ಭಾದೆಯಿಂದ ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಬಸವರಾಜ ತಂದೆ ಶಂಕ್ರಪ್ಪಾ ಇವರು ದಿನಾಂಕ 03/07/2014 ರಂದು 05:00 ಪಿ.ಎಂ. ಸುಮಾರಿಗೆ ತಮ್ಮ ಮೋಟಾರ ಸೈಕಲ ನಂ. ಕೆ.ಎ 32 ಎಸ್ 2180 ನೇದ್ದರ ಮೇಲೆ ವಿರೇಂದ್ರ ಪಾಟೀಲ ಬಡಾವಣೆಯಲ್ಲಿರುವ ತಮ್ಮೂರಿನವರಿಗೆ ಭೇಟಿಯಾಗಲು ಹೋಗುತ್ತಿರುವಾಗ ವಿರೇಂದ್ರ ಪಾಟೀಲ ಬಡಾವಣೆಯ ಹನುಮಾನ ಗುಡಿಯ ರೋಡಿನ ಮೇಲೆ ಹೊಗುತ್ತಿರುವಾಗ ಎದರುನಿಂದ ಕಾರ ನಂ. ಕೆ.ಎ 32 ಎಂ 9173 ನೇದ್ದರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೇ ಒಮ್ಮೇಲೆ ಟರ್ನ ಮಾಡಿ ಫಿರ್ಯಾದಿದಾರರ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ ಪರಿಣಾಮ ಬಲಗಾಲಿನ ಹಿಮ್ಮಡಿ ಹತ್ತಿರ ತರಚಿದ ಗಾಯ, ಬಲಗಾಲಿನ ಮೊಳಕಾಲಿಗೆ ತರಚಿದ ರಕ್ತಗಾಯ, ಬಲಗಾಲಿನ ಮೊಳಕಾಲಿನ ಕೆಳಗೆ ಭಾರಿ ಗುಪ್ತಗಾಯ ಹಾಗು ತಲೆಯ ಹಿಂಭಾಗಕ್ಕೆ ಗುಪ್ತಗಾಯಗಳಾಗಿದ್ದು ಇರುತ್ತದೆ. ಸದರಿ ಕಾರ ಚಾಲಕನು ತನ್ನ ಕಾರನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಹೆಚ್.ಎಸ್ ನಾಗೇಂದ್ರ ಇವರು ದಿನಾಂಕಃ 06/01/2014 ರಂದು ರಾತ್ರಿ 09:00 ಗಂಟೆಗೆ ಸುಮಾರಿಗೆ ಎಂ.ಜಿ ರೋಡ್ ನಲ್ಲಿರುವ ಕಛೇರಿಗೆ 1) ವೆಂಕಟೇಶ ಮೂರ್ತಿ ತಂದೆ ನಾರಾಯಣ ಮೂರ್ತಿ 2) ರಮೇಶ ಸಿರೂರ್ ತಂದೆ ದೇವೆಗೌಡ 3) ಚಂದ್ರಪ್ರಕಾಶ ಶೆಟ್ಟಿ ತಂದೆ ಗೋವಿಂದ ಶೆಟ್ಟಿ ಹಾಗು 4) ಲೋಕೆಶ ತಂದೆ ರಾಮಯ್ಯ ಈ ನಾಲ್ಕು ಜನರು ಬಂದು ನಾನು ಪಾನಮತ್ತನಾದಂತಹ ಸಂಧರ್ಬದಲ್ಲಿ ಪೇ ಚಾಲನ್ ಅಗ್ರೀಮೆಂಟ್ ರಿನಿವಲ್ ಗೆ ಸಹಿ ಮಾಡಿಸಲು ಬಂದು ಆ ವೇಳೆಯಲ್ಲಿ ಹಲವು ಕಾಗದ ಪತ್ರಗಳು ದಾಖಲೆಗಳನ್ನು ಸಹಿ ಮಾಡಿಸಿಕೊಳ್ಳುವಾಗ ಸದರಿ ಕಾಗದ ಪತ್ರಗಳ ನಡುವೆ Business Transfer Agreement ನ ಮೇಲು ಸಹ ನನ್ನ ಸಹಿಯನ್ನು ಮೋಸದಿಂದ ಪಡೆದಿರುತ್ತಾರೆ. ಆ ಸಮಯದಲ್ಲಿ ಅವರು ನನಗೆ ಅರಿವಿಲ್ಲದಂತೆ ಶ್ರೀ ಸುಮಂಗಲಿ ಎಂಟರಪ್ರೈಸಸ್ ಮಾಲಿಕತ್ವದ ವರ್ಗಾವಣೆ ಪತ್ರಿಕೆ ಸಹಿಯನ್ನು ಮೋಸದಿಂದ ಹಾಕಿಸಿಕೊಂಡಿರುತ್ತಾರೆ. ನಂತರ ಸದರಿ ವರ್ಗಾವಣೆ ಪತ್ರದ ವಿಚಾರವು ನನಗೆ ದಿನಾಂಕಃ 30/06/2014 ರಂದು ನನ್ನ ಗಮನಕ್ಕೆ ಬಂದಾಗ ಅದನ್ನು ನಾನು ಕೇಳಲು ಹೋದಾಗ ನನಗೆ ಸದರಿಯವರು ಅವಾಚ್ಯ ಶಬ್ದಗಳಿಂದ ಬೈದು ಥಳಿಸಲು ಯತ್ನಿಸಿ, ಈ ವಿಚಾರಕ್ಕೆ ನೀನು ಬಂದರೆ ನಿನ್ನನ್ನು ಜೀವಂತವಾಗಿ ಬಿಡದೇ ಕೊಲೆ ಮಾಡುತ್ತೇವೆಂದು ಬೆದರಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಅಮೃತ ತಂದೆ ಚಂದಪ್ಪ ಸರಸಂಬಿ ಸಾ: ಹಿತ್ತಲಶೀರೂರ ಇವರು ದಿನಾಂಕ 03-07-2014 ರಂದು 18-00 ಗಂಟೆ ಸುಮಾರಿಗೆ ದನಗಳನ್ನು ಹೊಲದಲ್ಲಿ ಬಿಟ್ಟ ಸಂಬಂಧ ಕೇಳಿದಕ್ಕೆ ಫೀರ್ಯಾದಿಗೆ ಜಗಳ ತಗೆದು 1. ಗುರಣ್ಣ ಭೀಮಳ್ಳಿ  2. ಹಣಮಂತ ತಂದೆ  ಗುರಣ್ಣ  ಭೀಮಳ್ಳಿ  3.ಸಿದ್ದಾರಾಮ ತಂದೆ ಗುರಣ್ಣ ಭೀಮಳ್ಳ  ಸಾ: ಎಲ್ಲರೂ ಹಿತ್ತಲಶೀರೂರ ಗ್ರಾಮ ರವರು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಟ್ಟಿಗೆಯಿಂದ ಮತ್ತು ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.