POLICE BHAVAN KALABURAGI

POLICE BHAVAN KALABURAGI

14 September 2017

KALABURAGI DISTRICT REPORTED CRIMES

ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಸುಬ್ಬಣ್ಣ ತಂದೆ ನಾಗಪ್ಪ ಪೂಜಾರಿ ಸಾಃ ಕೊನಾಹಿಪ್ಪರಗಿ. ತಾಃ ಜೇವರಗಿ ಇವರು ಮಗಳಾದ ಮಾಯಾವತಿ ವಯಾಃ 16 ವರ್ಷ, ಇವಳು ದರ್ಗಾ ಸರಕಾರಿ ಪ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಅಬ್ಯಾಸ ಮಾಡುತ್ತಿದ್ದಾಳೆ. ಅವಳು ದಿನಾಲು ನಮ್ಮೂರಿನಿಂದ ಶಾಲೆಗೆ ಬಸ್ಸಿನಲ್ಲಿ ಹೋಗಿ ಬಂದು ಮಾಡುತ್ತಾ ಬಂದಿರುತ್ತಾಳೆ, ನನ್ನ ಮಗಳು ಒಬ್ಬಳೆ ಶಾಲೆಗೆ ಹೋಗುವಾಗ ಬರುವಾಗ ಸಂತೊಷ ತಂದೆ ದೇವಪ್ಪ ಸಾಃ ಹಂಗರಗಿ ಇತನು ನಮ್ಮ ಮಗಳಿಗೆ ನೋಡಿ ಸೀಳ್ಳೆ ಹೊಡೆದು ಚುಡಾಯಿಸುವುದು ಮಾಡುತ್ತಾ ಬಮದಿರುತ್ತಾನೆ ನಮ್ಮ ಮಗಳು ನಮಗೆ ಮನೆಯಲ್ಲಿ ಹೇಳಿದಾಗ ನಾವು ಅವರ ಮನೆಗೆ ಹೋಗಿ ಬುದ್ದಿವಾದ ಹೇಳಿ ಬಂದಿದ್ದು ಇರುತ್ತದೆ. ನನ್ನ ಹೆಂಡತಿ ಬಾಗಮ್ಮ ಇವಳಿಗೆ ಆರಾಮ ಇರಲಾರದಕ್ಕೆ ದಿನಾಂಕ 06.08.2017 ರಂದು ಮುಂಜಾನೆ ನಾನು ನನ್ನ ಹೆಂಡತಿಗೆ ಮನೆಯಿಂದ ಕರೆದುಕೊಂಡು ಕಲಬುರಗಿಗೆ ಆಸ್ಪತ್ರೆಗೆ ಉಪಚಾರ ಕೊಡಿಸಲು ಹೋಗಿರುತ್ತೆನೆ ನಮ್ಮ ಮಕ್ಕಳು ಮನೆಯಲ್ಲಿಯೇ ಇದ್ದರು. ಮದ್ಯಾಹ್ನ ವೇಳಗೆ ನಾನು & ನನ್ನ ಹೆಂಡತಿ ಇಬ್ಬರೂ ಕಲಬುರಗಿ ಆಸ್ಪತ್ರೆಯಿಂದ ಮರಳಿ ಮನೆಗೆ ಬಂದಾಗ ಮನೆಯಲ್ಲಿ ನಮ್ಮ ಮಗಳು ಮಾಯವತಿ ಇವಳು ಕಾಣಲಿಲ್ಲಾ, ಮಾಯವತಿ ಎಲ್ಲಿಗೆ ಹೋಗಿರುತ್ತಾಳೆ ಎಂದು ಮತ್ತೊಬ್ಬ ಮಗಳಾದ ಜ್ಯೋತಿ ಇವಳಿಗೆ ಕೇಳಲಾಗಿ ಅವಳು ಹೇಳಿದ್ದೆನೆಂದರೆ, ನಾನು ಮತ್ತು ಅಕ್ಕ ಮಾಯವತಿ ತಮ್ಮ ಶರಣು ಎಲ್ಲರೂ ಮನೆಯಲ್ಲಿ ಇದ್ದಾಗ ಮುಂಜಾನೆ 9.30 ಗಂಟೆಯ ಸುಮಾರಿಗೆ ಸಂತೊಷ ಹಂಗರಗಿ ಇತನು ಬಂದು ಅಕ್ಕ ಮಾಯವತಿ ಇವಳಿಗೆ ಕಲಬುರಗಿಗೆ ಕರೆದುಕೊಂಡು ಹೋಗುತ್ತೆನೆ ಎಂದು ಹೇಳಿ ಅವಳಿಗೆ ನಂಬಿಸಿ ಕರೆದುಕೊಂಡು ಹೋಗಿರುತ್ತಾನೆ ಮರಳಿ ಮನೆಗೆ ಬಂದಿರುವುದಿಲ್ಲಾ ಅಂತಾ ಹೇಳಿದಳು. ದಿವಸ ರಾತ್ರಿಯಾದರೂ ನಮ್ಮ ಮಗಳು ಮನೆಗೆ ಬರಲಾರದಕ್ಕೆ ನಾವು ಊರಲ್ಲಿ ಮತ್ತು ನಮ್ಮ ಸಂಭಂಧಿಕರ ಊರುಗಳಿಗೆ ಮತ್ತು ಅವಳ ಗೆಳತಿಯರಿಗೆ ಕೇಳಲಾಗಿ ನಮ್ಮ ಮಗಳ ಬಗ್ಗೆ ಪತ್ತೆ ಹತ್ತಿರುವುದಿಲ್ಲಾ ಮತ್ತು ಸಂತೊಷ ಹಂಗರಗಿ ಈತನ ತಂದೆ ತಾಯಿಯವರಿಗೆ ವಿಚಾರಿಸಲಾಗಿ ಅವರು ನಮಗೇನು ಗೊತ್ತಿರುವುದಿಲ್ಲಾ ಎಂದು ಹೇಳಿರುತ್ತಾರೆ. ನಮ್ಮ ಮಗಳಿಗೆ ಹುಕಾಡಿದರೂ ಸಿಕ್ಕಿರುವುದಿಲ್ಲಾ. ನಮ್ಮ ಅಪ್ರಾಪ್ತ ಮಗಳಾದ ಮಾಯಾವತಿ ಇವಳಿಗೆ ಸಂತೊಷ ಹಂಗರಗಿ ಇತನು ನನ್ನ ಮಗಳಿಗೆ ಕಲಬುರಗಿ ತೊರಿಸುತ್ತೆನೆ ಎಂದು ಹೇಳಿ ನಂಬಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮ ಮರಳು ಸಾಗಿಸುತ್ತಿದ್ದ ಟ್ಇಪ್ಪರ ಜಪ್ತಿ :
ರಾಘವೇಂದ್ರ ನಗರ ಠಾಣೆ : ದಿನಾಂಕ:13-09-2017 ರಂದು ಸಾಯಂಕಾಲ ಮಿರ್ಚಿಗೊದಾಂ ಹತ್ತಿರದಿಂದ ಮಹ್ಮದಿ ಚೌಕ ಕಡೆಯಿಂದ ಎಮ್ಎಸ್ಕೆ ಮಿಲ್ಕಡೆಗೆ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನಲ್ಲಿ ಕಪ್ಪು ಮರಳನ್ನು ತುಂಬಿಕೊಂಡು ಕಳ್ಳತನದಿಂದ ಮರಳು ಸಾಗಣೆ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಶ್ರೀ ಪೌಲ ಎಎಸ್ ರಾಘವೆಂದ್ರ ನಗರ ಪೊಲೀಸ್‌‌ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಖದಿರ ಚೌಕ ಹತ್ತಿರ ನಿಂತಾಗ ಮಹ್ಮದಿ ಚೌಕ ಕಡೆಯಿಂದ ಒಂದು ಟಿಪ್ಪರ ಬರುತ್ತಿರುವದನ್ನು ನೋಡಿ ಸಂಶಯ ಬಂದು ಅದನ್ನು ತಡೆದು ನಿಲ್ಲಿಸಿ ಚೆಕ್ಕ ಮಾಡಿ ನೋಡಲು ಅದರಲ್ಲಿ ಕಪ್ಪು ಮರಳು ತುಂಬಿದ್ದು ಕಂಡು ಬಂದಿರುತ್ತದೆ ಚಾಲಕನಿಗೆ ವಿಚಾರಿಸಲು ಮಿರ್ಚಿಗೋದಾಂ ಹತ್ತಿರದಿಂದ ನಮ್ಮ ಮಾಲೀಕ ಇಸೂಪ ಇವರು  ಅನಧಿಕೃತವಾಗಿ ಸಂಗ್ರಹ ಮಾಡಿ ಇಟ್ಟಿದ್ದ ಮರಳನ್ನು ಅವರ ಸೂಚನೆಯ ಮೇರೆಗೆ ಆಕ್ರಮವಾಗಿ ಅನಧಿಕೃತವಾಗಿ ತುಂಬಿಕೊಂಡು ಮಾರಾಟ ಮಾಡುವ ಸಲುವಾಗಿ ಬರುತ್ತಿದ್ದೇನೆ ಅಂತಾ ತಿಳಿಸಿದ್ದು ಇರುತ್ತದೆ ಸದರಿ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ನಾಗಪ್ಪ ಅಸ್ಟಗಿ ಸಾ|| ಹೀರಾಪೂರ ಅಂತಾ ತಿಳಿಸಿದ್ದು ಇರುತ್ತದೆ. ಟಿಪ್ಪರ ನಂಬರ ನೋಡಲು ಹೋಗುತ್ತಿದ್ದಂತೆ ಚಾಲಕನು ತನ್ನ ವಾಹನ ಅಲ್ಲಿಯೆ ಬಿಟ್ಟು ಓಡಿಹೊಗಿರುತ್ತಾನೆ. ಟಿಪ್ಪರ ನಂಬರ ನೋಡಲು ಕೆ, 28 ಬಿ 5780 ಇದರ ||ಕಿ|| 4,00000 ಮತ್ತು ಅದರಲ್ಲಿನ ಮರಳಿನ ||ಕಿ|| 13000 ರೂ ನೇದ್ದನ್ನು  ಜಪ್ತಿ ಪಡಿಸಿಕೊಂಡು ರಾಘವೇಂದ್ರ ನಗರ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಮಳಯ್ಯ ತಂದೆ ಶಂಕ್ರಯ್ಯ ಹಿರೇಂಠ ಸಾ|| ಕೆಂಬಾವಿ ತಾ|| ಸುರಪೂರ ರವರು ದಿನಾಂಕ 07-08-2017 ರಂದು ತಾನು ಮತ್ತು ತನಗ ಪರಿಚಯದವರಾದ  ಟಾಯರ ಅಂಗಡಿಯ ಮಾಲಿಕ ಶಬರಿನಾದನ ತಂದೆ ವೇಲಯುದೇನ ಸಾ// ಸಾಯಿ ನಗರ ಸಿಂದಗಿ ಜಿ// ವಿಜಯಪೂರ ಇಬ್ಬರೂ ಕೂಡಿಕೊಂಡು ನಮ್ಮ ಖಾಸಗಿ ಕೆಲಸದ ನಿಮಿತ್ಯವಾಗಿ   ಸಿಂದಗಿಯಿಂದ ನನ್ನ ಮೋಟಾರ ಸೈಕಲ ನಂ ಕೆಎ-33 ಯು- 7661 ನೇದ್ದರ ಮೇಲೆ ಹೋರಟಿದ್ದು ಮೋ/ಸೈ ನಾನೆ ಚಲಾಯಿಸುತ್ತಿದ್ದೇನು . ಸಾಯಂಕಲ 4-30 ಗಂಟೆಯ ಸುಮಾರಿಗೆ  ನಾನು ಮೋಟಾರ ಸೈಕಲ ಜೇವರ್ಗಿ ಸಮೀಪ ಇರುವ ಶ್ರೀ ಶಣ್ಮಖ ಶಿಯೋಗಿ  ಡಿಪ್ಲೋಮಾ ಕಾಲೇಜ ಹತ್ತೀರ  ವಿಜಯಪೂರ  ರೋಡಿನ ಮೇಲೆ ಚಲಾಯಿಸಿಕೊಂಡು ಹೋಗುತ್ತೀರುವಾಗ ಎದುರಿನಿಂದ ಒಂದು ಮೋ/ಸೈ ನಂ ಕೆಎ-32 ಎನ್ -0539 ನೇದ್ದರ ಚಾಲಕನು  ತನ್ನ ಮೋಟಾರ ಸೈಕಲ ಅತೀ ವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ನಾವಿಬ್ಬರು ಮೋಟಾರ ಸೈಕಲ ಸಮೇತವಾಗ ಕೆಳಗೆ ಬಿದ್ದಿದ್ದರಿಂದ ನಮಗೆ ಎಡಗಾಲಿನ ಬೆರಳು ಕಟ್ಟ ಆಗಿದ್ದು (ಮುರಿದಿದ್ದು) , ಎಡಗೈ ಕಿರು ಬೆರಳು ಮುರಿದು ರಕ್ತ ಗಾಯವಾಗಿದ್ದು ನನ್ನ ಮೋಟಾರ ಸೈಕಲ ಹಿಂದಿನ ಸೀಟ್ ಮೇಲೆ   ಕುಳಿತಿರುವ ಶಬರಿನಾದನ್ ಇತನಿಗೆ ಎಡಗಲಿನ ಮೋಳಕಾಲಿನ ಹತ್ತಿರ ಕಾಲು ಮುರಿದಿದೆ ಮತ್ತು ಎಡಗೈ ಮೋಳ ಕೈ ಕೆಳಗೆ ತರಚಿದ ಗಾಯ ವಾಗಿರುತ್ತದೆ, ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ್ ನಂ ಕೆಎ 32 ಇಎನ್ 0359 ನೇದ್ದರ ಸವಾರನಿಗು ಘಟನೆಯಲ್ಲಿ ಗಾಯವಾಗಿದ್ದು ಅವನ ಹೆಸರು ಮತ್ತು ವಿಳಾಸ ನಮಗೆ ಗೋತ್ತಾಗಿರುವುದಿಲ್ಲಾ ನಾನು ಅವನನ್ನು ನೋಡಿದರೆ ಗುರುತ್ತಿಸುತ್ತೇನೆ . ಘಟನೆ ನಂತರ ಯುನೈಟೆಡ ಆಸ್ಪತ್ರೆಗೆ ಬಂದು ಸೇರಿಕೆ ಯಾಗಿರುತ್ತೆವೆ ಪ್ರಕರಣದಲ್ಲಿನ ಗಾಯಾಳು ಶಿವಾನಂದ ತಂದೆ ಬಸಣ್ಣ ಮಣೂರ ಸಾ|| ಸೊನ್ನ ತಾ|| ಜೇವರಗಿ ಇತನು ಪರಮಶೇಟ್ಟಿ ಆಸ್ಪತ್ರೆ ಮೀರಜನಲ್ಲಿ (ಮಾಹಾರಾಷ್ಡ್ರ) ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27.08.2017 ರಂದು ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ