POLICE BHAVAN KALABURAGI

POLICE BHAVAN KALABURAGI

05 April 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ,  ಸಂಗನಬಸಪ್ಪಾ ತಂದೆ  ವಿರುಪಾಕ್ಷಪ್ಪಾ  ಮೂಸಗೇರಿ  ವಯ: 37  ವರ್ಷ ಉ: ಕೆ.ಎಸ್.ಆರ್.ಟಿ.ಸಿ. ಬಸ್ಸ. ಚಾಲಕ ಬ್ಯಾಡ್ಜ ನಂ. 3512  ಹರಿಹರ ಡಿಪೋ. ಜಾ||  ನೇಕಾರ ಸಾ:  ಶಿರವಾಳ ತಾ|| ನರಗುಂದ ಜಿ|| ಗದಗ ರವರು ನನಗೆ ಮತ್ತು ನಿರ್ವಾಹಕ  ನೀರಂಜನ ತಂದೆ ಸಂಭಾಜಿ  ರವರಿಗೆ  ದಿನಾಂಕ:03-04-2013 ರಂದು ಬೆಳಿಗ್ಗೆ 6-00 ಗಂಟೆಗೆ ಕೆ.ಎಸ್.ಆರ್.ಟಿ.ಸಿ. ಬಸ್ಸ. ನಂ. ಕೆಎ-7 ಎಫ್- 1299 ನೇದ್ದರ ಮೇಲೆ ಹರಿಹರದಿಂದ ಗುಲಬರ್ಗಾಕ್ಕೆ ಹೋಗಿ ಬರುವ  ಕರ್ತವ್ಯಕ್ಕೆ ನೇಮಿಸಿದ್ದು, ದಿನಾಂಕ:04-04-2013 ರಂದು  ರಾತ್ರಿ 9-30 ಗಂಟೆ ಸುಮಾರಿಗೆ ನಂದಿಕೂರ ತಾಂಡಾದ  ಹತ್ತಿರ ಗುಲಬರ್ಗಾ ಕಡೆಯಿಂದ ಕೆಎ-31/4154 ನೇದ್ದರ ಲಾರಿ  ಚಾಲಕನು ತನ್ನ  ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಬಸ್ಸಿನ  ಮುಂದಿನ ಭಾಗವನ್ನು  ಪಾಸಾದ ತಕ್ಷಣ ಹಿಂಬದಿಯ ಟಾಯರ ಹತ್ತಿರ ಬಲಗಡೆ  ಅಫಘಾತ ಪಡಿಸಿದ್ದು ಘಟನೆಯಲ್ಲಿ ಬಲಗಡೆಯ ಸಿಟೀನ ಕಿಟಕೀಯ ಕಡೆಗೆ ಕೂಳಿತ ಪ್ರಯಾಣಿಕ  ಮಹ್ಮದ ತಬರೇಜ ಸಾ|| ಶಹಾಪೂರ ಅಂತ್ತಾ ಇದ್ದಿದ್ದು ಅವನ ಬಲಗೈಗೆ  ಲಾರಿ ರಬಸದಿಂದ ಡಿಕ್ಕಿಹೊಡೆದ ಪ್ರಯುಕ್ತ  ಬಲಗೈ ಪೂರ್ತಿಯಾಗಿ ಕಟ್ಟಾಗಿರುತ್ತದೆ. ಲಾರಿ ಚಾಲಕನು ಲಾರಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ, ಪ್ರಕಾಶ ತಂದೆ ಶರಣಪ್ಪಾ ಪರಿಟ್‌ ಸಾ:ತಿಳುಗೂಳ ರವರು ನಾನು ಮತ್ತು ನನ್ನ ತಮ್ಮನಾದ ರವಿಂದ್ರನಾಥ ಕಂಡೆಕ್ಟರ ದಿನಾಂಕ:04-04-2013 ರಂದು ಬೆಳಿಗ್ಗೆ 6:30 ಗಂಟೆ ಸುಮಾರಿಗೆ ನಮ್ಮೂರಿನಿಂದ ಮೊಟಾರ ಸೈಕಲ ನಂ: ಕೆಎ-37.ಇ-5855 ನೇದ್ದರ ಮೇಲೆ ನಾನು ಜೇವರ್ಗಿಗೆ ನನ್ನ ಕೆಲಸದ ಪ್ರಯುಕ್ತ ಮತ್ತು ನನ್ನ ತಮ್ಮ ರವಿಂದ್ರನಾಥ ಇತನು ಗುಲಬರ್ಗಾಕ್ಕೆ ತನ್ನ ಕರ್ತವ್ಯಕ್ಕೆ ಬರುತ್ತಿದ್ದು, ಮೋಟರ ಸೈಕಲ್‌ ಮೇಲೆ ಹೊನ್ನಕಿರಣಗಿ ಕ್ರಾಸಿಗೆ ವರೆಗೆ  ಬಂದು ನಾನು ಜೇವರ್ಗಿಗೆ ಹೊಗುವ ಸಲುವಾಗಿ ಇಳಿದು ನಿಂತಿದ್ದು, ರವಿಂದ್ರನಾಥ ಇತನು ಗುಲಬರ್ಗಾಕ್ಕೆ ಹೋಗುತ್ತಿದ್ದು, ಮೋಟರ ಸೈಕಲ್‌ ಮೇಲೆ ಗುಲಬರ್ಗಾ ಕಡೆಗೆ ಹೊಗುತ್ತಿದ್ದಾಗ ಸ್ಖ್ರಾಪಿಯೋ ವಾಹನ ಚಾಲಕನು ತನ್ನ  ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ತಮ್ಮನ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಆತನಿಗೆ ತಲೆಯ ಹಿಂಬಾಗಕ್ಕೆ ಬಡಿದು ಭಾರಿ ಭಾರಿಗಾಯವಾಗಿರುತ್ತದೆ. ಸ್ಕಾರ್ಫಿಯೋ  ನಂಬರ  ನೋಡಲು ಕೆಎ-32. ಎಂ-5958 ಅಂತಾ ಇದ್ದು,  ಚಾಲಕನ ಹೆಸರು ಮಲ್ಲಿಕಾರ್ಜುನ ಕುಂಬಾರ ಅಂತ್ತಾ ತಿಳಿದಿರುತ್ತದೆ. ವಾಹನವು ಸ್ಥಳದಲ್ಲಿಯೇ  ಬಿಟ್ಟು  ಓಡಿ ಹೋಗಿರುತ್ತಾನೆ . ಸದ್ಯ ನನ್ನ ತಮ್ಮನು ಮಾತಾಡುವ ಸ್ಥಿತಿಯಲ್ಲಿ ಇರುವದಿಲ್ಲ ಅಂತಾ ಪ್ರಕಾಶ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀ ಪೆದ್ದಾರೆಡ್ಡಿ ಅನೀಲಕುಮಾರ ತಂದೆ ಪಿ.ಸಾಂಬರೆಡ್ಡಿ ಅಸಿಸ್ಟೆಂಟ್ ಮ್ಯಾನೇಜರ ಪಿಂಕರಟನ್ ಕಾರ್ಪೊರೇಶನ್ ರಿಸ್ಕ್ ಮ್ಯಾನೇಜಮೆಂಟ್ ದಿ ಮಿಲೇನಿಯಾ ಲೆವೆಲ್ ಒನ್ ಟಾವರ ಮರ್ಫಿರೋಡ್ ಹುಲಸೂರ ಬೆಂಗಳೂರು ಸಾ: ಹುಲಿಮಾವು ಬನ್ನೇರುಘಟ್ಟ ರೋಡ ಬೆಂಗಳೂರು ರವರು  ನಾನು ಈ ಕಂಪನಿಯ ಅಧಿಕೃತ ಪವಾರ  ಆಫ ಅಟಾರ್ನಿ ಹೊಂದ್ದಿರುವ ಅಧಿಕಾರಿಯಾಗಿದ್ದು ನಮ್ಮ ಕಂಪನಿ ಎಮ/ಎಸ್ MICO BOSCH LIMITED ಕಂಪನಿಯ ಪರವಾಗಿ ನನಗೆ ನಮ್ಮ ಕಂಪನಿಯ ಉತ್ಪಾದಿಸುವಂತಹ ಅಟೋಮೊಬಾಯಿಲ್ ಬಿಡಿ ಭಾಗಗಳನ್ನು ದೇಶವ್ಯಾಪ್ತಿ  ಗ್ರಾಹಕರಿಗೆ ಮಾರಾಟ ಮಾಡುವ ಕುರಿತು ಅಂಗಡಿಯ ಡೀಲರ್ ಗಳಿಗೆ ಮಾರಾಟ ಮಾಡಿದ್ದು, ನಮ್ಮ ಕಂಪನಿಯ ಹೆಸರಿನಲ್ಲಿ ಬೇರೆ ಕಂಪನಿಯ ವಸ್ತುಗಳು ನಮ್ಮ  ಕಂಪನಿಯ ಹೆಸರು ಮುದ್ರಿಸಿ ಡ್ಯೂಪ್ಲಿಕೇಟ್ ಮಾರಾಟ ಮಾಡುತ್ತಿರುವ ಬಗ್ಗೆ ನಮ್ಮ ಹಿರಿಯ ಅಧಿಕಾರಿಗಳು ಸ್ಪೇರಪಾರ್ಟ ಅಟೋಮೊಬಾಯಿಲ್ ಗಳಿಗೆ ಚೆಕ್ ಮಾಡುವ ಕುರಿತು ನನಗೆ ನೇಮಿಸಿದ್ದರಿಂದ ನಾನು ಕಂಪನಿಯ ಪರವಾಗಿ ಗುಲಬರ್ಗಾ ನಗರದಲ್ಲಿ ಇರುವ ಕೆಲವು ಅಟೋಮೊಬಾಯಿಲ ಅಂಗಡಿಗಳಿಗೆ ಹೋಗಿ ಪರಿಶೀಲನೆ ಮಾಡಿತ್ತಿರುವಾಗ ಮೆಹಕ ಅಟೋಮೊಬಾಯಿಲ್ಸ್ ಲಾಹೋಟಿ ಕಾಂಪ್ಲೆಕ್ಸ್ ಹುಮನಾಬಾದ ರೋಡ ಗುಲಬರ್ಗಾದಲ್ಲಿ ದಿನಾಂಕ: 04/04/2013 ರಂದು ಮಧ್ಯಾಹ್ನ 3-00 ಗಂಟೆ  ಚೆಕ್ಕ ಮಾಡಲು ಅಮೀರ ಅಲಿ ತಂದೆ ಬರಕತ ಅಲಿ ವಯ: 38 ವರ್ಷ, ಉ: ಆಟೊಮೊಬಾಯಿಲ್ಸ್ ಸಾ: ಮನೆ ನಂ. 880/154 ಅಫೀಪಾ ಎಸ್.ಟಿ.ಡಿ ಎದುರುಗಡೆ ಅಬೂಬಕರ ಮಜ್ಜೀದ ಹತ್ತಿರ ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ಈತನು ನಮ್ಮ ಕಂಪನಿಯ  MICO BOSCH LIMITED ಕಂಪನಿಯ ಹೆಸರಿನ GLOW PLUGES ಗಳನ್ನು ಅದೇ ರೀತಿಯಾಗಿ ಡೂಬ್ಲಿಕೇಟ್ ಇರುವ ನಮ್ಮ ಕಂಪನಿಯ ಹೆಸರು ಇರುವ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ನಮ್ಮ ಕಂಪನಿಗೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದು ಕಂಡು ಬಂದಿರುತ್ತದೆ. ಸದರಿ ವಸ್ತುಗಳ ಬಗ್ಗೆ ಯಾವುದೇ ರೀತಿಯ ರಶೀದಿ ಮತ್ತು ಬಿಲ್ ಗಳು ಇರುವದಿಲ್ಲಾ ನಮ್ಮ ಕಂಪನಿಯ ಹೆಸರನ್ನು ದುರ್ಬಳಕೆಯಿಂದ ಡೂಪ್ಲಿಕೇಟ ಆಗಿ ಉಪಯೋಗಿಸಿ ಕಂಪನಿಗೆ ಮತ್ತು ಗ್ರಾಹರಕರಿಗೆ ಮೋಸ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 21/2013 ಕಲಂ, 63, 65, ಕಾಪಿ ರೈಟ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ರೋಜಾ ಪೊಲೀಸ್ ಠಾಣೆ: ಶ್ರೀ ಪೆದ್ದಾರೆಡ್ಡಿ ಅನೀಲಕುಮಾರ ತಂದೆ ಪಿ.ಸಾಂಬರೆಡ್ಡಿ ಅಸಿಸ್ಟೆಂಟ್ ಮ್ಯಾನೇಜರ ಪಿಂಕರಟನ್ ಕಾರ್ಪೊರೇಶನ್ ರಿಸ್ಕ್ ಮ್ಯಾನೇಜಮೆಂಟ್ ದಿ ಮಿಲೇನಿಯಾ ಲೆವೆಲ್ ಒನ್ ಟಾವರ ಮರ್ಫಿರೋಡ್ ಹುಲಸೂರ ಬೆಂಗಳೂರು ಸಾ: ಹುಲಿಮಾವು ಬನ್ನೇರುಘಟ್ಟ ರೋಡ ಬೆಂಗಳೂರು ರವರು  ನಾನು ಈ ಕಂಪನಿಯ ಅಧಿಕೃತ ಪವಾರ  ಆಫ ಅಟಾರ್ನಿ ಹೊಂದ್ದಿರುವ ಅಧಿಕಾರಿಯಾಗಿದ್ದು ನಮ್ಮ ಕಂಪನಿ ಎಮ/ಎಸ್ MICO BOSCH LIMITED ಕಂಪನಿಯ ಪರವಾಗಿ ನನಗೆ ನಮ್ಮ ಕಂಪನಿಯ ಉತ್ಪಾದಿಸುವಂತಹ ಅಟೋಮೊಬಾಯಿಲ್ ಬಿಡಿ ಭಾಗಗಳನ್ನು ದೇಶವ್ಯಾಪ್ತಿ  ಗ್ರಾಹಕರಿಗೆ ಮಾರಾಟ ಮಾಡುವ ಕುರಿತು ಅಂಗಡಿಯ ಡೀಲರ್ ಗಳಿಗೆ ಮಾರಾಟ ಮಾಡಿದ್ದು ನಮ್ಮ ಕಂಪನಿಯ ಹೆಸರಿನಲ್ಲಿ ಬೇರೆ ಕಂಪನಿಯ ವಸ್ತುಗಳು ನಮ್ಮ  ಕಂಪನಿಯ ಹೆಸರು ಮುದ್ರಿಸಿ ಡ್ಯೂಪ್ಲಿಕೇಟ್ ಮಾರಾಟ ಮಾಡುತ್ತಿರುವ ಬಗ್ಗೆ ಹಿರಿಯ ಅಧಿಕಾರಿಗಳು ಸ್ಪೇರಪಾರ್ಟ ಅಟೋಮೊಬಾಯಿಲ್ ಗಳಿಗೆ ಚೆಕ್ ಮಾಡುವ ಕುರಿತು ನೇಮಿಸಿದ್ದರಿಂದ ನಾನು ಕಂಪನಿಯ ಪರವಾಗಿ ದಿನಾಂಕ 04/04/2013 ರಂದು ಗುಲಬರ್ಗಾ ಕ್ಕೆ ಬಂದು ಗುಲಬರ್ಗಾ ನಗರದಲ್ಲಿ ಇರುವ ಕೆಲವು ಅಟೋಮೊಬಾಯಿಲ ಅಂಗಡಿಗಳಿಗೆ ಹೋಗಿ ಪರಿಶೀಲನೆ ಮಾಡಲು ಡೀಸೆಂಟ ಡಿಸೆಲ್ ಇಂಜಿನಿಯರ್ಸ್ ಬಾಜೆ ಕಾಂಪ್ಲೆಕ್ಸ್ ಹುಮನಾಬಾದ ರಿಂಗ್  ರೋಡ ಗುಲಬರ್ಗಾ ದಲ್ಲಿ ಚೆಕ್ಕ ಮಾಡಲು ಅಂಗಡಿ ಮಾಲಿಕನಾದ ಮಹ್ಮದ ಬುರಾನುದ್ದಿನ ಖಾನ ತಂದೆ ಹಸನೊದ್ದಿನ ಖಾನ ವಯ: 66 ವರ್ಷ, ಉ: ಪಂಪ ಮೆಕಾನಿಕ್ ಸಾ: ಮನೆ ನಂ. 11-1041/112ಬಿ ನೀಯರ ಮೌಲಾಅಲಿಕಟ್ಟಾ ಜಿಲಾನಾಬಾದ ಗುಲಬರ್ಗಾ ಈತನು ನಮ್ಮ ಕಂಪನಿಯ  MICO BOSCH LIMITED ಕಂಪನಿಯ ಹೆಸರಿನ GLOW PLUGES ಗಳನ್ನು ಅದೇ ತೆರನಾಗಿ ಡೂಬ್ಲಿಕೇಟ್ ವಸ್ತುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ನಮ್ಮ ಕಂಪನಿಗೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದು ಕಂಡು ಬಂದಿರುತ್ತವೆ. ಸದರಿ ವಸ್ತುಗಳ ಬಗ್ಗೆ ಯಾವುದೇ ರೀತಿಯ ರಶೀದಿ ಮತ್ತು ಬಿಲ್ ಗಳು ಪರಿಶೀಲಿಸಿದ್ದು ಬಿಲ್ ಗಳು ಇರುವದಿಲ್ಲಾ. ನಮ್ಮ ಕಂಪನಿಯ ಹೆಸರನ್ನು ದುರ್ಬಳಕೆಯಿಂದ ಡೂಪ್ಲಿಕೇಟ ಆಗಿ ಉಪಯೋಗಿಸಿ ಕಂಪನಿಗೆ ಮತ್ತು ಗ್ರಾಹರಕರಿಗೆ ಮತ್ತು ಸರಕಾರಕ್ಕೂ ಮೋಸ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ  ನಂ: 22/2013 ಕಲಂ, 63, 65, ಕಾಪಿ ರೈಟ ಆಕ್ಟ ಮತ್ತು 420 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.