POLICE BHAVAN KALABURAGI

POLICE BHAVAN KALABURAGI

12 November 2011

GULBARGA DIST REPORTED CRIMES

ಹುಡಗ ಕಾಣೆಯಾದ ಬಗ್ಗೆ
ಕಮಲಾಫೂರ ಠಾಣೆ
ಶ್ರೀ ಥಾವರು ತಂದೆ ನಾಮು ಚವ್ಹಾಣ ವ; 35 ವರ್ಷ ಸಾ; ಶಹರಬೇಸ ತಾಂಡಾ ಕಮಲಾಪೂರ ತಾ;ಜಿ; ಗುಲಬರ್ಗಾ ರವರು ನಾನು ಸುಮಾರು ಒಂದು ತಿಂಗಳ ಹಿಂದೆ ತನ್ನ ಹೆಂಡತಿ ಮಕ್ಕಳೊಂದಿಗೆ ಬಾಂಬೆಕ್ಕೆ ಕೂಲಿ ಕೆಲಸಕ್ಕೆಂದು ಹೋಗಿದ್ದು, ದಿನಾಂಕ:09/11/2011 ರಂದು ಬೆಳೆಗ್ಗೆ ಮರಳಿ ನನ್ನ ತಾಂಡಾಕ್ಕೆ ತನ್ನ ಹೆಂಡತಿ ಮಕ್ಕಳೊಂದಿಗೆ ಬಂದಿದ್ದು, ತಾವೆಲ್ಲರೂ ಮನೆಯಲ್ಲಿದ್ದಾಗ ತನ್ನ ಮಗ ವಿಶಾಲ 8 ವರ್ಷ ಈತನು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಬಿಸ್ಕೀಟ ತರಲು ಹೋಗಿದ್ದು, ರಾತ್ರಿಯಾದರೂ ಮನೆಗೆ ಬಾರದೇ ಇದ್ದಿದ್ದರಿಂದ ಸದರಿಯವನಿಗೆ ಎಲ್ಲಾ ಕಡೆಗೆ ಹುಡುಕಾಡಿದ್ದು ಅಲ್ಲದೇ ತನ್ನ ಸಂಭಂದಿಕರಲ್ಲಿ ಕೂಡಾ ವಿಚಾರಿಸಲಾಗಿ ವಿಶಾಲನ ಇರುವಿಕೆಯ ಬಗ್ಗೆ ಪತ್ತೆ ಆಗಿರುವುದಿಲ್ಲ. ಕಾಣೆಯಾದ ವಿಶಾಲನ ಚಹರೆ ಪಟ್ಟಿ 1. ಎತ್ತರ : 3 ಫೂಟ್ 5 ಇಂಚ್, ವಯಸ್ಸು -: 08 ವರ್ಷ, . ಚಹರಾ ಪಟ್ಟಿ , ಗೋಧಿ ವರ್ಣ, ತೆಳ್ಳನೆಯ ಮೈಕಟ್ಟು, ಉದ್ದನೇಯ ಮುಖ, ಮೊಂಡ ಮೂಗು, ತೆಲೆಯಲ್ಲಿ ಅಂದಾಜು ಒಂದು ಇಂಚ ಕಪ್ಪನೆಯ ಕೂದಲು ದೇಹದ ಮೇಲಿನ ಗುರುತುಗಳು, ಕುತ್ತಿಗೆಯ ಹಿಂಭಾಗದಲ್ಲಿ ಹಳೆಯ ಸುಟ್ಟ ಗಾಯ 2.ಬಲಗಲ್ಲದ ಮೇಲೆ ಗೊಬ್ಬರ ಬಂದಾಗ ಆಗುವ ಹಳೆಯ ಗಾಯವಿದ, ಲಂಭಾಣಿ ಭಾಷೆ. ಕನ್ನಡ . ಹಿಂದಿ ಭಾಷೆ ತೊದಲು ಮಾತನಾಡುತ್ತಾನೆ ಧರಿಸಿರುವ ಉಡುಪುಗಳು, .ಕೆಂಪು ಬಣ್ಣದ ಟಿ-ಶರ್ಟ ಅದರ ಎದೆಯ ಭಾಗದಲ್ಲಿ ಒಂದು ಬಿಳಿಯ ಹೂವಿನ ಚಿತ್ರವಿದೆ. .ಕಪ್ಪು ಬಣ್ಣದ ಹಾಫ್ ಪ್ಯಾಂಟ್ ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 141/2011 ಕಲಂ ಹುಡಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅನಧಿಕೃತವಾಗಿ ಉಸುಕು ಸಾಗಿಸುತ್ತಿರುವ ಬಗ್ಗೆ:
ಶಹಾಬಾದ ನಗರ ಪೊಲೀಸ ಠಾಣೆ
: ಶ್ರೀ ಕಾಶಿನಾಥ ಮತ್ತು ಗುಂಡಪ್ಪಾ ಪಿಸಿ ರವರು ಪೆಟ್ರೂಲಿಂಗ ಮಾಡುವಾಗ ಮುತ್ತಗಾ
, ಖದ್ದರಗಿ, ಶಂಕರವಾಡಿ ಗ್ರಾಮಳಿಂದ ಟ್ರಾಕ್ಟರ ಗಳಲ್ಲಿ ಕಾಗಿಣಾ ನದಿಯಿಂದ ಉಸುಕು ತುಂಬಿಕೊಂಡು ಸರಕಾರದ ಪರವಾನಿಗೆ ಇಲ್ಲದೆ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಅಂಥಾ ಬಾತ್ಮಿ ಮೇರೆಗೆ ಭಂಕೂರ ಕ್ರಾಸದಲ್ಲಿ ನಿಂತು 6-7 ಟ್ರ್ಯಾಕ್ಟರಗಳು ಚೆಕ್ಕ ಮಾಡಲಾಗಿ ಉಸುಕು ತೆಗೆದುಕೊಂಡು ಹೋಗಲು ಸರ್ಕಾರದ ವತಿಯಿಂದ ಯಾವುದೇ ಪರವಾನಿಗೆಯನ್ನು ಪಡೆದಿರುವುದಿಲ್ಲಾ ಅಂತಾ ತಿಳಿದಿದ್ದು ಎಲ್ಲಾ ಟ್ರ್ಯಾಕ್ಟರಗಳ ಚಾಲಕರು ಸರಕಾರ ಸ್ವತ್ತನ್ನು ಕಾನೂನು ಬಾಹಿರವಾಗಿ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ ಅಂತಾ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 170/11 ಕಲಂ 379 ಐಪಿಸಿ ಮತ್ತು 194 ಐ.ಎಂ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.