POLICE BHAVAN KALABURAGI

POLICE BHAVAN KALABURAGI

19 May 2014

Gulbarga Dist Reported Crimes

ಪತ್ರಿಕಾ ಪ್ರಕಟಣೆ
ಕುಖ್ಯಾತ ೫ ಜನ ರೌಡಿಗಳ ಮೇಲೆ ಗುಲಬರ್ಗಾ ಪೊಲೀಸರ ಕಾರ್ಯಾಚರಣೆ
ಗುಲಬರ್ಗಾ ಜಿಲ್ಲೆಯ ೫ ಜನ ಕುಖ್ಯಾತ ರೌಡಿಗಳ ಮೇಲೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಮಾನ್ಯ ಜಿಲ್ಲಾಧಿಕಾರಿಗಳು ಗುಲಬರ್ಗಾ ರವರು ಆದೇಶಿಸಿರುತ್ತಾರೆ.
ಗುಲಬರ್ಗಾ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಗುಲಬರ್ಗಾ ಜಿಲ್ಲೆಯಲ್ಲಿ ಅಶಾಂತಿ, ಭಯದ ವಾತಾವರಣವುಂಟು ಮಾಡುತ್ತಿದ್ದು, ಹಾಗು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವಂತಹ ಕೃತ್ಯದಲ್ಲಿ ಭಾಗಿಯಾಗಿರುವ ಐವರು ಕುಖ್ಯಾತ ರೌಡಿ ಶೀಟದಾರರ ಮೇಲೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಮಾನ್ಯ ಜಿಲ್ಲಾಧಿಕಾರಿಗಳು ಗುಲಬರ್ಗಾ ರವರು ಆದೇಶಿಸಿರುತ್ತಾರೆ.

1) ವಿಶಾಲ ತಂದೆ ಸುಭಾಷ @ ಸುಭಾಶ್ಚಂದ್ರ ನವರಂಗ್ ವ|| ೩೧, ಸಾ|| ಮನೆ ನಂ ೨-೬೦೪ ಎಸ.ಟಿ/ಬಿ.ಟಿ ಕ್ರಾಸ್ ಸೇಡಂ ರೋಡ ಗುಲಬರ್ಗಾ,
2) ಪ್ರಸಾದ @ ಲಾಲ್ಯಾ @ ಕೆಂಪ್ಯಾ ತಂದೆ  ಮಲ್ಲಿಕಾರ್ಜುನ ಅಳಂದಕರ್ ವ|| ೨೧, ಸಾ|| ಡೊಹರ ಗಲ್ಲಿ ಸುಂದರ ನಗರ ಗುಲಬರ್ಗಾ,
3) ಸಂಜೀವ @ ಬಾಂಬೆ ಸಂಜ್ಯಾ ತಂದೆ ಪರಶುರಾಮ ಹೋಳಕರ್ ವ|| ೩೨, ಸಾ|| ವಿಜಯ ನಗರ ಬ್ರಹ್ಮಪೂರ ಗುಲಬರ್ಗಾ,
4)  ಸತೀಶ @ ಸಂಗಮ್ ಸತೀಶ @ ಸಂಗಮ್ ಸತ್ಯಾ ತಂದೆ ವೆಂಕಟಸ್ವಾಮಿ ವ|| ೩೦,|| ಬಟ್ಟೆ ವ್ಯಾಪಾರ, ಸಾ|| ಯಾಕೂಬ ಮನಿಯಾರ ಚಾಳ, ಎಲ್.ಐ.ಸಿ ಆಫೀಸ್ ಎದುರುಗಡೆ ಗುಲಬರ್ಗಾ
5) ಮಲ್ಲಿಕಾರ್ಜುನ ತಂದೆ ಈಶ್ವರಪ್ಪ ನಾಟಿಕಾರ್ ವ|| ೪೫, ಸಾ|| ಹೊರಟೂರು ತಾ|| ಶಹಾಪೂರ ಜಿಲ್ಲಾ ಯಾದಗಿರಿ ಹಾ|||| ಅಂಬೇಡ್ಕರ್ ಕಾಲೋನಿ ವಾಡಿ, ತಾ|| ಚಿತ್ತಾಪೂರ, ಜಿ|| ಗುಲಬರ್ಗಾ ಈ ೫ ಜನ ಆರೋಪಿತರನ್ನು ೩ ತಿಂಗಳುಗಳ ಕಾಲಾವಧಿವರೆಗೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಗುಲಬರ್ಗಾರವರು ಆದೇಶಿಸಿದ್ದು, ಗುಲಬರ್ಗಾಜಿಲ್ಲೆ ಪೊಲೀಸ್ ನವರು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ೫ ಜನರ ಆರೋಪಿತರಿಗೆ ಗುಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ  ಬೆಳಗಾಂವ, ಗುಲಬರ್ಗಾ, ಬಿಜಾಪೂರ, ಬಳ್ಳಾರಿ ಕೇಂದ್ರ ಕಾರಾಗೃಹಗಳಿಗೆ ರವಾನಿಸಲಾಗಿರುತ್ತದೆ.

Gulbarga Dist Reported Crimes

ಅಪಘಾತ ಪ್ರಕರಣ:
ಮಹಾಗಾಂವಪೊಲೀಸ್ ಠಾಣೆ:
ದಿ||17/05/14 ರಂದು ಶ್ರೀ ಸಿದ್ದಲಿಂಗಯ್ಯಾ ತಂ ಶಂಭುಲಿಂಗಯ್ಯಾ ಹೀರೆಮಠ ಸಾ|| ಭೂಯಾರ ರವರು ಹೀರೊ ಹೊಂಡಾ ಮೋಟಾರ ಸೈಕಲ ನಂ ಕೆಎ32/ವಾಯ615 ನೇದ್ದರ ಮೇಲೆ ಗುಲಬರ್ಗಾದಿಂದ ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಕುರಿಕೋಟ ದಾಟಿ ಮುಂದೆ ಇರುವ ಪೆಟ್ರೊಲ ಪಂಪ ಹತ್ತಿರ ಎದುರುಗಡೆಯಿಂದ ಬರುತ್ತಿದ್ದ ಕೆಎಸ್ಅರ್,ಟಿ, ಬಸ್ ಚಾಲಕನು ತನ್ನ ಬಸ್ಸನ್ನು  ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ಮೋಟಾರ ಸೈಕಲಗೆ ಎದುರುಗಡೆಯಿಂದ ಅಪಘಾತ ಪಡಿಸಿದ್ದರಿಂದ ಅಪಘಾತದಲ್ಲಿ ನನ್ನ ಎಡಗೈ ಮೊಣಕಟ್ಟಿನ ಮೇಲಭಾಗಕ್ಕೆ ರಕ್ತಗಾಯ ಮತ್ತು ಭಾರಿ ಒಳಪೆಟ್ಟಾಗಿ ಕೈ ಮುರದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣಗಳು
ಮಹಾಗಾಂವಪೊಲೀಸ್ ಠಾಣೆ:
 ದಿ||17/05/14 ರಂದು ಶ್ರೀ ಮಲ್ಲಯ್ಯಾ  ತಂ ಅಮೃತ ಗುತ್ತೆದಾರ ಸಾ|| ಕಟ್ಟೊಳ್ಳಿರವರು ತಮ್ಮ ಗ್ರಾಮದ ಲಕ್ಷ್ಮಿ ಗುಡಿಯ ಕಟ್ಟೆಯ ಮೇಲೆ  ಗ್ರಾಮದ ಜಗನಾಥರೆಡ್ಡಿ,ಸುಭಾಷ ಗುತ್ತೆದಾರ, ಮಲ್ಲಿಕಾರ್ಜುನ ಪಾಟೀಲ ರವರೊಂದಿಗೆ ಮಾತಾಡುತ್ತಾ ಕುಳಿತಾಗ ಗ್ರಾಮದ  ಗುಡುಪಟೇಲ ತಂ ಹುಸೇನ ಪಟೇಲ ಈತನು ನನ್ನ ಹತ್ತಿರ ಬಂದು ನನಗೆ ಗಳ್ಯಾ ಹೋಡೆಯಲು ಎತ್ತುಗಳು ಕೊಡು ಅಂತಾ ಕೇಳಿದಕ್ಕೆ ನಾನು ನಮ್ಮ ಹೊಲ ಗಳ್ಯಾ ಹೊಡೆಯುವುದು ಇದೆ ಎತ್ತುಗಳು ಕೊಡುವುದಿಲ್ಲಾ ಅಂತಾ ಹೇಳಿದಕ್ಕೆ ಗುಡುಪಟೇಲ ಇತನು ನನಗೆ ಎತ್ತುಗಳು ಕೊಡುವುದಿಲ್ಲಾ ಅಂತಿಯ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡುವಾಗ ಗ್ರಾಮದ ಜನರು ಬಿಡಿಸಿದ್ದು. ನಂತರ ಮತ್ತೆ ಗುಡುಪಟೇಲ ಮತ್ತು ಅವನ ಮಕ್ಕಳಾದ ವಾಸಿಮ ಪಟೇಲ, ಮೋಸಿನ ಪಟೇಲ ಮತ್ತು ನಬೀಸಾಬ ತಂದೆ ಅಮೀರಸಾಬ ಇವರೆಲ್ಲರೊ ನಮ್ಮ ಮನೆಯ ಹತ್ತಿರ ಬಂದವರೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಹೊಡೆ ಬಡೆ ಮಾಡುತ್ತಿರುವಾಗ ಮನೆಯಲ್ಲಿದ್ದ ನಮ್ಮ ತಂದೆ ಅಮೃತ, ತಾಯಿ ಕಮಲಬಾಯಿ ಬಂದು ಜಗಳ ಬಿಡಿಸಲು ಬಂದಾಗ ನಬೀಸಾಬ, ಗುಡುಸಾಬ, ವಾಸಿಮ ಪಟೇಲರು ನಮ್ಮ ತಂದೆಗೆ ಕೈಯಿಂದ ಮತ್ತು ಕ್ಲಲಿನಿಂದ ಹೊಡೆದಿದ್ದು ಮೋಸಿನ ಪಟೇಲನು ತನ್ನ ಕೈಯಲ್ಲಿದ್ದ ಸಣ್ಣ ಚಾಕುವಿನಿಂದ ನನ್ನ ತಂದೆಗೆ ಚುಚ್ಚಿ ರಕ್ತಗಾಯಗೊಳಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಚೌಕ ಪೊಲೀಸ್ ಠಾಣೆ :
ದಿನಾಂಕ 18.05.14 ರಂದು ಶ್ರೀ ವಸಂತ ತಂದೆ ಗೋಪಾಲ ಚವ್ಹಾಣ ಸಾಃಆಶ್ರಯ ಕಾಲೋನಿ ಗುಲಬರ್ಗಾ ರವರು ಅವರ ಪತ್ನಿ ಚಾಂದುಬಾಯಿ ಮತ್ತು ಮಗ ವಿಜಯರವರೊಂದಿಗೆ ತಮ್ಮ ಮನೆಯ ಹತ್ತಿದ ಇರುವಾಗ ರಾಜೀವಗಾಂಧಿ ನಗರ ಬಡಾವಣೆಯ ಉಮೇಶ ಮತ್ತು ಅವನ ತಮ್ಮ ಸೈನಿಕ, ತಾಯಿ  ದ್ರೌಪತಿ ಹಾಗೂ ಅಂಬು, ಶೀವು ಎಲ್ಲರೊ ತಮ್ಮ ಕೈಯಲ್ಲಿ ತಲ್ವಾರ, ಚಾಕು ಬಡಿಗೆ ಹಿಡಿದುಕೊಂಡು ನಮ್ಮ ಮನೆಗೆ ಮುಂದೆ ಬಂದು ಉಮೇಶನು ವಿನಾಃ ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ತನ್ನ ಕೈಯಲ್ಲಿದ್ದ ತಲ್ವಾರದಿಂದ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾಗ ನಾನು ತಪ್ಪಿಸಿಕೊಂಡಿದ್ದು ಆಗ ನನಗೆ ತಲವಾರ ಹತ್ತಿ ಭಾರಿರಕ್ತಗಾಯವಾಗಿದ್ದು, ಅವನ ಸಂಗಡ ಬಂದಿದ್ದ ಅಂಬು, ಶಿವು ಇವರು ತಲ್ವಾರದಿಂದ ಎಡಮುಂಡಾ, ರಟ್ಟೆ,ಎಡಗಾಲ ಮೊಣಕಾಲ ಕೆಳಗೆ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿದ್ದು. ಬಿಡಿಸಲು ಬಂದ ನನ್ನ ಮಗ ವಿಜಯ ಇತನಿಗೆ ಸೈನಿಕ ಎಂಬುವವನು ತಲ್ವಾರದಿಂದ ಎಡಭುದ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದು. ಅಂಬು ಇತನು ತಲ್ವಾರದಿಂದ ಅವನ ಎಡಗೈ ಮೊಣಕೈಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು. ದ್ರೋಪತಿ ಇವಳು ನನ್ನ ಹೆಂಡತಿ ಚಾಂದುಬಾಯಿ ಇವಳ ತಲೆ ಕೂದಲು ಹಿಡಿದು ಜೊಗ್ಗಾಡಿ ಕೈಯಿಂದ ಹೊಡೆಬಡೆ ಮಾಡಿ ಎಲ್ಲರು ಕೂಡಿ ನನಗೆ ಮತ್ತು ನನ್ನ ಮಗನಿಗೆ ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಇರುತ್ತದೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರಟಕಲ್ ಪೊಲೀಸ್ ಠಾಣೆ:

ದಿನಾಂಕ 17.05.2014 ರಂದು ಶ್ರೀ ಹಣಮಂತ ತಂದೆ ಖತಲಪ್ಪ ದೊಡ್ಡಮನಿ  ಇವರು ಠಾಣೆಗೆ ಹಾಜರಾಗಿ ತಾನು ಗ್ರಾಮದ ದರ್ಗಾಕ್ಕೆ ಜಾತ್ರೆಗೆ ಹೋದಾಗ ಗ್ರಾಮದ ಜಗನ್ನಾಥ ತಂದೆ ಹಣಮಂತ ಪೂಜಾರಿ ತನ್ನ ಸಂಗಡಿಗರೊಂದಿಗೆ ವಿನಾಃಕಾರಣ ನನ್ನ ಸಂಗಡ ಜಗಳ ತೆಗೆದು ನನಗೆ ಮರಣಾಂತಿಕ ಹಲ್ಲೆ ಮಾಡಿ ನನ್ನ ತಮ್ಮ ಮತ್ತು ನನ್ನ ಮಗನಿಗೆ ಹೊಡೆದು ಗಾಯಗೊಳಿಸಿ ಜಾತಿ ನಿಂದನೆ ಮಾಡಿ ಜೀವಬೆದರಿಕೆ ಹಾಕಿದ ಬಗ್ಗಡ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.