POLICE BHAVAN KALABURAGI

POLICE BHAVAN KALABURAGI

24 August 2015

Kalaburagi District Press Note

ಪತ್ರಿಕಾ ಪ್ರಕಟಣೆ

          ಈ ಮೂಲಜ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ ಕಲಬುರಗಿ ನಗರದ ಸಂಚಾರವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಪಾರ್ಕಿಂಗ ಮತ್ತು ಇನ್ನಿತರ ಹಲವಾರು ಸಮಸ್ಯಗಳಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿರುತ್ತದೆ. ಇಂತಹ ವಿಷಯಗಳು ಕೆಲವು ಬಾರಿ ತಕ್ಷಣ ಗಮನಕ್ಕೆ ಬಂದರ ಇನ್ನು ಕಲವು ವಿಷಯಗಳು ತಡವಾಗಿ ಬೆಳಕಿಗೆ ಬರುತ್ತಿವೆ. ಇಂತಹ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲಿಕ್ಕಾಗಿ ಕಲಬುರಗಿ ಸಂಚಾರ ಠಾಣೆಯ ಪೊಲೀಸ ನಿರೀಕ್ಷಕರವರ ಮೊಬೈಲ್ ನಂ 9480803554 ( ವಾಟಸಪ್ ಇರುವಂತಹದ್ದು ) ಸಾರ್ವಜನಿಕರು ತಮ್ಮ ಬಳಿ ಇಟ್ಟುಕೊಂಡು ಸಂಚಾರಕ್ಕೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯಗಳಿಗೆ  ಈ ಮೇಲ್ಕಂಡ ಮೊಬೈಲ್ ನಂಬರಗೆ ಕರೆ ಮಾಡಿ ಅಥವಾ ಸಥಳಿಯ ದೃಶ್ಯಾವಳಿಗಳನ್ನು ಸೆರೆ ಹಿಡಿದು ವಾಟ್ಸಪ್ ಮುಖಾಂತರ ಕಳುಹಿಸಿ ಸಮಸ್ಯಗಳನ್ನು ಬಗೆಹರಿಸಿಕೊಳ್ಳಬಹುದಾಗಿರುತ್ತದೆ. ಕಲಬುರಗಿ ನಗರದ ಸಾರ್ವಜನಿಕರು ಈ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಳ್ಳದೇ ಸದುಪಯೋಗ ಪಡಿಸಿಕೊಂಡು ನಗರದ ಸಂಚಾರವನ್ನು ಸುಗಮಗೋಳಿಸಲು ಸಹಕರಿಸಲು ಕೋರಿದೆ.