POLICE BHAVAN KALABURAGI

POLICE BHAVAN KALABURAGI

22 July 2018

KALABURAGI DISTRICT REPORTED CRIMES

ಕಳವು ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ ವಿಶ್ವನಾಥ ತಂದೆ ಸೋಮಶೇಖರ ಅತ್ತಾರ  ಸಾ|| ಭಗವತಿ ನಗರ ಕಲಬುರಗಿ ರವರು  ದಿನಾಂಕ 14-07-2018 ರಂದು 06-00 ಪಿ.ಎಂದಿಂದ 15-07-201809-00 ಎ.ಎಂ ಅವಧಿಯಲ್ಲಿ ಯಾರೋ ಕಳ್ಳರು ಕಲಬುರಗಿಯ ಭಗವತಿ ನಗರದಲ್ಲಿರುವ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಮನೆಯಲ್ಲಿದ್ದ ನಗದು ಹಣ 1,20,000/-ರೂ ಹಾಗೂ 300 ಗ್ರಾಂ ಬಂಗಾರದ ಆಭರಣಗಳು ಅ.ಕಿ 7,60,000/-ರೂ ಹೀಗೆ ಒಟ್ಟು 8,80,000/-ರೂ ನೇದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ನೀಲಮ್ಮಾ ಗಂಡ ಸೂರ್ಯಾಕಾಂತ ಅಡಕಿ ಸಾ : ಚಿಂಚೋಳಿ ಗ್ರಾಮ ತಾ/ಅಫಜಲಪೂರ ಜಿ- ಕಲಬುರಗಿ ಹಾವ- ರಾಮನಗರ ಕಲಬುರಗಿ ರವರ ಮಗಳು ಭಾಗ್ಯಶ್ರೀ ಇವಳಿಗೆ ನಮ್ಮ ಎದರು ಮನೆಯ ಸುಧಾಕರ ತಂದೆ ಶ್ರೀಶೈಲ್ ಜಮದಾರ ಎಂಬುವ ಹುಡುಗನು ಆಗಾಗ ನಮ್ಮ ಹುಡುಗಿಗೆ ಚುಡಾಯಿಸುವದು, ಸಲುಗೆಯಿಂದ ಮಾತಾಡುತಿದ್ದಾಗ ನಮ್ಮ ಮಗಳು ಸುಧಾರಕರ ಚುಡಾಯಿಸುವ ಬಗ್ಗೆ ತಿಳಿಸಿದಾಗ ನಾನು ಮತ್ತು ನನ್ನ ಗಂಡ ಸೂರ್ಯಾಕಾಂತ ಹಾಗೂ ನಮ್ಮ ಭಾವ ನಾಗೇಂದ್ರ ಚಿಂಚೋಳಿ ಕೂಡಿಕೊಂಡು ಸುಧಾಕರನಿಗೆ ಮತ್ತು ಆತನ ತಂದೆ ಶ್ರೀಶೈಲನಿಗೆ ತಿಳುವಳಿಕೆ ಹೇಳಿದ್ದಾಗ ಕೆಲವು ದಿವಸಗಳ ವರೆಗೆ ಚನ್ನಾಗಿದ್ದರು. ಆದಾಗ್ಯೂ ಕೂಡಾ ಸದರಿ ಹುಡಗನು ನಮ್ಮ ಹುಡುಗಿಯನ್ನು ನೋಡುವದು ಬಿಡುತಿರಲಿಲ್ಲಾ , ಕೆಲವು ದಿವಸಗಳ ನಂತರ ಸುಧಾಕರನು ಪುನಾ ನನ್ನ ಮಗಳು ಭಾಗ್ಯಶ್ರೀ ಇವಳೊಂದಿಗೆ ಸಲುಗೆಯಿಂದ ವರ್ತಿಸುವದು ನಾನು ಮನೆಯಿಂದ ಹೊರಗಡೆ ಹೋದಾಗ ನಮ್ಮ ಮನೆಯ ಎದರುಗಡೆ ನಿಂತು ನಮ್ಮ ಮಗಳಿಗೆ ಭೇಟಿ ಮಾಡುವದು  ಇಲ್ಲದೊಂದು ಆಮಿಸೆಯೊಡ್ಡುತಿದ್ದ ದಿನಾಂಕ. 6-7-2018 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳೆಲ್ಲರೂ ಊಟಾ ಮಾಡಿ ಮಲಗಿ ಕೊಂಡಿದ್ದೇವು ನನ್ನಗೆ ಜ್ವರ ಬಂದಿದ್ದ ಕಾರಣ ಔಷಧ ತೆಗೆದುಕೊಂಡು ಮಲಗಿಕೊಂಡಿದೇನು. ಮದ್ಯ ರಾತ್ರಿ ಅಂದರೆ ದಿನಾಂಕ.7-7-2018 ರಂದು 00-30 ಗಂಟೆಯ ಸುಮಾರಿಗೆ ನಾನು  ಎದ್ದು  ಮೂತ್ರ ವಿಸರ್ಜನೆಗೆ ಹೋಗಿ ನೀರು ಕುಡಿದು ಮಲಗುವಾಗ ನನ್ನ 5 ಜನ ಮಕ್ಕಳು ಮಲಗಿಕೊಂಡಿದ್ದರು. ದಿನಾಂಕ.7-7-2018 ರಂದು ಬೆಳಗ್ಗೆ  5-30 ಗಂಟೆಯ ಸುಮಾರಿಗೆ ಎದ್ದು ನೋಡಲಾಗಿ ನನ್ನ ಹಿರಿಯ ಮಗಳು ಭಾಗ್ಯಶ್ರೀ. ವಯ/ 17 ವರ್ಷ ಇವಳು ಕಾಣಲಿಲ್ಲಾ  ನಂತರ ಮನೆಯ ತುಂಬೆಲ್ಲಾ ಮತ್ತು ಹಿಂದುಗಡೆ ಹೋಗಿ ಹುಡುಕಾಡಲಾಗಿ ಸಿಗಲಿಲ್ಲಾ. ನಂತರ ಕಾಲೂನಿಯಲ್ಲಿ  ಎಲ್ಲಾ ಕಡೆಗೂ ಹುಡುಕಾಡಿದರೂ ಸಿಗಲಿಲ್ಲಾ  ಕಲಬುರಗಿಯ ಎಲ್ಲ ಕಡೆಗೂ  ಮತ್ತು ನಮ್ಮ ಸಮ್ಮಂದಿಕರು ಇರುವ  ಊರುಗಳಿಗೆ ಫೋನ ಮಾಡಿ ವಿಚಾರಿಸಿದರೂ ಕೂಡಾ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲಾ. ನಂತರ ನಮ್ಮ ಮನೆಯ ಎದುರಿನ ಹುಡುಗ ಸುಧಾಕರ ಜಮದಾರ ಇತನು ಕೂಡಾ ರಾತ್ರಿಯಿಂದ ಮನೆಯಲ್ಲಿರುವದಿಲ್ಲಾ ಅಂತಾ ಆತನ ತಂದೆ ಹೇಳಿದರು ಕೇಳಿದೆರೆ ಎಲ್ಲಿ ಹೋಗಿರುತ್ತಾನೆ ನಮಗೆನು ಗೊತ್ತು ಅಂತ ನಮ್ಮೊಂದಿಗೆ ವ್ಯಂಗ್ಯವಾಗಿ ಮಾತಾಡಿರುತ್ತಾರೆ. ಆದುದರಿಂದ ಈ ಮೇಲೆ ನಮೂದ ಮಾಡಿದ್ದ ಸುಧಾಕರ ತಂದೆ ಶ್ರೀಶೈಲ್ ಜಮದಾರ ಇತನು ನನ್ನ ಅಪ್ರಾಪ್ತ ಮಗಳು ಭಾಗ್ಯಶ್ರೀ. ಇವಳಿಗೆ ಮದುವೆ ಮಾಡಕೊಳ್ಳುತ್ತೇನೆ ಅಂತಾ ಇಲ್ಲ ಸಲ್ಲದ ಆಮಿಸ್ಯಯೊಡ್ಡಿ ಪುಸಲಾಯಿಸಿ ಜಬದಸ್ತಿಯಿಂದ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.