POLICE BHAVAN KALABURAGI

POLICE BHAVAN KALABURAGI

19 October 2011

GULBARGA DIST REPORTED CRIMES


ಕುಖ್ಯಾತ ಮನೆ ಕಳವು ಮಾಡುವ ದಂಪತಿಯ ಬಂಧನ, ಸುಮಾರು 3 ಲಕ್ಷ ರೂ. ಬೆಲೆಬಾಳುವ ಬಂಗಾರ, ಬೆಳ್ಳಿ ಆಭರಣಗಳು ವಶ
ಖಚಿತ ಮಾಹಿತಿ ಆಧಾರದ ಅನ್ವಯ ಶಹಾಬಾದ ನಗರದ ಬಸ್ಸ್ ನಿಲ್ದಾಣದಲ್ಲಿ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರು ಕುಖ್ಯಾತ ಮನೆ ಕಳ್ಳತನ ಮಾಡುವ ದಂಪತಿಗಳನ್ನು ಬಂಧಿಸಿ ಸದರಿಯವರಿಂದ ಗುಲಬರ್ಗಾ ನಗರದ ಎಮ್.ಬಿ. ನಗರ ಮತ್ತು ರೋಜಾ ಠಾಣೆ ವ್ಯಾಪ್ತಿಯ ಬಡಾವಣೆಯ ಮನೆಗಳಿಂದ ಕಳ್ಳತನ ಮಾಡಿದ ಬಂಗಾರದ ಮತ್ತು ಬೆಳ್ಳಿ ಆಭರಣಗಳು ಮತ್ತು ವಗೈರೆ ಸುಮಾರು 3 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದು ತನಿಖೆ ಜಾರಿಯಲ್ಲಿರುತ್ತದೆ.

ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತರ ಪತ್ತೆ ಕುರಿತು ಮಾನ್ಯ ಶ್ರೀಪ್ರವೀಣ ಮಧುಕರ ಪವಾರ ಎಸ್ ಪಿ ಗುಲಬರ್ಗಾ ,ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ
ಎಸ್ ಪಿ ಗುಲಬರ್ಗಾ,ಮತ್ತು ಶ್ರೀ ಹೆಚ್. ತಿಮಪ್ಪ ಡಿ.ಎಸ.ಪಿ ಗ್ರಾಮಾಂತರ ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಇಂದು ದಿನಾಂಕ 18-10-2011 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಶ್ರೀ ಬಿ. ಪಿ ಚಂದ್ರಶೇಖರ ಸಿಪಿಐ ಎಂಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ 1) ಶ್ರೀ ಪಂಡಿತ ಸಗರ ಪಿ.ಎಸ.ಐ ವಿಶ್ವವಿದ್ಯಾಲಯ ಠಾಣೆ 2) ಶ್ರೀ ಸಂಜೀವಕುಮಾರ ಪಿ.ಎಸ.ಐ ಎಂಬಿ ನಗರಠಾಣೆ ಮತ್ತು ಸಿಬ್ಬಂದಿಯವರಾದ ಶ್ರೀ ಶಿವಪುತ್ರ ಸ್ವಾಮಿ ಹೆಚಸಿ , ಶ್ರೀ ಅಶೋಕ ಪಿಸಿ , ಅರ್ಜುನ ಎಪಿಸಿ, ಪ್ರಭಾಕರ ಪಿಸಿ, ಚಂದ್ರಕಾಂತ ಪಿಸಿ, ಬಲರಾಮ ಪಿಸಿ, ಮಶಾಕ ಪಿಸಿ ಮತ್ತು ಮಹಿಳಾ ಪಿಸಿ ಸುಧಾರವರು ಖಚಿತ ಬಾತ್ಮಿ ಮೇರೆಗೆ ಶಹಬಾರದ ನಗರದ ಬಸ್ ನಿಲ್ದಾಣದಲ್ಲಿ ಖಚಿತ ಬಾತ್ಮಿಯಂತೆ ಕುಖ್ಯಾತ ಮನೆ ಕಳುವು ಮಾಡುವ ಆರೋಪಿತರಾದ 1) ಜಯಶ್ರೀ ಗಂಡ ಕನ್ವರ ಉಪಾಧ್ಯಾಯ ಉ: ಕಚರಾ ಆಯುವದು ಸಾ: ಬಾಪೂ ನಗರ ಗುಲಬರ್ಗಾ 2) ಕನ್ವರ ತಂದೆ ಭಗವಾನ ಉಪಾಧ್ಯಾಯ ಉ: ಕೂಲಿ ಕೆಲಸ ಸಾ: ಬಾಪೂ ನಗರ ಗುಲಬರ್ಗಾ ಇವರನ್ನು ಓಡಿ ಹೋಗುತ್ತಿರುವಾಗ ಮಿಂಚಿನ ದಾಳಿ ಮಾಡಿ ಸದರಿಯವರ ಮೇಲೆ ಬಲವಾದ ಸಂಶಯ ಬಂದು ಠಾಣೆಗೆ ತಂದು ತನಿಖೆ ಒಳಪಡಿಸಿದಾಗ ಈಗ ಸುಮಾರು 8 ದಿವಸಗಳಿಂದ ಗುಲಬರ್ಗಾ ನಗರದ ಬಿಲಾಲಾಬಾದ ಕಾಲೋನಿ ಹಾಗೂ ಜಾಗೃತಿ ಕಾಲೋನಿಯಲ್ಲಿ ಬೀಗ ಹಾಕಿದ ಮನೆ ಬಾಗಿಲ ಕೀಲಿಗಳನ್ನು ಮುರಿದು ಒಳಗೆ ಹೋಗಿ ಟ್ರಂಕ ಮತ್ತು ಅಲಮಾರಿಗಳಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳವು ಮಾಡಿಕೊಂಡು ಹೋದ ಬಗ್ಗೆ ತನಿಖೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತರಿಂದ ಮನೆ ಕಳುವು ಮಾಡಿದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ವಗೈರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದ್ದು ಈ ಬಗ್ಗೆ ಮಾನ್ಯ ಎಸಪಿ ಸಾಹೇಬರು ಪ್ರಕರಣವನ್ನು ಬೇಧಿಸಿದ ಅಧೀಕಾರಿ ಮತ್ತು ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

GULBARGA DIST REPORTED CRIMES

ಸಂಚಾರಿ ಠಾಣೆ : ಶ್ರೀ ಮಲ್ಲಿಕಾರ್ಜುನ ಮಾರುತಿ ಮೇತ್ರಿ ಸಾಃ ಮಹಾರಾಜವಾಡಿ, ತಾಃ ಔರಾದ, ಹಾ.ವ: ಕಾವೇರಿ ನಗರ ಗುಲಬರ್ಗಾ ರವರು, ನಾನು ಮತ್ತು ನರಸಿಂಗ ಡಾವರಗಾಂವೆ ಪಾನಿಪೂರಿ ವ್ಯಾಪಾರ ಮಾಡಿಕೊಂಡು ದಿನಾಂಕ 18-10-2011 ರಂದು ರಾತ್ರಿ 11-00 ಸುಮಾರಿಗೆ ಗಂಜ ರೋಡಿಗೆ ಇರುವ ಗಾಂಧಿ ನಗರ ಕ್ರಾಸ ಹತ್ತಿರ ಇರುವ ಬೊರವೆಲ್ ದಲ್ಲಿ ತಮ್ಮ ಭಾಂಡೆಗಳನ್ನು ತೊಳೆಯುತ್ತಿದ್ದಾಗ ಟಾಟಾ ಸುಮೊ ನಂ. ಕೆ.ಎ 32 ಎಮ್ 3506 ನೇದ್ದರ ಚಾಲಕನು ತನ್ನ ಟಾಟಾ ಸುಮೊವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೊರವೆಲ್ ಹತ್ತಿರ ಭಾಂಡೆ ತೊಳೆಯುತ್ತಿದ್ದ ನರಸಿಂಗ ಇತನಿಗೆ ಅಪಘಾತಪಡಿಸಿ ನಂತರ ಬೊರವೆಲ್ ಗೆ ಅಪಘಾತಪಡಿಸಿ ಹಾನಿಗೊಳಿಸಿ ತನ್ನ ಟಾಟಾ ಸುಮೊ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ನರಸಿಂಗ ಇತನಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಮತ್ತು ಬೋರವೆಲ್ ಹಾನಿ ಆಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಗುನ್ನೆ 64/2011 ಕಲಂ 279, 337, 427 ಐಪಿಸಿ & 187 ಐ,ಎಮ,ವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ನಿಂಬರ್ಗಾ ಠಾಣೆ :ಶ್ರೀಮತಿ ಮಂದಾಕಿನಿ ಗಂಡ ನಿಜಲಿಂಗಪ್ಪ ಚೌಲೆ ಸಾ|| ಭೂಸನೂರ ಗ್ರಾಮ ರವರು, ನಾವು ನಮ್ಮ ಹೊಲ ಸರ್ವೆ ನಂ. 307 , 4 ಎಕರೆ ನೇದ್ದರಲ್ಲಿ ಅದರಲ್ಲಿ ಕಬ್ಬು ಮತ್ತು ತೊಗರಿ ಬೇಳೆ ಹಾಕಿದ್ದು ತೊಗರಿ ಬೆಳೆಯಲ್ಲಿ ಸದಿ ತೆಗೆಯಲು ಹೋದಾಗ ನಮ್ಮ ಮಾವನಾದ ಶಿವಶರಣಪ್ಪ ಚೌಲ ಇವರು ನಮ್ಮ ಹೊಲದ ಬಾಂದಾರಿಯ ಹುಲ್ಲು ಕೊಯ್ಯುವಾಗ ನಮ್ಮ ಹೊಲದ ಬಾಜು ಹೊಲದವನಾದ ನಾಗರಾಜ ತಂದೆ ಸಿದ್ದಣ್ಣ ಗವಿ , ಶರಣಮ್ಮ ತಂದೆ ಸಿದ್ದಣ ಗವಿ ಮತ್ತು ಬಸಮ್ಮಾ ಗಂಡ ಸಿದ್ದಣ್ಣಾ ಗವಿ ಇವರು ಕೂಡಿಕೊಂಡು ಬಂದು ಇದು ನಮ್ಮ ಹೊಲದ ಬಾಂದಾರಿ ಇದೆ ಅಂತ ನಮ್ಮ ಸಂಗಡ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ ಗಾಯಪಡಿಸಿದ್ದಾರೆ. ಮತ್ತು ನಾಗರಾಜ ಈತನು ಮಾನ ಭಂಗ ಮಾಡುವ ಉದ್ದೇಶದಿಂದ ಕೈ ಹಿಡಿದು ಜಗ್ಗಾಡಿ, ಎಡಗೈ ನಡುವಿನ ಕೈ ಬೆರಳಿಗೆ ಕಚ್ಚಿ ರಕ್ತಗಾಯಪಡಿಸಿತ್ತಾನೆ. ಕಾರಣ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಗುನ್ನೆ ನಂ. 115/2011, ಕಲಂ. 323, 324, 354, 504, 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಶಹಾಬಾದ ನಗರ ಠಾಣೆ : ಶ್ರೀಮತಿ ಪಾರ್ವತಿ ಗಂಡ ಸಿದ್ದಯ್ಯಾ ಮಠಪತಿ ಸಾ: ಭಂಕೂರ ರವರು, ನಾನು ಗ್ರಾಮ ಪಂಚಾಯತದಲ್ಲಿ ಗ್ರಂಥಾಲಯದ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದು ಲಕ್ಷ್ಮಿಕಾಂತ ತಂದೆ ಮಲ್ಕಪ್ಪಾ ಕಂದಕೊಳ ಸಾ: ಭಂಕೂರ ಈತನು ಅವ್ಯಾಚವಾಗಿ ಬೈಯುವದು ಹಾಗೂ ಜೀವದ ಬೇದರಿಕೆ ಹಾಕುವದು ಮಾಡುತ್ತಿದ್ದಾನೆ ಮತ್ತು ನನಗೆ ಅಶ್ಲೀಲ ಪುಸ್ತಕಗಳನ್ನು ಓದಲಿಕ್ಕೆ ಕೊಡು ಅಂತಾ ಕೇಳುತ್ತಿದ್ದು ನನಗೆ ಅಶ್ಲೀಲವಾಗಿ ಬೈಯುವದು ಮಾಡುತ್ತಿದ್ದಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಗುನ್ನೆ ಸಂಖ್ಯೆ 158/2011 ಕಲಂ:    504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಠಾಣೆ : ಶ್ರೀ ಗೌರಿಶಂಕರ ತಂದೆ ದತ್ತಾತ್ರೇಯ ಮೈಲಾಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕೈಯಿಂದ ಬರೆದ ದೂರು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 17-10-2011 ರಂದು ಬೆಳೀಗ್ಗೆ 7-15 ಗಂಟೆಗೆ ಅವರ ಹೆಂಡತಿ ಚಿತ್ರಲೇಖಾ ಮೈಲಾಪುರ ಇವರು ಹಾಲು ತರಲು ಶೆಟ್ಟಿ ಕಾಂಪ್ಲೇಕ್ಸಗೆ ಬಂದು ಮರಳಿ ಹೋಗುವಾಗ ಯಾರೋ ಇಬ್ಬರು ಅಪರಿಚಿತ ಮೋಟಾರ ಸೈಕಲ ಸವಾರರು ಅದರಲ್ಲಿ ಒಬ್ಬ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು ಅವರು ನನ್ನ ಹೆಂಡತಿ ಕೊರಳಲ್ಲಿದ್ದ 35 ಗ್ರಾಂ ಬಂಗಾರದ ಮಂಗಳ ಸೂತ್ರ ಕಿತ್ತಿಕೊಂಡು ಹೋಗಿರುತ್ತಾರೆ. ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಗುನ್ನೆ ನಂ 81/11 ಕಲಂ 392 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಪೂರ ಠಾಣೆ : ಶ್ರೀಮತಿ ತೆಂಗೆಮ್ಮಾ ಗಂಡ ಮಲ್ಲಿನಾಥ ಗುತ್ತಿ ಸಾಃಗೋಗಿ(ಕೆ) ತಾಃಜಿಃ ಗುಲಬರ್ಗಾ ರವರು ದಿನಾಂಕ: 17/10/2011 ರಂದು ಬೆಳಿಗ್ಗೆ ನನ್ನ ಗಂಡ ಮಲ್ಲಿನಾಥ ಇವರು ಹೊಲದಲ್ಲಿ ಹಾಕಿರುವ ತೊಗರಿ ಬೆಳೆಗೆಳಿಗೆ ಕ್ರೀಮಿನಾಶಕ ಔಷಧವನ್ನು ಹೊಡೆಯುತ್ತಿದ್ದಾಗ ಔಷಧವು ಗಾಳಿಯ ಮೂಲಕ ಉಸಿರಾಟದೊಂದಿಗೆ ದೇಹದೊಳಗೆ ಹೋಗಿದ್ದು. ನಂತರ ಬೆಳಿಗ್ಗೆ 9-00 ಗಂಟೆ ಸುಮಾರಿಗೆ ನನ್ನ ಗಂಡನು ಕೈ ತೊಳೆಯದೇ ಊಟ ಮಾಡಿದ್ದರಿಂದ ಕ್ರೀಮಿನಾಶಕ ಔಷಧ ದೇಹದೊಳಗೆ ಹೋಗಿ ತಲೆ ಸುತ್ತುತ್ತಿದೆ ವಾಂತಿ ಮಾಡುತ್ತಿದ್ದರಿಂದ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ 12-30 ಗಂಟೆಗೆ ತಂದು ಸೇರಿಕೆ ಮಾಡಿರುತ್ತೇವೆ. ಉಪಚಾರದಲ್ಲಿದ್ದ ಮಲ್ಲಿನಾಥ ಈತನು ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:18/10/2011 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ಮಾನ್ಯರವರು ಮುಂದಿನ ಕಾನೂನು ಕ್ರಮ ಜರುಗಿಸಬೇಕು. ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಯುಡಿಆರ್ ನಂ. 10/2011 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಅಂಬಿಕಾ ತಂದೆ ಶಾಮರಾಯ ಹಲಗೆ ಸಾ: ಸುಂದರ ನಗರ ಗುಲಬರ್ಗಾ ರವರು, ನನ್ನ ಗಂಡ ಶಾಮರಾಯ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರು ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಮೋ/ಸೈಕಲ್ ನಂಬರ ಕೆಎ 32 ಕ್ಯೂ 3490 ರ ಚಾಲಕ ಪ್ರವೀಣ ತಂದೆ ಅಬ್ರಾಹಮ್ ಈತನು ಜಿ.ಜಿ.,ಹೆಚ್.ಸರ್ಕಲ್ ಕಡೆಯಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡ ದಾಟಿ ಹೋಗುತ್ತಿದ್ದ ನನ್ನ ಗಂಡ ಶಾಮರಾಯ ಈತನಿಗೆ ಅಪಘಾತಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ 132/11 ಕಲಂ: 279 .338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ : ಶ್ರೀ ಶಿವರಾಜ ತಂದೆ ಶರಣಪ್ಪ ಬಿರದಾರ ಸಾ: ಮಟಕಿ ರವರು, ದಿನಾಂಕ:17-10-2011 ಅವಧಿ 8.00 ಪಿಎಂದಿಂದ 18/10/2011 8.00ರವರಿಗೆ ಮದ್ಯದ ರಾತ್ರಿ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಶ್ರೀ ಶರಣಬಸೇಶ್ವರ ಕೃಷಿ ಕೇಂದ್ರದ ತೊಗರಿ ಔಷದ ಅಂಗಡಿಯ ಹಿಂದಿನ ಪತ್ರೆಯನ್ನು ಕೊಯ್ದು ಒಳಗೆ ನುಗ್ಗಿ ಟೇಬಲ್ ಡ್ರಾ ಕೀಲಿ ಮುರಿದು ನಗದು ಹಣ 1000=00 ರೂ ಹಾಗೂ ಇಂಪ್ಯಾಕ್ಟ ತೊಗರಿ ಎಣ್ಣೆ ಹಾಗೂ ಪ್ರೋಕ್ಲೆನ್ ತೊಗರಿ ಎಣ್ಣೆ ಅ.ಕಿ 40800=00 ರೂ ಹೀಗೆ ಒಟ್ಟು 41800=00 ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಗುನ್ನೆ ನಂ. 243/2011 ಕಲಂ 457.380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.