POLICE BHAVAN KALABURAGI

POLICE BHAVAN KALABURAGI

19 May 2011

GULBARGA DISTRICT REPORTED CRIMES

ಕಳವು ಪ್ರಕರಣ :

ಚೌಕ ಠಾಣೆ : ಶ್ರೀ ಯೋಗೇಶ ರಸಾಳಕರ ಸಾ|| ಸ್ವಸ್ತಿಕ ನಗರ ಗುಲಬರ್ಗಾ ರವರು ದಿನಾಂಕ: 16-17-05-2011 ರಂದು ರಾತ್ರಿ ವೇಳೆಯಲ್ಲಿ ತನ್ನ ಎಸ.ಅರ್. ಹೋಟೆಲ ಹತ್ತಿರವಿರುವ ಪಾನ ಶಾಪದಲ್ಲಿ ಇಟ್ಟಿರುವ ಸಾಮಾನುಗಳು ಮತ್ತು ನಗದು ಹಣ ಒಟ್ಟು 23500-00 ನೇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಚೌಕ ಠಾಣೆ : ಅ ಶ್ರೀ ದೀಪಕಸಿಂಗ್ ತಂದೆ ಹಿರಾಸಿಂಗ ಠಾಕೂರ ಸಾ|| ಮಹದಾದೇವ ನಗರ ಗುಲಬರ್ಗಾ ರವರು ದಿನಾಂಕ: 30-04-2011 ರಂದು ಮನೆಯ ಮುಂಎದೆ ನಿಲ್ಲಿಸಿದ ಅಟೋ ಕೆಎ 32 6342 ಅಕಿ|| 47,000=00 ನೇದ್ದು ನಿಲ್ಲಿಸಿದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಗುರುನಾಗರಾಜ ತಂದೆ ಹಣಮಂತಪ್ಪ ಆಲಗೂಡಕರ್‌ ಸಾ: ಆಲಗೂಡ ಹಾ: ವ:ಸಂತ್ರಾಸ ವಾಡಿ ಚೌದರಿ ಮನೆಯ ಹತ್ತಿರ ಗುಲಬರ್ಗಾ ರವರು ದಿ: 25/5/2011 ರಂದು ಮದುವೆ ಪೂರ್ವದ ಕಾರ್ಯಕ್ರಮದ ನಿಮಿತ್ಯವಾಗಿ ನಾನು ಹಾಗು ನನ್ನ ತಂದೆ ತಾಯಿ ಹಾಗೂ ಹೆಂಡತತಿಯೊಂದಿಗೆ ತುಳಜಾಪೂರಕ್ಕೆ ದೇವಿಯ ದರ್ಶನಕ್ಕೆ ತಮ್ಮ ಪರಿಚಯದವರ ಇಂಡಿಕಾ ಕಾರ ನಂ ಎಮ್‌ಹೆಚ್‌ 01 ಡಿಎ- 6422 ನೇದ್ದರ ಕಾರ ಚಾಲಕ ಶರಣು ತಂದೆ ಗುಂಡಪ್ಪ ಜಡಕೆ ಇವನೊಂದಿಗೆ ಹೋಗಿ ದರ್ಶನ ಮಾಡಿಕೊಂಡು ಮರಳಿ ಗುಲಬರ್ಗಾಕ್ಕೆ ಬರುವಾಗ ಕಾರ ಚಾಲಕ ಶರಣು ಇತನು ಕಾರನ್ನು ಅತೀವೇಗವಾಗಿ ನಡೆಸುತ್ತಿದ್ದಾಗ ಅವನಿಗೆ ನಿಧಾನವಾಗಿ ನಡೆಸುವಂತೆ ಹೇಳಿದರು ಹಾಗೇಯೇ ವೇಗವಾಗಿ ಕಾರನ್ನು ಚಾಲಾಯಿಸು ಸ್ವಾಮಿ ಸಮರ್ಥ ಗುಡ್ಡದ ಹತ್ತಿರ ಅವರಾದ(ಬಿ) ಸೀಮಾದಲ್ಲಿ ಓವರ ಟೇಕ ಮಾಡಲು ರೋಡಿನ ಬಲಬದಿಗೆ ತೆಗೆದುಕೊಂಡಿದ್ದರಿಂದ ರೋಡಿನ ಬಲಭಾಗದ ಗುಟದ ಕಲ್ಲಿಗೆ ಡಿಕ್ಕಿ ಹೊಡೆದಿದ್ದರಿಂದ ತಂದೆಯವರು ಕಾರಲಿನಲ್ಲಿಯೇ ಸ್ಥಳದಲ್ಲಿ ಮೃತಪಟ್ಟಿದ್ದು ತಾಯಿಯ ತಲೆಗೆ ಬಾರಿ ರಕ್ತಗಾಯವಾಗಿ ನಮ್ಮಗೆ ಸಣ್ಣಪುಟ್ಟ ಗಾಯಗಳು ಆಗಿದ್ದು ಅಂತಾ ವಗೈರೆ ಅರ್ಜಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಈರಫನ್‌ ತಂದೆ ಚಾಂದಪಟೇಲ ಸಾ: ಮದೀನಾ ಕಾಲನಿ ಗುಲಬರ್ಗಾ ರವರು ನನ್ನ ಹೀರೋ ಹೊಂಡಾ ಮೋಟಾರ ಸೈಕಲ ನಂ ಕೆಎ 32 ವ್ಹಿ 5723 ನೇದ್ದನ್ನು ನಿನ್ನೆ ದಿನಾಂಕ; 17/5/2011 ರಂದು ಸಾಯಂಕಾಲ ನನ್ನ ದ್ವೀ ಚಕ್ರ ವಾಹನಗಳ ಗ್ಯಾರೇಜ ರಿಪೇರಿ ಅಂಗಡಿ ಮುಂದೆ ನಿಲ್ಲಿಸಿದ ಮೋಟಾರ ಸೈಕಲನ್ನು ಯಾರೋ ಅಪರಿಚಿತ ವ್ಯಕ್ತಿ ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.