POLICE BHAVAN KALABURAGI

POLICE BHAVAN KALABURAGI

31 July 2014

Gulbarga District Reported Crimes

ಅಶೋಕ ನಗರ ಪೊಲೀಸರಿಂದ ಸರಗಳ್ಳರ ಮತ್ತು ವಾಹನಗಳ್ಳರ  ಬಂಧನ 2,29,000/- ರೂ ಮೌಲ್ಯದ  ವಾಹನ ಮತ್ತು ಬಂಗಾರ ಜಪ್ತಿ
ಅಶೋಕ ನಗರ ಪೊಲೀಸ ಠಾಣಾ ವ್ಯಾಫ್ತಿಯಲ್ಲಿ ಸರಗಳ್ಳತನಗಳು ಆಗುತ್ತಿದ್ದರಿಂದ ಮಾನ್ಯ ಅಮೀತಸಿಂಗ ಎಸ.ಪಿ ಗುಲಬರ್ಗಾ ಮತ್ತು ಮಹಾನಿಂಗ ನಂದಗಾಂವಿ ಡಿ.ಎಸ.ಪಿ (ಎ) ಉಪ-ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಪಿಐ, ಕೆ.ಎಸ್.ಕಲ್ಲದೇವರು ಪಿ.ಎಸ್.ಐ (ಕಾ.ಸು), ಸತ್ಯನಾರಾಯಣ ಪಿ.ಎಸ್.ಐ (ಅ.ವಿ), ಸಿಬ್ಬಂದಿಜನರಾದ ರವಿಕುಮಾರ ಹೆಚ್.ಸಿ 433, ಶಿವಪ್ರಕಾಶ ಪಿಸಿ 615, ಸುರೇಶ ಪಿಸಿ 534, ಗಜಾನಂದ ಪಿಸಿ 821, ಜ್ಯೋತಿರ್ಲಿಂಗ ಪಿಸಿ 1159,  ಚಂದ್ರಕಾಂತ ಪಿಸಿ 176, ಬಸವರಾಜ ಪಿಸಿ 765, ಹಣಮಂತ ಪಿಸಿ 1166, ಅನೀಸ ಪಿಸಿ 12, ಮಹೇಶ ಪಿಸಿ 1151, ಸಂತೋಷ ಪಿಸಿ 961 ಸಂಜೀವಕುಮಾರ ಪಿಸಿ 245 ಚಾಲಕ  ಶಿವಯ್ಯ ಎಪಿಸಿ,   ರವರ ಒಳಗೊಂಡ ತಂಡವನ್ನು ರಚನೆ ಮಾಡಿದ್ದು ಈ ತಂಡವು ಮಾನ್ಯ ಎಸ್‌.ಪಿ ಗುಲಬರ್ಗಾ,  ಡಿ.ಎಸ್‌.ಪಿ  ಎ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ,  ಹೀರಾಪೂರ ಮತ್ತು ಉದನೂರ ರಸ್ತೆಯ ಮಾಣಿಕ ಪ್ರಭು ಕಾಲೋನಿಯಲ್ಲಿದ್ದ 1) ಬಸವರಾಜ ತಂದೆ ಶ್ಯಾಮರಾವ ಪಾಟೀಲ 2) ಅಂಬರೀಶ ತಂದೆ ಣಾಗಣ್ಣ ತೆಗನೂರ  ರವರಿಗೆ  ದಸ್ತಗಿರಿ ಮಾಡಿ ಅವರಿಂದ 5 ದ್ವಿಚಕ್ರ ವಾಹನಗಳು ಮತ್ತು 15 ಗ್ರಾಂ ಬಂಗಾರದ ಆಭರಣಗಳು ಹೀಗೆ ಒಟ್ಟು 2,29,000/- ರೂ ಬೆಲೆಬಾಳುವ ಬಂಗಾರ ಮತ್ತು ಮೋಟರ ಸೈಕಲಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಸರಗಳ್ಳರು/ವಾಹನಗಳ್ಳರು ಗುಲಬರ್ಗಾದಲ್ಲಿ ಕಳ್ಳತನ ಮಾಡಿದ ನಂತರ ದುದನಿಗೆ ಹೋಗಿ ಇಸ್ಪೇಟ ಜೂಜಾಟ ಆಡುವ ಪ್ರವೃತ್ತಿವುಳ್ಳವರು ಇದ್ದರು ಅಂತಾ ತನಿಖೆಯಿಂದ ತಿಳೀದುಬಂದಿರುತ್ತದೆ. 
ದ್ವೀಚಕ್ರ ವಾಹನ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ರಮೇಶ ತಂದೆ ರಾಣಪ್ಪ ರೆಡ್ಡಿ ಸಾ: ಎಮ್.ಆರ್.ಎಮ್.ಸಿ  ಕಾಲೇಜ ಎದುರುಗಡೆ ಸುಂದರ ನಗರ ಸೇಡಂ ರೋಡ ಗುಲ್ಬರ್ಗಾ ರವರು ದಿನಾಂಕ: 29/04/2014 ರಂದು ರಾತ್ರಿ 9-00 ಗಂಟೆ ಸುಮಾರಿಗೆ ತನ್ನ ಹೀರೋಹೊಂಡಾ ಫ್ಯಾಶನ ಪ್ಲಸ್ ಮೋಟಾರ್ ಸೈಕಲ ನಂ ಕೆಎ-32 ಡಬ್ಲ್ಯೂ 0492 ನೇದ್ದು ಆಳಂದ ಚೆಕ್ ಪೊಸ್ಟದ  ಆಕಾಶ ದಾಬಾದ ಎದುರುಗಡೆ ನಿಲ್ಲಿಸಿ ಊಟ ಮಾಡಿಕೊಂಡು ಮರಳಿ 10-30 ಪಿಎಮ್ ಕ್ಕೆ ಬಂದು ನೋಡಲಾಗಿ ನನ್ನ ಮೋಟಾರ ಸೈಕಲ ಇದ್ದಿರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಸದರಿ ಮೋಟಾರ ಸೈಕಲ ಚೆಸ್ಸಿ ನಂ – MBLHA10EL99K04550 ಇಂಜಿನ ನಂ – HA10EB99KO4844  ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಸ್ವತ್ತು ಹಾಳು ಮಾಡಿ ಕಳವು ಮಾಡಿದಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಮುಜಿಬುರ್ ರೆಹಮಾನ್ ತಂದೆ ಅಬ್ದುಲ್ ನಬಿ ಸಾಬ್ ಸಾಃ ಮನೆ ನಂ. 4-601/76ಎ, ಎಂ.ಬಿ ನಗರ ಗುಲಬರ್ಗಾ ಇವರಿಗೆ ದಿನಾಂಕಃ 29/07/2014 ರಂದು 6.00 ಪಿಎಂ ಕ್ಕೆ ಆರೋಪಿತರಾದ 1) ಮಹ್ಮದ ಫೆರೋಜ್ ಅಹ್ಮದ 2) ಅಫ್ರೋಜ್ ಅಹ್ಮದ 3) ಶ್ರೀನಿವಾಸ 4) ಶಹನಾಜ್ ಬೇಗಂ ಗಂಡ ಮಹ್ಮದ್ ಫಿರೋಜ್ ಅಹ್ಮದ್ ಮತ್ತು 5) ಮಹ್ಮದ್ ಪಿರೋಜ್ ಅಹ್ಮದ್ ಇವರ ತಾಯಿ ಇವರೆಲ್ಲರು ಕೂಡಿಕೊಂಡು ಕೈಯಲ್ಲಿ ತಲವಾರ್ ಮತ್ತು ಇತರೆ ಆಯುಧಗಳನ್ನು ಹಿಡಿದು ಫಿರ್ಯಾದಿದಾರರ ಮನೆಗೆ ಬಂದು, ಫಿರ್ಯಾದುದಾರರ ಮನೆಯ ಬಾಗಿಲು, ಕಿಡಕಿ ಮುರಿದು ಮನೆಯಲ್ಲಿದ್ದ 1) ಒಂದು ಅಲಮಾರ 2) ಒಂದು ಬೋರವೆಲ್ ಪಂಪಸೆಟ್ ಮೋಟಾರ್ 3) ನಗದು ಹಣ 25,000/- ರೂ 4) 03 ಗ್ರಾಂ ಬಂಗಾರದ ಉಂಗುರ ಮತ್ತು ಎಲೆಕ್ಟ್ರಿಕಲ್ ಮೀಟರ್, ವಾಟರ್ ಟ್ಯಾಂಕ್ , ಮನೆ ಬಳಕೆಯ ಇತರೆ ಸಾಮಾನುಗಳನ್ನು ಆರೋಪಿತರು ಒಡೆದು ತೆಗೆದುಕೊಂಡು ಹೋಗಿದ್ದು, ಅಲ್ಲದೆ ನಮ್ಮನ್ನು ಅವಾಚ್ಯ ಶಬ್ದಗಳಿಂದ ಬೈದು, ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ನಾ ಬಸವೇಶವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.