POLICE BHAVAN KALABURAGI

POLICE BHAVAN KALABURAGI

26 January 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಗಳ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ: 25-01-2014  ರಂದು ಸಾಯಂಕಾಲ 5-10 ಗಂಟೆಗೆ ಗೊಬ್ಬುರ(ಬಿ) ಗ್ರಾಮದ ಎಸ್.ಬಿ.ಐ. ಬ್ಯಾಂಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ನಾನು ಮತ್ತು ಸಿಬ್ಬಂದಿ ಹಾಗು ಪಂಚರೋಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತಉ ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ 1. ಪ್ರಶಾಂತ ತಂದೆ ಕಲ್ಯಾಣರಾವ ಪೊಲೀಸ ಪಾಟೀಲ 2. ಅಸ್ಪಕ ತಂದೆ ಖಾಜಾಸಾಬ ವಟವಟಿ ಸಾ||ಗೊಬ್ಬೂರ[ಬಿ] 3.  ಮಹಿಬೂಬಸಾಬ ತಂದೆ ಅಬ್ದುಲ ಶಕ್ಯೂರ  ಸ್ಟೇಷನ ಸಾ|| ಗೊಬ್ಬೂರ[ಬಿ] 4. ಸಾಯಬಣ್ಣ ತಂದೆ ಬೀಂಶ್ಯಾ ಬೆಡಿ ಸಾ|| ಬೈರಾಮಡಗಿ  ನಾಲಕ್ಉ ಜನರನ್ನು ಹಿಡಿದು ಅವರಿಂದ  ಒಟ್ಟು 1760=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ದೇವಲ ಗಾಣಘಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಆಳಂದ ಠಾಣೆ : ಡಾ|| ಸುಧಾಕರ ಬಿಎಸ್ ಪಿಎಸ್‌ಐ ಅಬಕಾರಿ ಜಾರಿ & ಲಾಟರಿ ನಿಷೇಧ  ವಿಭಾಗ ಗುಲ್ಬರ್ಗಾ ರವರು ದಿನಾಂಕ 24-01-2014 ರಂದು 5 ಪಿಎಮ್‌ಕ್ಕೆ ಆಳಂದ ತಾಲೂಕಿನ ಜವಳಗಾ (ಜೆ) ಗ್ರಾಮದಿಂದ ಭಾತ್ಮೀ ಬಂದ ಮೇರೆಗೆ ನಾನು ಪಂಚರಿಗೆ ಕರೆಯಿಸಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲು ಜೂಜಾಟ ಆಡುತ್ತಿದ್ದ ಸಾರ್ವಜನಿಕರು ನಮ್ಮನ್ನು ನೋಡಿ ಓಡಿ ಹೋದರು, ಚೀಟಿ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದ ಅವನ ಹೆಸರು ಕಲ್ಲಪ್ಪಾ ತಂದೆ ಗುರುಲಿಂಗಪ್ಪಾ ಚಿಂಚೋಳಿ ವಯಾ|| 22 ಉ|| ಬೇಕಾರ ಸಾ|| ಜವಳಗಾ (ಜೆ) ತಾ|| ಆಳಂದ ಅವನ ಬಳಿ 1. 4 ಮಟಕಾ ನಂಬರದ ಚೀಟಿಗಳು ಅಂ ಕಿ 0000 2. ಒಂದು ಬಾಲ ಪೆನ್ ಅಂ ಕಿ 5 ರೂ 3. ನಗದು ಹಣ 2840 ರೂ  4. ಕಪ್ಪು ಬಣ್ಣದ ಸ್ಯಾಮಸಂಗ ಮೋಬಾಯಿಲ್ ಅಂ ಕಿ 1500 ರೂ 5. ಪ್ಲಾಟಿನಂ ಕೆಂಪು ಬಣ್ಣದ ಮೋ ಸೈಕಲ್ ನಂ ಎಮ ಹೆಚ್‌ 24 ಆರ್ 6475 ಅಂ ಕಿ 20000/- ಹೀಗೆ ಒಟ್ಟು 24,345/- ರೂ ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ಸಲ್ಲಿಸಿದ್ದರ ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಅಶೋಕ ನಗರ ಠಾಣೆ : ಶ್ರೀ ಮಡಿವಾಳಪ್ಪ ತಂದೆ ಶರಣಪ್ಪ ಮಾಳಿ ಸಾ : ತ್ರಿಪರಾಂತ ತಾ : ಬಸವಕಲ್ಯಾಣ ಜಿ :  ಬೀದರ ರವರು ಒಬ್ಬ  ಆರೋಪಿ ಹಾಗೂ ಮಾಲು ಸಮೇತ ಠಾಣೆಗೆ ಬಂದು ಲಿಖಿತ ಪಿರ್ಯಾದಿ ನೀಡಿದ್ದು ಅದರ ಸಂಕ್ಷಿಪ್ತ ಸಾರಾಂಶ ಏನೆಂದರೆ ದಿನಾಂಕ 25-01-2014 ರಂದು ರಾತ್ರಿ 10 ಗಂಟೆಗೆ ಎ.ಪಿ.ಎಂ.ಸಿ ಕಟ್ಟಡದಲ್ಲಿ ನಾನು ಮಲಗಿಕೊಂಡಿದ್ದು ದಿನಾಂಕ 26-01-2014ರಂದು ಸುಮಾರು 1 ಎ.ಎಂಕ್ಕೆ ಒಬ್ಬ ವ್ಯಕ್ತಿ ಎ.ಪಿ.ಎಂ.ಸಿ ಬಿಲ್ಡಿಂಗದಲ್ಲಿ ಬಂದು ಕಬ್ಬಿಣದ ತುಕಡಿಗಳನ್ನು (ಕಟ್ಟಡದ ಸಾಮಾನುಗಳು) ಒಂದು ಚಿಲದಲ್ಲಿ ಹಾಕಿಕೊಂಡು ಹೊಗುತ್ತಿದ್ದಾಗ ಶಬ್ದವಾಗಿರುವದರಿಂದ ನನಗೆ ಎಚ್ಚರವಾಗಿದ್ದು ಎದ್ದು ನೋಡಲು ಆ ವ್ಯಕ್ತಿ ಒಂದು ಚಿಲದಲ್ಲಿ ಕಬ್ಬಿಣ ಸಾಮಾನು ತೆಗೆದುಕೊಂಡು ಹೊಗುತ್ತಿದ್ದು ಅವನನ್ನು ಯಾರು ನೀನು ಎಂದು ಕೇಳಲು ಓಡಿ ಹೊಗುತ್ತಿದ್ದು ಆಗ ನಾನು ಬಾಜು ಬಿಲ್ಡಿಂಗದಲ್ಲಿ ಇದ್ದ ವಿಶ್ವನಾಥ ಇವರಿಗೆ ಕಳ್ಳ ಬಂದಿದ್ದಾನೆ ಬರ್ರಿ ಅಂತಾ ಚಿರಿದಾಗ ಆಗ ಅವರು ಬಂದಿದ್ದು ನಾನು ಅವರು ಕೂಡಿ ಕಳ್ಳ ಕಳ್ಳ ಅಂತ ಆತನ ಹಿಂದೆ ಬೆನ್ನು ಹತ್ತಿದಾಗ ಅಲ್ಲೆ ಎಂ.ಎಸ್.ಕೆ ಮಿಲ್ ಸ್ಟಾಫ್ ಕ್ವಾರ್ಟಸದಲ್ಲಿ ಇದ್ದ ಅಶೋಕಅರವಿಂದಪ್ರಶಾಂತ ರವರು ಬಂದು ಕತ್ತಲಲ್ಲಿ ಓಡಿ ಹೊದ ಕಳ್ಳನಿಗೆ ಹುಡುಕುತ್ತಿದ್ದಾಗ ಬಸವರಾಜ ಕಲಶೇಟ್ಟಿ ರವರ ಬಿಲ್ಡಿಂಗ ಮೇಲೆ ಕಳ್ಳ ಓಡಿ ಹೊಗಿದ್ದು ಬಿಲ್ಡಿಂಗ ಮಾಲಿಕರಾದ ಬಸವರಾಜ ಕಲಶೇಟ್ಟಿ ಅವರಿಗೆ ಪೊನ ಮಾಡಿ ಕರೆಯಿಸಿ ಬಿಲ್ಲಡಿಂಗ ಮೇಲಿದ್ದ ಕಳ್ಳನಿಗೆ ಕಳ್ಳತನ ಮಾಡಿದ ಕಬ್ಬಿಣದ ಸಣ್ಣ ರಾಡುಗಳಿರುವ ಚಿಲದೊಂದಿಗೆ ಹಿಡಿದುಕೊಂಡು ಎಲ್ಲರು ಕೂಡಿ ಕಳ್ಳನಿಗೆ ವಿಚಾರಿಸಲಾಗಿ ಆತನ ಹೆಸರು ಖಲೀಲ ತಂದೆ ಮಹೆಮೂದ ಲೊಹಾರ ಸಾ|| ಟಿಪ್ಪುಸುಲ್ತಾನ ಚೌಕ ಜೇವರ್ಗಿ ಅಂತ ತಿಳಿಸಿದನು ಆಗ ನಾವೆಲ್ಲರು ಕೂಡಿ ಕಳ್ಳನಿಗೆ ಮಾಲು ಸಮೇತವಾಗಿ ಪೊಲೀಸ್ ಠಾಣೆಗೆ ತಂದು ಕೊಟ್ಟಿರುತ್ತೆವೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಗ್ರಾಮೀಣ ಠಾಣೆ : ಶ್ರೀ ದಸ್ತಗಿರ ತಂದೆ ಹುಸೇನ್‌ ಸಾಬ್‌ ಚಿಂಚೋಳ್ಳಿ ಸಾ: ಭೀಮಳ್ಳಿ ತಾ: ಜಿಲ್ಲಾ ಗುಲಬರ್ಗಾ ಇವರ ತೋಟದ ಹೊಲ ಸರ್ವೇ ನಂ: 7ರಲ್ಲಿ ಹನಿ ನೀರಾವರಿ ಸಲುವಾಗಿ 16 ಎಂಎಂ 10 ಬಂಡಲ್‌ ಡ್ರೀಪ್‌‌ ಪೈಪುಗಳು ಇಟ್ಟಿದ್ದು ಸದರಿ ಪೈಪುಗಳು ದಿನಾಂಕ: 10-01-2014 ರಂದು ಬೆಳಿಗ್ಗೆ 9-00 ಗಂಟೆಗೆ ಪಿರ್ಯಾದಿದಾರ ನೋಡಲಾಗಿ ಸದರಿ ಪೈಪುಗಳು ದಿನಾಂಕ: 10-01-2014 ರಂದು ರಾತ್ರಿ 0100 ಗಂಟೆಯಿಂದ 0500 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವುಮಾಡಿಕೊಂಡು ಹೋಗಿದ್ದು ಸದರಿ ಪೈಪುಗಳು ಅಂದಾಜು ಕಿಮ್ಮತ್ತು 2,00,000/- ರೂ ಆಗುತ್ತಿದ್ದು ಪಿರ್ಯಾದಿದಾರ ಯಾರು ಕಳವುಮಾಡಿದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಮತ್ತು ಎಲ್ಲಾ ಕಡೆ ಹುಡುಕಾಡಲು ಇಂದು ದಿನಾಂಕ: 25-01-2014 ರಂದು ತಿಳಿದುಬಂದಿದ್ದೇನೆಂದರೆ ಕಾಂತಪ್ಪ ತಂದೆ ಅಪ್ಪಣ್ಣ ಸಾ: ಭೀಮಳ್ಳಿ ಈತನ ಹೊಲದಲ್ಲಿ ನಮ್ಮ 16 ಎಂಎಂ 19 ಡ್ರಿಪ್ಸ್‌‌ ಪೈಪುಗಳು  ಹೊಲದಲ್ಲಿ ಹೂಳಿ ಹಾಕಿದ್ದು ನೋಡಿರುತ್ತೇವೆ, ಮತ್ತು ಇನ್ನೂಳಿದ ಪೈಪುಗಳು ಯಾರು ಕಳವು ಮಾಡಿದ್ದಾರೆ ಎಂಬುದರ ಬಗ್ಗೆ ಗೊತ್ತಾಗಿರುವುದಿಲ್ಲ. ಕಾರಣ ನಮ್ಮ ತೋಟದ ಹೊಲದಲ್ಲಿ ಹಾಕಿದ್ದ 10 ಬಂಡಲ್‌ ಡ್ರಿಪ್ಸ್‌ ಪೈಪುಗಳು ಅ.ಕಿ 2,00,000/- ರೂ ಬೆಲೆ ಬಾಳುವ ಸಾಮಾನು ಕಳವು ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಲಕ್ಷತನದಿಂದ ಅಪಘಾತ ಪ್ರಕರಣ :
ಎಮ್.ಬಿ. ನಗರ ಠಾಣೆ : ಶ್ರೀ ಮಹಿಬೂಬಸಾಬ ತಂದೆ ಮಂಜಲೆ ಸಾಬ ಘಾಣೆವಾಲೆ ಸಾಃ ಪಸ್ತಾಪೂರ ತಾಃ ಚಿಂಚೋಳಿ ಹಾವಃ ಆಜಾದಪೂರ ಗುಲಬರ್ಗಾ ರವರಿಗೆ ದಿನಾಂಕಃ 25/01/2014 ರಂದು 01:00 ಪಿ.ಎಂ. ಕ್ಕೆ ಮಹ್ಮದ ಗೌಸ್ ಇವರು ಫೋನ್ ಮಾಡಿ ಬಸವೇಶ್ವರ ಆಸ್ಪತ್ರೆಗೆ ಬರಲು ತಿಳಿಸಿದ ಮೇರೆಗೆ 02:30 ಪಿ.ಎಂ. ಕ್ಕೆ ಬಸವೇಶ್ವರ ಆಸ್ಪತ್ರೆಗೆ ಬಂದು ಮಹ್ಮದ ಗೌಸ ಇತನಿಗೆ ವಿಚಾರಣೆ ಮಾಡಲಾಗಿ ಡಾಃ ನಿತಿನ್ ತಂದೆ ದಿಲಿಪ್ ಸಿಂಗ್ ಠಾಕೂರ ಇವರು ನಮಗೆ 09:00 ಗಂಟೆಗೆ ಕೆಲಸಕ್ಕೆ ಕರೆದುಕೊಂಡು ಹೋಗಿ ಅವರ ಮನೆಯ ಮುಂದೆ ನಿಂತಿರುವ ಲಾರಿ ನಂ. RJ 19 GB 2504 ನೇದ್ದರಲ್ಲಿನ ಮಾರ್ಬಲ್ ಕಲ್ಲುಗಳನ್ನು ಇಳಿಸಲು ಹಚ್ಚಿದರು. ಆಗ ನಾವು ಮಾರ್ಬಲ್ ಕಲ್ಲುಗಳು ಬಹಳ ದೊಡ್ಡ ಪ್ರಮಾಣದಲ್ಲಿವೆ ಅಂತಾ ಅಂದಾಗ ಲಾರಿ ಚಾಲಕ ಜಯರಾಮ ಇತನು ಇಂತಹ ಎಷ್ಟೋ ಲೋಡಗಳು ನಾವು ಇಳಿಸಿರುತ್ತೇವೆ ಬೇಗ ಬೇಗ ಇಳಿಸಿ ಅಂತಾ ಅಂದಿದ್ದು ಆಗ ನಾವು ಸದರಿ ಚಾಲಕನಿಗೆ ಸಮತಟ್ಟಾದ ಜಾಗದಲ್ಲಿ ನಿಲ್ಲಿಸು ಅಂತಾ ಹೇಳಿದೇವು. ಆಗ ಸದರಿ ಚಾಲಕನು ಸರಿಯಾದ ಜಾಗದಲ್ಲಿ ನಿಲ್ಲಿಸಿರುತ್ತೇನೆ ಬೇಗ ಇಳಿಸಿರಿ ಎಂದು ನಮಗೆ ದಬಾಯಿಸಿರುತ್ತಾನೆ. ಸದರಿ ಲಾರಿಯಲ್ಲಿದ್ದ ಮಾರ್ಬಲ್ ಕಲ್ಲುಗಳನ್ನು ಇಳಿಸುತ್ತಿರುವಾಗ ಒಮ್ಮೇಲೆ ಸುಮಾರು 10-15 ಕಲ್ಲುಗಳು ಮಹ್ಮದ ಇಸ್ಮಾಯಿಲ್ ಇತನ ಎದೆಯ ಮೇಲೆ ಬಿದ್ದು ಸದರಿಯವನು ಉಸಿರು ಗಟ್ಟಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಸದರಿ ಘಟನೆ ಸಂಭಂವಿಸಿದಾಗ ಅಂದಾಜು 11:00 ಎ.ಎಂ. ಆಗಿತ್ತು. ಸದರಿ ಘಟನೆಯಲ್ಲಿ ಸಿದ್ದು ಇತನಿಗೆ ಬಲಗೈಗೆ, ಶರಣಗೌಡ ಇತನಿಗೆ ಟೊಂಕದ ಹತ್ತಿರ, ಲಾರಿ ಚಾಲಕನಾದ ಜಯರಾಮ ಇತನಿಗೆ ಎಡಗೈಗೆ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಫತ್ತುಸಾಬ ತಂದೆ ಹುಸೇನಸಾಬ ಪೈಲವಾನ ಸಾ: ಇಟಗಾ(ಕೆ)  ದಿನಾಂಕ 24-01-2014 ರಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ನನ್ನ ಮಗ ಮೈನೋದ್ದೀನ ಈತನು ನಮ್ಮೂರಿನ ರಾಜ ಅಹ್ಮದ ಗುತ್ತಿಗೆದಾರರಲ್ಲಿ ಗುಲಬರ್ಗಾದಲ್ಲಿ ಕೆಲಸಕ್ಕಾಗಿ ನಮ್ಮ ಅಣ್ಣ ತಮ್ಮಕೀಯ ಬಾಬು ಫೈಲವಾನ, ಹುಸೇನಸಾಬ ಫೈಲವಾನ ಇವರೊಂದಿಗೆ ಹೋಗಿ ಸಾಯಂಕಾಲ ಮನೆಗೆ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿರುತ್ತಾನೆ.   ನಾನು ರಾತ್ರಿ 9 ಗಂಟೆಗೆ ಮನೆಯಲ್ಲಿ ಇದ್ದಾಗ ನಮ್ಮ ಅಣ್ಣತಮ್ಮಕಿಯ ಬಾಬು ಪೈಲವಾನ ಈತನು ಫೊನ ಮಾಡಿ ತಿಳಿಸಿದ್ದೇನೆಂದರೆ, ನಾನು ಮತ್ತು ನಿಮ್ಮ ಮಗ ಮೈನೊದ್ದೀನ ಇಬ್ಬರು ಕೂಡಿ ಗುಲಬರ್ಗಾದಿಂದ ಕೆಲಸ ಮುಗಿಸಿಕೊಂಡು ನಮ್ಮೂರಿಗೆ ಟಂ ಟಂ ಮೂಲಕ ಬರುವಾಗ ರಾಷ್ಟ್ರೀಯ ಹೆದ್ದಾರಿ 218 ರ ರಸ್ತೆ ಗುಲಬರ್ಗಾ ಜೇವರ್ಗಿ ರಸ್ತೆಯ ಮೇಲೆ ನಂದಿಕೂರ ತಾಂಡಾದ ಹತ್ತಿರ  ರಾತ್ರಿ 08-30 ಗಂಟೆಯ ಸುಮಾರಿಗೆ ಏಕಿ ಮಾಡಲು ಬಸ್ ನಿಲ್ದಾಣದ ಹತ್ತಿರ ಟಂ ಟಂ ನಿಲ್ಲಿಸಿದ್ದು, ಟಂ ಟಂ ದಿಂದ  ನಾನು ಮತ್ತು ಮೈನೊದ್ದೀನ ಇಳಿದ್ದೇವು. ಮೈನೊದ್ದೀನ ಈತನು  ಏಕಿ ಮಾಡಲು ಸ್ವಲ್ಪ ಮುಂದೆ ಹೋಗಿ ಏಕಿ ಮಾಡಿ ನನ್ನ ಕಡೆಗೆ ಬರುವಾಗ ಜೇವರ್ಗಿ ಕಡೆಯಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ರೋಡಿನ ಎಡಗಡೆ ಸೈಡಿಗೆ ಬಂದು ನಡೆದುಕೊಂಡು ಬರುತ್ತಿದ್ದ ಮೈನೊದ್ದೀನ ಈತನಿಗೆ ಡಿಕ್ಕಿ ಪಡಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಹೊಂದಿರುತ್ತಾನೆ. ಅಪಘಾತ ಪಡಿಸಿದ ಇನೊವಾ ಕಾರ ನಂಬರ ನೋಡಲಾಗಿ ಕೆಎ-05 ಎಮ್ ಎಫ್-6223 ನೇದ್ದು ಇದ್ದು ಅದರ ಚಾಲಕನು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ನಿಮ್ಮ ಮಗನ ಮೃತ ದೇಹವು ಫರಹತಾಬಾದ ಪೊಲೀಸರು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾ ತಗೆದುಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ದಿನಾಂಕ 25-01-14 ರಂದು  ಮಧ್ಯಾಹ್ನ 1-30 ಗಂಟೆ ಸುಮಾರಿಗೆ  ಕಲ್ಯಾಣರಾ ವ ತಂದೆ ಗುಂಡಪ್ಪ ಓಕಳಿ ಇವರು  ತನ್ನ ಹೊಂಡಾ ಸೈನ ಕೆಎ 32 ಇಸಿ 3341 ನೇದ್ದರ ಮೇಲೆ ಕುಳಿತುಕೊಂಡು ಗುಲಬರ್ಗಾದಿಂದ  ಓಕಳಿ ಕಡೆ ಅತಿವೇಗದಿಂದ  ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹೊರಟಿದ್ದು, ಕಪನೂರ ಬ್ರೀಡ್ಜ  ದಾಟಿ ಸ್ವಲ್ಪ ಮುಂದೆ  ಹೊರಟಾಗ ವೇಗದ ಆಯ ತಪ್ಪಿ ತನ್ನಷ್ಟಕ್ಕೆ  ತಾನೇ ಸ್ಕಿಡ ಆಗಿ ಬಿದ್ದಿದ್ದರಿಂದ ಭಾರಿ ರಕ್ತಗಾಯ  ಮತ್ತು ಗುಪ್ತಗಾಯಗಳಾದ ಬಗ್ಗೆ ಶ್ರೀ ರಮೇಶ ತಂದೆ ಗುಂಡಪ್ಪ ಓಕಳಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಅಮೃತ ತಂದೆ ಮಕಲು ಪಾರ್ದಿ ಸಾ: ಶೇಕಾಪೂರ ತಾಂಡ ರವರು ದಿನಾಂಕ 21-01-2014 ರಂದು ತನ್ನ ಕುರಿಗಳನ್ನು ಮೇಯಿಸಿಕೊಂಡು ಬರುವ ಕುರಿತು ಮುಂಜಾನೆ ಗುಳ್ಳೊಳಿ ಗ್ರಾಮ ಕಡೆಗೆ ಹೊಲಗಳಿಗೆ ಹೋಗಿ ಕುರಿ ಮೈಯಿಸಿಕೊಂಡು ಪೆರತ ನಮ್ಮ ತಾಂಡಾದ ಕಡೆಗೆ ಸಾಯಾಂಕಾಲ 7 ಗಂಟೆ ಸುಮಾರಿಗೆ ಬರುವಾಗ ಶೇಕಾಪೂರ ಗ್ರಾಮದ ಕ್ರಾಸ ಹತ್ತಿರ ಬರುವಾಗ ಎದುರಿನಿಂದ ಒಂದು ಕಂದು ಬಣ್ಣದ ಸ್ಕೂಟರ ಅದರ ಚಾಲಕನು ಸದರಿ ಸ್ಕೂಟರನ್ನು ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ ಓಡಿಸುತ್ತಾ ಬಂದವನೆ ನನ್ನ ಎಡಗಾಲಿಗೆ ಜೋರಾಗಿ ಡಿಕ್ಕಿ ಹೊಡೆದು ಅಫಘಾತ ಮಾಡಿದ್ದು ನಾನು ಕೆಳಗೆ ಬಿದ್ದೇನು. ನಂತರ ವಿಚಾರಿಸಲಾಗಿ ನನಗೆ ಅಫಘಾತವನ್ನು ಉಂಟು ಮಾಡಿದವನ ಹೆಸರು ಜೇಮಿಲ ಅಹ್ಮದ ಜೆರ್ದಿ ಸಾ: ಆಳಂದ ಆತನು ಚಲಾಯಿಸಿದ ದ್ವಿ ಚಕ್ರ ವಾಹನ ಹೊಂಡಾ ಎಕ್ಟಿವಾ ನಂ ಕೆಎ 26 ಎಲ್‌ 3575 ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಭಾರತಾಬಾಯಿ ಗಂಡ ವಿಜಯಕುಮಾರ ಚವ್ಹಾಣ ಸಾ|| ಚವಡಾಪೂರ ತಾಂಡಾ ಹಾ ವ|| ಹೊದಲೂರ ತಾಂಡಾ ತಾ|| ಆಳಂದ ರವರಿಗೆ ದಿನಾಂಕ 26/02/2012 ರಂದು ಅಫಜಲಪೂರ ತಾಲೂಕಿನ ಚವಡಾಪೂರ ತಾಂಡಾದ ವಿಜಯಕುಮಾರ ತಂದೆ ಪಾಂಡು ಚವ್ಹಾಣ ರವರೊಂದಿಗೆ ನಮ್ಮ ತಂದೆ ಬಾಬು, ತಾಯಿ ಸುಶೀಲಾಬಾಯಿ, ಹಾಗೂ ಇತರರು ಕೂಡಿ ಗುಲ್ಬರ್ಗಾದ ನಾಜ ಫಂಕ್ಷನ ಹಾಲ ದಲ್ಲಿ ಮದುವೆ ಮಾಡಿ ಕೊಟ್ಟಿರುತ್ತಾರೆ, ಮದುವೆ ಕಾಲದಲ್ಲಿ ನನ್ನ ಗಂಡನಿಗೆ 1 ಲಕ್ಷ ರೂಪಾಯಿ  ಹಾಗೂ 6 ತೋಲೆ ಬಂಗಾರ ವರೋಪಚಾರವಾಗಿ ಹಾಗೂ ಇತರೆ ಗೃಹ ಉಪಯೋಗಿ ಸಾಮಾನುಗಳು ಕೊಟ್ಟಿರುತ್ತಾರೆ, ನನ್ನ ಲಗ್ನವಾದ 6 ತಿಂಗಳವರೆಗೆ ನನಗೆ ಚನ್ನಗಾ ನೋಡಿಕೊಂಡು ನಂತರ  ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಇವರು ನನಗೆ ತವರು ಮನೆಯಿಂದ ಇನ್ನು ಹೆಚ್ಚಿಗೆ ಹಣ ತರಬೇಕು ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಪ್ರತಿ ದಿನ ಕಿರುಕುಳ ನೀಡುತ್ತಾ ಬಂದಿದ್ದು ನನ್ನ ತಂದೆಯವರು ಅಲ್ಲಿ ಇಲ್ಲಿ ಸಾಲ ಸೂಲ ಮಾಡಿ ಸದರಿ ಮೇಲಿನ ಹಣ ಹಾಗೂ ಬಂಗಾರ ನೀಡಿದ್ದು ಇವಾಗ ಅವರ ಹತ್ತಿರ ಯಾವುದೇ ಬಿಡಿಗಾಸು ಇರುವುದಿಲ್ಲ, ಅವರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ, ಇಂಥಹ ಸಮಯದಲ್ಲಿ ಅವರಿಗೆ ದುಡ್ಡು ಕೊಡುವದು ಆಗುವುದಿಲ್ಲ ಅಂತಾ ಹೇಳಿದ್ದಕ್ಕೆ ನನ್ನ ಗಂಡ ಹಾಗೂ ನಾದನಿ ಬೈಯುವದು ಕೈಯಿಂದ ಹೊಡೆಬಡೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡಿರುತ್ತರೆ   ದಿನಾಂಕ 02/12/2013 ರಂದು ನನ್ನ ಗಂಡ ಹಾಗೂ ನಾದನಿ ಕಾಂತುಬಾಯಿ ಕೂಡಿ ನಾನಿದ್ದ ನಮ್ಮ ತವರು ಮನೆಗೆ ಬಂದಾಗ  ನನಗೆ ವಿಚ್ಚೇದನೆ ಕೊಡು ಇಲ್ಲದಿದ್ದರೆ ಹಣ ತೆಗೆದುಕೊಂಡು ಬಾ ಅಂದು ಸಾಯಂಕಾಲ 5 ಗಂಟೆಗೆ ಜಗಳ ತೆಗೆದು ಅವರಿಬ್ಬರೂ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.