ಶಾಲಾ ಮುಖ್ಯ ಗುರುಗಳ ಮೇಲೆ ಎಸ.ಡಿ.ಎಮ್ ಸಿ ಅಧ್ಯಕ್ಷನಿಂದ ಹಲ್ಲೆ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಭೀಮಾಶಂಕರ  ತಂದೆ ನಾಗಪ್ಪ ಬಿರಾದಾರ ಮುಖ್ಯ ಗುರುಗಳು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಂತಗಿ ಗ್ರಾಮ  ತಾ|| ಆಳಂದರವರು ನಾನು ದಿನಾಂಕ:
16/01/2013 ರಂದು ಬೆಳಿಗ್ಗೆ  9-45 ಗಂಟೆಗೆ
ಶಾಲೆಗೆ ಬಂದು ಮಕ್ಕಳ  ಪ್ರಾರ್ಥನೆಯನ್ನು  ಮುಗಿಸಿ ನನ್ನ
ಕಾರ್ಯಾಲಯದ ಕೋಣೆಯಲ್ಲಿ  ಕರ್ತವ್ಯ
ನಿರ್ವಹಿಸುತ್ತಾ ಕುಳಿತ್ತಿರುವಾಗ ದೇವಂತಗಿ ಗ್ರಾಮದ ಎಸ್.ಡಿ.ಎಮ್.ಸಿ  ಅಧ್ಯಕ್ಷನಾದ  ಸಿದ್ದುಗೌಡ  ಎಸ್.ಪಾಟೀಲ  ಇವನು ನನ್ನ  ಕಾರ್ಯಾಲಯಕ್ಕೆ ಬಂದು
ಹೊಸ ಶಾಲಾ ಕೋಣೆಯ ಚೆಕ್ಕಿಗೆ ಸಹಿ ಮಾಡು ಅಂತ ಅಂದನು. ಅದಕ್ಕೆ ನಾನು ಪೂರ್ತಿ ಕೆಲಸ  ಆಗಿರುವುದಿಲ್ಲಾ, ನಂತರ ಚೆಕ್ಕಿಗೆ ಸಹಿ
ಮಾಡೋಣ ಅಂತಾ ಅಂದಿದ್ದಕ್ಕೆ ಅವಾಚ್ಯವಾಗಿ ಬೈದು ನಾನು  ಎಷ್ಟು ಹೇಳತಿನಿ ಅಷ್ಟು ಕೇಳು ಅಂತ ಅಂದವನೆ ನನಗೆ ಜಗ್ಗಿ   ಕೈಯಿಂದ ಕಪಾಳಕ್ಕೆ ಹೊಡೆದು  ಬೆನ್ನಿಗೆ ಹೊಡೆದು
ನೂಕಿ ಕೊಟ್ಟನು. ನೂಕಿ ಕೊಟ್ಟಿದ್ದರಿಂದ ಕಾರ್ಯಾಲಯದಲ್ಲಿದ್ದ  ಅಲಮಾರಿ ಹತ್ತಿರ  ಹೋಗಿ ಬಿದ್ದುದ್ದರಿಂದ
ತೆಲೆಯ  ಮುಂಬಾಗಕ್ಕೆ ರಕ್ತಗಾಯವಾಗಿರುತ್ತದೆ.  ಪುನಾಃ  ಸಿದ್ದು ಇವನು ಕಾಲಿನಿಂದ
ಒದ್ದನು, ಭೋಸಡಿ ಮಗನೆ ಮಾಸ್ಟರ  ನೀ ಇಲ್ಲಿ  ಹ್ಯಾಂಗ ನೌಕರಿ
ಮಾಡುತ್ತಿ  ನೋಡುತ್ತೆನೆ ಅಂತಾ
ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:04/2013
ಕಲಂ 323, 353, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ. 
ಕಳ್ಳತನ ಪ್ರಕರಣ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ:ಶ್ರೀ ಭಿಮಣ್ಣ
ತಂದೆ ನಂದಣ್ಣ ಅರಿಕೇರಿ ಉ|| ಅನಾಥ ಆಶ್ರಮದಲ್ಲಿ
ಮ್ಯಾನೇಜರ ಸಾ|| ಬೀಗುಡಿ ಹಾ||ವ||ದೇವಲಗಾಣಗಾಪೂರ
ತಾ|| ಅಫಜಲಪೂರ ರವರು ನಾವು ಸುಮಾರು 6 ತಿಂಗಳನಿಂದ ಕಮಲಾಬಾಯಿ ನಾಕಮನ ಇವರ ಮನೆಯಲ್ಲಿ ಬಾಡಿಗೆ ಇರುತ್ತೆವೆ.
ಜಾತ್ರೆಯ ನಿಮಿತ್ಯ ನಾವುಗಳು ನಮ್ಮ ಸ್ವ-ಗ್ರಾಮಕ್ಕೆ ಹೋಗಿದ್ದು, ಮನೆಯ ಮಾಲಿಕರು ಹೈದ್ರಾಬಾದಕ್ಕೆ ಹೋಗಿರುತ್ತಾರೆ.
ದಿನಾಂಕ:15-01-2013 ರ ರಾತ್ರಿ ವೇಳೆಯಲ್ಲಿ ಮನೆಯ ಬಾಗಿಲ ಕೀಲಿ ತೆರೆದು ಅಲ್ಮಾರಿಯಲ್ಲಿಟ್ಟಿದ್ದ
ಬಂಗಾರದ ಆಭರಣಗಳು ಅ||ಕಿ|| 12,000-00 ರೂ, ಮತ್ತು ಬೆಳ್ಳಿ ಅಭರಣಗಳು, ಎರಡು ಮೊಬಾಯಿಲ್ ಗಳು ಹೀಗೆ ಒಟ್ಟು 58 ಗ್ರಾಂ ಬಂಗಾರದ ಆಭರಗಣಗಳು  ಮತ್ತು 270 ಗ್ರಾಂ
ಬೆಳಿಯ ಆಭರಣಗಳ ಅಂದಾಜು ಕಿಮ್ಮತ್ತು. 1,89,000=00 ರೂಪಾಯಿಗಳ ಮೌಲ್ಯದ್ದು ಯಾರೋ
ಕಳ್ಳರು ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು
ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 06/2013 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ
ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
ಅಪಘಾತ ಪ್ರಕರಣ:
ಮುಧೋಳ ಪೊಲೀಸ್ ಠಾಣೆ:ಶ್ರೀಮತಿ, ದೇವಮ್ಮಾ ಗಂಡ ದೇವಪ್ಪಾ ಸಾ|| ಇಟ್ಲಾಪುರ ಆಂದ್ರ ಪ್ರದೇಶ ರಾಜ್ಯದವರು ನಾನು ಹಾಗು ಮೃತನಾದ ಗಂಗಪ್ಪಾ
ತಂದೆ ಶಾಮಪ್ಪಾ ಮತ್ತು ಇನ್ನಿತರರು ಕೂಡಿಕೊಂಡು  ಅಟೋ ನಂ:ಕೆಎ-32/ಎ-5281 ನೇದ್ದರಲ್ಲಿ ಕುಳಿತುಕೊಂಡು ಇಟ್ಕಲ್
ದಿಂದ ಕೊಲಕುಂದಾ ಕಡೆಗೆ ಹೊರಟಿದ್ದು ದಿನಾಂಕ:16-01-2013 ರಂದು ಮಧ್ಯಾಹ್ನ 3-30 ಗಂಟೆ
ಸುಮಾರಿಗೆ ಶಕಲಾಸಪಲ್ಲಿ ಗ್ರಾಮ ದಾಟಿ ಸ್ವಲ್ಪ ಮುಂದೆ ಬಂದಾಗ ಅಟೋ ಚಾಲಕನಾದ ಬಸವರಾಜ ತಂದೆ
ನಾಗಣ್ಣಾ ಇತನು ಅಟೋವನ್ನು ಅತಿವೇಗವಾಗಿ ಹಾಗು ನಿಸ್ಕಾಳಜಿತನದಿಂದ ನಡೆಯಿಸುತ್ತಿರುವಾಗ ಅಟೊ
ಪಲ್ಟಿಯಾಗಿ ಗಂಗಪ್ಪಾ ಇತನಿಗೆ ಭಾರಿ ಗಾಯವಾಗಿದ್ದು, ಉಪಚಾರ ಕುರಿತು ಸೇಡಂ ಆಸ್ಪತ್ರೆಗೆ
ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ. ಅಟೋ ಚಾಲಕನು ಓಡಿ ಹೋಗಿರುತ್ತಾನೆ
ಅಂತಾ ದೇವಮ್ಮಾ ಇವರು ಹೇಳಿಕೆ ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:07/2013 ಕಲಂ  279, 304 (ಎ) ಐಪಿಸಿ ಸಂಗಡ 187 ಐ.ಎಮ್ ವಿ ಆಕ್ಟ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
 
 
 
