POLICE BHAVAN KALABURAGI

POLICE BHAVAN KALABURAGI

27 August 2014

Gulbarga District Reported Crimes


ಮೂರು ಜನ ಅಂತರ್ ರಾಜ್ಯ ಮೋಟಾರ ಸೈಕಲ್ ಕಳ್ಳರ ಬಂದಿಸಿ ಅವರಿಂದ 16 ಮೋಟಾರ ಸೈಕಲಗಳನ್ನು ವಶಪಡಿಸಿಕೊಂಡಿದ್ದು
ಮಾನ್ಯ ಶ್ರೀ ಅಮೀತಸಿಂಗ್ ಎಸ್.ಪಿ.ಸಾಹೇಬ ಗುಲಬರ್ಗಾ,  ಮಾನ್ಯ ಶ್ರೀ ಬಿ. ಮಹಾಂತೇಶ ಅಪರ ಎಸ್.ಪಿ.ಸಾಹೇಬ ಗುಲಬರ್ಗಾ ಮತ್ತು ಮಾನ್ಯ ಶ್ರೀ ಉದಯಕುಮಾರ ಎಂ.ಬಿ. ಡಿ.ಎಸ್.ಪಿ. ಸಾಹೇಬ (ಬಿ) ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಚೌಕ ಪೊಲೀಸ ಠಾಣೆಯ ಪಿ.ಐ. ಶ್ರೀಉಮಾಶಂಕರ.ಬಿ. ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಅಂತರ್ ರಾಜ್ಯ ಮೋಟಾರ ಸೈಕಲ್ ಕಳ್ಳರ ಮಾಹಿತಿ ಸಂಗ್ರಹಿಸಿ ಚೌಕ ಠಾಣೆಯ ಶ್ರೀ ಪ್ರದೀಪಕೊಳ್ಳಾ ಪಿ.ಎಸ್.ಐ.(ಕಾ&ಸು). ಶ್ರೀ ಅಪ್ಪಾರಾವ ಎ.ಎಸ್.ಐ. ಶ್ರೀಬಸವರಾಜ. ಎ.ಎಸ್.ಐ. ಮತ್ತು ಸಿಬ್ಬಂದಿಯವರಾದ ಶಿವಾರಾಜ ಪಾಟೀಲ ಹೆಚ್.ಸಿ. ಮಹಾಂತೇಶ ಪಿಸಿವಿಶ್ವನಾಥ ಪಿಸಿ, ಶಿವಾನಂದ ಯಡ್ರಾಮಿ ಪಿಸಿ, ಬಂದೇನವಾಜ ಪಿಸಿ, ಪ್ರೇಮಸಿಂಗ್ ಪಿಸಿ, ಕೂಡಿಕೊಂಡು ಅಂತರ್ ರಾಜ್ಯ ಮೋಟಾರ ಸೈಕಲ್ ಕಳ್ಳರಾದ 1) ಅಮೂಲ ತಂದೆ ಆನಂದ ಕ್ಷೇತ್ರಿ ಸಾ ಕಿಣ್ಣಿ  ತಾಃ ಅಕ್ಕಲಕೋಟ್ ಜಿಃ ಸೋಲಾಪೂರ, 2) ಪರಶುರಾಮ @ ಪ್ರಶಾಂತ ತಂದೆ ಶಿವಾಜಿ ಸಾಸ್ವಿ ಸಾಃ ಕಿಣ್ಣಿ ತಾಃ ಅಕ್ಕಲಕೋಟ್ ಜಿಃ ಸೋಲಾಪೂರ, ಹಾಗೂ 3) ರಾಜೇಂದ್ರ @ ರಾಜು ತಂದೆ ಪ್ರಭುಲಿಂಗ್ ಸಾಃ ಧರ್ಮವಾಡಿ ತಾಃ ಆಳಂದ ಜಿಃ ಗುಲಬರ್ಗಾ ಇವರನ್ನು ದಿನಾಂಕ 27.08.2014 ರಂದು ದಸ್ತಗಿರ ಮಾಡಿ ಸದರಿಯವರು ಕಳ್ಳತನ ಮಾಡಿದ ಅಂದಾಜ 7 ಲಕ್ಷ 85 ಸಾವಿರ ರೂಪಾಯಿ ಬೆಲೆಬಾಳುವ ಒಟ್ಟು 16 ಮೋಟಾರ ಸೈಕಲಗಳನ್ನು ಜಪ್ತಿ ಮಾಡಿಕೊಂಡು ಸದರಿ ಮೂರು ಜನ ಮೋಟಾರ ಸೈಕಲ್ ಕಳ್ಳರಿಗೆ ದಸ್ತಗಿರ ಮಾಡಿ ನ್ಯಾಯಾಂಗ ಬಂಧನ ಕುರಿತು ಕಳುಹಿಸಲಾಗಿದೆ.

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂದನ :
ಅಫಜಲಪೂರ ಠಾಣೆ : ದಿನಾಂಕ:- 26/08/2014 ರಂದು ಬೆಳಿಗ್ಗೆ ಉಡಚಾಣ ಗ್ರಾಮದ ಹನುಮಂತ ದೇವರ ಗುಡಿಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ದುಂಡಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಇಸ್ಪೆಟ್ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಅಫಜಲಪೂರ ಃಆಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 1. ದೀಲಿಪ ತಂದೆ ಅಬುಬಕರ ಬಡದಾಳ 2. ಶಿವಾನಂದ ತಂದೆ ಅಣ್ಣಪ್ಪಾ ಮೇತ್ರ 3. ವಿಠಲ ತಂದೆ ಗಣಪತಿ ಕಡಲಗಿ 4. ಸಿದ್ಧರ್ಥ ತಂದೆ ನಿಂಗಪ್ಪ ದೊಡ್ಡಮನಿ 5. ಲಗಮಣ್ಣ ತಂದೆ ಕಾಸಣ್ಣಾ ಪೂಜಾರಿ 6. ಮಕ್ತುಮ ತಂದೆ ವಜೀರಸಾಬ ಮುಜಾವರ ಸಾ : ಎಲ್ಲರು ಉಡಚಣ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಿಸಿದ 52 ಇಸ್ಪೀಟ ಎಲೆಗಳನ್ನು ಮತ್ತು ನಗದು ಹಣ 1290/- ರೂ ಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಕುರಕುಂಟಾ ಠಾಣೆ : ಶ್ರೀ ಮಾಣಿಕಪ್ಪ ತಂದೆ ಈರಣ್ಣ ಕುಂದೇಲ್ ಸಾ: ಕುರಕುಂಟಾ ಇವರ ಮಗಳಾದ ವೀಣಾ ಇವಳು ದಿನಾಂಕ 18-07-2014 ರಂದು ಶಾಲೆಗೆ ಹೋದವಳು ಮನೆಗೆ ಬಂದಿಲ್ಲಾ ಅಂತ ಗೊತ್ತಾಗಿ  ನಾನು ಮತ್ತು ನನ್ನ ಹೆಂಡತಿ ಕೂಡಿ ಶಾಲೆಯ ಕಡೆಗೆ ಹೋಗಿ ಹುಡುಕಾಡಿದರೂ ಎಲ್ಲಿಯು ಅವಳ ಸುಳಿವು ಸಿಗಲಿಲ್ಲದ್ದರಿಂದ, ಮರುದಿವಸ ದಿನಾಂಕ: 19-07-2014 ರಂದು ಅವಳ ಶಾಲೆಗೆ ಹೋಗಿ ಮುಖ್ಯ ಗುರುಗಳಿಗೆ  ವಿಚಾರಿಸಲು ಆಗ ಅವರು ತಿಳಿಸಿದ್ದೇನೆಂದರೆ ನಿಮ್ಮ ಮಗಳಾದ ವೀಣಾ ಇವಳು ನಿನ್ನೆ ದಿವಸ ಮದ್ಯಾಹ್ನ 1230 ಗಮಟೆಯ ಸುಮಾರಿಗೆ ಆರಾಮ ಇರದ ಕಾರಣ ಮನೆಗೆ ಹೋಗುವುದಾಗಿ ಹೇಳಿ ಹೋದಳು ಅಂತ ತಿಳಿಸಿದರು. ಆಗ ನಾನು ಅವಳ ಗೆಳತಿಯರಿಗೆ ವಿಚಾರಿಸಿದಾಗ ಅವರು ಕೂಡ 1230 ಗಂಟೆಯ ಸುಮಾರಿಗೆ ಮನೆಗೆ ಹೋಗಿತ್ತೇನೆ ಅಂತ ಹೇಳಿ ಹೋದ ಬಗ್ಗೆ ತಿಳಿಸಿದರು. ನಂತರ ನಾವು ಇಲ್ಲಿಯ ವರೆಗೆ  ಎಲ್ಲಾ ಕಡೆಗೆ  ಹುಡುಕಾಡಿದರೂ ಮತ್ತು ನಮ್ಮ ಸಂಭಂದಿಕರಿಗೆ ಪೋನ್ ಮಾಡಿ ವಿಚಾರಿಸಿದರು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ  ಇದನ್ನು ನೋಡಿದಾಗ ನಮ್ಮ ಮಗಳಾದ ವೀಣಾ ಇವಳಿಗೆ  ದಿನಾಂಕ: 18-07-2014 ರಂದು ಮದ್ಯಾಹ್ನ 1300 ಗಂಟೆಯ ಸುಮಾರಿಗೆ ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕುರಕುಂಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಡುಗ ಕಾಣೆಯಾದ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಜಗದೇವಿ ಗಂಡ ಬಸಣ್ಣಾ ರೋಡಗಿ ಸಾ|| ನಿಂಬರ್ಗಾ ರವರ ತಂಗಿಯಾದ ಶಿವಲಿಲಾ ಇವರ ಮಗನಾದ ವೀರೆಶ @ ಕಿರಣ ತಂದೆ ಸಿದ್ದಣ್ಣ ಪೆದ್ದಿ ವ|| 17 ವರ್ಷ, ಇವನು 6 ವರ್ಷಗಳಿಂದ ನಮ್ಮ ಮನೆಯಲ್ಲಿಯೆ ಮತ್ತು ನಮ್ಮ ಊರಲ್ಲಿಯೆ ಶಿಕ್ಷಣ ಕಲಿಯುತ್ತಾ ಇದ್ದನು, ಈ ವರ್ಷ ಎಸ್.ಎಸ್.ಎಲ.ಸಿ ಪರೀಕ್ಷೆಯಲ್ಲಿ ಪಾಸಾಗಿರುತ್ತಾನೆ. ದಿನಾಂಕ 23/07/2014 ರಂದು ಬೆಳಿಗ್ಗೆ 1100 ಗಂಟೆ ಸುಮಾರಿಗೆ ನಾನು ಮನೆಯಲ್ಲಿದ್ದಾಗ ವೀರೆಶನು ನನ್ನ ತಂದೆ ತಾಯಿಯ ಜೀವ ನೆನಸುತ್ತಿದ್ದು ಊರಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ. ಸಾಯಂಕಾಲ 0600 ಗಂಟೆ ಸುಮಾರಿಗೆ ಅವನ ತಂದೆಯಾದ ಸಿದ್ದಣ್ಣಾ ಇವರಿಗೆ ನಾನು ಫೊನ ಮುಖಾಂತರ ವಿಚಾರಿಸಲಾಗಿ ವೀರೆಶ @ ಕಿರಣನು ಇಲ್ಲಿಗೆ ಬಂದಿರುವದಿಲ್ಲ ಅಂತ ತಿಳಿಸಿರುತ್ತಾರೆ. ಗಾಬರಿಯಾಗಿ ನಾನು ನಿಂಬರ್ಗಾ ಗ್ರಾಮದ ಬಸ ನಿಲ್ದಾಣ ಹಾಗೂ ಊರಿನ ಇತರೆ ಕಡೆಗಳಲ್ಲಿ ವಿಚಾರಿಸಲಾಗಿ ಅವನ ಬಗ್ಗೆ ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಸಂತೋಷ ಕುಮಾರ ತಂದೆ ಬಾಬುರಾವ ಬನಶಟ್ಟಿ ಸಾ:ಸಂತೋಷ ಕಾಲೋನಿ ಅಳಂದ ರಸ್ತೆ ಗುಲಬರ್ಗಾ ಇವರು ದಿನಾಂಕ:  26-08-2014 ರಂದು ಬೆಳಗ್ಗೆ ತನ್ನ ಹೆಂಡತಿ ಶೋಭಾವತಿ ಇವಳು ಕೆಲಸಕ್ಕೆಂದು  ಜೋಗುರ ಗ್ರಾಮಕ್ಕೆ ಹೋಗಿದ್ದು ನಾನು ನನ್ನ ಕೆಲಸಕ್ಕೆ 10 ಗಂಟೆಗೆ ಮನೆಯ ಬೀಗ ಹಾಕಿ ಹೋಗಿ ಮರಳಿ 2 ಗಂಟೆಗೆ ಮನೆಗೆ ಬಂದು ಊಟ ಮಾಡಿಕೊಂಡು ಮತ್ತೆ ಮನೆಗೆ ಬೀಗ ಹಾಕಿ ನನ್ನ ಕೆಲಸಕ್ಕೆ ಹೋಗಿದ್ದು ಮಧ್ಯಾನ 2-45 ಗಂಟೆ ಸುಮಾರಿಗೆ ನನ್ನ ಅಣ್ಣ ಸಂಜೀವಕುಮಾರ ಇವರು ನನಗೆ ಪೋನ ಮುಖಾಂತರ ತಿಳಿಸಿದ್ದೇನೆಂದರೆ ನಿಮ್ಮ ಮನೆಯ ಬಾಗಿಲು ತೆರೆದಿದ್ದು ಇರುತ್ತದೆ. ಅಂತಾ ತಿಳಿಸಿದ್ದರಿಂದ ನಾನು ಗಾಬರಿಯಾಗಿ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗಿಲು ತೆರೆದಿದ್ದು ಇದ್ದು ನಾನು ಮನೆಯ ಒಳಗೆ ಹೋಗಿ ನೋಡಲು ಮನೆಯ ಹಾಲಿನಲ್ಲಿದ್ದ 1 ಎಲ್‌.ಜಿ ಕಂಪನಿಯ ಎಲ್‌‌‌.ಸಿ.ಡಿ ಟಿ ವಿ ಮತ್ತು ಅಡಿಗೆ ರೂಮೀನಲ್ಲಿ ಹೋಗಿ ನೋಡಲು ಅಡಿಗೆ ರೂಮೀನಲ್ಲಿದ್ದ ಅಲಮಾರ ತೆರೆದಿದ್ದು ಅಲಮಾರದಲ್ಲಿದ್ದ ಬಂಗಾರದ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ  ಒಟ್ಟು 1,86,716/-ರೂ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಸಾಜೀದ ಅಹ್ಮದ ತಂದೆ ಸೈಯದ ಅಹ್ಮದ ನೆಂದರೆ ದಿನಾಂಕ 23-08-2014 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ತನ್ನ ಹೆಂಡತಿ ಚಿಟಿ ದುಡ್ಡು ತರುತ್ತೇನೆಂದು ಹೇಳಿ ರಾತ್ರಿ ಮನೆಗೆ ಬರದೇ ಮಗನಾದ ಫರೀದ ಈತನಿಗೆ ಪಕ್ಕದ ಮನೆಯಲ್ಲಿ ಮಲಗಿಕೊಳ್ಳುವಂತೆ ತಿಳಿಸಿದ್ದರಿಂದ ಫರೀದ ಈತನು ಪಕ್ಕದ ಮನೆಯ ಮಾಣಿಕ ಇವರ ಮನೆಯಲ್ಲಿ ಮಲಗಿಕೊಂಡು ಬೆಳಗ್ಗೆ ಮನೆಗೆ ಬಂದಾಗ ಅರುಣಾ ಇವಳು ಮನೆಯ ಮುಂದೆ ಮಲಗಿಕೊಂಡಿದ್ದು ಅವಳಿಗೆ ಗಾಯವಾಗಿದ್ದು ಅವಳನ್ನು ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಗಾಯಾಳು ಮನೆಗೆ ಬರುತ್ತಿರುವಾಗ ಯಾವುದೋ ವಾಹನ ಡಿಕ್ಕಿ ಪಡಿಸಿ ಹೋಗಿರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ನಾಗರತ್ನಾ ಗಂಡ ಶರಣಬಸವ ನಡುವಿನಮನಿ ಸಾ: ಮಲದಕಲ್ಲು ತಾ: ದೇವದುರ್ಗ ಜಿ: ರಾಯಚೂರ ಸದ್ಯ ಹಾ: ವ: ಐಯ್ಯರವಾಡಿ ಅಂಬಾಭವಾನಿ ಗುಡಿಯ ಹತ್ತಿರ ಗುಲಬರ್ಗಾ ರವರಿಗೆ ಮಲ್ಲದಕಲ್ಲು ಗ್ರಾಮದ ಗಂಗಪ್ಪ ತಂದೆ ಬಸಪ್ಪ ನಡುವಿನಮನಿ ಇವರ ಮಗನಾದ ಶರಣಬಸವನ ಜೊತೆ ನಮ್ಮ ಮನೆಯ ಹಿರಿಯರು ಗಂಡನ ಮನೆಯವರು ಎಲ್ಲರೂ ಕೂಡಿಕೊಂಡು ಮಾತುಕತೆ ಆಡಿ ಮಾತುಕತೆ ಸಮಯದಲ್ಲಿ ಮದುವೆಯ ವರದಕ್ಷಿಣೆಯಾಗಿ 14 ತೊಲೆ ಬಂಗಾರ ಹಾಗೂ ನಗದು ಹಣ 5 ಲಕ್ಷ ರೂ ನಗದು ಹಣ ಹಾಗೂ ಹುಡುಗನ ಮದುವೆ ಬಟ್ಟೆಗಾಗಿ 20 ಸಾವಿರ ರೂಪಾಯಿಗಳು ಹಾಗೂ ಸಂಪ್ರದಾಯದಂತೆ ಹಾಂಡೆ ಬಾಂಡೆ ಕೊಡಬೇಕು ಮದುವೆ ಮಾತ್ರ ಹುಡಗನ ಮನೆಯವರು ಮಾಡಿಕೊಳ್ಳಬೇಕು ಅಂತ ಮಾತುಕತೆ ಆಡಿ ದಿನಾಂಕ 25-01-2012 ರಂದು ಮದುವೆಯು ನಿಶ್ಚಿಯ ಮಾಡಿದ್ದು ಇರುತ್ತದೆ. ಸದರಿ ನಮ್ಮ ಹಿರಿಯರು ಹಾಗೂ ಗಂಡನ ಮನೆಯ ಹಿರಿಯರು ಮದುವೆ ನಿಶ್ಚಯದ ಸಮಯದಲ್ಲಿ ಮಾತುಕತೆ ಆಡಿದಂತೆ ಈ ಮೇಲಿನ ಬಂಗಾರ, ನಗದು ಹಣ ಹುಡುಗನ ಅಕ್ಷತಾ ಬಟ್ಟೆಯ ಹಣ ಎಲ್ಲವನ್ನು ಕೊಟ್ಟು ಅದರೊಂದಿಗೆ ವರೋಪಾಚಾರ ಅಂತಾ ಪಲಂಗ, ಅಲ್ಮಾರಿ, ಫ್ಯಾನು ಪ್ರೀಡ್ಜು, ಏರಕೂಲರ ಹಾಗೂ ದಿನ ನಿತ್ಯದ ವಸ್ತುಗಳಾದ ಹಾಂಡೆ, ಬಾಂಡೆ ಇನ್ನಿತರ ಸಾಮಾನುಗಳು ಒಟ್ಟು 2 ಲಕ್ಷ ಕಿಮ್ಮತ್ತಿನವುಗಳು ಹೀಗೆ ಒಟ್ಟು ಎಲ್ಲಾ ಸೇರಿ 11,34,000/- ರೂಪಾಯಿಗಳು ಕೊಟ್ಟು ಗಂಡನ ಮನೆಯ ಊರಾದ ಮಲದಕಲ್ಲ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ದಿನಾಂಕ 25-01-2012 ನೇ ಸಾಲಿನಲ್ಲಿ ನಮ್ಮ ಸಂಪ್ರದಾಯದಂತೆ ನಮ್ಮ ಮತ್ತು ಗಂಡನ ಮನೆಯವರ ಹಿರಿಯರ ಸಮಕ್ಷಮದಲ್ಲಿ ಮದುವೆ ಮಾಡಿಕೊಟ್ಟಿದ್ದು ದಿನಾಂಕ: 16-08-2014 ರಂದು ರಾತ್ರಿ 9-45 ಗಂಟೆಯ ಸುಮಾರಿಗೆ ನಾನು ಕರ್ತವ್ಯ ಮುಗಿಸಿಕೊಂಡು ನಾನು ವಾಸವಾಗಿರುವ ಮನೆಯ ಹತ್ತಿರ ಇರುವ ಮರಗಮ್ಮ ಗುಡಿಯ ಮುಂದೆ ನಡೆದುಕೊಂಡು ಹೋಗುವಾಗ ಅಲ್ಲಿ ಒಮ್ಮೇಲೆ ಎದುರಿಗೆ ಬಂದ ನನ್ನ ಗಂಡ ಶರಣಬಸವನು ನನಗೆ ಕೈ ಹಿಡಿದು ಜಗ್ಗಿ ರಂಡಿ ಕರಿ ಮೋತಿಯಕ್ಕೆ ನನ್ನ ಮನೆಗೆ ಪೊಲೀಸರಿಗೆ ಹ್ಯಾಂಗ ಕಳುಹಿಸಿದ್ದಿ ನಿನಗ ಎಷ್ಟು ಸೊಕ್ಕ ಅದೆ, ಯಾರೋ ಬಂದರು ನಾನು ನಿನ್ನ ಜೊತೆ ಸಂಸಾರ ಮಾಡಲ್ಲಾ, ನಾನು ತಿರುಗಾಡಲಿಕ್ಕೆ ಗಾಡಿ ತೊಗೋಬೇಕು ಅಂತ ಹಣ ತೊಗೊಂಡು ಬಾ ಅಂದರ ತಂದಿಲ್ಲಾ, ನೀನು ಗಾಡಿ ಮ್ಯಾಗ ಓಡಾಡತ್ತಿ ಸೂಳಿ ಅಂತಾ ಅವ್ಯಾಚ್ಛವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿ ನನ್ನ ಕೂದಲು ಹಿಡಿದು ಏಳೆದಾಡಿ ನನಗೆ ನೋಕಿಕೊಟ್ಟು ಇನ್ನೊಮ್ಮೆ ನೀನು ಪೊಲೀಸರಿಗೆ ನನ್ನ ಮನೆಗೆ ಕಳುಹಿಸಿದರೆ ನಿನಗೆ ಜೀವ ಸಹಿತ ಇಡುವುದಿಲ್ಲ ಅಂತ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.