POLICE BHAVAN KALABURAGI

POLICE BHAVAN KALABURAGI

25 April 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ನರೋಣಾ ಪೊಲೀಸ್ ಠಾಣೆ :ಶ್ರೀಮತಿ, ರಾಧಾ ಗಂಡ ಅಂಬರಾಯ ಬಾಚಿಂದೆ ಸಾ||ವಿ.ಕೆ.ಸಲಗರ ರವರು ನಾನು ಕಾಟ ಪಿನ್ನು ಮಾರಿಕೊಂಡು ನನ್ನ ಮಕ್ಕಳೊಂದಿಗೆ ಇರುತ್ತೆನೆ. ನನ್ನ ಗಂಡನು ಹೊಟ್ಟೆ ಪಾಡಿಗಾಗಿ ಬಾಂಬೆಗೆ ಹೋಗಿದ್ದು ನನ್ನ ಮೂರು ಜನರ ಸಣ್ಣ ಮಕ್ಕಳಳೊಂದಿಗೆ ಮನೆಯಲ್ಲಿಯೇ ಇರುತ್ತೆನೆ. ದಿನಾಂಕ: 24/04/2012 ರಂದು ರಾತ್ರಿ ನನ್ನ 2 ತಿಂಗಳ ಮಗುವಿಗೆ ಆರಾಮ ಇರದೆ ಇರುವದ್ದರಿಂದ ಮನೆಗೆ ಕೀಲಿ ಹಾಕಿಕೊಂಡು ಅಲ್ಲಿಯೇ ಇರುವ ಅತ್ತೆ ಮಾವರ ಮನೆಗೆ ಹೋಗಿದ್ದು ದಿನಾಂಕ: 25/04/2012 ರಂದು ಬೆಳಿಗ್ಗಿನ ಜಾವ 4-00 ಗಂಟೆಯ ಸುಮಾರಿಗೆ ಎದ್ದು ಮನೆಯ ಕಡೆಗೆ ಹೋದಾಗ ಮನೆಯ ಒಂದು ಬಾಗಿಲು ತೆಗೆದಿದ್ದು ಇನ್ನೊಂದು ಬಾಗಿಲಿಗೆ ಹಾಗೆ ಕೊಂಡಿಗೆ ಕೀಲಿ ಹಾಕಿದ್ದು ಇದ್ದು. ಒಳಗೆ ಹೋಗಿ ನೋಡಲು  ದೇವರ ಮನೆಯ ಎಲ್ಲಾ ಸಾಮಾನುಗಳು ಚಿಲ್ಲಾ ಪಿಲ್ಲಿಯಾಗಿದ್ದವು, ಮನೆಯ ಸಾಮಾನುಗಳು, ½ ತೊಲೆಯ ಬಂಗಾರ ಬೋರಮಳ, ಜುಮ್ಮಕಿ ,ಪದಕಾ ,ತಾಳಿ, ಮುರುಗಳು, ಬೆಳ್ಳಿಯ ಚೈನು , ಬಾದಮ ಗೆಜ್ಜೆ ಮತ್ತು ನಗದು ಹಣ 7,000 ರೂಪಾಯಿಗಳು ಒಟ್ಟು 24,000/- ಮೌಲ್ಯದವುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ್ 43/2012 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ ಗಂಗಾಧರ ತಂದೆ ಗುರುಲಿಂಗಪ್ಪ ನಾಯಕೋಡಿ ಸಾ:ಶೆಟ್ಟ ಹೂಡಾ ಗ್ರಾಮ, ತಾ:ಸೇಡಂ ರವರು ನನ್ನ ತಾತನಾದ (ಅಜ್ಜನಾದ) ಸಾಬಣ್ಣ ತಂದೆ ದೊಡ್ಡಪ್ಪ ನಾಯಕೊಡಿ ವಯ: 70 ವರ್ಷ,  ಇವರು ಮೂತ್ರ ವಿಸರ್ಜನೆ ಮಾಡಿ ಮರಳಿ ಮನೆಗೆ ಬರುತ್ತಿರುವಾಗ ಕಾರ್ ನಂ-ಕೆ.ಎ.09.ಎನ್.-6162 ನೇದ್ದರ ಚಾಲಕ ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಅಜ್ಜನಿಗೆ ಡಿಕ್ಕಿ ಪಡಿಸಿದ್ದರಿಂದ ಎಡ ಮುಂಗಾಲು ಮುರಿದಿದ್ದು ಎಡಗೈ ಮುರಿದಿದ್ದು, ಬಲಗಣ್ಣಿನ ಹುಬ್ಬಿಗೆ ಹಾಗೂ ಎಡಗಣ್ಣಿನ ಹುಬ್ಬಿಗೆ ರಕ್ತಗಾಯ ಹಾಗೂ ತಲೆಗೆ ರಕ್ತಗಾಯ ಹಾಗೂ ಬಲಗಾಲ ಮೊಳಕಾಲಿಗೆ ತರಚಿದ ಗಾಯಗಳಾಗಿದ್ದವು, ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು , ಉಪಚಾರ ಫಲಕಾರಿಯಾಗದೇ ಸಾಬಣ್ಣ ಇವರು ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 89/2012 ಕಲಂ, 279, 304 (ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DIST



ಅಪಜಲಪೂರ ಪೊಲೀಸ್ ರಿಂದ 3 ಜನರ ಬಂದನ, ಎರಡು ನಾಡ ಪಿಸ್ತೂಲ್, ಎರಡು ಜೀವಂತ ಗುಂಡುಗಳು ಜಪ್ತಿ:
ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ಪೊಲೀಸ್ ಅಧೀಕ್ಷಕರು,ಗುಲಬರ್ಗಾ ರವರು ಮತ್ತು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ  ಶ್ರೀ ಎಸ.ಬಿ.ಸಾಂಬ ಡಿಎಸಪಿ ಆಳಂದ ರವರ ನೇತ್ರತ್ವದಲ್ಲಿ ಶ್ರೀ ಕೆ.ರಾಜೇಂದ್ರ ಸಿಪಿಐ ಅಜಪಲಪೂರ ವೃತ್ತ  ಮತ್ತು ಶ್ರೀ, ಮಂಜುನಾಥ ಎಸ. ಪಿ.ಎಸ.ಐ ರವರು ಹಾಗು ಸಿಬ್ಬಂದಿಯವರಾದ  ರಾಮಚಂದ್ರ, ಜಗನಾಥ, ಅರವಿಂದ , ಶರಣು,  ರಾಜೇಂದ್ರ ರವರು ಸಂಶಯಾಸ್ಪದವಾಗಿ ಪಟ್ಟಣದ ಬ್ರಿಜ್ ಹತ್ತಿರ ಕುಳಿತಿದ್ದ ಇಬ್ಬರು ವ್ಯಕ್ತಿಗಳಾದ ರಪೀಕ @ ಸದ್ದಾಂ ತಂದೆ ಬಾಷಾ ಸಾಬ ಮುಲ್ಲಾ ವ| 20 ವರ್ಷ ಸಾ|| ಗೌರ (ಬಿ) ಅಪಜಲಪೂರ , ಅಶೋಕ ತಂದೆ ಶಿವಪ್ಪಾ ಕೊರಳ್ಳಿ ವ|| 22 ವರ್ಷ ಸಾ|| ಅಪಜಲಪೂರ ರವರನ್ನು ವಿಚಾರಣೆ ಮಾಡಿ ಅಂಗ ಶೋದನೆ ಮಾಡಲಾಗಿ,  ರಪೀಕ @ ಸದ್ದಾಂ ಇತನ ಹತ್ತಿರ ಒಂದು ನಾಡ ಪಿಸ್ತೂಲ್ ಇದ್ದು, ನಾಡ ಪಿಸ್ತೂಲ್ ಇಟ್ಟಿಕೊಂಡಿರುವ ಬಗ್ಗೆ ದಾಖಲಾತಿ ಮತ್ತು ಪರವಾನಿಗೆ ಬಗ್ಗೆ ವಿಚಾರಿಸಲು ಯಾವದೇ ದಾಖಲಾತಿ ನೀಡದೇ ಇರುವದರಿಂದ ನಾಡ ಪಿಸ್ತೂಲ್ ನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ಮಾಡಲಾಗಿ ಶ್ರೀಶೈಲ ಹರಣಾಳ ಸಾ|| ಗೌರ (ಬಿ) ರವರ ಹತ್ತಿರದಿಂದ ಇನ್ನೂ ಒಂದು ನಾಡ ಪಿಸ್ತೂಲ್ ಎರಡು ಜೀವಂತ ಗುಂಡುಗಳು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಪ್ರಕರಣ ಯಶಸ್ವಿಗೆ ಕಾರಣರಾದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಎಸ.ಪಿ ಗುಲಬರ್ಗಾ ರವರು ಪತ್ತೆ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಇಲಾಖಾ ವತಿಯಿಂದ 5000/- ರೂಪಾಯಿಗಳ ನಗದು ಬಹುಮಾನ ಘೊಷಿಸಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಮಹ್ಮದ  ನಿಜಾಮೋದ್ದಿನ  ತಂದೆ ಮಹ್ಮದ ಕರಿಮೋದ್ದಿನ   ಸಾ: ಮುಸ್ಲೀಂ ಚೌಕ ಗುಲಬರ್ಗಾರವರು ನನ್ನ ಸಂಬಂಧಿಯಾದ ಮಹಮದ ರಯಾನ ತಂದೆ ಸಲೀಮ ರವರು ಮತ್ತು ರಿಜ್ವಾನ ಖಾನ ರವರು ದಿನಾಂಕ:23-04-2012 ರಂದು  ರಾತ್ರಿ  10=30 ಗಂಟೆಗೆ ಇಬ್ಬರು ಕೂಡಿಕೊಂಡು ಕಣ್ಣಿ ಮಾರ್ಕೇಟ ಹತ್ತಿರ ವಾಕಿಂಗ ಮಾಡುತ್ತಾ  ಎಡಗಡೆಯಿಂದ ಬರುತ್ತಿದ್ದಾಗ  ಮೋಟಾರ ಸೈಕಲ್ ನಂ:ಕೆಎ 33 ಇ 5544 ನೇದ್ದರ ಸವಾರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಯಾನ ಈತನಿಗೆ ಡಿಕ್ಕಿ ಪಡಿಸಿ  ಭಾರಿಗಾಯ ಮತ್ತು ಗುಪ್ತಗೊಳಿಸಿ ತನ್ನ  ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:50/2012  ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಅನ್ನಪೂರ್ಣ ಗಂಡ ಪ್ರಮೋದಕುಮಾರ ರಾಠೋಡ ಸಾ|| ವಿಶಾಲ ನಗರ ತಾರಪೈಲ್ ಗುಲಬರ್ಗಾ ರವರು ನನ್ನ ಮಗನಾದ ಸಾಗರ  ತಂದೆ  ಪ್ರಮೋದಕುಮಾರ ರಾಠೋಡ   ವ:16  ವರ್ಷ ಉ: ವಿಧ್ಯಾರ್ಥಿ ಇತನು ದಿನಾಂಕ: 21-04-2012 ರಂದು ಸಾಯಂಕಾಲ 5 ಪಿ.ಎಮ್.ಕ್ಕೆ ಮನೆಗೆ ಬರುವ ಕುರಿತು ಡಿಪೋ ನಂ: 01 ನೇದ್ದರ ಎದುರಿನ ಬಸ್ ನಿಲ್ದಾಣ ಹತ್ತಿರ ಅಟೋರಿಕ್ಷಾ ಕ್ಕೆ ಹೋಗಲು ಕಾಯುತ್ತಾ ನಿಂತಿರುವಾಗ  ಅಟೋರೀಕ್ಷಾ ನಂ:ಕೆಎ 32- 7119 ರ ಚಾಲಕನು  ಎಸ್.ವಿ.ಪಿ.ಸರ್ಕಲ್ ಕಡೆಯಿಂದ  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಂತ ನನ್ನ ಮಗನಿಗೆ ಡಿಕ್ಕಿ ಪಡಿಸಿ  ಭಾರಿಗಾಯ ಅಟೋರಿಕ್ಷಾ  ಸಮೇತ ಚಾಲಕ ಓಡಿ ಹೋಗಿರುತ್ತಾನೆ ಅಂತಾ  ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:51/2012  ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ :ಶ್ರೀಮತಿ  ಅನ್ನಪೂರ್ಣ @ ಅರುಣಾ  ಗಂಡ ಅಡವಯ್ಯಾ ಮಠಪತಿ ಸಾ||ತಾವರಗೇರಾ ತಾ|| ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಮಗಳು ನಮ್ಮ ಗ್ರಾಮದ ಲಿಂಬಾಜಿ ದಾದಾ ಇವರು  ಮಾಹಾಂತಯ್ಯಾ ಸ್ವಾಮಿ ಹೊಲದಲ್ಲಿ ಬಂದಾರಿ ಸಮೀಪ  ಹೋಗಿ ನೋಡಲು  ಆತನು ನನ್ನ ಗಂಡನಾಗಿದ್ದು, ನನ್ನ ಗಂಡನನ್ನು ಯಾರೋ 3-4 ಜನರು ಸೇರಿಕೊಂಡು ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿ ಮುಖದ ತುಂಬೆಲ್ಲಾ  ಮಣ್ಣು ಹಾಕಿರುತ್ತಾರೆ. ಈ ಕೊಲೆಯು ದಿನಾಂಕ. 23-4-2012 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ. 24-4-2012 ರಂದು 6-00 ಎ.ಎಂ. ಮದ್ಯದ ಅವಧಿಯಲ್ಲಿ ಜರುಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ  ಗುನ್ನೆ ನಂ: 127/2012 ಕಲಂ  302 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಮೌಲಪಟೇಲ ತಂದೆ ಬಾವಾಪಟೇಲ ಸಾ||ಹೀರಾಪೂರ ತಾ: ಗುಲಬರ್ಗಾರವರು ನಮ್ಮ ಮನೆಗೆ ದಿನಾಂಕ: 24/4/2012 ರಂದು ಮುಂಜಾನೆ ನಮ್ಮ ಮನೆಗೆ ಮಹೇಬೂಬಪಟೇಲ ತಂದೆ ಸೈಯ್ಯದ ಪಟೇಲ ಇನ್ನೂ 5 ಜನರು ಸಾ: ಹೀರಾಪೂರ ರವರು  ಬಂದು ನಮ್ಮ ಜಾಗೆಯಲ್ಲಿ ಗೇಟ ಕಟ್ಟುವದಕ್ಕೆ ತಕರಾರು ಮಾಡುತ್ತೀರಿ ಅಂತಾ ಅವ್ಯಾಚ್ಚವಾಗಿ ಬೈದು ಬಡಿಗೆಯಿಂದ ಹೊಡೆ ಮಾಡಿ ಗುಪ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 128/2012 ಕಲಂ 143, 147 148 504 323 324 341 506 ಸಂ/ 149 ಐಪಿಸಿ ಪ್ರಕಾರ  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಆರೀಪ ಬೇಗಂ  ಗಂಡ ಸೈಯದ ಅಮ್ಜದ ಪಟೇಲ ಬಿದ್ದಾಪೂರ ಪಟೇಲ  ಸಾ: ಹೀರಾಪೂರ ತಾ: ಗುಲಬರ್ಗಾರವರು ನಮ್ಮ ಮನೆಯ ಗೋಡೆ ಕಟ್ಟುತ್ತಿದ್ದಾಗ ಮೌಲಾಲಿ ತಂದೆ  ಬಾವಪಟೇಲ ಇನ್ನೂ 6 ಜನರು ಸಾ: ಹೀರಾಪೂರ ರವರು ಗೇಟ ಕೂಡಿಸಬೇಡಿರಿ ಅಂತಾ  ತಕರಾರು ಮಾಡಿ ಅವ್ಯಾಚ್ಚವಾಗಿ ಬೈದು ನಮ್ಮ ಅತ್ತೆಗೆ ಹೊಡೆಯುತ್ತಿದ್ದಾಗ ಬಿಡಿಸಲು ಹೋದ ಕುತ್ತಿಗೆ ಹಿಡಿದು ಹೊಡೆ ಬಡೆ ಮಾಡಿ ಗುಪ್ತಗಾಯ ಮಾಡಿರುತ್ತಾರೆ ಮತ್ತು ತಕರಾರು ಮಾಡುತ್ತಿದ್ದಾಗ 13 ಗ್ರಾಂ  ಬಂಗಾರದ ಮಂಗಳ ಸೂತ್ರ ಕಳೆದು ಹೋಗಿರುತ್ತದೆ ಅಂತಾ  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 129/2012 ಕಲಂ 143, 147 323  504 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.