POLICE BHAVAN KALABURAGI

POLICE BHAVAN KALABURAGI

05 May 2016

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ದೇವಲ ಗಾಣಗಾಪೂರ ಠಾಣೆ : ದಿನಾಂಕ 04-05-2016 ರಂದು ಚವಡಾಪೂರ ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಬಾತ್ಮಿ ಮೇರೆಗೆ ಶ್ರೀ ಕಪೀಲ್ ದೇವ ಪಿ.ಐ ಡಿ.ಸಿ.ಬಿ ವಿಶೇಷ ಪೊಲೀಸ್ ಠಾಣೆ ಕಲಬುರಗಿ  ಹಾಗೂ  ಸಿಬ್ಬಂದಿ ಯವರು ಮತ್ತು ಪಂಚರೊಂದಿಗೆ ಬಾತ್ಮಿ ಸ್ಥಳವಾದ ಚವಡಾಪೂರ ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ  ಹೋಗಿ ಮರೆಯಲ್ಲಿ ನಿಂತು ನೋಡಲು ಒಬ್ಬನು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಅವನು ತನ್ನ ಹೆಸರು ಗದಿಗೇಪ್ಪ ತಂದೆ ದಾನಪ್ಪ ಯಳಸಂಗಿ ಸಾ|| ಮದರಾ (ಬಿ) ಅಂತಾ ತಿಳಿಸಿದ್ದು  ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿ, ಯಾರಿಗೆ ಕೊಡುತ್ತಿ ಎಂಬುದರ ಬಗ್ಗೆ ವಿಚಾರಿಸಲಾಗಿ ಸದರಿ ವ್ಯಕ್ತಿ ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು, ಮಟಕಾ ಚೀಟಿಗಳನ್ನು ಮತ್ತು ಹಣವನ್ನು ನಾನು ಯಾರಿಗೂ ಕೊಡುವದಿಲ್ಲ ನನ್ನ ಹತ್ತಿರ ಇಟ್ಟುಕೊಳ್ಳುತ್ತೆನೆ. ಅಂತಾ ತಿಳಿಸಿದನು  ನಂತರ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 5030/-ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ, ಮತ್ತು ಒಂದು ಬಾಲ ಪೆನ್ನು ರೂ ದೊರೆತವು, ಸದರಿಯವುಗಳನ್ನು ಪಂಚರ ಸಮಕ್ಷಮ ವಶಕ್ಕೆ ತೆಗೆದುಕೊಂಡು  ದೇವಲ ಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆತ್ಮ ಹತ್ಯೆ ಮಾಡಿಕೊಂಡ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಶಾಂತಪ್ಪ ತಂದೆ ಈರಗಂಟೆಪ್ಪ ದೊರೆ ಸಾ:ಮಲ್ಲಾಬಾದ ತಾ:ಜೇವರಗಿ ನಮಗೆ ಜಮೀನು 19 ಎಕರೆ 20 ಗುಂಟೆ ಇದ್ದು, ನನ್ನ ತಂದೆಯ ಹೆಸರಿನಲ್ಲಿ ಸರ್ವೆ ನಂ 71 ರಲ್ಲಿ 3 ಎಕರೆ 20 ಗೂಂಟೆ ಜಮೀನು ಇದ್ದು, ಆ ಜಮೀನಿನ ಮೆಲೆ ನನ್ನ ತಂದೆ ಈರಗಂಟೆಪ್ಪ ಇತನು ಪ್ರಗತಿ ಕೃಷ್ನಾ ಗ್ರಾಮೀಣ ಬ್ಯಾಂಕ ಬಳಬಟ್ಟಿಯಲ್ಲಿ ಈಗ 1 ವರ್ಷದ ಹಿಂದೆ 1 ಲಕ್ಷ ರೂ ಬೆಳೆ ಸಾಲ ಪಡೆದುಕೊಂಡಿರುತ್ತಾರೆ. ನನ್ನ ಹಾಗು ನನ್ನ ಅಣ್ಣಂದಿರರಾದ ಬಸಲಿಂಗಪ್ಪ, ತಮ್ಮಂದಿರಾದ ಹಳ್ಳೆಪ್ಪ, ಬಸಪ್ಪ, ಹೀಗೆಲ್ಲರ ಹೆಸರಿನಲ್ಲಿ ಅಂದರೆ ನನ್ನ ಅಣ್ಣ ಬಸಲಿಂಗಪ್ಪ ಇವರ ಹೆಸರಿನಲ್ಲಿ ಸರ್ವೆ ನಂ: 183 , 4 ಎಕರೆ ನನ್ನ ಹೆಸರಿನಲ್ಲಿ, ಹೊಲ ಸರ್ವೆ ನಂ 40 , 4 ಎಕರೆ ತಮ್ಮಂದಿರಾದ ಬಸಪ್ಪನ ಹೊಲ ಸರ್ವೇ ನಂ: 40, 4ಎಕರೆ,  ಹಳ್ಳೆಪ್ಪನ ಹೊಲ ಸರ್ವೆ ನಂ: 114, 4 ಎಕರೆ ಹೊಲಗಳಿದ್ದು, ನಾವೆಲ್ಲರೂ ಈಗ ಸುಮಾರು 2 ವರ್ಷಗಳಿಂದ ಬೆಳೆ ಸಾಲ 4 ಲಕ್ಷ ರೂಪಾಯಿಗಳು ಸಾಲವನ್ನು ಪಡೆದುಕೊಂಡಿರುತ್ತೇವೆ. ಅಲ್ಲದೆ ನಮ್ಮ ತಂದೆ ಹೊಲ ಸಾಗುವಳಿ ಗೊಬ್ಬರ, ಮಕ್ಕಳ ಲಗ್ನಕ್ಕಾಗಿ ಸುಮಾರು 8 ಲಕ್ಷ ರೂಪಾಯಿ ಖಾಸಗಿಯಾಗಿ ನಮ್ಮ ತಂದೆ ಸಾಲ ಮಾಡಿಕೊಂಡಿದ್ದು, ಅವರು ಆಗಾಗ ನಮ್ಮ ಎದುರಿಗೆ ಪ್ರಗತಿ ಕೃಷ್ಣಾ ಬ್ಯಾಂಕಿನಲ್ಲಿ ಸಾಲ ಖಾಸಗಿ ಸಾಲ ಹೇಗೆ ತಿರಿಸುವುದು ಅಂತಾ ನಮಗೆ ಆಗಾಗ ಈ ಸಾಲವನ್ನು ಮಳೆ ಬಾರದೆ ಬೆಳೆ ಬೆಳೆಯದೆ ಸಾಲ ತೀರಿಸುವುದು ಹೇಗೆ ಅಂತಾ ನಾನು ಇರುವುದಕ್ಕಿಂತ ಸಾಯಿವುದು ಮೇಲು ಅಂದು ಹೇಳುತ್ತಿದ್ದಾಗ ನಮ್ಮ ಅಣ್ಣಂದಿರೆಲ್ಲರು ಸೇರಿ ಮನೆಯಲ್ಲಿ ಹೊಲ ಬೆಳೆಯದೆ ಇದ್ದರು ನಾವು ದುಡಿದು ಮುಟ್ಟಿಸೋಣ ಎಂದು ಹೇಳುತ್ತಿದ್ದೇವು.ದಿನಾಂಕ 04-05-16 ರಂದು ಬೆಳಗ್ಗೆ ನಾವೆಲ್ಲರೂ ಹೊಲಕ್ಕೆ ಹೋದೆವು. ನನ್ನ ತಾಯಿ ಹಾಗೂ ತಂದೆ ಮನೆಯಲ್ಲಿದ್ದರು. ಬೆಳಗ್ಗೆ 8-30ಗಂಟೆ ಸುಮಾರಿಗೆ ಹೊಲದಲ್ಲಿದ್ದಾಗ ಮನೆಯಿಂದ ಪೋನ ಮಾಡಿ ನಿಮ್ಮ ತಂದೆ ಈರಗಂಟೆಪ್ಪ ಯಾವುದೊ ಕ್ರಮಿನಾಶಕ ಔಷಧ ಸೇವಿಸಿ ಒದ್ದಾಡುತ್ತಿದ್ದಾನೆ ಅಂತಾ ಹೇಳಿದ ಕೂಡಲೆ ನಾನು ಹೊಲದಿಂದ ಬಂದು ನೋಡಿದಾಗ ನನ್ನ ತಂದೆ ವಾಂತಿ ಮಾಡಿಕೊಳ್ಳುತ್ತಿದ್ದು, ನಾನು ನನ್ನ ತಮ್ಮ ಪರಪ್ಪ ಇಬ್ಬರೂ ಕೂಡಿಕೊಂಡು ಖಾಸಗಿ ವಾಹನದಲ್ಲಿ ನನ್ನ ತಂದೆಯನ್ನು ಕೂಡಿಸಿಕೊಂಡು ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಸೇರಿಸಿದೇವು. ಅಲ್ಲಿ ನನ್ನ ತಂದೆ ಉಪಚಾರ ಪಡೆಯುತ್ತಾ ಹೆಳಿದ್ದೇನೆಂದರೆ ಸಾಲ ತುಂಬಾ ಆಗಿದೆ ಸಾಲ ತೀರಸುವುದು ಹೇಗೆ ಅಂತಾ ನಾನು ಯಾರು ಇಲ್ಲದಿದ್ದಾಗ ಕ್ರಮಿನಾಶಕ ಔಷಧಿ ಸೇವನೆ ಮಾಡಿದ್ದೇನೆ ಅಂತಾ ಹೇಳಿ ಉಪಚಾರ ಪಡೆಯುತ್ತಾ ಉಪಚಾರದಲ್ಲಿ ಫಲಕಾರಿಯಾಗದೆ ನನ್ನ ತಂದೆ 11-50 ಗಂಟೆಗೆ ಮೃತಪಟ್ಟಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಸುರೇಶ ತಂದೆ ಹಣಮಂತ ಅಂಜುಟಗಿ ಸಾ|| ಶಿರವಾಳ ಇವರು ಈಗ ಕೆಲವು ದಿನಗಳ ಹಿಂದೆ ನಮ್ಮ ಎರಡನೆ ಅಣ್ಣ ತಮ್ಮಕಿಯ ಸತೀಶ ತಂದೆ ಗೌವಣ್ಣ ಅಂಜುಟಗಿ ಈತನ ಹೆಂಡತಿ ಮದುಮತಿ ಇವಳು ತಿರಿಕೊಂಡಿರುತ್ತಾಳೆ. ಸದರಿ ಮದುಮತಿಯ ಸಾವಿನ ಬಗ್ಗೆ ನಾನು ಏನೆನೋ ಮಾತಾಡಿದ್ದೆನೆ ಅಂತಾ ಸದರಿ ಸತೀಶ ನನ್ನ ಮೇಲೆ ದ್ವೇಷ ಮಾಡಿಕೊಂಡಿರುತ್ತಾನೆ. ದಿನಾಂಕ 04-05-2016 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ನಾನು ನಮ್ಮೂರಿನ ಧಾನಯ್ಯ ಹಿರೆಮಠ ರವರ ಕಿರಾಣಿ ಅಂಗಡಿಯ ಮುಂದೆ ನಿಂತಿದ್ದಾಗ ನನ್ನ ಮೇಲೆ ದ್ವೇಷ ಮಾಡಿಕೊಂಡ 1) ಸತೀಶ ತಂದೆ ಗೌವಣ್ಣ ಅಂಜುಟಗಿ 2) ಸುರೇಶ ತಂದೆ ಗೌವಣ್ಣ ಅಂಜುಟಗಿ 3) ಕಾಶಿರಾಯ ತಂದೆ ಶಂಕರ ಅಂಜುಟಗಿ ಸಾ|| ಎಲ್ಲರೂ ಶಿರವಾಳ ಗ್ರಾಮ ಇವರು ನನ್ನ ಹತ್ತಿರ ಬಂದು ಎಲ್ಲರೂ ನನಗೆ ಏನೋ ಬೋಸಡಿ ಮಗನೆ ನಮ್ಮ ಮನೆಯ ಹೆಣ್ಣು ಮಗಳ ಸಾವಿನ ಬಗ್ಗೆ ಏನು ಮಾತಾಡುತ್ತಿ ಅಂತಾ ವಿನಾಕಾರಣ ನನಗೆ ಹೊಲಸು ಹೊಲಸು ಬೈಯುತ್ತಿದ್ದರು, ಆಗ ನಾನು ಯಾಕ ಬೈತಿರಿ ನಾನೇನು ಮಾತಡಿಲ್ಲಾ ಅಂತಾ ಹೇಳಿದೆನು, ಅದಕ್ಕೆ ಮೂರು ಜನರು ನನಗೆ ತಳ್ಳಾಡಿ ಎದೆಯ ಮೇಲಿನ ಅಂಗಿ ಹಿಡಿಯುವುದು ಮಾಡಿದರು, ಅವರಲ್ಲಿ ಸತೀಶ ಈತನು ಅಲ್ಲಿಯೆ ಬಿದ್ದ ಒಂದು ಬಿದಿರು ಬಡಿಗೆಯನ್ನು ತಗೆದುಕೊಂಡು ಬಂದು, ಸದರಿ ಬಡಿಗೆಯಿಂದ ನನ್ನ ಬಲಗೈ ಹೊಡೆದನು. ಸದರಿಯವರು ನನಗೆ ಹೊಡೆಯುವುತ್ತಿದ್ದಾಗ ಕಿರಾಣಿ ಅಂಗಡಿಯಲ್ಲಿದ್ದ ದಾನಯ್ಯ ಹಿರೆಮಠ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿದರು, ಆಗ ಸದರಿ ಮೂರು ಜನರು ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವ ಬೇದರಿಕೆ ಹಾಕಿ ಬಡಿಗೆ ಅಲ್ಲೆ ಬಿಸಾಕಿ ಮೂರು ಜನರು ಅಲ್ಲಿಂದ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.