POLICE BHAVAN KALABURAGI

POLICE BHAVAN KALABURAGI

03 December 2011

GULBARGA DIST REPORTED CRIMES

ಅಪಹರಣ ಪ್ರಕರಣ:

ಶಹಾಬಾದ ನಗರ ಠಾಣೆ: ಶ್ರೀ ರಾಜು ತಂದೆ ರೈಯಾತ ಚಾವರಿಯಾ ಸಾ:ಕೊಳಸಫೈಲ ಶಹಾಬಾದ ರವರು ನಾನು ನನ್ನ ಹೆಂಡತಿ ಮಕ್ಕಳು ದಿನಾಂಕ 13/11/11 ರಂದು ರಾತ್ರಿ 11-30 ಮಲಗಿಕೊಂಡೆವು ನಂತರ ರಾತ್ರಿ ಗಂಟೆ ಸುಮಾರಿಗೆ ನಿದ್ದೆಯಿಂದ ಎದ್ದು ನೋಡಲು ಮಗಳು ಜ್ಯೋತಿ ಇವಳು ಮನೆಯಲ್ಲಿ ಇರಲಿಲ್ಲಾ ನಾವು ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ ನಮ್ಮ ಮನೆ ಹತ್ತಿರ ಇರುವ ಅಬ್ರಾಹಿಂ ತಂದೆ ಪ್ಲೇಚರ ಇವನು ನನ್ನ ಮಗಳನ್ನು ತನ್ನ ತಾಯಿ, ಅಣ್ಣ, ಅಕ್ಕ ಇವರ ಪ್ರಚೋದನೆಯಿಂದ ನನ್ನ ಮಗಳಿಗೆ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 185/2011 ಕಲಂ 366 (ಎ) 109 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮೋಸ ವಂಚನೆ ಪ್ರಕರಣ:

ಆಳಂದ ಪೊಲೀಸ ಠಾಣೆ: ಆಳಂದ ಪಟ್ಟಣದ ಶ್ರೀರಾಮ ಮಾರ್ಕೆಟ ಹನುಮಾನ ಮಂದಿರದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ 1 ರೂ ಗೆ 80 ರೂಪಾಯಿ ಗೆಲ್ಲಿರಿ ಮಟಕಾ ಚೀಟಿ ಬರೆಯಿಸಿರಿ ಅಂತಾ ಜನರಿಗೆ ಮೋಸ ಮಾಡುವ ಉದ್ದೇಶದಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದರಿಂದ ಪಿ.ಎಸ್.ಐ ಆಳಂದ ರವರು ಮತ್ತು ಠಾಣೆಯ ಸಿಬ್ಬಂದಿಯವರಾದ ಸಿದ್ದಾರಾಮ, ಶೇಖಮಹಿಬೂಬ, ಬಾಬು ಪಾಟೀಲ ರವರೊಂದಿಗೆ ದಾಳಿ ಮಾಡಿ ಆತನ ಹೆಸರು ಆನಂದ ತಂದೆ ಲಕ್ಷ್ಮಣ ಜಂಗಲೆ ಸಾ:ಬೀಮ ನಗರ ಆಳಂದ ಅಂತಾ ತಿಳಿಸಿದ್ದು ಆತನಿಂದ ನಗದು ಹಣ 380/, ಮಟಕಾ ಚೀಟಿಗಳು ಜಪ್ತಿ ಮಾಡಿಕೊಂಡು ಠಾಣೆ ಗುನ್ನೆ ನಂ: 281/2011 ಕಲಂ 420 ಐಪಿಸಿ ಮತ್ತು 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಜಾತಿ ನಿಂದನೆ ಪ್ರಕರಣ:

ವಾಡಿ ಪೊಲೀಸ ಠಾಣೆ : ಶ್ರೀ ಮಲ್ಲಪ್ಪ ತಂದೆ ಸಿದ್ದಪ್ಪ ಕದ್ಯಾಪೂರ ಸಾ| ಕನಗನಹಳ್ಳಿ ವರು ನನ್ನದು ಕನಗನಹಳ್ಳಿ ಸೀಮಾಂತರದಲ್ಲಿ 6 ಎಕರೆ ಹೊಲ ಇದ್ದು ಈ ವರ್ಷ ಹತ್ತಿ ಹಾಗು ಜೋಳ ಬಿತತ್ಇರುತ್ತೆನೆ .ದಿನಾಂಕ 02-12-2011 ರಂದು ಮುಂಜಾನೆ ನನ್ನ ಹೆಂಡತಿ ಲಕ್ಷ್ಮಿ ತಾಯಿ, ದೇವಕಿ, ತಂಗಿ ಸುನೀತ, ಸೊಸೆ ಪಾರ್ವತಿ, ಅತ್ತೆ ಹೂವಮ್ಮ, ಎಲ್ಲರು ಕೂಡಿ ಹತ್ತಿ ಬಿಡಿಸಲು ಹೊಲಕ್ಕೆ ಹೋದರು. ನಮ್ಮ ಹೊಲದ ಹತ್ತಿರ ಇರುವ ಮಹೆಬೂಬ ಅಲಿ ಡಂಗೆ, ಹುಸೇನ ಪಟೆಲ ಇವರ ಹೊಲ ಇದ್ದು ಅವರು ಸಹ ಹಳ್ಳದಿಂದ ತಮ್ಮ ಹೊಲಕ್ಕೆ ನಮ್ಮ ಹೊಲದಿಂದ ಪೈಪಲೈನ ಹಾಕಿದ್ದಾರೆ, ನಾನು ಸಾಯಂಕಾಲ 4-30 ಗಂಟೆ ಸುಮಾರಿಗೆ ಬಿಡಿಸಿದ ಹತ್ತಿಯ ಚೀಲಗಳು ತರಲು ಹೊಲಕ್ಕೆ ಹೋದೆನು. ಆಗ ನನ್ನ ಹೆಂಡತಿ ಮತ್ತು ತಾಯಿಯವರು ಮದ್ಯಾನ 12-00 ಗಂಟೆಯ ಸುಮಾರಿಗೆ ನಮಗೆ ನೀರಡಿಕೆ ಆಗಿದ್ದರಿಂದ ನಮ್ಮ ಹೊಲದಿಂದ ಹೋದ ಪೈಪಲೈನ ಸ್ವಲ್ಪ ಹೊಡೆದಿದ್ದು ಅಲ್ಲಿ ನೀರು ಹಿಡಿದು ಕುಡಿಯುತ್ತಿದ್ದೆವು. ಆಗ ಪಕ್ಕದ ಹೊಲದವರಾದ ಹುಸೇನ ಪಟೆಲ್ ತಂದೆ ಅಬ್ದುಲ ಪಟೆಲ್ ಮತ್ತು ಆತನ ಮಗ ಬಾಷಾ ಪಟೆಲ್ ಇಬ್ಬರು ಬಂದು ನಮಗೆ " ಏ ಪೈಪಲೈನದಲ್ಲಿಯ ನೀರು ಯಾಕೆ ಕುಡಿಯುತ್ತೀರಿ, ನಿಮ್ಮದು ಬಹಳ ಆಗಿದೆ ಅಂತ ಬೈದಿರುತ್ತಾರೆ ನಾನು ಯಾಕೆ ನಮ್ಮ ಹೆಣ್ಣು ಮಕ್ಕಳಿಗೆ ಬೈದಿದ್ದೀರಿ ಅಂತ ಕೇಳಿದರೆ ಹುಸೇನ ಪಟೆಲ್ ಮತ್ತು ಬಾಷಾ ಇವರು ಲೇ ಹೊಲೆಯ ಸುಳೆ ಮಗನೆ ನಿಮ್ಮದು ಬಹಳ ಆಗಿದೆ, ಅಂತ ಜಾತಿ ಎತ್ತಿ ಬೈದು, ಹುಸೇನ ಪಟೆಲ್ ಕೈಯಿಂದ ಹೊಡೆಯ ಹತ್ತಿದನು ಮತ್ತು ಬಾಷಾ ಕಲ್ಲಿನಿಂದ ಹೊಡೆದನು. ಆಗ ನಮ್ಮ ತಾಯಿ, ಹೆಂಡತಿ ಹಾಗು ಅಲ್ಲಿಯೇ ಇದ್ದ ರಾಯಪ್ಪ ಪೂಜಾರಿ, ಶಾಂತಪ್ಪ ಪ್ಯಾಟಿ ಇವರು ಬಿಡಿಸಿದರು. ನನ್ನ ಎಡಗಣ್ಣಿನ ಕೆಳಗೆ ರಕ್ತಗಾಯವಾಗಿ ರಕ್ತ ಬರಹತ್ತಿತು. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 227/2011 ಕಲಂ 323,324,504,ಸಂಗಡ 34 ಐಪಿಸಿ ಹಾಗು 3(1) (10) ಎಸ್.ಸಿ/ಎಸ.ಟಿ ಪಿ.ಎ ಕಾಯ್ದೆ 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:

ಶಹಾಬಾದ ನಗರ ಪೊಲಿಸ ಠಾಣೆ: ಶ್ರೀ ಶಿವಕುಮಾರ ತಂದೆ ಶಾಮರಾವ ಕೂಕನೂರ ವ: 26 ವರ್ಷ ಜಾ: ಲಿಂಗಾಯ ಗಾಣಿಗೇರ ಉ:ಸುವರ್ಣ ನ್ಯೂಜ್ ಚಾನೆಯಲ್ಲಿ ಕೆಲಸ ಸಾ: ತೊನಸಳ್ಳಿ [ಎಸ್] ರವರು ನಾನು ದಿನಾಂಕ:02/12/2011 ರಂದು ರಾತ್ರಿ ಊಟ ಮಾಡಿ ಮನಯಲ್ಲಿ ಮಲಗಿದಾಗ ರಾತ್ರಿ 10 ಗಂಟೆ ಸುಮಾರಿಗೆ ಮದರಕಿ ಈರಣ್ಣಾ ಪೂಜಾರಿ ಇವರ ಅಂಗಡಿಯ ಮುಂದೆ ರೋಡಿನ ಮೇಲೆ ನನ್ನ ತಂದೆಯಾದ ಶಾಮರಾವ ಇವರೊಂದಿಗೆ ಸಿದ್ದಣ್ಣಾ ಬೇಲೂರ ಪೂಜಾರಿ ಮತ್ತು ಇತರರು ಕೂಡಿ ಹೊಡೆದು ಅವಾಚ್ಯವಾಗಿ ಬೈದು ನಾನು ಮದ್ಯ ಬಿಡಿಸಲು ಹೊದಾಗ ನನ್ನ ಮೂಗಿನ ಮೇಲೆ ರಕ್ತಗಾಯ ಆಗಿ ಎಡ ಗಣ್ಣಿಗೆ ಪೆಟ್ಟಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 186/2011 ಕಲಂ 147, 323, 324, 504, ಸಂ;149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ನಿಂಬರ್ಗಾ ಠಾಣೆ: ಶ್ರೀಮತಿ ಲಲಿತಭಾಯಿ ಗಂಡ ಸುರೇಶ ರಾಠೋಡ ಸಾ|| ನಿಂಬರ್ಗಾ ತಾಂಡ ರವರು ನನ್ನ ಮಗನಾದ ಸುನೀಲ ರಾಠೋಡ ವ|| 15 ವರ್ಷ, || ವಿಧ್ಯಾರ್ಥಿ ಸಾ|| ನಿಂಬರ್ಗಾ ತಾಂಡಾ ಇವನು ಶಾಲೆಯಿಂದ ಊಟಕ್ಕೆ ಬಿಟ್ಟಾಗ ಹಾಸ್ಟೇನದಲ್ಲಿ ಊಟ ಮಾಡಿಕೊಂಡು ಭಟ್ಟರಗಾ ದರ್ಗಾಕ್ಕೆ ಹೋಗಿ ಬರಲು ತನ್ನ ಸೈಕಲ ಮೇಲೆ ನಿಂಬರ್ಗಾದಿಂದ ಭಟರ್ಗಾಕ್ಕೆ ಹೊರಟಾಗ ನಿಂಬರ್ಗಾ ಧಾಬಾದ ಹತ್ತಿರ ಭಟರ್ಗಾ ಕಡೆಯಿಂದ ಒಂದು ಜೀಪ ನಂ. ಎಮ.ಹೆಚ್ 17, 660 ನೇದ್ದರ ಚಾಲಕ ಸಂಪತ ತಂದೆ ಮಧುಕರ ಪಾಟೀಲ ಸಾ|| ಜವಳಿ, ತಾ|| ಉಮ್ಮರ್ಗಾ ಈತನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಸುನೀಲ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅವನ ಹೊಟ್ಟೆಗೆ ಬಲವಾದ ಗುಪ್ತ ಪೆಟ್ಟು, ಎಡಗಾಲ ಮೊಳಕಾಲ ಕೆಳಗೆ ಭಾರಿ ರಕ್ತಗಾಯವಾಗಿದ್ದು, ಬಲಗೈ ಹಸ್ತದ ಹತ್ತಿರ ರಕ್ತಗಾಯ, ಬಲ ಕಟ್ಟಿಗೆ ಗುಪ್ತ ಪೆಟ್ಟು ,ಬಲಗಾಲು ತೊಡೆಗೆ ತರಚಿದ ಗಾಯ, ಗದ್ದಕ್ಕೆ ತರಚಿದ ಗಾಳಗಳಾಗಿದ್ದು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಅಂತ ದೂರು ಸಲ್ಲಿಸಿದಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 124/2011 ಕಲಂ 279, 337, 338 ಐಪಿಸಿ ಮತ್ತು 187 ಐ,ಎಮ.ವಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಸುನಂದಾ ಗಂಕಾಶೀರಾಯ ಸುಲ್ತಾನಪೂರ ಸಾ: ಜಗತ ಗುಲಬರ್ಗಾ ರವರು ದಿನಾಂಕ 28/11/11 ರಂದು 10 ಮುಂಜಾನೆ ನಮ್ಮ ಪಾಲಕಾರನು ಹೊಲಕ್ಕೆ ಹೋದಾಗ ನಮ್ಮ ಬಾಜು ಹೊಲದವರಾದ ರಾಜಶೇಖರ, ಚಂದ್ರಕಾಂತ, ಶಿವಲಿಂಗಪ್ಪ ಹಾಗೂ ರಾಮಚಂದ್ರ ಇವರು ನಮ್ಮ ಹೊಲದಲ್ಲಿಯ ರಾಶಿಗೆ ಬಂದಿ ತೋಗರಿ ಬೆಳೆ ಅಂದಾಜು 15-20 ಚೀಲ ಆಗುವಷ್ಟು ಅದರ ಅಂದಾಜು ಕಿಮ್ಮತ್ತು 45000/- ಆಗುತ್ತಿದ್ದನು ಕೋಯ್ದು ಕೊಂಡು ಕಳವು ಮಾಡಿಕೊಂಡು ಹೋಗಿತ್ತಿರುವದನ್ನು ನೋಡಿ ಗುಲಬರ್ಗಾದ ನಮ್ಮ ಮನೆಗೆ ಬಂದು ತಿಳಿಸಿರುತ್ತಾನೆ ನಾವು ಹೋಲಕ್ಕೆ ಹೋಗಿ ನೋಡಲು ಹೊಲದಲ್ಲಿ ತೋಗರಿ ಬೆಳೆ ಕಳವು ಮಾಡಿಕೊಂಡು ಹೋಗಿದ್ದು ನಿಜವಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 361/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ