POLICE BHAVAN KALABURAGI

POLICE BHAVAN KALABURAGI

26 September 2020

KALABURAGI DISTRICT CRIME REPORTED

 ಮಟಕಾ ಜೂಜಾಟ ಪ್ರಕರಣ

ಅಫಜಲಪೂರ ಪೊಲೀಸ ಠಾಣೆ 

   ದಿನಾಂಕ 25-09-2020 ರಂದು 7:40 ಪಿ.ಎಮ್ ಕ್ಕೆ ಮಾನ್ಯ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆ ಮಾಲು ಹಾಗೂ ವರದಿ ಹಾಜರು ಪಡಿಸಿದ್ದು ವರದಿ ಸಾರಾಂಶವೇನೆಂದರೆ ದಿನಾಂಕ: 25-09-2020 ರಂದು 5:00 ಪಿಎಮ್ ಕ್ಕೆ ನಾನು ಪೊಲೀಸ್ ಠಾಣೆಯಲ್ಲಿದ್ದಾಗ ಖಚಿತ ಮಾಹಿತಿ ಬಂದಿದ್ದೇನೆಂದರೆ, ಮಾಶಾಳ ಗ್ರಾಮದ ಬಸ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು ಮಟಕಾ ಬರೆದುಕೊಳ್ಳುತ್ತಿದ್ದಾನೆ. ಅಂತಾ ಮಾಹಿತಿ ಬಂದಿದ್ದರಿಂದ ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮಕ್ಕೆ ಹೋಗಿ ಬಸನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ ನಿಲ್ದಾಣದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಹೋಗಿ ಬರುವ ಜನಗಳಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕರೆದು, ಜನರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದುಕೊಟ್ಟು, ಮಟಕಾ ಬರೆದುಕೊಳ್ಳುತ್ತಿದ್ದನು. ಅದನ್ನು ಖಚಿತ ಪಡಿಸಿಕೊಂಡು ಆಗ ನಾನು ಹಾಗೂ ನಮ್ಮ ಸಿಬ್ಬಂದಿ ಜನರು ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಿಲಾಗಿ ಶ್ರೀಶೈಲ ತಂದೆ ಜೋತಿಬಾ ಕ್ಷತ್ರಿ ವಯ|| 35 ವರ್ಷ ಜಾ|| ಕಟಬರ್ ಉ|| ಕೂಲಿ ಸಾ|| ಮಾಶಾಳ ಗ್ರಾಮ ತಾ|| ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1) 1050/-  ರೂಪಾಯಿ ನಗದು ಹಣ ಹಾಗೂ 2) ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗೂ 3) ಒಂದು ಪೆನ್ನ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಆರೋಪಿತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ವರದಿ ಸಾರಾಂಶದ ಮೇಲಿಂದ ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮಟಕಾ ಜೂಜಾಟ ಪ್ರಕರಣ

ವಾಡಿ ಪೊಲೀಸ ಠಾಣೆ 

        ದಿನಾಂಕ:25/09/2020 ರಂದು 3.00 ಪಿ.ಎಮ್ ಕ್ಕೆ ಸರ್ಕಾರಿ ತರ್ಪೇಯಿಂದ ಶ್ರೀ ವಿಜಯಕುಮಾರ ಪಿ.ಎಸ.ಐ [ಕಾ.ಸು] ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ ಮತ್ತು ಮುದ್ದೇಮಾಲು ಮತ್ತು ಜ್ಞಾಪನ ಪತ್ರ ಹಾಜರುಪಡಿಸಿದ ಸಾರಾಂಶವೆನೇಂದರೆ, ವಾಡಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ವಾಡಿಯ ಶ್ರೀನಿವಾಸ ಚೌಕನಲ್ಲಿರುವ ಪಾನಡಬ್ಬಿಯ ಮುಂದೆ ರೋಡಿಗೆ ಒಬ್ಬ ವ್ಯಕ್ತಿ ನಿಂತುಕೊಂಡು ಜನರಿಂದ ಹಣ ಪಡೆದು ಒಂದು ರೂಪಾಯಿಗೆ 80/- ರೂಪಾಯಿ ಗೆಲ್ಲಿರಿ ಅದೃಷ್ಠದ ಆಟ ಆಡಿರಿ ಅಂತಾ ಕೂಗಾಡುತ್ತಾ ಮಟಕಾ ಅಂಕಿ ಸಂಖ್ಯೆ ಬರೆದು ಚೀಟಿ ಕೊಡುತ್ತಿದ್ದಾನೆ. ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿ ಹಾಗು ಪಂಚರು ಜನರೊಂದಿಗೆ ಹೊರಟು ವಾಡಿಯ ಶ್ರೀನಿವಾಸ ಚೌಕ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಜೀಪನಿಂದ ಇಳಿದು ಸ್ವಲ್ಪ ಮುಂದೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮಟಕಾ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿದ್ದನ್ನು ಖಚಿತ ಪಡಿಸಿಕೊಂಡು ಸದರಿಯವನ ಪಂಚರ ಸಮಕ್ಷಮ ದಾಳಿ ಮಾಡಿ ಸಿಬ್ಬಂದಿ ಸಹಾಯದಿಂದ ಹಿಡಿದು ಆತನಿಗೆ ವಿಚಾರಿಸಲು ತನ್ನಹೆಸರು ರಾಜು ತಂದೆ ಚಂದ್ರಾಮ ಹಾಗರಗುಂಡಗಿ ವಃ25ವರ್ಷ ಉಃಕೂಲಿಕೆಲಸ ಜಾಃಹರಿಜನ ಸಾಃಸೋನಾಬಾಯಿ ಏರಿಯಾ ವಾಡಿ ಅಂತಾ ತಿಳಿಸಿದನು. ಆತನ ವಶದಿಂದ 650 /- ರೂ ನಗದು ಹಣ ಮತ್ತು 01 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಒಬ್ಬ ಆರೋಪಿ ಹಾಗೂ ಮುದ್ದೆಮಾಲು ಜಪ್ತಿ ಪಂಚನಾಮೆಯೊಂದಿಗೆ ಮರಳಿ ಠಾಣೆಗೆ ಬಂದು ಸದರಿ ಆರೋಪಿತನ ವಿರುದ್ದ ಕ್ರಮ ಕೈಕೊಳ್ಳಲು ಈ ಜ್ಞಾಪನ ಪತ್ರದ  ನೀಡಿದ ಸಾರಾಂಶದ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಇಸ್ಪೇಟ ಜೂಜಾಟ ಪ್ರಕರಣ

ವಾಡಿ ಪೊಲೀಸ ಠಾಣೆ 

                ದಿನಾಂಕ:25/09/2020 ರಂದು 06-30 ಪಿ.ಎಮ್ ಕ್ಕೆ ಸರ್ಕಾರಿ ತರ್ಪೇಯಿಂದ ಶ್ರೀ ವಿಜಯಕುಮಾರ ಪಿ.ಎಸ.ಐ [ಕಾ.ಸು] ರವರು ಠಾಣೆಗೆ ಹಾಜರಾಗಿ 05 ಜನ ಆರೋಪಿ ಮತ್ತು ಮುದ್ದೇಮಾಲು, ಜಪ್ತಿ ಪಂಚನಾಮೆ ಮತ್ತು ಜ್ಞಾಪನ ಪತ್ರ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ:25/09/2020 ರಂದು 03-10 ಪಿಎಮ್ ಸುಮಾರಿಗೆ ವಾಡಿ ಪೊಲಿಸ ಠಾಣಾ ವ್ಯಾಪ್ತಿಯಲ್ಲಿ ಹಾಬಾನಾಯಕ ತಾಂಡಾ ಬೇಳಗೇರಾ ಗ್ರಾಮದ ನಾಮದೇವ ರಾಠೋಡ ಇತನ ಅಂಗಡಿಯ ಮುಂದಿನ ಸಾರ್ವಜನಿಕ ಕಟ್ಟೆಯ ಮೇಲೆ  ಕೆಲವು ಜನರು ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು ನಾನು ಠಾಣೆಯ ಸಿಬ್ಬಂದಿ ಜನರಾದ  1) ಶ್ರೀ ದೊಡ್ಡಪ್ಪ ಸಿಪಿಸಿ-836 ] ಬಸಲಿಂಗಪ್ಪ ಸಿಪಿಸಿ-1135 3] ಶ್ರೀ ಮಧುಕರ ಸಿಪಿಸಿ-631 4] ಶ್ರೀ ಚನ್ನಬಸವ ಸಿಪಿಸಿ-180 ಮತ್ತು ಪಂಚ ಜನರೊಂದಿಗೆ ಹೊರಟು ನಾಮಾದೇವ ರಾಠೋಡ ರವರ ಅಂಗಡಿ ಸಮೀಪ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಕೆಳಗಿಳಿದು ಮರೆಯಲ್ಲಿ ನಿಂತು ನೋಡಲಾಗಿ ನಾಮದೇವ ರಾಠೋಡ ರವರ ಅಂಗಡಿಯ ಮುಂದಿನ ಸಾರ್ವಜನಿಕ ಕಟ್ಟೆಯ ಮೇಲೆ ಕೆಲವು ಜನರು ಗುಂಪಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪೀಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದುದ್ದನ್ನು ನೋಡಿ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಇಸ್ಟೇಟ ಜೂಜಾಟ ಆಡುತ್ತಿದ್ದು 05 ಜನರನ್ನು ಹಿಡಿದುಕೊಂಡಿದ್ದು ಅವರ ಹೆಸರು ವಿಚಾರಣೆ ಮಾಡಲಾಗಿ 1]ಪೋಮು ತಂದೆ ಕಿಶನ ಪವಾರ ವಯ:50 ವರ್ಷ ಉ:ಒಕ್ಕಲುತನ ಸಾ:ಬೇಳಗೆರಾ  2] ನೇಹರು ತಂದೆ ನಾಮದೇವ ರಾಠೋಡ ವಯ:47 ವರ್ಷ ಉ:ಒಕ್ಕಲುತನ ಸಾ:ಹಾಬಾನಾಯಕ ತಾಂಡಾ ಬೇಳಗೆರಾ 3] ಶಂಕರ ತಂದೆ ಸುಭಾಷ ರಾಠೋಡ ವಯ:55 ವರ್ಷ ಉ:ಒಕ್ಕಲುತನ ಜಾ:ಲಂಬಾಣಿ ಸಾ:ಹಾಬಾನಾಯಕ ತಾಂಡಾ ಬೇಳಗೆರಾ 4] ಸಾಯಿಬಣ್ಣಾ ತಂದೆ ರಾಮನಿಂಗಪ್ಪ ಕೊಟ್ಟರಕಿ ವಯ:43 ವರ್ಷ ಉ:ಒಕ್ಕಲುತನ ಜಾ:ಕಬ್ಬಲಿಗ ಸಾ:ಯಾಗಾಫೂರ 5] ಬಸಲಿಂಗಪ್ಪ ತಂದೆ ಭೀಮರಾಯ ಡೊಂಕನೂರ ವಯ:30 ವರ್ಷ ಉ:ಕೂಲಿ ಜಾ:ಬೇಡರ ಸಾ:ಬಾಚವಾರ ಸದರಿಯವರ ಅಂಗಶೋಧನೆಯಿಂದ 2200-00 ರೂ ಹಾಗೂ ಪಣಕ್ಕೆ ಹಚ್ಚಿದ ನಗದು ಹಣ 500/-ರೂಪಾಯಿ ಹೀಗೆ ಒಟ್ಟು 2700/- ರೂಪಾಯಿ ನಗದು ಹಣ ಹಾಗೂ 52 ಇಸ್ಪೇಟ ಎಲೆಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ನಂತರ ಆರೋಪಿ, ಮುದ್ದೆಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಮರಳಿ 06-30 ಪಿಎಮ್ ಕ್ಕೆ ಠಾಣೆಗೆ ಬಂದು ಸದರಿ 05 ಜನ ಆರೋಪಿತರ ವಿರುದ್ದ ಕ್ರಮ ಕೈಕೊಳ್ಳಲು ನೀಡಿದ ಜ್ಞಾಪನ ಪತ್ರದ  ಸಾರಾಂಶದ ಮೇಲಿಂದ ವಾಡಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

ಮಟಕಾ ಜೂಜಾಟ ಪ್ರಕರಣ

1) ಶಹಾಬಾದ ನಗರ ಪೊಲೀಸ ಠಾಣೆ 

          ದಿನಾಂಕಃ 24/09/2020 ರಂದು 2-30 ಪಿ ಎಮ್.ಕ್ಕೆ ಪಿ.ಐ ಶಹಾಬಾದ ರವರು ಠಾಣೆಗೆ ಬಂದು ಒಬ್ಬ ಅರೋಪಿ, ಮುದ್ದೇಮಾಲು ಮತ್ತು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ ಶಹಾಬಾದ ಪಟ್ಟಣದ ವಿ ಪಿ ಚೌಕ ಹತ್ತಿರ  ಒಬ್ಬ ಮನುಷ್ಯ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚಜನರೊಂದಿಗೆ  ಶಹಾಬಾವಿ ಪಿ ಚೌಕ ಹತ್ತಿರ ಹೋಗಿ  ಮನೆಯ ಮರೆಯಾಗಿ ನಿಂತು ನೋಡಲಾಗಿ ವಿ ಪಿ ಚೌಕ ಹತ್ತಿರ ಕಟ್ಟೆಯ ಮೇಲೆ ಒಬ್ಬ  ಮನುಷ್ಯ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಹ್ಮದ ಜುಬೇರ ತಂದೆ ಚಾಂದಪಾಶಾ ಶೇಖ ವಯಾ: 21 ವರ್ಷ ಉ: ಕಾರಪೆಂಟರ ಕೆಲಸ ಸಾ: ವಿ ಪಿ ಚೌಕ ಅಂತಾ ತಿಳಿಸಿದನು ಅವನಿಗೆ ಮಟಕಾ ನಂಬರ ಬರೆದುಕೊಂಡು ಯಾರಿಗೆ ನೀಡುತ್ತಿ ಅಂತಾ ವಿಚಾರಿಸಲು ಖಲೀಲ ಅಹ್ಮೇದ ತಂದೆ ಹಾಜಿಸಾಬ ಸಾ: ಬಸ ನಿಲ್ದಾಣದ ರೋಡ ಶಹಾಬಾದ  ಇತನಿಗೆ ನೀಡುತ್ತೇನೆ ಅಂತಾ ತಿಳಿಸಿದನು ಹಿಡಿದವನಿಗೆ  ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ  480- 00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು  ಪಂಚರ ಸಮಕ್ಷಮದಲ್ಲಿ  ಜಪ್ತಿ ಪಂಚನಾಮೆಯನ್ನು ಕೈಗೊಂಡು ಆರೋಪಿತನ ವಿರುದ್ದ  ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಆಧಾರ ಮೇಲಿಂದ ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2) ಶಹಾಬಾದ ನಗರ ಪೊಲೀಸ ಠಾಣೆ 

           ದಿನಾಂಕಃ 24/09/2020  ರಂದು 6-15 ಪಿ ಎಮ್ ಕ್ಕೆ ಪಿ.ಐ ಶಹಾಬಾದ ರವರು ಠಾಣೆಗೆ ಬಂದು ಒಬ್ಬ ಅರೋಪಿ, ಮುದ್ದೇಮಾಲು ಮತ್ತು ಜಪ್ತಿಪಂಚನಾಮೆಯೊಂದಿಗೆ ಜ್ಞಾಪನ ಪತ್ರ ನೀಡಿದ್ದು ಅದರ ಸಾರಂಶವೆನೆಂದರೆ  ದಿನಾಂಕಃ 24/09/2020 ರಂದು 3-30 ಪಿ ಎಮ್ ಕ್ಕೆ ಠಾಣೆಯಲ್ಲಿದ್ದಾಗ ದೇವನ ತೆಗನೂರ ಗ್ರಾಮದ ಬಸ ನಿಲ್ದಾಣದ ಹತ್ತಿರ ಒಬ್ಬ ಮನುಷ್ಯ ಮಟಕಾ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿ ಮತ್ತು ಪಂಚ ಜನರೊಂದಿಗೆ  ಠಾಣೆಯಿಂದ ಹೊರಟು ದೇವನ ತೆಗನೂರ ಗ್ರಾಮಕ್ಕೆ ಹೋಗಿ ಹೊಟೇಲ ಗೊಡೆಯ ಮರೆಯಾಗಿ ನಿಂತು ನೋಡಲಾಗಿ ಬಸ ನಿಲ್ದಾಣದ ಹತ್ತಿರ ಕಟ್ಟೆಯ ಮೇಲೆ ಒಬ್ಬ  ಮನುಷ್ಯ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು  ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ಶಿವಪ್ಪ ಜಮದಾರ ವಯಾ: 65 ವರ್ಷ ಉ: ಕೂಲಿ ಕೆಲಸ ಜಾ: ಕಬ್ಬಲಿಗಾ ಸಾ: ದೇವನ ತೆಗನೂರ ಅಂತಾ ತಿಳಿಸಿದನು ಅವನಿಗೆ  ಅಂಗ ಶೋದನೆ ಮಾಡಲಾಗಿ ಮಟಕಾ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ 650-00 ರೂಪಾಯಿ  ಮತ್ತು ಒಂದು ಮಟಕಾ ನಂಬರ ಬರೇದ ಚೀಟಿ, ಒಂದು ಪೆನ್ನು  ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು ಕೈಗೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಕ್ರಮ ಜರುಗಿಸುವಂತೆ ನೀಡಿದ ಜ್ಞಾಪನ ಪತ್ರದ ಅಧಾರ ಮೇಲಿಂದ  ಶಹಾಬಾದ ನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.