POLICE BHAVAN KALABURAGI

POLICE BHAVAN KALABURAGI

14 December 2011

GULBARGA DIST REPORTED CRIMES

ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಸೇಡಂ ಠಾಣೆ :
ಶ್ರೀ ಸಿದ್ದಪ್ಪ ತಂದೆ ರೇವಣಸಿದ್ದಪ್ಪ ಕೇಶವಾರ ಸಾಬಸವನಗರ ಸೇಡಂರವರು ನಾನು ಅಡತಿಯಲ್ಲಿ ಗುಮಾಸ್ತ ಕೆಲಸ ಮಾಡಿಕೊಂಡು ಮರಳಿ ಸಾಯಂಕಾಲ ಸೇಡಂ ಬಸ್ ನಿಲ್ದಾಣದ ಎದುರುಗಡೆ ಬಂದು ಚಹಾ ಕುಡಿಯಬೇಕು ಅಂತ ದೊಂತಾ ರವರ ಅಂಗಡಿಯ ಮುಂದೆ ಮೋಟಾರು ಸೈಕಲ್ ಕೆಎ.32.ವೈ.1906 ನೇದ್ದರ ಹಿರೋ ಹೊಂಡಾ ಸ್ಪಲೇಂಡರ್ ಪ್ಲಸ್ ಮೋಟಾರು ಸೈಕಲ್ ನಿಲ್ಲಿಸಿ ಸಾಯಂಕಾಲ 7-20 ಗಂಟೆಯ ವೇಳೆಗೆ ಯಾರೋ ಕಳ್ಳರು ನನ್ನ ಮೋಟಾರು ಸೈಕಲ್ ಕಳುವು ಮಾಡಿಕೊಂಡು ಹೋಗಿದ್ದು ಮೋಟಾರ ಸೈಕಲ್ ಚೆಸ್ಸಿ ನಂ-BLHA10EZBHA24780 ಇಂಜೆನ್ ನಂ-HA10EFBHA13089 ಇದ್ದು ಅದರ ಬಣ್ಣ ಸಿಲ್ವರ್ ಕಲರ್ 2011 ನೇ ಫೆಬ್ರುವರಿ ಮಾಡಲ್ ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆಯ ಗುನ್ನೆ ನಂ-218/2011 ಕಲಂ.379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹೆಣ್ಣು ಮಗಳು ಕಾಣೆಯಾದ ಬಗ್ಗೆ:
ಮಹಿಳಾ ಪೊಲೀಸ್ ಠಾಣೆ :
ಶ್ರೀ ಡಿಗಂಬರ ತಂದೆ ಸಿದ್ದಪ್ಪ ಪೂಜಾರಿ ವಯ; 75 ವರ್ಷ ಸಾ; ಮನೆ ನಂ 1-9651/1-ಎಫ್ ವಿಶಾಲ ನಗರ 6 ನೇ ಕ್ರಾಸ ಲಕ್ಷ್ಮೀ ನಿವಾಸ ಗುಲಬರ್ಗಾರವರು ನನ್ನ ಮಗಳಾದ ಶ್ರೀಮತಿ. ಭಾರತಿ ಗಂಡ ದತ್ತ ಪೂಜಾರಿ ವ:31 ವರ್ಷ ಸಾ: ಮನೆ ನಂ 1-9651/1-ಎಫ್ ವಿಶಾಲ ನಗರ 6 ನೇ ಕ್ರಾಸ ಲಕ್ಷ್ಮೀ ನಿವಾಸ ಗುಲಬರ್ಗಾ ಇವಳು ದಿ: 04.12.2011 ರಂದು ಸಾಯಂಕಾಲ 4-00 ಗಂಟೆಗೆ ಹೋದವಳು ಇದುವರೆಗೂ ಬಂದಿಲ್ಲ ನಾವು ಎಲ್ಲ ಕಡೆ ಹುಡುಕಾಡಿದರೆ ಪತ್ತಯಾಗಿರುವುದಿಲ್ಲಾ ಇವಳು ಮಾನಸಿಕ ರೋಗಿಯಾಗಿದ್ದು ಮಗಳನ್ನು ಹುಡುಕಿ ಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 120/2011 ಕಲಂ. ಹೆಣ್ಣುಮಗಳು ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ,ಕಾಣೆಯಾದ ಹೆಣ್ಣು ಮಗಳ ಚಹರೆ ಪಟ್ಟಿ ಈ ರೀತಿಯಾಗಿದೆ ವ 31, ಸಾದಾರಣ ಮೈಕಟ್ಟು, ಗೋದಿ ಬಣ್ಣ, 5 ಪೀಟ ಎತ್ತರ, ಉದ್ದನೆಯ ಮುಖ, ಕಪ್ಪು ಕೂದಲು, ಕನ್ನಡ, ಹಿಂದಿ, ಮರಾಠಿ ಭಾಷೆ ಬಲ್ಲವಳಾಗಿದ್ದಾಳೆ ಬಲಗಡೆ ಕಪಾಳದ ಮೇಲೆ ಹಳೆಯ ಗಾಯದ ಗುರುತು ಇದೆ ಇವಳ ಬಗ್ಗೆ ಸುಳಿವು ಸಿಕ್ಕಲ್ಲಿ ತಾವುಗಳು ಸಂರ್ಪಕಿಸಬೇಕಾದ ದೂರುವಾಣೆ ಮತ್ತು ಮೋಬಾಯಿಲ್ ಸಂ: 08472263620 ಅಥವಾ 948080355 ಅಥವಾ ಕಂಟ್ರೋಲ್ ರೂಮ್ ಗುಲಬರ್ಗಾ 08472263604 ನೇದ್ದಕ್ಕೆ ತಿಳಿಸಲು ಕೋರಲಾಗಿದೆ.

Gulbarga dist reported crime

ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಸೇಡಂ ಠಾಣೆ :
ಶ್ರೀ ಸಿದ್ದಪ್ಪ ತಂದೆ ರೇವಣಸಿದ್ದಪ್ಪ ಕೇಶವಾರ ಸಾಬಸವನಗರ ಸೇಡಂರವರು ನಾನು ಅಡತಿಯಲ್ಲಿ ಗುಮಾಸ್ತ ಕೆಲಸ ಮಾಡಿಕೊಂಡು ಮರಳಿ ಸಾಯಂಕಾಲ ಸೇಡಂ ಬಸ್ ನಿಲ್ದಾಣದ ಎದುರುಗಡೆ ಬಂದು ಚಹಾ ಕುಡಿಯಬೇಕು ಅಂತ ದೊಂತಾ ರವರ ಅಂಗಡಿಯ ಮುಂದೆ ಮೋಟಾರು ಸೈಕಲ್ ಕೆಎ.32.ವೈ.1906 ನೇದ್ದರ ಹಿರೋ ಹೊಂಡಾ ಸ್ಪಲೇಂಡರ್ ಪ್ಲಸ್ ಮೋಟಾರು ಸೈಕಲ್ ನಿಲ್ಲಿಸಿ ಸಾಯಂಕಾಲ 7-20 ಗಂಟೆಯ ವೇಳೆಗೆ ಯಾರೋ ಕಳ್ಳರು ನನ್ನ ಮೋಟಾರು ಸೈಕಲ್ ಕಳುವು ಮಾಡಿಕೊಂಡು ಹೋಗಿದ್ದು ಮೋಟಾರ ಸೈಕಲ್ ಚೆಸ್ಸಿ ನಂ-BLHA10EZBHA24780 ಇಂಜೆನ್ ನಂ-HA10EFBHA13089 ಇದ್ದು ಅದರ ಬಣ್ಣ ಸಿಲ್ವರ್ ಕಲರ್ 2011 ನೇ ಫೆಬ್ರುವರಿ ಮಾಡಲ್ ಇರುತ್ತದೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆಯ ಗುನ್ನೆ ನಂ-218/2011 ಕಲಂ.379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹುಡಗಿ ಕಾಣೆಯಾದ ಬಗ್ಗೆ :
ಅಶೋಕ ನಗರ ಠಾಣೆ
:
ಶ್ರೀ ಹಣಮಂತ ತಂದೆ ಚಂದ್ರಪ್ಪ ರೇವಣೊರ ಉ : ಸಹ ಶಿಕ್ಷಕ ಸ.ಹಿ.ಪ್ರಾ.ಶಾಲೆ ಬಸವಪಟ್ಟಣ ಸಾ ಮ.ನಂ. 1-1498/1-62 ಶಕ್ತಿನಗರ ಗುಲಬರ್ಗಾರವರು ನನಗೆ ಇಬ್ಬರು ಮಕ್ಕಳಿರುತ್ತಾರೆ ಮತ್ತು ನನ್ನ ಹೆಂಡತಿಯ ಅಕ್ಕನ ಮಗಳಾದ ಕು ಅಂಬಿಕಾ ಇವಳು ತನ್ನ ತಂದೆ ತಾಯಿ ಇಬ್ಬರು ತೀರಿಕೊಂಡಿದ್ದರಿಂದ ನಮ್ಮ ಹತ್ತಿರ ಸುಮಾರು 2 ವರ್ಷದಿಂದ ಇಲ್ಲಿಯೆ ವಾಸವಾಗಿರುತ್ತಾಳೆ. ದಿ : 09/12/2011 ರಂದು ಬೆಳಿಗ್ಗೆ 9 ಗಂಟೆಗೆ ಎಂದಿನಂತೆ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕರ್ತವ್ಯಕ್ಕೆ ಹೋಗಿದ್ದು ನನ್ನ ಮಕ್ಕಳು ಸಹ ಶಾಲೆಗೆ ಹೊಗಿರುತ್ತಾರೆ ಮನೆಯಲ್ಲಿ ಅಂಬಿಕಾ ಒಬ್ಬಳೆ ಇದ್ದಳು ಅದೇ ದಿವಸ ಸಾಯಂಕಾಲ 6 ಗಂಟೆಗೆ ನಾವಿಬ್ಬರು ಶಾಲೆಯಿಂದ ಕರ್ತವ್ಯ ಮುಗಿಸಿಕೊಂಡು ಮನೆಗೆ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಿದ್ದು ನಮ್ಮ ಇಬ್ಬರು ಮಕ್ಕಳು ಶಾಲಾ ಬ್ಯಾಗಗಳನ್ನು ಮನೆಮುಂದೆ ಇಟ್ಟು ಕುಳಿತಿದ್ದರು ನನ್ನ ಮಕ್ಕಳಿಗೆ ಅಂಬಿಕಾ ಅಕ್ಕ ಎಲ್ಲಿಗೆ ಹೊಗಿದ್ದಾಳೆಂದು ವಿಚಾರಿಸಿದಾಗ ಗೊತ್ತಿಲ್ಲ ಅಂತಾ ಹೇಳಿದರು ಪಕ್ಕದ ಮನೆಯವರಿಗೆ ಕೇಳಿದಾಗ ಮುಂಜಾನೆ 10-30 ಗಂಟೆಗೆ ಅಂಬಿಕಾ ಇವಳು ಮನೆ ಬೀಗ ಕೊಟ್ಟು ಹೊರಗಡೆ ಹೊಗಿ ಬರುತ್ತೆನೆಂದು ಹೇಳಿ ಹೊಗಿರುತ್ತಾಳೆ. ಅಂತಾ ತಿಳಿಸಿದರು. ರಾತ್ರಿಯಾದರು ಅಂಬಿಕಾ ಮನೆಗೆ ಬರಲಿಲ್ಲ ನಮ್ಮ ಸಂಬಂಧಿಕರಲ್ಲಿ ಹುಡುಕಾಡಿದ್ದು ಅಂಬಿಕಾಳ ಸ್ವಂತ ಊರಾದ ಬೀದರ ಜಿಲ್ಲೆಯ ನಾಗೋರಾ, ಹೊಚಕನಳ್ಳಿ ಗ್ರಾಮಕ್ಕೆ ಪೊನ ಮಾಡಿ ಕೇಳಿದಾಗ ಅಲ್ಲಿಯೂ ಸಹ ಬಂದಿರುವದಿಲ್ಲ ಅಂತಾ ತಿಳಿಸಿರುತ್ತಾರೆ ಕಾರಣ ಕಾಣೆಯಾದ ನನ್ನ ಸಾಕು ಮಗಳು ಕು ಅಂಬಿಕಾ ಇವಳು ಕಾಣೆಯಾಗಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 134/2011 ಕಲಂ ಹುಡುಗಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಗ್ರಾಮೀಣ ಠಾಣೆ:
ದಿನಾಂಕ 12/12/2011 ರಂದು ಕಾಲೇಜ ಅವಧಿ ನಂತರ ರಾತ್ರಿ ಯಾರೋ ಕಳ್ಳರು ನಮ್ಮ ಮಹಾ ವಿಧ್ಯಾಲಯದ ಕಂಪ್ಯೂಟರ ಲ್ಯಾಬ ವಿಭಾಗದ ಕೋಣೆಯ ಬೀಗ ಮುರಿದು ಒಳಗೆ ಇರುವ 3 ಸ್ಯಾಮಸಂಗ ಗಣಕ ಯಂತ್ರಗಳು ಅಂದಾಜು ಬೆಲೆ 21,000/- ರೂ ಮತ್ತು ಪ್ರೀಂಟರ್‌ 1 ಹೆಚ್‌ಪಿ ಅಂದಾಜ ಬೆಲೆ 1800/-ರೂ ಕ್ರೀಡಾ ಸಾಮಾಗ್ರಿಗಳು ವಾಲಿಬಾಲ 2, ಪುಟಬಾಲ 2, ಕ್ರಿಕೇಟ ಬ್ಯಾಟ್‌ 2, ಅಂದಾಜು ಬೆಲ 1,100/- ರೂ ಹೀಗೆ ಒಟ್ಟು ಅಂದಾಜು ಕಿಮ್ಮತ್ತು 23,900/- ರೂ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ವಿಜಯಕುಮಾರ ಚೆನ್ನಣ್ಣ ಕಲ್ಲೂರ ಪ್ರಾಚಾರ್ಯರು ಶ್ರೀ ಗುರುಶಾಂತಪ್ಪ ಜವಳಿ ಸ್ಮಾರಕ ಸಂಸ್ಥೆ ಗ್ರಾಮೀಣ ವಸತಿ ಶಿಕ್ಷಣ ಮಹಾವಿಧ್ಯಾಲಯ ಪಟ್ಟಣ ತಾ: ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 370/2011 ಕಲಂ 457, 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ:
ಶ್ರೀ ರಾಜಣ್ಣ ತಂದೆ ಶಿವಲಿಂಗಪ್ಪ ಬಿರಾದಾರ ಉ:ನಿವೃತ ನೌಕರ ಸಾ: ಹಳ್ಳಿ ಖೇಡ (ಕೆ) ಹಾ: ವ:ಬಿದ್ದಾಪೂರ ಕಾಲನಿ ಗುಲಬರ್ಗಾರವರು ನಾನು ದಿನಾಂಕ 13/12/2011 ರಂದು ಸಾಯಂಕಾಲ 5 ಗಂಟೆಗೆ ಮೋಟಾರ ಸೈಕಲ ನಂ ಕೆಎ 32 ಹೆಚ್‌ 2858 ನೇದ್ದರ ಮೇಲೆ ರೇಲ್ವೆ ಗೇಟ ಹತ್ತಿರ ಹೋಗುವಾಗ ಎದುರುಗಡೆಯಿಂದ ಮೋಟಾರ ಸೈಕಲ ನಂ ಕೆಎ 32 ಕ್ಯೂ 5329 ನೇದ್ದರ ಸವಾರನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿ ಸಾದಾಗಾಯ ಗುಪ್ತಗಾಯ ಪಡಿಸಿ ತನ್ನ ಮೋಟಾರ ಸೈಕಲ ತೆಗೆದು ಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 371/2011 ಕಲಂ 279,337 ಐಪಿಸಿ ಸಂಗಡ 187 ಐಎಮ.ವಿಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ತಂದೆ ಮಗನ ಜಗಳ,
ದೇವಲ ಗಾಣಗಾಪೂರ ಠಾಣೆ
: ಕಲ್ಯಾಣರಾವ ತಂದೆ ಚುಂಜಪ್ಪಾ ಪೊಲೀಸ್ ಪಾಟೀಲ್ ಸಾ ಅವರಳ್ಳಿ ನನಗೆ ಇಬ್ಬರೂ ಹೆಂಡತಿಯರಿದ್ದು, ಮೊದಲನೆಯವಳು ಕಲ್ಲಮ್ಮ ಇವಳೀಗೆ ಇಬ್ಬರೂ ಗಂಡು ಮಕ್ಕಳು, ಹಾಗೂ ಎರಡನೆಯವಳು ಪಾರ್ವತಿ ಇವಳಿಗೆ ಐದು ಜನ ಮಕ್ಕಳಿರುತ್ತಾರೆ, ಗಂಡು ಮಕ್ಕಳಿಗೆ ಆಸ್ತಿ ಹಂಚಿ ಕೊಟ್ಟಿದ್ದು, ಎಲ್ಲರೂ ಬೇರೆ ಬೇರೆ ಆಗಿರುತ್ತಾರೆ. ನಾನು ಮತ್ತು ನನ್ನ ಎರಡನೆಯ ಹೆಂಡತಿ ಪಾರ್ವತಿ ನನ್ನ ಹಿರಿಯ ಮಗ ಜುಂಜಪ್ಪ ಒಟ್ಟಿಗೆ ಇರುತ್ತೆವೆ ನಾನು ನಮ್ಮ ತೋಟದ ಮನೆಯಲ್ಲಿದ್ದಾಗ ಮೊಮ್ಮಗ ವಿನೋದ ತೋಟದ ಮನೆಗೆ ಬಂದು, ಕಾಕಾ ಪ್ರಾಶಾಂತ ಇವನು ನಮ್ಮ ಅಪ್ಪ ಮಹಾಂತಪ್ಪ ಇವನೊಂದಿಗೆ ಜಗಳ ಮಾಡುತಿದ್ದಾನೆ ಕರೆದುಕೊಂಡು ಬರಲು ಹೇಳಿದ್ದರಿಂದ ನಾನು ಮನೆ ಹತ್ತಿರ ಬಂದಾಗ ಮಗ ಪ್ರಶಾಂತನು ಇತನು ಅವಾಚ್ಯವಾಗಿ ಬೈಯುತ್ತಿದ್ದಾಗ ಯಾಕೆ ಸುಮ್ನೆ ಬೈತೆಪ್ಪಾ ಅಂತಾ ಕೇಳಿದಕ್ಕೆ ತೆಕ್ಕೆ ಕುಸ್ತಿ ಬಿದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. ವೈಧ್ಯರ ನಿರ್ಲಕ್ಷತನದಿಂದ ಬಾಣಂತಿ ಸಾವು:
ಬ್ರಹ್ಮಪೂರ ಠಾಣೆ
: ಶ್ರೀ.ಶರಣು ತಂದೆ ಈರಣ್ಣಾ ಕಾಮಾ, ಸಾ ಖಣದಾಳ ತಾಜಿ ಗುಲಬರ್ಗಾ ರವರು ನನ್ನ ಹೆಂಡತಿಯಾದ ಶಿಲ್ಪಾ ಇವಳಿಗೆ ಹೇರಿಗೆ ಸಲುವಾಗಿ ದಿನಾಂಕ: 13/12/2011 ರಂದು 0200 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದಾಗ ಸರಕಾರಿ ಆಸ್ಪತ್ರೆಯ ದಾದಿಯರು ನನ್ನ ಹೆಂಡತಿಯನ್ನು ಪರಿಶೀಲಿಸಿ ಓ.ಪಿ.ಡಿ ಮಾಡಿಸಿ ಅಂತಾ ಹೇಳಿ ಸದ್ಯಕ್ಕೆ ಯಾರು ವೈದ್ಯರು ಇರುವದಿಲ್ಲ, ಬೆಳಿಗ್ಗೆ ವೈದ್ಯರು ಬಂದ ಮೇಲೆ ತಪಾಸಣೆ ಮಾಡಿದ ನಂತರ ಹೇರಿಗೆ ಬಗ್ಗೆ ಕ್ರಮ ಕೈಕೊಳ್ಳುವದಾಗಿ ತಿಳಿಸಿದರು. ನಂತರ ನನ್ನ ಹೆಂಡತಿಯನ್ನು ವಾರ್ಡಿನಲ್ಲಿ ಭರ್ತಿ ಮಾಡದೆ ಬೆಳಗಿನ ವರೆಗು ಚಳಿಯಲ್ಲಿ ಹೊರಗೆ ಕೂಡಿಸಿದರು. ನನ್ನ ಹೆಂಡತಿಗೆ ಹೇರಿಗೆ ನೋವು ಜಾಸ್ತಿಯಾಗಿದ್ದರಿಂದ ನಮ್ಮ ಅತ್ತೆ ಈರಮ್ಮ & ಮಾವ ಪರಮೇಶ್ವರ ಇವರುಗಳು ಆಸ್ಪತ್ರೆಯ ವೈದ್ಯರನ್ನು ಕೋರಿಕೊಂಡರು ಸಹ ಯಾರೊಬ್ಬರು ಕಾಳಜಿ ವಹಿಸದೆ ಬೇಜವಾಬ್ದಾರಿಯಿಂದ ವರ್ತಿಸಿದರು. ಬೆಳಿಗ್ಗೆ 10:00 ಗಂಟೆ ನಂತರ ನನ್ನ ಹೆಂಡತಿಯನ್ನು ವಾರ್ಡಿಗೆ ಭರ್ತಿ ಮಾಡಿಕೊಂಡರು. ನಂತರ ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆ ಮೂಲಕ ಹೇರಿಗೆ ಮಾಡಬೇಕಾಗುತ್ತದೆ ಅಂತಾ ಹೇಳಿ ರಕ್ತ ಪರೀಕ್ಷೆ ಮಾಡಿಸಿ ಆಕೆಯ ಸಲುವಾಗಿ 1 ಬಾಟಲಿ ರಕ್ತ ತರುವಂತೆ ಸೂಚಿಸಿದರು ನಾನು ಸ್ವತಃ ನನ್ನ ರಕ್ತವನ್ನು ನೀಡಿದೇನು. ಮದ್ಯಾಹ್ನ 1:00 ಗಂಟೆಯ ಸುಮಾರಿಗೆ ನನ್ನ ಹೆಂಡತಿಯು ಗಂಡು ಮಗುವನ್ನು ಜನ್ಮ ನೀಡಿದಳು.ವೈದ್ಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಳೆ ಮಾತನಾಡಬೇಡ ಅಂತಾ ಹೇಳಿದರು. ಅರ್ಧ ಗಂಟೆಯ ನಂತರ ನನ್ನ ಹೆಂಡತಿಗೆ ಬಿ.ಪಿ ಕಡಿಮೆಯಾಗಿದೆ ಅಂತಾ ಹೇಳಿ ಕಾಗದಗಳ ಮೇಲೆ ನನ್ನ ಸಹಿಗಳನ್ನು ಪಡೆದುಕೊಂಡರು. ನಂತರ 2:00 ಗಂಟೆಗೆ ಸಿಬ್ಬಂದಿಯವರು ನಿಮ್ಮ ಶಿಲ್ಪ ಸಾವನಪ್ಪಿದ್ದಾಳೆ ಅಂತಾ ಹೇಳಿದರು. ನನ್ನ ಹೆಂಡತಿಯನ್ನು ರಾತ್ರಿಯೆ ವಾರ್ಡಿನಲ್ಲಿ ಭರ್ತಿ ಮಾಡಿದ್ದರೆ, ಅಲ್ಲಿನ ವೈದ್ಯರು ಸರಿಯಾಗಿ ಚಿಕಿತ್ಸೆ ಮಾಡಿದ್ದರೆ ನನ್ನ ಹೆಂಡತಿ ಸಾವನಪ್ಪುತ್ತಿರಲಿಲ್ಲ. ನಿಗದಿತ ಸಮಯದಲ್ಲಿ ವಾರ್ಡಿಗೆ ಭರ್ತಿ ಮಾಡದೆ ನನ್ನ ಹೆಂಡತಿ ಸಾವಿಗೆ ಸರ್ಕಾರಿ ಆಸ್ಪತ್ರೆ ವೈಧ್ಯರು ಕಾರಣರಾಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.