POLICE BHAVAN KALABURAGI

POLICE BHAVAN KALABURAGI

05 September 2013

ಅಪಘಾತ ಪ್ರಕರಣ :

ಚಿಂಚೋಳಿ ಠಾಣೆ : ಶ್ರೀ ಇಬ್ರಾಹಿಮ್ ತಂದೆ ಮೈಮೂದ್ ಸಾಬ ಲಷ್ಕರೆ ಸಾ: ನಿಮಾಹೋಸಳ್ಳಿ  ತಾ: ಚಿಂಚೋಳಿ ದಿನಾಂಕ 04.09.2013 ರಂದು 09.10 ಪಿ ಎಮ್ ಸುಮಾರಿಗೆ ನಮ್ಮ ಮಗಳಾದ ಶ್ರೀಮತಿ ಶರಣಮ್ಮಾ ಎಂಬುವವಳಿಗೆ  ಬಾಣಂತನಕ್ಕಾಗಿ ಇಂದ್ರಪಾಡ ಹೋಸಳ್ಳಿ ಗ್ರಾಮದಿಂದ ಕರೆ ತಂದು ಸರಕಾರಿ ಆಸ್ಪತ್ರೆ ಸುಲೇಪೇಟದಲ್ಲಿ ಸೇರಿಕೆಮಾಡಿರುತ್ತಾರೆ ಅಂತಾ ಫೋನಮಾಡಿ ತನ್ನ ಅಳಿಯನಾದ ಶ್ರೀ ಪ್ರಭು ಪೂಜಾರಿ ಎಂಬುವವನು ತಿಳಿಸಿದ್ದು ನಾನು ಸರಕಾರಿ ಆಸ್ಪತ್ರೆ ಸುಲೆಪೇಠಕ್ಕೆ ಹೋಗಬೇಕೆಂದುರೆ ಯಾವುದೇ ವಾಹನದ ಸೌಕರ್ಯವಿಲ್ಲ ಕಾರಣ ನಮ್ಮ ಅಣ್ಣನ ಮೊಟಾರ ಸೈಕಲ್ ಹೋಗಲು ನಮ್ಮ ಅಣ್ಣನಿಗೆ ಕೆಳಿದಾಗ  ನಮ್ಮ ಮೋಟಾರ ಸೈಕಲನಲ್ಲಿ ಪೆಟ್ರೋಲ್ ಇಲ್ಲಾ  ಚಿಂಚೋಳಿಗೆ ಹೋಗಿ ಹಾಕಿಸಿಕೊಂಡು ಹೋಗೋಣಾ ಅಂತಾ ಅಂದಿದ್ದಕ್ಕೆ ನಮ್ಮ ಅಣ್ಣ ಹಾಗಾದರೆ ನಡೆಯಿರಿ  ಹೋಗೋಣಾ  ಅಂತಾ ಅಂದು ನಮಗೆ ಸರಕಾರಿ ಆಸ್ಪತ್ರೆ ಸುಲೇಪೇಟಕ್ಕೆ ಹೋಗಿ ಸದರಿ ಬಸ್ಸಪ್ಪಾನಿಗೆ ಬಿಟ್ಟು ಮರಳಿ ಮನೆಗೆ  ಬರುವದಾಗಿ  ಹೇಳಿ ನಮ್ಮ ಅಣ್ಣನು ಇತ್ತಿಚಿಗೆ ಖರಿದಿಸಿದ ಹೀರೋ ಹೋಂಡಾ ಸ್ಪ್ಲೆಂಡರ ಮೋಟಾರ ಸೈಕಲ್ ನಂ ಕೆ ಎ 32 ಕೆ 8521 ನೇದ್ದರ ಮೇಲೆ ಕುಳಿತುಕೊಂಡು ನಮ್ಮ ಮನೆಯಿಂದ ಮೋದಲು ಪೆಟ್ರೋಲ್ ಕರಿದಿಗಾಗಿ ಚಿಂಚೋಳಿಗೆ ಹೋಗುವದಾಗಿ ಹೇಳಿ ಹೋರಟು ಹೋದರು . ರಾತ್ರಿ 10.15 ಘಂಟೆ ಸುಮಾರಿಗೆ ಮನೆಯಲ್ಲಿ  ಕುಳಿತುಕೊಂಡಾಗ ಚಿಂಚೋಳಿ- ಗುಲ್ಬರ್ಗಾ ಮೂಖ್ಯ ರಸ್ತೆಯ ಮೇಲೆ ಅಣವಾರ ಕ್ರಾಸದಿಂದ ಸ್ವಲ್ಪ ಮುಂದುದುಗಡೆ ಸರಕಾರಿ ಬಸ್ ಮತ್ತು ಮೋಟಾರ ಸೈಕಲ ಮದ್ಯ ರಸ್ತೆ ಅಪಘಾತವಾಗಿ ಸ್ಥಳದಲ್ಲಿಯೇ ಇಬ್ಬರೂ ಮೃತಪಟ್ಟಿರುತ್ತಾರೆ ಅಂತಾ ಸುದ್ದಿ ಬಂದಿದ್ದರಿಂದ ನಾನು ನಮ್ಮ ಹೂರಿನ ಕೆಲವು ಜನರು ಕೂಡಿಕೊಂಡು ಸ್ಥಳಕ್ಕೆ ಬಂದು ನೋಡಲು ರಸ್ತೆ ಅಪಘಾತದಿಂದ ಮೃತಪಟ್ಟವರು ನನ್ನ ಅಣ್ಣ ನಾದ ಮಹ್ಮದ ಇಸ್ಮಾಯಿಲ್ ಲಷ್ಕರೆ ಮತ್ತು ನಮ್ಮ ಊರಿನ ಬಸ್ಸಪ್ಪಾ ಕಟ್ಟೋಳ್ಳಿ ಎಂಬುವವರೆ ಆಗಿದ್ದು ದ್ದರೂ . ಚೀಂಚೋಳಿಯಿಂದ ಸುಲೇಪೇಠಗೆ ಬರುವಾಗ ಅಣವಾರ ಕ್ರಾಸದಿಂದ ಸ್ವಲ್ಪ ಮುಂದೆ ನಮ್ಮ ಅಣ್ಣನಾದ ಮಹ್ಮದ ಇಸ್ಮಾಯಿಲ್ ಮತ್ತು ನಮ್ಮ ಊರಿನ ಬಸ್ಸಪ್ಪಾ  ಕಟ್ಟೋಳ್ಳಿ ಎಂಬುವವರು ಮೋಟಾರ ಸೈಕಲ್ ಕೆ ಎ 32 ಕೆ 8521 ನೇದ್ದರ ಮೇಲೆ ಹೋರಟಾಗ ಎದುರಿನಿಂದ ಸರಕಾರಿ ಬಸ ನಂ ಕೆಎ  38 ಎಪ್ 444 ನೇದ್ದರ ಚಾಲಕನಾದ ರೂಬೇನ್ ಚಾಲಕ ನಂ 1534 ಎಂಬುವವನು ಸದರಿ ಬಸ್ಸನ್ನು ಅತೀ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಅಣ್ಣನು ಚಲಾಯಿಸಿಕೊಂಡು ಬರುತ್ತಿದ್ದ ಮೋಟರ ಸೈಕಲಗೆ  ಡಿಕ್ಕಿ ಪಡಿಸಿದ್ದರಿಂದ ನಮ್ಮ ಅಣ್ಣನಾದ ಎಮ್ ಇಸ್ಮಾಯಿಲ್  ಮತ್ತು ನಮ್ಮ ಊರಿನ ಬಸ್ಸಪ್ಪನಿಗೆ ತಲೆಗೆ ಬಾರಿ ರಕ್ತ ಗಾಯಗಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.