POLICE BHAVAN KALABURAGI

POLICE BHAVAN KALABURAGI

04 November 2018

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಂಗ್ರಹಿಸದ್ದರ ಮೇಲೆ ದಾಳಿ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 28 ನೇದ್ದರ ಪಟ್ಟೇದಾರರಾದ 1) ಬಸವರಾಜ ತಂದೆ ಶರಣಪ್ಪ ಮೇಲ್ಕೇರಿ 2)ಬಸವರಾಜ ತಂದೆ ತೋಪಣ್ಣ ತಳವಾರ 3)ದತ್ತಪ್ಪ ತಂದೆ ಲಚ್ಚಪ್ಪ 4) ನಿಂಗಪ್ಪ ತಂದೆ ಲಚ್ಚಪ್ಪ 5)ಲಕ್ಷ್ಮಿಬಾಯಿ ಗಂಡ ಮಹಾದೇವಪ್ಪ ರವರು 225 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ದಿನಾಂಕ 03/11/2018 ರಂದು  ಬೆಳಿಗ್ಗೆ 11.45 ಗಂಟೆಯಿಂದ 12.45 ಗಂಟೆಯವರೆಗೆ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 11,25,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 28 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು 10.00 ಎಎಮ್ ಗಂಟೆಗೆ ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 33 ನೇದ್ದರ ಪಟ್ಟೇದಾರರಾದ 1)ಸುರೇಶ ತಂದೆ ಮಲ್ಕಪ್ಪ ತಳವಾರ 2)ಭಾಗವ್ವ ಗಂಡ ಶರಣಪ್ಪ ತಳವಾರ ರವರು 140 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 7,00,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 33 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 03/11/2018 ರಂದು 10.00 ಎಎಮ್ ಗಂಟೆಗೆ ಮಾನ್ಯ ತಹಸಿಲ್ದಾರ ರವರ ಮಾರ್ಗದರ್ಶನದಲ್ಲಿ, ನಾನು ಮತ್ತು ಮಾನ್ಯ ಕಾರ್ಯನಿರ್ವಾಹಕ ಅಭಿಯಂತರರು ಲೋಕೊಪಯೋಗಿ ಇಲಾಖೆ ಅಫಜಲಪೂರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಅಫಜಲಪೂರ ಹಾಗು ಗ್ರಾಮ ಲೆಕ್ಕಾಧಿಕಾರಿ ಶಿವಪೂರ, ಪಿಡಿಓ ಶಿವಪೂರ, ಪೊಲೀಸ್ ಇಲಾಖೆಯಿಂದ ಸಿಪಿಐ ಮತ್ತು ಪಿ.ಎಸ್.ಐ ರವರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಶಿವಪೂರ ಸಿಮಾಂತರದಲ್ಲಿ ಅನಧಿಕೃತವಾಗಿ ಕಳ್ಳತನದಿಂದ ಕೃಷಿ ಜಮೀನ ಸರ್ವೇ ನಂ 38 ನೇದ್ದರ ಪಟ್ಟೇದಾರರಾದ 1) ಭೀಮಶ್ಯಾ ತಂದೆ ಲಚ್ಚಪ್ಪ ಸರ್ವೇ ನಂ 39 ನೇದ್ದರ ಪಟ್ಟೇದಾರರಾದ 2) ಪ್ರಧಾನಿ ತಂದೆ ಶಂಕರ ರವರು 70 ಟಿಪ್ಪರದಷ್ಟು ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತಮ್ಮ ಜಮೀನಿನಲ್ಲಿ ಸಂಗ್ರಹಿಸಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಸಿಕೊಂಡು ಮೇಲಾಧಿಕಾರಿಯವರ ಮೌಖಿಕ ಆದೇಶದಂತೆ ಪಿಡಬ್ಲೂಡಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಸದರಿ ಮರಳಿನ ಅಂದಾಜ ಕಿಮ್ಮತ್ತು 3,50,000/-ರೂಪಾಯಿ ಇರಬಹುದು ಕಳ್ಳತನದಿಂದ ಅಕ್ರಮವಾಗಿ ಮರಳು ಸಂಗ್ರಹಣೆ ಮಾಡಿದ ಶಿವಪೂರ ಸಿಮಾಂತರ ಜಮೀನು ಸರ್ವೇ ನಂ 38,39 ರ ಪಟ್ಟೇದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಅಂತಾ ಶ್ರೀ ಸಂಗಪ್ಪ ಬಗಲಿ ಕಂದಾಯ ನಿರೀಕ್ಷಕರು ಅಫಜಲಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ದತ್ತು ಧನಸಿಂಗ್ ಪವಾರ ಸಾ|| ಗೋಬ್ಬುರವಾಡಿ ರವರದು 1998ರಲ್ಲಿ ಬಳುರ್ಗಿ ತಾಂಡಾದ ಬೇಬಿಬಾಯಿ ಎಂಬುವವಳೊಂದಿಗೆ ಮದುವೆಯಾಗಿದ್ದು ನನಗೆ 1) ಪೂರ್ಣಚಂದ್ರ 2) ಬಸವರಾಜ 3) ಮಂಜುನಾಥ  ಅಂತಾ 3 ಮಕ್ಕಳಿರುತ್ತಾರೆ. 13 ವರ್ಷಗಳಹಿಂದೆ ನನಗೂ ಮತ್ತು ನನ್ನ ಹೆಂಡತಿಗೂ ಸಂಸಾರದ ವಿಷಯದಲ್ಲಿ ಜಗಳವಾಗಿ ಅಂದಿನಿಂದ ನನ್ನ ಹೆಂಡತಿ ಮೂರು ಜನ ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಯಾದ ಬಳುರ್ಗಿ ತಾಂಡಾದಲ್ಲಿ ಮಕ್ಕಳೊಂದಿಗೆ ವಾಸವಿರುತ್ತಾಳೆ 2004ರಲ್ಲಿ ನನ್ನ ಹೆಂಡತಿ ನನ್ನ ಮೇಲೆ ಕಿರುಕುಳ ಕೋಡುತ್ತಿದ್ದಾನೆ ಅಂತಾ ಕೇಸ ಮಾಡಿದ್ದು ಸದರಿ ಕೇಸ ನ್ಯಾಯಾಲಯದಲ್ಲಿ ಸುಳ್ಳು ಅಂತಾ ಆದೇಶವಾಗಿರುತ್ತದೆ. ಪುನಃ 2012 ರಲ್ಲಿ ನನ್ನ ಹೆಂಡತಿ ನನ್ನ ಮೇಲೆ ನಾನು ಎರಡನೇಯ ಮದುವೇಯಾಗಿದ್ದೇನೆ ಅಂತಾ ನ್ಯಾಯಾಲಯದಲ್ಲಿ ಕೇಸ ಮಾಡಿದ್ದು ಸದರಿ ಕೇಸ ನ್ಯಾಯಾಲಯದ ವಿಚಾರಣೆಯಲ್ಲಿದ್ದು ದಿನಾಂಕ 27-10-2018 ರಂದು ಅಂತಿ ಆಧೇಶದಲ್ಲಿರುತ್ತದೆ. ದಿನಾಂಕ 27-10-2018 ರಂದು ನಾನು ನನ್ನ ಹೆಂಡತಿ ಮಾಡಿದ ಕೇಸಿನ ವಿಚಾರವಾಗಿ ಅಫಜಲಪೂರದ ಜೆಎಮ್ಎಫ್ಸಿ ನ್ಯಾಯಾಲಯಕ್ಕೆ ಬಂದು ನ್ಯಾಯಾಲಯದಲ್ಲಿ ಹಾಜರಿ ಮುಗಿಸಿಕೊಂಡು ನ್ಯಾಯಾಲಯದಿಂದ 2.15 ಪಿಎಮ್ ಸುಮಾರಿಗೆ ಹೊರಗೆ ನ್ಯಾಯಾಲಯದ ಮುಂದೆ ನಾನು ಮತ್ತು 1) ಶಂಖರ ತಂದೆ ರಾಮು ರಾಠೋಡ 2) ರಾಘವೇಂದ್ರ ತಂದೆ ಗುರಣ್ಣಾ ರಾಠೋಡ ಮೂರು ಜನರು ಹೋಗುತ್ತಿದ್ದಾಗ ನನ್ನ ಹೆಂಡತಿಯಾದ 1) ಬೇಬಿಬಾಯಿ ನನ್ನ ಹೆಂಡತಿಯ ಅಣ್ಣನಾದ 2) ಮನೋಹರ ತಂದೆ ರತನಸಿಂಗ ರಾಠೋಡ ಹಾಗೂ ನನ್ನ ಮಕ್ಕಳಾದ 3) ಬಸವರಾಜ 4) ಪೂರ್ಣಚಂದ್ರ ಮತ್ತು ನನ್ನ ಹೆಂಡತಿಯ ಅತ್ತೆಯ ಮಗನಾದ 5) ಲಾಲು ತಂದೆ ಹೀರು ರಾಠೋಡ ಸಾ|| ಎಲ್ಲರೂ ಬಳೂರ್ಗಿ ತಾಂಡಾ ಇವರೆಲ್ಲರೂ ನನ್ನ ಹತ್ತಿರ ಬಂಧು ನನಗೆ ಅವಾಚ್ಯ ಶಬ್ದಗಳಿಂದ ಬೈದು ನೀನು ನ್ಯಾಯಾಲಯದಲ್ಲಿ ಕೇಸ ಗೆಲ್ಲಬಹುದು ಆದರೆ ನಾವು ನಿನಗೆ  ಸುಮ್ಮನೆ ಬಿಡುವುದಿಲ್ಲಾ ಅಂತಾ ಹೇಳಿ ಎಲ್ಲರೂ ಕೂಡಿ ಜಗಳ ತೆಗೆದು ನನ್ನ ಹೆಂಡತಿ ಚಪ್ಪಲಿಯಿಂದ ಹೊಡೆದಿರುತ್ತಾಳೆ, ಮತ್ತು ಮಕ್ಕಳು ನನ್ನನ್ನು ಕೈಯಿಂದ ಹೊಡೆದು ನೆಲ್ಲಕೆ ಕೇಡುವಿ ಕಾಲಿನಿಂದ ಒದ್ದಿರುತ್ತಾರೆ, ಮನೋಹರ ರಾಠೋಡ ಇತನು ಅಲ್ಲೆ ಕಂಪೌಂಡ ಹತ್ತಿರ ಬಿದ್ದಿದ್ದ ರಾಡನ್ನು ತೆಗೆದುಕೊಂಡು ಬಂದು ರಾಡಿನಿಂದ ನನ್ನ ಸೊಂಟದ ಮೇಲೆ ಹೊಡೆದಿರುತ್ತಾನೆ, ಸದರಿಯವರು ನನಗೆ ಹೊಡೆಯುತ್ತಿದ್ದಾಗ ನನ್ನ ಜೋತೆಗೆಯಿದ್ದ ಶಂಕರ ರಾಠೋಡ ರಾಘವೇಂದ್ರ ರಾಠೋಡ ಇನ್ನೂ ಕೆಲವು ಜನರು ಕೂಡಿ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ನನ್ನ ಹೆಂಡತಿ ಮತ್ತು ಮಕ್ಕಳು ಹಾಗೂ ಮನೋಹರ ರಾಠೊಡ ಲಾಲು ರಾಠೋಡ ಎಲ್ಲರೂ ನನಗೆ ಮುಂದೆ ನೀನು ಹೇಗೆ ನೌಕರಿ ಮಾಡುತ್ತಿ ನೋಡುತ್ತೇವೆ ನಿನಗೆ ಜೀವಸಹಿತ ಬಿಡುವುದಿಲ್ಲಾ ಎಂದು ಜೀವ ಭಯಹಾಕಿ ರಾಡನಿಂದ ಮತ್ತು ನನ್ನ ಹೆಂಡತಿ ಚಪ್ಪಲಿಯಿಂದ ಹೊಡೆದಾಗ ಚಪ್ಪಲಿ ಹರಿದಿದ್ದರಿಂದ ಅಲ್ಲೆ ಬಿಸಾಕಿ ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಶಿವಕುಮಾರ ತಂದೆ ಭೀಮರಾಯ ವಸ್ತಾರಿ ಸಾಃ ಮಾರಡಗಿ (ಎಸ್.ಎ) ಗ್ರಾಮ ತಾಃ ಜೇವರಗಿ ರವರ ಊರವನಾದ ದೇವಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ, ಈತನು ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಸಿದ್ದಮ್ಮ ಇವಳಿಗೆ ಚುಡಾಯಿಸುವದು ಮತ್ತು ಅವಳು ಹೋದಲೆಲ್ಲ ಹಿಂದೆ ಹಿಂದೆ ಹೋಗುವದು ಮಾಡಿ ನಮ್ಮ ಮಗಳಿಗೆ ಸಲುಗೆಯಿಂದ ಮಾತನಾಡಿ ನಾನು ನಿನಗೆ ಪ್ರೀತಿ ಮಾಡುತ್ತಿದ್ದೆನೆ ಮತ್ತು ನಿನಗೆ ಮದುವೆಯಾಗುತ್ತೆನೆ ಎಂದು ಹೇಳಿ ಅವಳಿಗೆ ಸುಮಾರು 2 ವರ್ಷದಿಂದ ತೊಂದರೆ ಕೊಟ್ಟಿರುತ್ತಾನೆ. ಈ ವಿಷಯ ನಮ್ಮ ಮಗಳು ನಮಗೆ ಹೇಳಿದಾಗ ನಾನು ಮತ್ತು ನನ್ನ ಹೆಂಡತಿ ದೇವಪ್ಪನ ಮನೆಗೆ ಹೋಗಿ ದೇವಪ್ಪನಿಗೆ ಮತ್ತು ಅವನ ಅಣ್ಣಂದಿರರಿಗೆ ಹಾಗೂ ತಾಯಿಯವರಿಗೆ ನಮ್ಮ ಮಗಳು ಚಿಕ್ಕವಳಿರುತ್ತಾಳೆ. ಹೀಗೆ ಮಾಡುವುದು ಸರಿಯಲ್ಲಾ ಎಂದು ಬುದ್ದಿವಾದ ಹೇಳಿದ್ದು ದಿನಾಂಕ 30.10.2018 ರಂದು ರಾತ್ರಿ ನಾನು ಮತ್ತು ನನ್ನ ನನ್ನ ಹೆಂಡತಿ ಹಾಗೂ ಮಕ್ಕಳು ಮನೆಯಲ್ಲಿ ಊಟ ಮಾಡಿ ಮನೆಯಲ್ಲಿ ಮಗಿಕೊಂಡಿರುತ್ತೆವೆ. ರಾತ್ರಿ 11-45 ಗಂಟೆಯ ಸುಮಾರಿಗೆ ಮನೆಯಲ್ಲಿ ಸಪ್ಪಳ ಆಗಿದ್ದರಿಂದ ಎದ್ದು ನೋಡಲಾಗಿ ನನ್ನ ಮಗಳು ಸಿದ್ದಮ್ಮ ಇವಳು ಏಕಿ ಮಾಡಲು ಎದ್ದಿರುತ್ತೆನೆಂದು ಹೇಳಿ ಮನೆಯಿಂದ ಹೊರಗೆ ನಮ್ಮ ಮನೆಯ ದೊಡ್ಡಿಯ ಕಡೆಗೆ ಹೋದಳು. ಅವಳು ಬಹಳ ಸಮಯವಾದರು ಮರಳಿ ಮನೆಯೊಳಗೆ ಬರಲಿಲ್ಲ ಅದಕ್ಕೆ ನಾನು ಮನೆಯಿಂದ ಹೊರಗೆ ಬಂದು ದೊಡ್ಡಿಯ ಕಡೆಗೆ ಹೋಗಿ ನೋಡಲು ನಮ್ಮ ಮಗಳು ಅಲ್ಲಿ ಕಾಣಲಿಲ್ಲ. ನಾನು ನನ್ನ ಹೆಂಡತಿಗೆ ವಿಷಯ ತಿಳಿಸಿ ನಾವಿಬ್ಬರು ಅಕ್ಕಪ್ಪಕ್ಕದ ಮನೆಯವರಿಗೆ ಕೇಳಿ ಊರಲ್ಲಿ ಹುಡುಕಾಡಿದರು ನಮ್ಮ ಮಗಳು ಸಿಕ್ಕಿರುವುದಿಲ್ಲ. ದಿನಾಂಕ;. 31.10.2018 ರಂದು ಮುಂಜಾನೆ 6.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ನಮ್ಮ ಮಗಳಿಗೆ ಹುಡುಕುತ್ತಾ ನಮ್ಮೂರ ಮಸೂದಿಯ ಹತ್ತಿರ ಬಂದಾಗ ಅಲ್ಲಿ ನಮ್ಮ ಸಂಭಂಧಿಕರಾದ ಬಸವರಾಜ ತಂದೆ ಚಂದಪ್ಪ ಹೇರೂರ ಈತನು ಸಿಕ್ಕಾಗ ಅವನಿಗೆ ನಮ್ಮ ಮಗಳು ಸಿದ್ದಮ್ಮಳು ರಾತ್ರಿ ಮನೆಯಿಂದ ಏಕಿ ಮಾಡಲು ಹೊರಗೆ ಬಂದು ಮರಳಿ ಬಂದಿರುವುದಿಲ್ಲಾ ಎಲ್ಲಿಗೆ ಹೋಗಿರುತ್ತಾಳೆಂಬುದು ಗೊತ್ತಾಗಿರುವುದಿಲ್ಲಾ ಎಲ್ಲಿಯಾದರು ನೋಡಿದ್ದಿಯೇನು ಎಂದು ಕೇಳಿದಾಗ ಅವನು ಹೇಳಿದ್ದೆನೆಂದರೆ ದಿನಾಂಕ; 31/10/2018 ರಂದು ರಾತ್ರಿ 12-05 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಹೊರಗಡೆ ಎತ್ತುಗಳಿಗೆ ಮೇವು ಹಾಕಲು ಬಂದಿದ್ದಾಗನಮ್ಮೂರ ದೇವಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ ಇತನು ತನ್ನ ಟಂ-ಟಂ ದಲ್ಲಿ ಸಿದ್ದಮ್ಮಳಿಗೆ ಕೂಡಿಸಿಕೊಂಡು ಮುದಬಾಳ(ಬಿ) ಕ್ರಾಸ್ ಕಡೆಗೆ ಹೋಗುವುದು ನಾನು ನೊಡಿರುತ್ತೇನೆ. ನಾನು ಕೈ ಮಾಡಿದರು ಟಂ-ಟಂ ನಿಲ್ಲಿಸದೆ ಹಾಗೇ ನಡೆಯಿಸಿಕೊಂಡು ಹೋಗಿರುತ್ತಾನೆ. ಕತ್ತಲಲ್ಲಿ ಟಂಟಂ ವಾಹನದ ನಂಬರ ಕಂಡಿರುವುದಿಲ್ಲ. ಎಂದು ತಿಳಿಸಿದನು. ನಂತರ ದಿನಾಂಕ; 31/10/2018 ರಂದು ಮುಂಜಾನೆ 10-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡಿ ದೇವಪ್ಪ ಈತನ ಮನೆಗೆ ಹೋಗಿ ವಿಚಾರಿಸಲು ದೇವಪ್ಪ ಇತನು ಮನೆಯಲ್ಲಿ ಇದ್ದಿರಲಿಲ್ಲ. ನಮ್ಮ ಮಗಳ ಬಗ್ಗೆ ಅವರಿಗೆ ಕೇಳಲಾಗಿ, ದೇವಪ್ಪನ ಅಣ್ಣಂದಿರಾದ 1) ಸಾಯಿಬಣ್ಣಾ ತಂದೆ ಭೀಮರಾಯ ಸೊಮನಾಥಹಳ್ಳಿ, 2) ಸಿದ್ದಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 3) ಮಲ್ಲಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 4) ಅಂಬಮ್ಮ ಗಂಡ ಭೀಮರಾಯ ಸೊಮನಾಥಹಳ್ಳಿ 5) ಲಕ್ಷ್ಮೀಬಾಯಿ ಗಂಡ ಭೀಮರಾಯ ಸೊಮನಾಥಹಳ್ಳಿ ಇವರೆಲ್ಲರೂ ಕೂಡಿ ನನಗೆ ಏ ಬೊಸಡಿ ಮಗನೆ ದೇವಪ್ಪ ನಿನ್ನ ಮಗಳಿಗೆ ತೆಗೆದುಕೊಂಡು ಹೋಗಿದ್ದರೆ ನಾವೇನು ಮಾಡಬೇಕು?. ನಾವೇ ಕಳಿಸಿದ್ದೆವೆ. ರಂಡಿ ಮಕ್ಕಳೆ ನೀವು ನಮ್ಮದು ಏನು ಕಿತ್ತಿಕೊಳಲಿಕ್ಕೆ ಆಗುವುದಿಲ್ಲ. ನಮ್ಮ ಹಿಂದೆ ಮಹಾದೇವಯ್ಯ ತಂದೆ ಮಹಾಂತಯ್ಯ ಸ್ವಾಮಿ ಇದ್ದಾನೆ ನೀವು ನಮ್ಮ ತಂಟೆಗೆ ಬಂದರೆ ಉಳಿಯುವದಿಲ್ಲ ಎಂದು ಜೀವದ ಭೆದರಿಕೆ ಹಾಕಿರುತ್ತಾರೆ, ನಂತರ ನಮ್ಮೂರ ಭೀಮರಾಯ ತಂದೆ ಹುಲೇಪ್ಪ ಹೇರೂರ, ಭೀಮರಾಯ ತಂದೆ ದೇವಪ್ಪ ವಸ್ತಾರಿ ಇವರು ಬಂದು ತಿಳಿ ಹೇಳಿ ಅಲ್ಲಿಂದ ಕಳಿಸಿರುತ್ತಾರೆ. \ ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಸಿದ್ದಮ್ಮ ಇವಳಿಗೆ ಚುಡಾಯಿಸಿ, ಪ್ರೀತಿ ಮಾಡುತ್ತೆನೆ ಮತ್ತು ಮದುವೆ ಮಾಡಿಕೊಳುತ್ತೆನೆ ಎಂದು ಅವಳಿಗೆ ನಂಬಿಸಿ ತಲೆ ಕೆಡಿಸಿ ಪುಸಲಾಯಿಸಿ ಅಪಹರಿಸಿಕೊಂಡು ಟಂ-ಟಂದ ಲ್ಲಿ ಕರೆದುಕೊಂಡು ಹೋಗಿರುತ್ತಾನೆ. ಅದಕ್ಕೆ 1) ಸಾಯಿಬಣ್ಣಾ ತಂದೆ ಭೀಮರಾಯ ಸೊಮನಾಥಹಳ್ಳಿ, 2) ಸಿದ್ದಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 3) ಮಲ್ಲಪ್ಪ ತಂದೆ ಭೀಮರಾಯ ಸೊಮನಾಥಹಳ್ಳಿ 4) ಅಂಬಮ್ಮ ಗಂಡ ಭೀಮರಾಯ ಸೊಮನಾಥಹಳ್ಳಿ 5) ಲಕ್ಷ್ಮೀಬಾಯಿ ಗಂಡ ಭೀಮರಾಯ ಸೊಮನಾಥಹಳ್ಳಿ ಮತ್ತು 6) ಮಹಾದೇವಯ್ಯ ತಂದೆ ಮಹಾಂತಯ್ಯ ಸ್ವಾಮಿ ಇವರೆಲ್ಲರು ಕುಮ್ಮಕ್ಕು ನೀಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.