POLICE BHAVAN KALABURAGI

POLICE BHAVAN KALABURAGI

01 April 2017

Kalaburagi District Reported Crimes

ಕೊಲೆ ಪ್ರಕರಣ :
ಸೇಡಂ ಠಾಣೆ : ಶ್ರೀ ಹಣಮಂತ ತಂದೆ ಯಂಕಪ್ಪ ವಡ್ಡರ ಸಾ|| ಬಟಗೇರಾ(ಕೆ) ಗ್ರಾಮ, ತಾ|| ಸೇಡಂ ಇವರ ಅಣ್ಣನಾದ ನಾಗಪ್ಪ ಮರಣಹೊಂದಿದ್ದರಿಂದ, ಅವನ ಹೊಲ ನಾವೆ ನೋಡಿಕೊಳ್ಳುತ್ತಿದ್ದು, ಅದರ ಸಂಬಂಧ ನಮ್ಮ ಅಣ್ಣನಾದ ಬಸಪ್ಪ ತಂದೆ ಯಂಕಪ್ಪ ಇವನಿಗೂ ನನಗೂ ಆಗಾಗ ಬಾಯಿ ಮಾತಿನ ಜಗಳವಾಗಿರುತ್ತದೆ. ಹೀಗಿದ್ದು, ದಿನಾಂಕ: 28-03-2017 ರಂದು ರಾತ್ರಿ 08:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿಯಾದ ದ್ರೌಪತಿ ಮನೆಯಲ್ಲಿದ್ದಾಗ, ನಮ್ಮ ಅಣ್ಣನಾದ ಬಸಪ್ಪ ಹಾಗು ಅವನ ಹೆಂಡತಿ ನಾಗೆಂದ್ರಮ್ಮ ಇಬ್ಬರೂ ಕೂಡಿಕೊಂಡು ಬಂದು ನಮ್ಮ ಮನೆಯ ಎದುರುಗಡೆ ನಿಂತು ಏ ರಂಡಿ ಮಗನೆ ಹಣಮ್ಯಾ ಚೋದಿ ಮಗನೆ ಮನೆಯ ಹೊರಗಡೆ ಬಾ ನಾಗಪ್ಪನ ಆಸ್ತಿ ನೀವೆ ತಿನ್ನುತ್ತಿರುವಿರಾ ಭೋಸಡಿ ಮಕ್ಕಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಮತ್ತು ನನ್ನ ಹೆಂಡತಿ ಮನೆಯಿಂದ ಹೊರಗಡೆ ಬಂದೆವು. ನಾನು ಯಾಕೆ ಈ ತರಹ ಬೈಯುತ್ತಿದ್ದಿ ಅಂತಾ ಅಂದಿದ್ದಕ್ಕೆ ನನಗೆ ತಡೆದು ನಿಲ್ಲಿಸಿ ಏ ರಂಡಿ ಮಗನೆ ಅಂತಾ ಬೈಯ್ದು ತನ್ನ ಹತ್ತಿರ ಇದ್ದ ಚಾಕುವಿನಿಂದ ಹೊಟ್ಟೆಗೆ ಹಾಗು ಎಡಗೈಯ ರಟ್ಟೆಗೆ ಮತ್ತು ಎದೆಗೆ ಚುಚ್ಚಿದನು ಮತ್ತು ಅದೆ ಚಾಕುವಿನಿಂದ ನನ್ನ ಹೆಂಡತಿಯ ಎಡ ಎದೆಗೆ ಚುಚ್ಚಿದನು. ಅದೆ ವೇಳೆಗೆ ನನ್ನ ಹೆಂಡತಿಗೆ ನಾಗೆಂದ್ರಮ್ಮ ಇವಳು ಕೂಡ ಕೈಯಿಂದ ಹೊಡೆದಿರುತ್ತಾಳೆ. ಸದರ ಘಟನೆಯಿಂದ ತಿವ್ರ ಗಾಯಗೊಂಡು ನಾನು ಮೂರ್ಛೆ ಹೋದೆನು. ನನಗೆ ಎಚ್ಚರವಾದಾಗ ಆಸ್ಪತ್ರೆಯಲ್ಲಿದ್ದು, ನನಗೆ ಹೊಟ್ಟೆಗೆ, ಎಡಗೈಗೆ, ಎದೆಗೆ ನೋಡಿಕೊಳ್ಳಲಾಗಿ ತಿವ್ರ ಹಾಗು ಬಲವಾದ ಗಾಯಗಳಾಗಿದ್ದವು. ನನ್ನ ಹೆಂಡತಿಗೆ ನೋಡಲಾಗಿ ಆಕೆಗು ಕೂಡ ಎದೆಗೆ ಚಾಕುವಿನಿಂದ ಇರಿದರಿಂದ ಬಲವಾದ ಗಾಯವಾಗಿತ್ತು. ಸದರ ಜಗಳವಾದ ಬಗ್ಗೆ ನಮ್ಮ ಅಣ್ಣನಾದ ತಿರುಮಲ, ಮಲ್ಲಣ್ಣ ದೊಡ್ಡಮನಿ, ಮಹಾದೇವಿ ಹಾಗು ವೆಂಕಟಪ್ಪ ನೋಡಿದ್ದು, ಇವರೆ ನನಗೆ ಹಾಗು ನನ್ನ ಹೆಂಡತಿಗೆ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಸೇಡಂಕ್ಕೆ ತಂದು ಸೇರಿಕೆ ಮಾಡಿ ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿದ ಬಗ್ಗೆ ತಿಳಿಸಿದರು. ದಿನಾಂಕ:01-04-2017 ರಂದು ಸದರಿ ಪ್ರಕರಣದಲ್ಲಿ ಭಾರಿ ಗಾಯಹೊಂದಿ ಉಪಚಾರದಲ್ಲಿ ಇದ್ದ ಗಾಯಾಳು ಹಣಮಂತ ತಂದೆ ಯಂಕಪ್ಪ ವಡ್ಡರ, ಸಾ:ಬಟಗೆರಾ(ಕೆ) ಗ್ರಾಮ, ಈತನು ಉಪಚಾರ ಹೊಂದುತ್ತಾ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಪಘಾತ ಪ್ರಕರಣಗಳು:
ಫರತಾಬಾದ ಠಾಣೆ : ದಿನಾಂಕ 30/03/2017 ರಂದು ರಾತ್ರಿ ಮೋ/ಸೈ ನಂ ಕೆಎ-32  ಇಡಿ 9813 ನ್ಭೆದ್ದರ ಸವಾರ ತನ್ನ ಮೋ/ಸೈ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ಶ್ರೀ ನಿಂಗನಗೌಡ ತಂದೆ ಸಿದ್ದನಗೌಡ ಪಾಟೀಲ  ಸಾ : ಮಲ್ಲಾ(ಬಿ) ತಾ: ಸುರಪ್ರರ ಹಾ :ವ : ಪೋಲಿಸ್ ವಸತಿ  ಗೃಹ ಜೇವರ್ಗಿ ರವರ ಮೋಟಾರ ಸೈಕಲಗೆ ಕೇಂದ್ರ ಕಾರಗೃಹ ಕಲಬುರಗಿ ಹತ್ತೀರ ಡಿಕ್ಕಿ ಪಡಿಸಿ ಫಿರ್ಯದಿಗೆ ಮತ್ತು ಇನ್ನೋಬ್ಬನಿಗೆ ಡಿಕ್ಕಿ ಪಡಿಸಿ   ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರಾತಬಾದ ಠಾಣೆ :  ದಿನಾಂಕ 30/03/2017 ರಂದು ಟಂ,ಟಂ ನಂ ಕೆಎ32 ಎ-5789 ನ್ಭೆದ್ದರ ಚಾಲಕ ತನ್ನ  ಟಂ.ಟಂ ಅತೀ ವೇಗ ಮತ್ತು ಅಜಾಗುರಕತೆಯಿಂದ ಚಲಾಯಿಸಿ ಶ್ರೀ ಶರಣಪ್ಪ ತಂದೆ ಬಸಣಗೌಡ ಹಾಲಗಡಲಿ ಸಾ : ಹಾಗರಗುಂಡಗಿ  ರವರ ಸ್ಕೂಟರಗೆ ಎನ್.ಹೆದ್. 218 ರೋಡಿನ ಮೆಲೆ ಫರಹತಾಬಾದ ಗ್ರಾಮದ   ಬೈಪಾಸ್ ಹತ್ತೀರ ಡಿಕ್ಕಿ ಪಡಿಸಿ ಫಿರ್ಯಾದಿಗೆ ಗಾಯ ಗೋಳಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.