POLICE BHAVAN KALABURAGI

POLICE BHAVAN KALABURAGI

05 April 2014

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 04-04-2014 ಶ್ರೀ ಹಣಮಂತರಾಯ ತಂದೆ ಮಹಾದೇವಪ್ಪಾ ಪೂಜಾರಿ  ಸಾ; ಭೀಮಳ್ಳಿ ತಾ;ಜಿ;ಗುಲಬರ್ಗಾ ಇವರು ಆಳಂದ ಗುಲಬರ್ಗಾ ರೋಡಿನ ಸಂತೋಷ ದಾಬ ದಾಟಿ  ರೈಲ್ವೆ ಬ್ರೀಜ  ಇನ್ನೂ ಸ್ವಲ್ಪ ದೂರ ಇರುವಾಗ ಪ್ರಭುಲಿಂಗ ಟೆಂಗಿನ ಇವರ ಹೊಲದ ಹತ್ತಿರ ಒಬ್ಬ ವ್ಯಕ್ತಿಯ ಮೃತ ದೆಹವು ರೋಡಿನ ಉತ್ತರದ ಬದಿಗೆ  ಬಿದ್ದಿದ್ದು ಆಗ ನಾನು ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಅಪರಿಚಿನಾಗಿದ್ದು  ಆತನ ವಯಸ್ಸು ಅಂದಾಜು 45-50 ವರ್ಷದವನಿದ್ದು, ಆತನ ವೇಷಭೂಷಣ ನೋಡಿದಾಗ  ಅವನು ಭೀಕ್ಷುಕನಂತೆ ಕಾಣುತಿದ್ದು  ಅವನ ತಲೆ ಪೂರ್ತಿ ಒಡೆದಿದ್ದು ,ಮುಖ ಪೂರ್ತಿ ಜಜ್ಜಿ ಹೋಗಿದ್ದು , ಚಹರೆ ಸರಿಯಾಗಿ ಗುರ್ತಿಸಲು ಆಗುತ್ತಿಲ್ಲಾ , ಹೊಟ್ಟೆಯಲ್ಲಿನ ಕರಳುಗಳು ಹೊರ ಬಂದಿದ್ದು  , ಎರಡು ಕೈ ಗಳು ಮತ್ತು ಕಾಲುಗಳು ಪೂರ್ತಿ  ಮುರಿದು ಹೋಗಿದ್ದು ಇರುತ್ತದೆ. ದಿನಾಂಕ.4-4-2014 ರಂದು ಮದ್ಯ ರಾತ್ರಿ 12-00 ಗಂಟೆಯಿಂದ ಬೆಳಗ್ಗಿನ ಜಾವ 8-00ಗಂಟೆಯ ಮದ್ಯದ  ಅವಧಿಯಲ್ಲಿಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಸದರಿ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದು  ಅಫಘಾತ ಪಡಿಸಿ ಅವನ ಮೇಲಿಂದ ಹಾಯಿಸಿಕೊಂಡು ಹೋಗಿದ್ದರಿಂದ  ಸದರಿ ವ್ಯಕ್ತಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅನುಮಾನಸ್ಪದ ವ್ಯಕ್ತಿಯ ಬಂಧನ :
ಎಮ್. ಬಿ. ನಗರ ಠಾಣೆ : ದಿನಾಂಕಃ 04-04-2014 ರಂದು ಬೆಳಗ್ಗೆ 04:15 ಎ.ಎಂ. ಸುಮಾರಿಗೆ ಒಬ್ಬ ವ್ಯಕ್ತಿ ನಿಂತಿದ್ದು ನಮ್ಮನ್ನು ನೋಡಿ ತನ್ನ ಮುಖ ಮರೆ ಮಾಚಿಕೊಂಡು ಸಂಶಯ ಬರುವ ರೀತಿಯಲ್ಲಿ ನಿಂತಿದ್ದು ಅಲ್ಲದೇ ಗುಬ್ಬಿ ಕಾಲೋನಿ ಕಡೆಗೆ ಓಡ ತೊಡಗಿದನು. ಸದರಿಯವನ ಮೇಲೆ ಸಂಶಯ ಬಂದು ನಾವು ಬೇನ್ನಟ್ಟಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲು, ಸದರಿಯವನು ತನ್ನ ಹೆಸರು ಹಾಸೇನ ತಂದೆ ಖಾಜಾಮಿಯಾಂ ಮಕಾನ್ದಾರ ವಯಃ 26 ವರ್ಷ ಉಃ ಆಟೋ ಚಾಲಕ ಜಾತಿಃ ಮುಸ್ಲಿಂ ಸಾಃ ಮಿಲ್ಲತ ನಗರ ಬಂದೂಕವಾಲಾ ಕಾಟಾ ಹತ್ತಿರ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನಿಗೆ ಯಾಕೆ ತನ್ನ ಮುಖ ಮರೆ ಮಾಚಿಕೊಂಡು ಓಡುತ್ತಿದ್ದಿ, ಈ ಸಮಯಕ್ಕೆ ಇಲ್ಲಿ ಯಾಕೆ ಓಡಾಡುತ್ತಿದ್ದಿ, ಅಂತಾ ಕೇಳಿದಕ್ಕೆ ಸದರಿಯವನು ಯಾವುದೇ ಸಮರ್ಪಕವಾದ ಉತ್ತರ ನೀಡಲಿಲ್ಲ. ಸದರಿಯವನನ್ನು ಹಾಗೆಯೇ ಬಿಟ್ಟಲ್ಲಿ ಯಾವುದಾದರು ಸ್ವತ್ತಿನ ಅಪರಾಧ ಮಾಡಬಹುದೆಂದು ಸಂಶಯ ಕಂಡು ಬಂದಿದ್ದು ನಂತರ ಸದರಿ ಅಪಾಧಿತನನ್ನು ದಸ್ತಗಿರಿ ಮಾಡಿಕೊಂಡು ಠಾಣೆಗೆ ಬಂದು ಸದರಿಯವನ ವಿರುದ್ಧ ಎಮ್.ಬಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.