POLICE BHAVAN KALABURAGI

POLICE BHAVAN KALABURAGI

25 April 2016

KALABURAGI DISTRICT REPORTED CRIMES.

ಅಫಜಲಪೂರ ಠಾಣೆದಿನಾಂಕ 24-04-2016 ರಂದು 2:45 ಪಿಎಮ್ ಕ್ಕೆ ನಮ್ಮ ಠಾಣೆಯ ಪಿಸಿ-801 ಸುರೇಶ ಇವರು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ಕೊಟ್ಟಿದ್ದು, ಸದರಿ ವರದಿಯ ಸಾರಾಂಶವೆನೆಂದರೆ  ನಾನು ಸುರೇಶ ಸಿಪಿಸಿ-801 ಅಫಜಲಪೂರ ಪೊಲೀಸ್ ಠಾಣೆ ಆದ ನಾನು ವಿನಂತಿಸಿಕೊಳ್ಳುವುದೆನೆಂದರೆ, ಇಂದು ದಿನಾಂಕ 24-04-2016 ರಂದು 2:00 ಪಿ ಎಮ್ ಕ್ಕೆ ತಮ್ಮ ಆದೇಶದಂತೆ ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯ ಹಾಗೂ ಗುಪ್ತ ಮಾಹಿತಿ ಸಗ್ರಹಿಸಲು ಠಾಣೆಯಿಂದ ಹೊರಟು, ಪೆಟ್ರೊಲಿಂಗ ಮಾಡುತ್ತಾ ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ 2:30 ಪಿಎಮ್ ಕ್ಕೆ ಬಂದಾಗ, ಒಬ್ಬ ವ್ಯಕ್ತಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಅಲಿಂದ ಹೋಗಿ ಬರುವ ಜನರಿಗೆ ಅವಾಚ್ಯವಾಗಿ ಬೈಯುವುದು ಅಸಬ್ಯ ರೀತಿಯಿಂದ ವರ್ತಿಸುವುದು ಹಾಗೂ ಒದರಾಡುವುದು ಕೂಗಾಡುವುದು ಮಾಡಿ ಸಾರ್ವಜನಿಕರ ಶಾಂತಿ ಭಂಗವಾಗುವಂತೆ ವರ್ತಿಸುತ್ತಿದ್ದನು. ಹಾಗೂ ಸದರಿಯವನು ತನ್ನ ಕೈಗಳನ್ನು ಹಾಗೂ ತನ್ನ ಕಾಲುಗಳನ್ನು ಬಸ್ ನಿಲ್ದಾಣದ ಕಂಪೌಂಡ ಗೊಡೆಗೆ ಹೊಡೆದುಕೊಳ್ಳುವುದು ಮಾಡುತ್ತಿದ್ದನು. ಸದರಿಯವನಿಂದ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಹಾಗೂ ಅಲ್ಲಿ ತಿರುಗಾಡುವ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಕೊಟ್ಟು ಸ್ಥಳದಲ್ಲಿ ಉದ್ದಿಗ್ನ ವಾತಾವರಣ ಉಂಟು ಮಾಡುತ್ತಿದ್ದನು. ಮತ್ತು ತನ್ನ ಬಟ್ಟೆಗಳನ್ನು ಬಿಚ್ಚಿಕೊಳ್ಳುವುದು ಮಾಡಿ ಅಸಬ್ಯವಾಗಿ ವರ್ತಿಸುತ್ತಿದ್ದನು, ಸದರಿಯವನು ಸಾರ್ವಜನಿಕರ ಶಾಂತಿ ಭಂಗವನ್ನುಂಟು ಮಾಡುತ್ತಿದ್ದರಿಂದ, ಸದರಿಯವನನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶಿವಾನಂದ ತಂದೆ ಚಂದ್ರಕಾಂತ ಹಡಪದ ವಯಾ|| 21 ವರ್ಷ ಜಾ|| ನಾವಿ ಉ|| ವಿದ್ಯಾರ್ಥಿ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ ಅಂತಾ ಏರು ಧ್ವನಿಯಲ್ಲಿ ಹೇಳಿದನು. ಸದರಿಯವನನ್ನು ಅದೇ ಸ್ಥಳದಲ್ಲಿ ಬಿಟ್ಟಲ್ಲಿ ಪುನ ಸಾರ್ವಜನಿಕರ ಶಾಂತಿ ಭಂಗವುಂಟು ಮಾಡುತ್ತಿದ್ದರಿಂದ ಹಾಗೂ ತನ್ನ ಮೈಗೆ ತಾನೆ ಹೊಡೆದುಕೊಳ್ಳುತ್ತಿದ್ದರಿಂದ ಮತ್ತು ಸದರಿಯವನಿಂದ ಪಟ್ಟಣದಲ್ಲಿ ಅಹಿತಕರ ಘಟನೆಗಳು ಜರುಗುವ ಸಂಭವ ಇರುವುದರಿಂದ ಸದರಿಯವನನ್ನು ಹಿಡಿದುಕೊಂಡು ಠಾಣೆಗೆ 2:45 ಪಿ.ಎಂ ಕ್ಕೆ ಬಂದು ಸದರಿಯವನ ವಿರುದ್ದ ಮಾನ್ಯರವರು ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ವರದಿ ಸಲ್ಲಿಸಿದ್ದು ಇರುತ್ತದೆ. ಅಂತ ನಿಡಿದ ಸದರಿ ಸಾರಂಶದ ಪ್ರಕಾರ ಪ್ರಕರಣ  ವರದಿಯಾಗಿರುತ್ತದೆ..
ಅಫಜಲಪೂರ ಠಾಣೆ : ದಿನಾಂಕ 24-04-2016 ರಂದು 1:40 ಪಿ ಎಮ್ ಕ್ಕೆ ಮಾನ್ಯ ಪಿಎಸ್ಐ ಸಾಹೇಬರು ಒಂದು ಮರಳು ತುಂಬಿದ ಟ್ಯಾಕ್ಟರ ಮತ್ತು ಒಬ್ಬ ಆರೋಪಿತನೊಂದಿಗೆ ಠಾಣೆಗೆ ಬಂದು ವರದಿ ಹಾಜರ ಪಡಿಸಿದ್ದು, ಸದರ ವರದಿಯ ಸಾರಂಶವೆನೆಂದರೆ ನಾನು ಸಿದರಾಯ ಭೋಸಗಿ ಪಿಎಸ್ಐ ಅಫಜಲಪೂರ ಪೊಲೀಸ್ ಠಾಣೆ ಈ ಮೂಲಕ ವರದಿಯನ್ನು ಗಣಕಿಕರಿಸಿ ಕೊಡುವುದೇನೆಂದರೆ. ಇಂದು ದಿನಾಂಕ 24-04-2016 ರಂದು 11:30 ಎ ಎಮ್ ಕ್ಕೆ ಸಂಗಡ ನಮ್ಮ ಸಿಬ್ಬಂದಿಯವರಾದ  ಗುಂಡಪ್ಪ ಪಿಸಿ-339, ಸುರೇಶ ಸಿಪಿಸಿ-801 ರವರನ್ನು ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೇಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಮಾಹಿತಿ ಬಂದಿದ್ದೆನೆಂದರೆ, ಶಿವಪೂರ ಗ್ರಾಮದ ಕಡೆಯಿಂದ ಒಬ್ಬ ವ್ಯಕ್ತಿ ತನ್ನ ಟ್ಯಾಕ್ಟರನಲ್ಲಿ ಮರಳು ತುಂಬಿಕೊಂಡು ಅಫಜಲಪೂರ ಕಡೆ ಹೊರಟಿರುತ್ತಾನೆ ಅಂತಾ ಬಾತ್ಮಿ ಬಂದ ಮೇರೆಗೆ ಮರಳಿ ಠಾಣೆಗೆ ಬಂದು  ಇಬ್ಬರು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಸೊಂದಪ್ಪ ತಂದೆ ಪರಮೇಶ್ವರ ಹೊಸಮನಿ ಸಾ: ಇಬ್ಬರು ಅಫಜಲಪೂರ ಇವರನ್ನು ಠಾಣೆಗೆ ಬರಮಾಡಿಕೊಂಡು ವಿಷಯವನ್ನು ತಿಳಿಸಿದ್ದು ಸದರಿಯವರು ಪಂಚರಾಗಲು ಒಪ್ಪಿಕೊಂಡ ನಂತರ ನಾನು ಪಂಚರು ಮತ್ತು ನಮ್ಮ ಸಿಬ್ಬಂದಿಯವರಾದ ಗುಂಡಪ್ಪ ಪಿಸಿ-339, ಸುರೇಶ ಪಿಸಿ 801 ರವರೇಲ್ಲರು ಕೂಡಿ ನಮ್ಮ ಪೊಲೀಸ್ ವಾಹನದಲ್ಲಿ 11:45 ಎ ಎಮ್ ಕ್ಕೆ ಠಾಣೆಯಿಂದ ಹೊರಟು. 12:05 ಪಿ ಎಮ್ ಕ್ಕೆ ಬನ್ನಟ್ಟಿ ಕ್ರಾಸ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟ್ಯಾಕ್ಟರ ಮರಳು ತುಂಬಿಕೊಂಡು ಬರುತ್ತಿತ್ತು. ಅದನ್ನು ನೋಡಿ ನಾವು ಸದರಿ ಟ್ಯಾಕ್ಟರನ್ನು ನಿಲ್ಲಿಸಿ. ಟ್ಯಾಕ್ಟರ ಚಾಲಕನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಳೆಂದ್ರ ತಂದೆ ಮಲಕಯ್ಯ ಮಠ ವಯಾ|| 25 ವರ್ಷ ಜಾ|| ಜಂಗಮ ಉ|| ಟ್ಯಾಕ್ಟರ ನಂ ಕೆಎ-28 ಟಿಬಿ-6391 ನೇದ್ದರ ಚಾಲಕ ಸಾ|| ಶಿವಪೂರ ತಾ|| ಅಫಜಲಪೂರ ಅಂತ ತಿಳಿಸಿದನು ಆಗ ನಾನು ಪಂಚರ ಸಮಕ್ಷಮ ಸೆದರಿ ಟ್ಯಾಕ್ಟರನ್ನು ಚೆಕ್ ಮಾಡಲಾಗಿ, ಸದರಿ ಟ್ಯಾಕ್ಟರನಲ್ಲಿ ಮರಳು ತುಂಬಿದ್ದು ಇತ್ತು, ಅದರ ನಂಬರ ಚೆಕ್ ಮಾಡಲಾಗಿ ಟ್ಯಾಕ್ಟರ ಇಂಜೆನ್ ಮುಂದೆ ಇದ್ದ ನಂಬರ ಕಾಣದಂತೆ ಅದಕ್ಕೆ ಕಪ್ಪು ಬಣ್ಣದ ಸ್ಟೀಕ್ಕರ ಹಚ್ಚಿತ್ತು, ನಂತರ ಇಂಜೆನ್ ಹಿಂದೆ ನೋಡಲು ಅದರ ಮೇಲೆ ನಂಬರ ಬರೆದಿದ್ದು ನಂ ಕೆಎ-28 ಟಿಬಿ-6391 ಅಂತಾ ಇತ್ತು. ಸದರಿ ಟ್ಯಾಕ್ಟರ ಅ.ಕಿ 2,00,000/-ರೂ ಅಂತಾ ಇರಬಹುದು. ಸದರಿ ಟ್ಯಾಕ್ಟರನಲ್ಲಿದ್ದ ಮರಳು ಅಂದಾಜು 3,000/- ರೂ ಕಿಮ್ಮತ್ತಿನದು ಇರಬಹುದು. ಸದರಿ ಟ್ಯಾಕ್ಟರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಭಂಧಪಟ್ಟ ಅಧಿಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲ ಅಂತ ತಿಳಿಸಿದನು. ಸದರಿ ಟ್ಯಾಕ್ಟರ ಮಾಲಿಕನ ಹೆಸರು ಚಾಲಕನಿಗೆ ವಿಚಾರಿಸಿದಾಗ ರುದ್ರಯ್ಯ ತಂದೆ ಮಲಕಯ್ಯ ಮಠ ಸಾ|| ಶಿವಪೂರ ಅಂತ ಇದ್ದು, ಸದರಿ ಟ್ಯಾಕ್ಟರ ಮಾಲಿಕನೊಂದಿಗೆ ಕೂಡಿ, ಅವನು ತಿಳಿಸಿದ ಮೇರೆಗೆ ಮರಳು ಸಾಗಾಣಿಕೆ ಮಾಡುತ್ತಿರುವುದಾಗಿ ತಿಳಿಸಿದನು. ನಂತರ ಸದರಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣಿಕೆಗೆ ಉಪಯೋಗಿಸಿದ ಮರಳು ತುಂಬಿದ ಟ್ಯಾಕ್ಟರನ್ನು ಪಂಚರ ಸಮಕ್ಷಮ 12:15 ಪಿ ಎಮ್ ದಿಂದ 1:15 ಪಿ ಎಮ್ ವರೆಗೆ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡೆನು ನಂತರ ನಮ್ಮ ಸಿಬ್ಬಂದಿಯವರ ಸಹಾಯದಿಂದ ಸದರಿ ಮರಳು ತುಂಬಿದ ಟಿಪ್ಪರ ಮತ್ತು ಆರೋಪಿತನೊಂದಿಗೆ ಮರಳಿ ಠಾಣೆಗೆ 1:40 ಪಿ ಎಮ್ ಕ್ಕೆ ಬಂದು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಸುತಿದ್ದ ಚಾಲಕ ಮಳೆಂದ್ರ ತಂದೆ ಮಲಕಯ್ಯ ಮಠ ವಯಾ|| 25 ವರ್ಷ ಜಾ|| ಜಂಗಮ ಉ|| ಟ್ಯಾಕ್ಟರ ನಂ ಕೆಎ-28 ಟಿಬಿ-6391 ನೇದ್ದರ ಚಾಲಕ ಸಾ|| ಶಿವಪೂರ ಹಾಗೂ ಟ್ಯಾಕ್ಟರ ಮಾಲಿಕನಾದ ರುದ್ರಯ್ಯ ತಂದೆ ಮಲಕಯ್ಯ ಮಠ ಸಾ|| ಶಿವಪೂರ ಇವರ  ಮೇಲೆ ಕಾನೂನು ಕ್ರಮ ಕೈಗೊಳ್ಳವಂತೆ ಸೂಚಿಸಿ ವರದಿ ನಿಡಿದ್ದು ಸದರಿ ಸಾರಂಶದ  ಪ್ರಕಾರ ಪ್ರಕರಣ ವರದಿಯಾಗಿರುತ್ತದೆ.
ನಿಂಬರ್ಗಾ  ಠಾಣೆ : ದಿನಾಂಕ 24/04/2016 ರಂದು 1300 ಗಂಟೆಗೆ ಇವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಅದರ ಸಂಕ್ಷಿಪ್ತ ಸಾರಾಂಶವೇನೆಂದರೆ ಮನೆಯ ಜಾಗೆಯ ಸಂಭಂಧ ದ್ವೇಶ ಕಟ್ಟಿಕೊಂಡು ದಿನಾಂಕ 23/04/2016 ರಂದು 2100 ಗಂಟೆಗೆ ಆಪಾದಿತರೆಲ್ಲರೂ ಸೇರಿ ಫಿರ್ಯಾದಿಗೆ ಮತ್ತು ಆತನ ಮಗಳಿಗೆ ಅವಾಚ್ಯವಾಗಿ  ಬೈದು ಕೈಯಿಂದ ಮತ್ತು ಕಾಲಿನಿಂದ ಒದ್ದು ಹಲ್ಲೆ ಮಾಡಿ ಜೀವ ಭಯಪಡಿಸಿರುತ್ತಾರೆ. ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಲಿಖೀತ ಫಿರ್ಯಾದಿ ಸಾರಾಂಶದ ಪ್ರಕಾರ  ಪ್ರಕರಣ ವರದಿಯಾಗಿರುತ್ತದೆ.