POLICE BHAVAN KALABURAGI

POLICE BHAVAN KALABURAGI

05 September 2014

Gulbarga District Reported Crimes

ಕೊಲೆ ಪ್ರಕರಣ :
ಮಳಖೇಡ ಠಾಣೆ : ಶ್ರೀ ಶಿವರಾಜ ತಂದೆ ಭೀಮರಾವ ಸಾ: ಹೊಸಳ್ಳಿ ಇವರು ದಿನಾಂಕ: 04-09-2014 ರಂದು ಮಧ್ಯಾಹ್ನ 1330 ಗಂಟೆ ಸುಮಾರಿಗೆ ನಮಗೆ ಬೀಜನಳ್ಳಿ ಗ್ರಾಮದಿಂದ ಪೋನ ಮೂಲಕ ತಿಳಿದು ಬಂದಿದೆನೆಂದರೆ, ನನ್ನ ಅಳಿಯ ಸುದರ್ಶನ ವ: 10 ಇವನು ತನ್ನ ಮನೆಯಲ್ಲಿ ಹಗ್ಗದಿಂದ ನೇಣುಹಾಕಿಕೊಂಡು ಸತ್ತಿದ್ದ ಬಗ್ಗೆ  ಸಂಗತಿ ತಿಳಿದುಕೊಂಡು ನಾನು ಹಾಗು ನಮ್ಮೂರ ಹಿರಿಯರು ಕೂಡಿಕೊಂಡು ಹೊಗಿ ಮಧ್ಯಾಹ್ನ 1430 ಗಂಟೆಗೆ ನೋಡಲಾಗಿ ಸುದರ್ಶನ ಇತನ ಮೃತ ದೇಹವು ಅವರ ಅಡುಗೆ ಮನೆಯಲ್ಲಿ ಕಟ್ಟಿಗೆಗೆ ನೇಣು ಹಾಕಿಕೊಂಡು ಸತ್ತಿದನ್ನು ನೋಡಿ ಗ್ರಾಮಸ್ಥರಾದ ಚಂದ್ರಶೇಖರ ಇವರನ್ನು ವಿಚಾರಿಸಲು ಅವರು ತಿಳಿಸಿದೇನೆಂದರೆ, ಬೀಜನಳ್ಳಿ ಗ್ರಾಮಕ್ಕೆ ಲಕ್ಷ್ಮಿ @ ಗುಂಡಮ್ಮ ಇವಳ ಮಕ್ಕಳಾದ 1] ನೀಲಕಂಠ, 2] ಸುದರ್ಶನ ಹಾಗು 3] ಭಾಗ್ಯಶ್ರೀ ಇವರಿಗೆ ಯಾವಾಗಲು ಹಿಯಾಳಿಸುತ್ತಾ ನಮ್ಮ ಆಸ್ತಿಗೆ ಮೂಲ ಆಗಿದ್ದಿರಿ ಅಂತಾ ಮನಸಿಗೆ ಪರಿಣಾಮ ಬೀರುವಂತ್ತೆ ಬೈಯುತ್ತಿದ್ದರು. ಅಂತಾ ಗೋತ್ತಾಯಿತು. ಇದನ್ನೆ ಮನಸಿಗೆ ಪರಿಣಾಮ ಮಾಡಿಕೊಂಡು ಅಥವಾ ನಮ್ಮ ಸಂಬಂದಿಕ ಬಸವರಾಜ, ರಾಮಲಿಂಗಪ್ಪ, ಬಸಮ್ಮ, ಈರಮ್ಮ ಹಾಗು ಸಿದ್ದಪ್ಪ ಇವರೇಲ್ಲರೂ ಕೂಡಿಕೊಂಡು ಪೂರ್ವ ಸಜ್ಜಿತರಾಗಿ ಆಸ್ತಿಯಲ್ಲಿ ಪಾಲುಕೊಡಬೇಕಾಗುತ್ತದೆ ಅಂತಾ ದುರುದ್ಧೇಶಂದಿಂದ ಕೊಲೆ ಮಾಡಿ ಉರಲು ಹಾಕಿರುತ್ತಾರೆ. ಎಂದು ಹೆಣವನ್ನು ನೋಡಿದಾಗ ಕಂಡು ಬರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  .
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 04-09-2014 ರಂದು ಖುಬಾ ಪ್ಲಾಟದ ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಐ. ಸ್ಟೇಷನ ಬಜಾರ, ಸಿಬ್ಬಂದಿ ಹಾಗು ಪಂಚರೊಂದಿಗೆ  ಮಾನ್ಯ ಶ್ರೀ ಮಹಾನಿಂಗ ನಂದಗಾಂವ ಡಿ.ಎಸ್.ಪಿ ಸಾಹೇಬರು ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಖುಬಾ ಪ್ಲಾಟದ ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ಸಮೀಪ ಹೋಗಿ ಮರೆಯಲ್ಲಿ ನಿಂತು ನೋಡಲು ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಹಾರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು  1) ರಾಜಶೇಖರ ತಂದೆ ಅಂಬಣ್ಣ ಬೊಮ್ನಳ್ಳಿ  ಸಾಃ ಶೇಟ್ಟಿ ಕಾಂಪ್ಲೆಕ್ಸ ಹಿಂದೆ ಶಹಾ ಬಜಾರ ಗುಲಬರ್ಗಾ ಇವನಿಂದ 2) ಅನೀಲ ತಂದೆ ಜಗದೀಶ ಸುನಾರ ಸಾಃ ಮರಗಮ್ಮ ಟೆಂಪಲ ಹತ್ತಿರ ಶಹಾ ಬಜಾರ ಗುಲಬರ್ಗಾ, 3) ಶಿವಕುಮಾರ ತಂದೆ ಮಹಾಂತಪ್ಪಾ ಹೊಸಮನಿ ಸಾಃ ಮರಗಮ್ಮ ಟೆಂಪಲ್ ಹತ್ತಿರ ಶಹಾ ಬಜಾರ ಗುಲಬರ್ಗಾ 4) ವಿರೇಶ ತಂದೆ ರಾಮಲಿಂಗ ಸುತಾರ ಸಾಃ ಕೊತ್ತಂಬರಿ ಲೇಔಟ ಸಿ.ಐ.ಬಿ ಕಾಲೋನಿ ಗುಲಬರ್ಗಾ 5) ರಾಜು ತಂದೆ ಮಹಾದೇವಪ್ಪಾ ಪಾಟೀಲ ಸಾಃ ಶೇಟ್ಟಿ ಕಾಂಪ್ಲೆಕ್ಸ ಎದುರುಗಡೆ ಗುಲಬರ್ಗಾ 6) ಪಂಡಿತ ತಂದೆ ವಿದ್ಯಾಸಾಗರ ಫಳಸಿ ಸಾಃ ಖಾದರಿ ಚೌಕ ಜಿ.ಆರ್ ನಗರ ಗುಲಬರ್ಗಾ 7) ಸಂತೋಷ ತಂದೆ ಅಣವೀರಯ್ಯ ಮಠ ಸಾಃ ಕಾವೇರಿ ನಗರ ಹುಮ್ನಾಬಾದ ಬೇಸ ಹತ್ತಿರ ಗುಲಬರ್ಗಾ 8) ಗುರುನಂಜಪ್ಪಾ ತಂದೆ ಶಿವಶರಣಪ್ಪಾ ಶೀಲವಂತ ಸಾಃ ಗಣೇಶ ನಗರ ಸೇಡಂ ರೋಡ ಗುಲಬರ್ಗಾ.ಇವರಿಂದ  ಒಟ್ಟು. 41,430/- ರೂ, 52 ಇಸ್ಪೆಟ್ ಎಲೆಗಳು, 10 ಮೊಬೈಲಗಳು ಮತ್ತು ಎರಡು ಮೊಟಾರ ಸೈಕಲಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಸ್ಟೇಷನ ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.