POLICE BHAVAN KALABURAGI

POLICE BHAVAN KALABURAGI

29 May 2015

Kalaburagi District Reported Crimes

ಕೊಲೆ ಪ್ರಕರಣಗಳು :
ರೋಜಾ ಠಾಣೆ : ಶ್ರೀ ಸೈಯ್ಯದ ಜಲಾಲೋದ್ದಿನ ತಂದೆ ಸೈಯ್ಯದ ಪಾಶಾಮಿಯಾ ಪಾಪಡವಾಲೆ ಸಾ: ಮಜ್ಜೀದ ಬಿಲಾಲ ಬಿಲಾಲಾಬಾದ ಕಾಲೋನಿ ನೀಯರ ಬಾಂಬೆ ಹೋಟೆಲ ಪಾಪಡಗಲ್ಲಿ ಕಲಬುರಗಿ ರವರು ದಿನಾಂಕ 28/05/2015 ರಂದು ಬೆಳಿಗ್ಗೆ ಎಂದಿನಂತೆ ಬಾಳೆಹಣ್ಣಿನ ವ್ಯಾಪಾರ ಮಾಡುವ ಕುರಿತು ಬಾಳೆ ಹಣ್ಣಿನ ಬಂಡಿ ತೆಗೆದುಕೊಂಡು ಕೆ.ಸಿ.ಟಿ ಕಾಲೇಜ ಹತ್ತಿರ ವ್ಯಾಪಾರಕ್ಕೆ ಹೋಗಿದ್ದು  ನಾನು ವ್ಯಾಪಾರ ಮಾಡುತ್ತಾ ಕುಳಿತುಕೊಂಡಾಗ ನಮ್ಮ ಮನೆಯ ಹತ್ತಿರದಲ್ಲೆ ವಾಸವಾಗಿರುವ ನನ್ನ ಪರಿಚಯದ ಬಾಬರಮಿಯಾ  ಕಾರ್ಖಾನೆವಾಲೆ ಇವರು ನನ್ನ ಹತ್ತಿರ ಬಂದು ಸ್ವಲ್ಪ ಕೆಲಸ ಇದೆ ಅರ್ಜೆಂಟ ಮನೆಗೆ ಹೋಗೋಣಾ ಬಾ ಅಂತಾ ನನ್ನನ್ನು ಕರೆದುಕೊಂಡು ಮನೆಗೆ ಬಂದಿದ್ದು ನಾನು ಮನೆಯ ಮುಂದೆ ಬಂಡಿ ಹಚ್ಚಿ ಬಾಬರಮಿಯಾ ಈತನಿಗೆ ಏನಾಗಿದೇ ನನಗೆ ಹೇಳು ಅಂತಾ ಕೇಳಿದಾಗ ಅವನು ನಿನ್ನ ಮಗ ಸೈಯ್ಯದ ಜೈನೋದ್ದಿನ  ಈತನಿಗೆ ಸ್ವಲ್ಪ ತಲೆಗೆ ಪೆಟ್ಟಾಗಿ ಅವನಿಗೆ ಮಜ್ಜೀದ ಬಿಲಾಲ ಹತ್ತಿರ ಇರುವ ರೂಮದಲ್ಲಿ ಮಲಗಿದ್ದಾನೆ ಅಂತಾ ಹೇಳಿ ಮನೆಯಿಂದ ಕರೆದುಕೊಂಡು ಬಂದು ಬಿಲಾಲ ಮಜ್ಜೀದ ಇವರ ಒಡೆತನಕ್ಕೆ ಸಂಬಂದ ಪಟ್ಟ ರೂಮ ನಂ.1 ಒಂದು ಕೋಣೆಗೆ ಬಂದು  ತೋರಿಸಲು ನನ್ನ ಮಗ ಸೈಯ್ಯದ ಜೈನೋದ್ದಿನ ಈತನು ರಕ್ತದ ಮಡುವಿನಲ್ಲಿ ಬಿದ್ದಿದ್ದು ಅವನಿಗೆ ಎರಡು ಕೈಗಳು ಎರಡು ಕಾಲುಗಳು ಸಣ್ಣ ನೂಲಿನ ಹಗ್ಗದಿಂದ ಕಟ್ಟಿ ಮತ್ತು ಬಾಯಿಯಲ್ಲಿ ಅರಿವೆ ತುರುಕಿ ಬಾಯಿಗೆ ಮೇಲೆ ಅರಿವೆ ಕಟ್ಟಿದ್ದು ಕಂಡಿರುತ್ತೇನೆ. ನನ್ನ ಮಗನ ಶವ ಪೂರ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಅವನ ಶವವನ್ನು ಹೊರಳಿಸಿ ನೋಡಿದಾಗ ಎರಡು ತುಟಿಗೆ, ಬಲಗೈ ರಟ್ಟೆಗೆ , ಬಲಗಣ್ಣಿನ ಕೆಳಗಡೆ , ಬಲ ಕಪಾಳಕ್ಕೆ, ಬಲಕಿವಿಯಿಂದ ಗದ್ದದ ವರೆಗೆ, ಬಲಗಡೆ ಕಿವಿ ಕೆಳಗಿನಿಂದ ಗದ್ದದ ವರೆಗೆ , ಕುತ್ತಿಗೆ ಮುಂದೆ ಬಲಕಿವಿಯಿಂದ ಎಡಕಿವಿಯ ವರೆಗೆ ಯಾವುದೋ ಮಾರಕಾಸ್ತ್ರದಿಂದ ಕೋಯ್ದ ಭಾರಿ ರಕ್ತಗಾಯ ಮಾಡಿ ಕೊಲೆಮಾಡಿದ್ದು ಕಂಡುಬಂದಿದ್ದು ನಂತರ ಅಲ್ಲಿ ನನ್ನ ಮಗನು ಕೊಲೆಯಾದ ಬಗ್ಗೆ ವಿಚಾರಿಸಲಾಗಿ ಉತ್ತರ ಪ್ರದೇಶ ಸಾರಂಗಪೂರ ಜಿಲ್ಲೆಯ ವ್ಯಕ್ತಿಯಾಗಿರುವ ನೌಶಾದ ಅಹ್ಮದ ತಂದೆ ಅಕಲಾಕ ಅಹ್ಮದ ಮತ್ತು ರಫಿಯೊದ್ದಿನ ಮನಸೂರ ತಂದೆ ಶರ್ಫೋದ್ದಿನ ಸಾ: ಬಿಲಾಲ ಮಜ್ಜೀದ ಹತ್ತಿರ ಬಿಲಾಲಾಬಾದ ಕಾಲೋನಿ ಕಲಬುರಗಿ ಇಬ್ಬರೂ ಕೂಡಿಕೊಂಡು ತಮ್ಮ ಅನೈಸರ್ಗಿಕ ಕಾಮ ಸಂಬೋಗ ನಡೆಸುವ ಕುರಿತು ನನ್ನ ಮಗ ಸೈಯ್ಯದ ಜೈನೋದ್ದಿನ ಈತನಿಗೆ ಪುಸಲಾಯಿಸಿಕೊಂಡು ತಮ್ಮ ಕೋಣೆಗೆ ಕರೆದುಕೊಂಡು ಬಂದು ಅವನಿಗೆ ನಿನ್ನ ಫೋಟೋಗಳನ್ನು ತೆಗೆಯುತ್ತೇವೆ ಅಂತಾ ನಂಬಿಸಿ ಅವನ ಬಟ್ಟೆಯನ್ನು ತೆಗೆಯಿಸಿ ಎರಡು ಕೈ ಮತ್ತು ಕಾಲುಗಳನ್ನು ಕಟ್ಟಿ ಮತ್ತು ಬಾಯಿಗೆ ಬಟ್ಟೆ ಕಟ್ಟಿ ಫೋಟೋ ತೆಗೆಯುತ್ತೇವೆ ಅಂತಾ ನಟನೆ ಮಾಡುವ ಹಾಗೆ ಮಾಡಿ ಅವನಿಗೆ ಒತ್ತಾಯ ಪೂರ್ವಕವಾಗಿ ನೌಶಾದ ಅಹ್ಮದ ಈತನು ಅನೈಸರ್ಗಿಕ ಸಂಬೋಗ ನಡೆಸಲು ಪ್ರಯತ್ನಿಸಿದಾಗ ನನ್ನ ಮಗ ಸೈಯ್ಯದ ಜೈನುದ್ದಿನ ಈತನು ಅವರಿಬ್ಬರಿಗೆ ತಡೆಒಡ್ಡಲು ಬಂದಾಗ ಮತ್ತು ಅವನು ಚೀರಾಡಲು ಪ್ರಯತ್ನಿಸಿದಾಗ ಅವನು ಚೀರುವದನ್ನು ಬೇರೆಯವರು ಕೇಳಿಕೊಂಡು ನಮ್ಮ ಅನೈಸರ್ಗಿಕ ಸಂಬೋಗದ ಕೆಲಸದ ಬಗ್ಗೆ ಗೊತ್ತಾಗ ಬಹುದೆಂದು ನೌಶಾದ ಅಹ್ಮದ ಮತ್ತು ರಫಿಯೊದ್ದಿನ ಮನಸೂರ ಇವರಿಬ್ಬರೂ ಕೂಡಿ ತಮ್ಮ ಹತ್ತಿರ ಇದ್ದ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಡ್ರಾಮಿ ಠಾಣೆ : ದಿನಾಂಕ 28-05-2015 ರಂದು ನನಗೆ ನಮ್ಮ ತಾಂಡಾದ ಹೀರು ತಂದೆ ದೇವಲು ರಾಠೊಡ ಮತ್ತು ನಾತು ತಂದೆ ಸುಬ್ಬು ಪವಾರ ಇವರು ನನಗೆ ಹೇಳಿದ್ದೆನೆಂದರೆ ದಿನಾಂಕ 23-05-2015 ರಂದು ರಾತ್ರಿ ನಾವಿಬ್ಬರೂ ನಮ್ಮ ತಾಂಡಾದ ಶಾಲೆಯ ಸ್ವಲ್ಪ ದೂರದಲ್ಲಿ ಮಾತಾಡುತ್ತಾ ಇದ್ದಾಗ ಲವಕುಮಾರ ತಂದೆ ರೂಪಸಿಂಗ್ ರಾಠೋಡ, ಪ್ರಿಯಾಂಕ ಗಂಡ ಲವಕುಮಾರ ರಾಠೋಡ,   ರಾಮು ತಂದೆ ಥಾವರು ಚೌವಾಣ, ನಂದಿಬಾಯಿ ಗಂಡ ರಾಮು ಚೌವಾಣ, ಅನೀಲ್ ತಂದೆ ಹೇಮ್ಲು ರಾಠೋಡ ಹಿಗೆಲ್ಲರೂ ಕೂಡ ಅಲ್ಲಿಯೇ ಮಾತಾಡುತ್ತಾ ನಿಂತಿದ್ದು ಆಗ ಲವಕುಮಾರ ಇತನು ತನ್ನ ಹೆಂಡತಿಯಾದ ಪ್ರಿಯಾಂಕಾಳಿಗೆ ಸಚೀನ ಇತನಿಗೆ ಫೊನ್ ಮಾಡಿ ಇಲ್ಲಿಗೆ ಕರೆಯಸು ಅಂತಾ ಹೇಳಲು ಪ್ರಿಯಾಂಕ ಇವಳು ಸಚೀನನಿಗೆ ಮೊಬೈಲ್ ನಿಂದ ಫೊನ್ ಮಾಡಿ ಬರಲು ಹೇಳಿ ಆಕೆ ಮನೆಗೆ ಕಡೆಗೆ ಹೊದಳು. ಆಗ ಸಚೀನ ಇತನು ಶಾಲೆಯ ಹತ್ತಿರ ಬರಲು ಲವಕುಮಾರ ಇತನು ಸಚೀನನಿಗೆ ನನ್ನ ಹೆಂಡತಿಯಾದ ಪ್ರಯಾಂಕಾಳಿಗೆ ಯಾಕೆ, ಪೋನ್ ಮಾಡತಿ ಮಿಸ್ ಕಾಲ್ ಕೊಡುತ್ತಿ ಮತ್ತು ಮೇಸೆಜ್ ಮಾಡುತ್ತಿ, ಏನು ನಿನ್ನ ವಿಷಯ ಅಂತಾ ಅಂದಾಗ ಸಚೀನ ಇವನು ನಾನು ಪ್ರಿಯಾಂಕಳಿಗೆ ಎರಡು ವರ್ಷದಿಂದ ಲವ್ ಮಾಡಿದ್ದೆನೆ, ನನಗೆ ಬಿಟ್ಟು ನಿನ್ನ ಜೊತೆ ಮದುವೆ ಮಾಡಿದ್ದಾರೆ  ನನ್ನದು ತಪ್ಪಾಗಿದೆ ಇನ್ನೊಮ್ಮೆ ಅವಳೀಗೆ ಪೋನ್ ಮಾಡುವದಿಲ್ಲಾ ಅಂತಾ ಹೇಳಲು ಲವಕುಮಾರ ಮತ್ತು ರಾಮು ಇವರಿಬ್ಬರು ಈ ಬೊಸಡಿ ಮಗನಿಗೆ ಹೀಗೆ ಬಿಡಬಾರದು ಮತ್ತೆ ಪ್ರಿಯಾಂಕಾಳಿಗೆ ಪೋನ್ ಮಾಡಿ ನಮ್ಮ ಸಂಸಾರ ಹಾಳು ಮಾಡುತ್ತಾನೆ ಅಂತ ಅಂದವರೆ ಅವರೆಲ್ಲರೂ ಸಚೀನ ಇತನಿಗೆ ಹೊಡೆ-ಬಡೆ ಮಾಡುತ್ತಾ ಹಿಡಿದುಕೊಂಡು ಜಗ್ಗಾಡುತ್ತಾ ಮಾನುನ ಹೊಲದ ಕಡೆಗೆ ಒಯ್ಯುವದನ್ನು ನೊಡಿ ಅವರ ಹಿಂದೆ-ಹಿಂದೆ ಹೊಗಿದ್ದು ಸ್ವಲ್ಪ ಸಮಯದ ನಂತರ ದೂರದಿಂದ ನೋಡಲು ಮಾನುನ ಬಾವಿಯ ದಂಡಿಯ ಹತ್ತಿರ ಸಚೀನ ಇತನು ಚೀರಾಡುವ ಸಪ್ಪಳ ಕೇಳಿದ್ದು,  ಬಾವಿಯ ದಡದಲ್ಲಿ ರಾಮು ಮತ್ತು ಆತನ ಹೆಂಡತಿ ನಂದಿಬಾಯಿ ಇಬ್ಬರು ನನ್ನ ಮಗಳ ಸಂಸಾರ ಹಾಳು ಮಾಡುತ್ತಿದ್ದಾನೆ, ಇವನಿಗೆ ಖಲಾಸ ಮಾಡಿ ಬಿಡ್ರಿ ಏನು ಬಂದಿದ್ದು ನಾವು ನೊಡಿಕೊಳ್ಳುತ್ತೆವೆ  ಅಂತಾ ಚೀರಾಡುತ್ತಾ ಲವಕುಮಾರ ಮತ್ತು ಅನೀಲನಿಗೆ ಹೆಳಲು ಆಗ ಅನೀಲನು  ಈ ಸೂಳೆ ಮಗನಿಗೆ ಬಾಳ ಸೊಕ್ಕು ಆಗಿದೆ ಇವನಿಗೆ ಮುಗಿಸೆ ಬಿಡು  ಅಂತಾ ಅನ್ನಲು ಲವಕುಮಾರ ಇತನು ಸಚೀನನಿಗೆ ಕೈಯಿಂದ ಹೊಟ್ಟೆಯಲ್ಲಿ  ಜೋರಾಗಿ ಒಂದೆ ಸಮನೆ ಹೊಡೆದು ಕೆಳಗಡೆ ಹಾಕಿ ಕುತ್ತಿಗೆ ಹಿಚುಕಿದನು. ಇವನ ಕತೆ ಮುಗಿಯೀತು, ಏ ಅನೀಲ್ ಈ ಕಡೆ ಬಾ ಅಂತಾ ಕರೆದು ಇಬ್ಬರು ಸಚೀನನ ಹೆಣವನ್ನು ಮಾನುನ ಹಾಳು ಬಿದ್ದ ಬಾವಿಯಲ್ಲಿ ಬಿಸಾಕಿರುತ್ತಾರೆ ಅಂತಾ ಶ್ರೀ ಬಾಳು ತಂದೆ ಜೇಮಲು ಪವಾರ ಸಾ|| ಕಾಖಂಡಕಿ ತಾಂಡಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವವಿದ್ಯಾಲಯ ಠಾಣೆ : ಶ್ರೀ ಲಕ್ಷ್ಮಣ ತಂದೆ ವೆಂಕಪ್ಪ ಕೋಮಾರಿ, ಸಾ|| ನೃಪತುಂಗ ಕಾಲೋನಿ ಹಿಂದುಗಡೆ ಜೋಪಡಪಟ್ಟಿ ಕಲಬುರಗಿ ರವರ ನಮ್ಮ ಅಕ್ಕ ಪದ್ಮಾನ ಗಂಡ ಭೀಮಪ್ಪ ಈತನು ನಮ್ಮ ಅಕ್ಕನಿಗೆ ಮದುವೆಯಾದ 6 ತಿಂಗಳಲ್ಲಿಯೆ ಆಕೆಗೆ ದೈಹಿಕ ಮಾನಸಿಕ ಕಿರುಕುಳ ಕೊಡುತ್ತಿದ್ದು, ಬಗ್ಗೆ ನಮ್ಮ ಅಕ್ಕ ತವರು ಮನೆಗೆ ಬಂದಾಗ ನಮ್ಮ ಎದುರು ಹೇಳುತ್ತಿದ್ದಳು. ಮತ್ತು ಗಂಡನ ಮನೆಯಲ್ಲಿ ಇದ್ದಾಗ ಫೋನ್ ಮಾಡಿ ಹೇಳುತ್ತಿದ್ದಳು ಆಗ ನಾನು ಹೊಸದಾಗಿ ಮದುವೆಯಾಗಿದೆ ಈಗ ಸುಧಾರಣೆ ಆಗುತ್ತಾನೆ ಆಗ ಸುದಾರಣೆ ಆಗುತ್ತಾನೆ ಅಂತಾ ನಮ್ಮ ಅಕ್ಕನಿಗೆ ನಾನು ತಿಳಿ ಹೇಳುತ್ತಿದ್ದು, ಅವನು ವರ್ಷಕ್ಕೆ ಎರಡು ವರ್ಷಕ್ಕೆ ಇದೆ ರೀತಿ ಮಾಡುತ್ತಿದ್ದನು. ಇವನ ಕಾಟ ನನಗೆ ಸಾಕಾಗಿದೆ ನಾನು ಇವನನ್ನು ಬಿಟ್ಟು ಸಾಯುತ್ತೇನೆ ನಾನು ಸತ್ತರೆ ನನ್ನ ಸಾವಿಗೆ ಇವನೆ ಕಾರಣ ಅಂತಾ ಹೇಳುತ್ತಿದ್ದಳು. ಬಗ್ಗೆ ಹಲವಾರು ಸಲ ನಮ್ಮ ಬಂಧು ಬಳಗದಲ್ಲಿ ಪಂಚಾಯಿತಿ ಸಹ ಮಾಡಿದ್ದು ಇರುತ್ತದೆ. ಪಂಚಾಯಿತಿ ಕಾಲಕ್ಕೆ ದೇವಿಂದ್ರಪ್ಪ, ದಶರಥ, ಸಾಯಿಬಣ್ಣ ಇವರು ತಿಳಿ ಹೇಳಿದ್ದು ಇರುತ್ತದೆ. ಇದಾದ ನಂತರ ಸ್ವಲ್ಪ ದಿನ ಸರಿಯಾಗಿ ಇದ್ದರು. ದಿನಾಂಕ: 27-05-2015 ರಂದು ನಮ್ಮ ಮಾವ (ಅಕ್ಕನ ಗಂಡ) ಭೀಮಪ್ಪ ಈತನು ತಮ್ಮ ಗುಡಿಸಿಲಿನಲ್ಲಿ ಇದ್ದಾಗ ನಮ್ಮ ಅಕ್ಕನ ಜೊತೆ ನೀನು ಸರಿಯಾಗಿ ಇಲ್ಲ, ನಾನು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಹೇಳಿ ಟೆಂಗಿನ ಹಗ್ಗದಿಂದ ಆಕೆಯ ಕುತ್ತಿಗೆ ಹಾಕಿ ಹಿಸುಕುತ್ತಿದ್ದು, ನಮ್ಮ ಅಕ್ಕನ ಚೀರಾಟ ಕೇಳಿ ಪಕ್ಕದ ಗುಡಿಸಿಲಿನವರಾದ ಬಸಮ್ಮ ಗಂಡ ಶಿವಪ್ಪ ಶಿರವಟ್ಟಿ, ಮಹಾತೇಶ ತಂದೆ ಭಗವಂತ ಶಿರವಟ್ಟಿ, ಹಣಮಂತ ತಂದೆ ನೀಲಕಂಠ ಕೋಮಾರಿ ಇವರು ಓಡಿ ಹೋಗಿ ನೋಡುವಷ್ಟರಲ್ಲಿ ನಮ್ಮ ಅಕ್ಕ ಪದ್ಮಾಳಿಗೆ ನಮ್ಮ ಮಾವ ಭೀಮಪ್ಪ ಇವರು ಕೊರಳಿಗೆ ಹಗ್ಗ ಹಾಕಿ ಕತ್ತು ಹಿಸುಕಿ ಕೊಲೆ ಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಇಂದಿರಾ ಗಂಡ ದಿ. ಪ್ರಮೋದ ಚವ್ಹಾಣ ಸಾ: ಮನೆ ನಂ:8-1197 ಬಂಬೂ ಬಜಾರ ಭೂವಿಗಲ್ಲಿ ಕಲಬುರಗಿ ರವರಿಗೆ ಅಶ್ವಿನಿ, ಸಚೀನ, ಗಾಯತ್ರಿ, ಮಹೇಶ್ವರಿ, ಐಶ್ವರ್ಯ ಅಂತಾ ನಾಲ್ಕು ಜನ ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿರುತ್ತಾನೆ. ಇವರಲ್ಲಿ ನಾಲ್ಕನೇಯ ಮಗಳಾದ ಮಹೇಶ್ವರಿ ಇವಳು ದಿನಾಂಕ 12-05-2015 ರಂದು ಮಧ್ಯಾಹ್ನ 3-00 ಗಂಟೆಗೆ ಮನೆಯಿಂದ ಹೋದವಳು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ. ಮಹೇಶ್ವರಿ ಇವಳ ಬಗ್ಗೆ ನಾವು ನಮ್ಮ ಸಂಬಂಧಿಕರಲ್ಲಿ, ಹಾಗೂ ಅವಳ ಸ್ನೇಹಿತರಲ್ಲಿ ವಿಚಾರಿಸಲಾಗಿ ನಮಗೆ ಗೊತ್ತಿಲ್ಲ ಅಂತಾ ಹೇಳಿದ್ದು, ಕಾರಣ ನಮ್ಮ ಮಗಳಾದ ಮಹೇಶ್ವರಿ ಇವಳಿಗೆ ಯಾರೋ ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 28-05-15 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಫಿರ್ಯಾದಿ ತನ್ನ ಮನೆಯ ಕಡೆಗೆ ಟಾಟಾ ಜುನೂನ್ ವಾಹನ ಸಂಖ್ಯೆ ಕೆಎ 38 7898 ನೇದ್ದು ನಡೆಯಿಸಿಕೊಂಡು ಮನೆಯ ಕಡೆ ಹೊರಟಿದ್ದು, ತಾಜ ಸುಲ್ತಾನಪೂರ ರೋಡಿಗೆ ಇರುವ ದವಲ ಮಲ್ಲಿಕ ದೇವರ ಗುಡಿ ಎದುರು ರೋಡಿನ ಮೇಲೆ ಬಂದಾಗ ಎದುರುನಿಂದ ತಾಜ ಸುಲ್ತಾನಪೂರ ಊರ ಕಡೆಯಿಂದ ಇಬ್ಬರು ಅಪರಿಚಿತರು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಬಂದರು. ಆಗ ಫಿರ್ಯಾದಿ  ಕಡೆ ಒಮ್ಮಿಂದ ಒಮ್ಮೇಲೆ ಬೆಂಕಿ ಕಿಡಿ ಹಾರಿದಂತೆ ಆಗಿ ಮುಂದಿನ ಗ್ಲಾಸು ಒಡೆದು ಗ್ಲಾಸುಗಳ ಚೂರುಗಳು ಮೈಮೇಲೆ ಬಿದ್ದವು ಮತ್ತು ಸ್ಟೇರಿಂಗ ಕೂಡಾ ಶೇಕ ಆಯಿತು. ನಾನು ವಾಹನದಿಂದ ಇಳಿದು ನೋಡುವಷ್ಟರಲ್ಲಿ ಅವರಿಬ್ಬರು ಮೋಟಾರ ಸೈಕಲ ಮೇಲೆ ಕಲಬುರಗಿ ಕಡೆ ವೇಗದಲ್ಲಿ ಹೊರಟು ಹೋದರು. ಇಂದು ದಿನಾಂಕ  29-05-15 ರಂದು ಬೆಳಿಗ್ಗೆ ಸಮಯದಲ್ಲಿ  ಟಾಟಾ ಜನೂನ ವಾಹನ ಸಂಖ್ಯೆ ಕೆಎ 38 7898 ನೇದ್ದರ ಗ್ಲಾಸು ಹೇಗೆ ಒಡೆದಿದೆ ಅಂತಾ  ನೋಡಲು ಸ್ಟೇರಿಂಗ ಮತ್ತು ಹಿಂದಿನ ಡಿಕ್ಕಿಯಲ್ಲಿ ಎರಡು ಗುಂಡುಗಳು ಸಿಕ್ಕಿ ಬಿದ್ದಿದ್ದು ನೋಡಿ ಗಾಬರಿಗೊಂಡು  ಪೊಲೀಸ ಠಾಣೆಗೆ ವಾಹನದೊಂದಿಗೆ ಬಂದೆನು.  ನಿನ್ನೆ  ದಿನಾಂಕ 28-05-15 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಮೋಟಾರ ಸೈಕಲ ಮೇಲೆ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ನನಗೆ ಕೊಲೆ ಮಾಡುವ ಉದ್ದೇಶದಿಂದ ರಿವಾಲ್ವರ ಅಥವಾ ಪಿಸ್ತೂಲದಿಂದ  ಎರಡು ಗುಂಡುಗಳನ್ನು  ನನ್ನ ಮೇಲೆ ಹಾರಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ. ಈ ಹಿಂದೆ ಫಿರ್ಯಾದಿ ಮತ್ತು ವಿಶ್ವನಾಥ, ಕಾಶಿನಾಥ, ಜಲಂಧರ, ಮಂಜುನಾಥ, ವಿಜಯಕುಮಾರ,  ಇವರ ಮೇಲೆ 2010 ನೇ ಸಾಲಿನಲ್ಲಿ ಗುನ್ನೆ ನಂ. 223/10 ಕಲಂ 339, 402 ಐಪಿಸಿ ಪ್ರಕರಣ ದಾಖಲಾಗಿದ್ದು. ಫಿರ್ಯಾದಿ ವಿಶ್ವನಾಥ, ಕಾಶಿನಾಥ ಜಲಂಧರ ಇವರು ಬೇಲ ಮಾಡಿಸದೇ ಮತ್ತು ಅವರು ಬೇಲ ಮಾಡಿಕೊಂಡ ಖರ್ಚಿನ ಹಣ 1,50,000 ರೂ. ಕೊಡದಿದ್ದಕ್ಕೆ ಜೇಲಿನಲ್ಲಿ ಮತ್ತು  ಜೇಲಿನಿಂದ ಹೊರೆಗೆ ಬಂದಾಗ ಪೋನ ಮುಖಾಂತರ ಗುಂಡು ಹಾರಿಸಿ ಕೊಲೆ ಮಾಡುತ್ತೇವೆ ಎಂದು ಜೀವ ಭಯ ಹಾಕಿದ್ದರಿಂದ  ಹಾಗೂ  ವಿನೋದ ಸಂಗ, ಮತ್ತು ಸುನೀಲ ಮದನಕರ ಇವರು 3-4 ದಿವಸಗಳ ಹಿಂದೆ ನನ್ನ ಜೊತೆ ಜಗಳಾ ಮಾಡಿದ್ದರಿಂದ ಈ ಐದು ಜನರ  ಮೇಲೆ ನನ್ನ ಬಲವಾದ ಸಂಶಯ ಇರುತ್ತದೆ. ಅಂತಾ ಶ್ರೀ ಯಶ್ವಂತ ತಂದೆ ಶ್ರೀಪತಿ ಬೆಟ್ಟಜೇವರ್ಗಿ ಸಾ: ತಾಜ ಸುಲ್ತಾನಪೂರ ಗ್ರಾಮ ತಾ:ಜಿ: ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಕಮಲಾಪೂರ ಠಾಣೆ : ದಿನಾಂಕ 27.05.2015 ರಂದು ಬೆಳ್ಳಿಗೆ ಒಕಳಿ ಕ್ರಾಸ ಹತ್ತಿರ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿಯನ್ನು ಬರೆದು ಕುಡುತ್ತಿರುವ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ದಾಳಿ ಮಾಡಿ 1) ಭೀಮಾಶಂಕರ ತಂಎ ಕಾಶೀನಾಥ ಚಿಕ್ಕೆಗೌಡ  ಸಾ: ಕಲಮುಡ ರೋಡ ಕಲಮಾಪೂರ  2) ಮುಖೇಶ ತಂದೆ ರೇವಣಸಿದ್ದಪ್ಪ ವಾಲಿಕಾರ ಸಾ: ಕಲಮುಡರೋಡ ಕಮಲಾಪೂರ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ  4435 ರೂ ಮತ್ತು 9 ಮಟಕಾ ಚೀಟಿಗಳು ಮತ್ತು ಎರಡು ಬಾಲ್ ಪೆನ್ನಗಳನ್ನು ವಶಪಡಿಸಿಕೊಂಡು  ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಅಫಜಲಪೂರ ಠಾಣೆ : ದಿನಾಂಕ 28-05-2015 ರಂದು ಘತ್ತರಗಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.. ಅಫಜಲಪೂರ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಘತ್ತರಗಾ ಗ್ರಾಮದ ಅಂಬೇಡ್ಕರ ವೃತ್ತದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅಮೀನ ತಂದೆ ಹಸನಸಾಬ ಅತ್ತಾರ ಸಾ|| ಘತ್ತರಗಾ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 450/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಬಿಸಿಲಿನ ತಾಪಕ್ಕೆ ಸ್ವಾಭಾವಿಕ ಸಾವು ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ 27.05.2015 ರಂದು ನನ್ನ ಗಂಡ ಗೌಂಡಿಕೈ ಕೆಳಗೆ  ಕೆಳಸಕ್ಕೆ ಅಂತಾ ರಾಮಾ ಮೊಹಲ್ಲಾದ ಗುಂಡಾಳ ರವರ ಪಾಲೀಶ ಮಶೀನ ಹಿಂದೆ ಇಬ್ರಾಹೀಮ ತಂದೆ ಖಾಜಾ ಪಟೇಲ ಇವರ ಮನೆ ಕಟ್ಟುವ ಕೆಲಸಕ್ಕೆ  ಹೋಗಿದ್ದು, ಕೆಲಸ ಮಾಡುವಾಗ ನನ್ನ ಗಂಡನಿಗೆ ಬಿಸಿಲಿನ ತಾಪತಾಳಲಾರದೆ  ಮೈಗೆ ಬಿಸಿಲು ತಾಗಿ ಆಕಸ್ಮಿಕವಾಗಿ ಒಮ್ಮಿಂದೊಮ್ಮೆಲೆ ತಲೆ ತಿರುಗಿ ನೆಲಕ್ಕೆ ಕುಸಿದು ಬಿದ್ದು  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಇಬ್ರಾಹೀಮ ಇತನಿಂದ  ಗೊತ್ತಾಗಿ ಸ್ಥಳಕ್ಕೆ ನಾನು ಮತ್ತು ಮೈದುನ ಉಮೇಶ ಇತನೊಂದಿಗೆ ಹೋಗಿ ನೋಡಲಾಗಿ ನನ್ನ ಗಂಡ  ಬಿಸಿಲಿನ ತಾಪ ತಾಳಲಾರದೆ ತಲೆ ತಿರುಗಿ ನೆಲಕ್ಕೆ ಕುಸಿದು ಬಿದ್ದು ಸ್ಥಳದಲ್ಲಿಯೇ  ಮೃತಪಟ್ಟಿದ್ದು ನಿಜವಿರುತ್ತದೆ ಅಂತಾ ಶ್ರೀಮತಿ ಮನ್ನಮ್ಮ  ಗಂಡ ಲಕ್ಕಪ್ಪ  ಮರತೂರ ಸಾ|| ಕೊಳಸಾಫೈಲ ಧಕ್ಕಾತಾಂಡಾ ಶಹಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.